ಪರೋಪಕಾರಿ ಮನಸ್ಸನ್ನು ಹೊಂದಿದ್ದ ಶೀಲಾ ಇರಾನಿ ತಮ್ಮ ಸಾಮಾಜಿಕ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿದು ಉಳಿದಿದ್ದಾರೆ. ಶಿಕ್ಷಣ ತಜ್ಞೆ, ಸಂಸದೀಯ ಪಟುವಾಗಿದ್ದ ಶೀಲಾ ಇರಾನಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ನಗರದ ಬೃಂದಾವನ ಬಡಾವಣೆಯಲ್ಲಿರುವ ಚಾಮುಂಡಿ ಮಕ್ಕಳ ಮನೆಯಲ್ಲಿ ಕಳೆದ ಭಾನುವಾರ ನಡೆಸಲಾಯಿತು.
ಹೊಸದಿಲ್ಲಿಯ ಶಿಕ್ಷಕಿ ವೃತ್ತಿಯ ಜತೆಗೆ ಜೀವನ ಪ್ರಾರಂಭಿಸಿದ ಅವರು, ಸೇಂಟ್ ಜಾನ್ಸ್ ಆಂಬುಲೆನ್ಸ್ ಕಾರ್ಪ್ಸ್‌ನಲ್ಲಿ ಸ್ವಯಂಸೇವಕರಾಗಿದ್ದರು. ಅವರ ಸೇವೆಗಾಗಿ ವೈಸ್‌ರಾಯ್ ಪ್ರಮಾಣಪತ್ರವನ್ನೂ ಪಡೆದಿದ್ದರು ಎಂಬುದು ಗಮನಾರ್ಹವಾದದ್ದಾಗಿದೆ.
ಮೈಸೂರು- ರೋಟರಿ ಶಾಲೆ ಆರಂಭ
೧೯೫೧ರಲ್ಲಿ ಮೈಸೂರಿಗೆ ಬಂದ ಅವರು ೧೯೬೮ರಲ್ಲಿ ಐಡಿಯಲ್ ಜಾವಾ ರೋಟರಿ ಶಾಲೆಯನ್ನು ಸ್ಥಾಪಿಸಿದ್ದರು. ಇದು ನಗರದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿ ಬೆಳೆಯಿತು.
ಮೈಸೂರಿನಲ್ಲಿ ಚಾಮುಂಡಿ ಮಕ್ಕಳ ಮನೆಯನ್ನು ನಿರ್ಮಿಸಿದ್ದರು. ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಅವರು ೨೦೦೩ರ ಏಪ್ರಿಲ್ ೧೦ರಂದು ನಿಧನರಾದರು.
ರಾಜಕೀಯ
ಕರ್ನಾಟಕ ವಿಧಾನಸಭೆಗೆ ನಾಮನಿರ್ದೇಶನಗೊಳ್ಳುವ ಮೂಲಕ ೧೯೬೮ರಲ್ಲಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. ೧೯೯೩ ಮತ್ತು ೧೯೯೫ರ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು.
೧೯೯೫ರಲ್ಲಿ ಆಂಗ್ಲೋ?ಇಂಡಿಯನ್ ಕೋಟಾದಲ್ಲಿ ಲೋಕಸಭೆಗೆ ನಾಮನಿರ್ದೇಶನಗೊಂಡರು. ಆಂಗ್ಲೋ-ಇಂಡಿಯನ್ ಅಸೋಸಿೆುೀಂಶನ್‌ನ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು.
ಸಾಮಾಜಿಕ ಸೇವೆ
ಶೀಲಾ ಅವರು ಮಾನವೀಯತೆಗೆ ಮಿಡಿಯುವಂತವರಾಗಿದ್ದು, ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುದ್ದರು. ಮೈಸೂರಿನಲ್ಲಿ ಕುಷ್ಠ ರೋಗಿಗಳಿಗೆ ಚಿಕಿತ್ಸೆ, ಅನಾಥಾಶ್ರಮದ ಉಪಾಧ್ಯಕ್ಷರಾಗಿ, ಹಲವಾರು ಆಸ್ಪತ್ರೆಗಳ ಟ್ರಸ್ಟಿಯಾಗಿ ಕೆಲಸ ಮಾಡಿದ್ದರು. ಪಿ.ಕೆ. ಸ್ಯಾನಿಟೋರಿಯಂನ ಮಂಡಳಿಯಲ್ಲಿದ್ದರು.
ಫರೋಖ್ ಜತೆ ವಿವಾಹ
ಉದ್ಯಮಿ ಫರೋಖ್ ಕೆ. ಇರಾನಿ (ಎಫ್.ಕೆ. ಇರಾನಿ) ಅವರನ್ನು ಶೀಲಾ ವಿವಾಹವಾದರು. ಫರೋಖ್ ಅವರು ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ ಸ್ಥಾಪಿಸಿದರು. ಇದು ಜಾವಾ ಮೋಟಾರ್ ಸೈಕಲ್‌ಗಳು ಮತ್ತು ಪ್ರಸಿದ್ಧ ಯಜ್ಡಿ ರೋಡ್ ಕಿಂಗ್ ಬೈಕ್‌ಗಳನ್ನು ಮಾರಾಟ ಮಾಡುವ ಕಂಪನಿಯಾಗಿತ್ತು. ಈ ದಂಪತಿಗೆ ಪುತ್ರರಾದ ರೈಯಾನ್ ಇರಾನಿ, ಕೈರಸ್ ಎಫ್.ಇರಾನಿ ಮತ್ತು ಪುತ್ರಿ ಮೊರ್ವಾರಿಡ್ ಫೆರ್ನಾಂಡಿಸ್ ಇದ್ದಾರೆ.
ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…
ಮಂಡ್ಯ : ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನೂ ಸಾಧಿಸುವುದಿಲ್ಲ. ಗೋ ಬ್ಯಾಕ್…
ಮಂಡ್ಯ : ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಫೆ.1 ರಂದು ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆಯ ಪ್ರಯುಕ್ತ ಹೆಚ್ಚು ಸಾರ್ವಜನಿಕರು…
ಬೆಂಗಳೂರು : ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅಗತ್ಯ ಇರುವ ಭೂಮಿಯ ಸ್ವಯಂ…
ಮೈಸೂರು : ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ.25 ರಂದು ಬೆಳಗಿನ ಜಾವ 5.30ಕ್ಕೆ 108 ಸಾಮೂಹಿಕ ಸೂರ್ಯ ನಮಸ್ಕಾರ…
ಬೆಂಗಳೂರು : ರಥಸಪ್ತಮಿಯ ನಂತರ ಬಿಸಿಲು ಹೆಚ್ಚಾಗಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚುವ ಕಾರಣ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು…