ಮೈಸೂರು: ʼಅಂದೋಲನʼ ವನ್ನು ದಿನಪತ್ರಿಕೆಯಾಗಿ ರೂಪಿಸಿದ ರಾಜಶೇಖರ ಕೋಟಿ ಅವರ ಪರಿಶ್ರಮ ಯುವ ಪತ್ರಕರ್ತರಿಗೆ ಮಾದರಿಯಾಗಿದೆ. ಸಾಕಷ್ಟು ಸಂಕಷ್ಟ ಅನುಭವಿಸಿ ಪತ್ರಿಕೆಯು ಗಟ್ಟಿಗೊಳ್ಳುತ್ತಿದ್ದಂತೆ, ಕೋಟಿ ಅವರು ಸಾಮಾಜಿಕ ಚಿಂತನೆಗಳನ್ನು ಕಾರ್ಯರೂಪಕ್ಕೆ ಇಳಿಸುವುದಕ್ಕೂ ಮುಂದಾದರು. ಮೈಸೂರು, ಮಂಡ್ಯ, ಬಿಳಿಕೆರೆ, ಹುಣಸೂರು ಮತ್ತಿತರ ಕಡೆಗಳಲ್ಲಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಿದರು. ಪ್ರತಿಷ್ಠಿತ ಎನ್‌ಟಿಎಂ ಶಾಲೆ ಉಳಿಸಲು ನಡೆದ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು.
ಇದಲ್ಲದೆ, ಗುಜರಾತ್‌ನ ಕಲ್‌ನಲ್ಲಿ ಸಂಭವಿಸಿದ ಭೂಕಂಪ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಪತ್ರಿಕೆ ಮೂಲಕ ದೇಣಿಗೆ ಸಂಗ್ರಹಿಸಿದರು. ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಸಭೆಯೊಂದರಲ್ಲಿ ಪಾಲ್ಗೊಂಡು ಹಿಂದಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳ ನೆರವಿಗೆ ಧಾವಿಸುವ ಮೂಲಕ ಕೋಟಿ ಹೃದಯವೈಶಾಲ್ಯತೆ ಮೆರೆದಿದ್ದರು. ಎಂ.ಜಿ.ರಸ್ತೆ ಬದಿಯಲ್ಲಿ ಬಡ ವ್ಯಾಪಾರಿಗಳಿಗೆ ಮಾರುಕಟ್ಟೆಗೆ ಜಾಗ ಒದಗಿಸಲು ಕೂಡ ಕೋಟಿಯವರು ಸ್ವಂತ ಖರ್ಚಿನಲ್ಲಿ ಹೋರಾಟ ನಡೆಸಿದ್ದರು. ಸಮಾಜ ಘಾತುಕರ ದುಷ್ಕೃತ್ಯದಿಂದ ಸಂತ್ರಸ್ತರಾದ ಹೆಣ್ಣುಮಕ್ಕಳ ಪುನರ್ವಸತಿಗಾಗಿ ಶ್ರಮಿಸುತ್ತಿರುವ ಒಡನಾಡಿ ಸೇವಾ ಸಂಸ್ಥೆ ಹಾಗೂ ಶಕ್ತಿಧಾಮಕ್ಕೂ ರಾಜಶೇಖರ ಕೋಟಿ ಅವರ ಪ್ರೋತ್ಸಾಹ ಅಗಣಿತವಾಗಿತ್ತು. ಮೈಸೂರು ಆಟೋರಿಕ್ಷಾ ಚಾಲಕರ ಸಹಕಾರ ಸಂಘ ಸ್ಥಾಪನೆಯಲ್ಲಿ ಕೋಟಿ ಅವರ ಕೊಡುಗೆ ಸಾಕಷ್ಟಿದೆ. ಆಟೋರಿಕ್ಷಾ ಚಾಲಕರು ಮಿತಿಮೀರಿದ ಬಡ್ಡಿದರದಲ್ಲಿ ಸಾಲ ಮಾಡುವುದನ್ನು ತಪ್ಪಿಸುವುದಕ್ಕಾಗಿ ಕೋಟಿ ಅವರು ಸಂಘ ಹುಟ್ಟುಹಾಕಲು ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಿದ್ದರು. ಬಹುತೇಕ ಸಮಾಜದ ಎಲ್ಲ ಸ್ತರದ ಜನರು, ಮಕ್ಕಳ ಏಳಿಗೆಗಾಗಿ ಶ್ರಮಿಸಿದ ಕೋಟಿ ಅವರ 6ನೇ ವರ್ಷದ ಸ್ಮರಣೆ ಕಾರ್ಯಕ್ರಮವನ್ನು ನಗರದಲ್ಲಿ ಹಲವು ಸಂಘ- ಸಂಸ್ಥೆಗಳು ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಮೂಲಕ ಸ್ಮರಿಸಿದವು.
ಅರ್ಧ ಶತಮಾನ ದಾಟಿ ಮುನ್ನಡೆದಿರುವ ‘ಆಂದೋಲನ’ ದಿನಪತ್ರಿಕೆಯು ಆರಂಭವಾದಾಗಿನಿಂದಲೂ ಸಮಾಜವಾದ, ಸಮತಾವಾದದ ಮೂಸೆಯಲ್ಲಿಯೇ ಬೆಳೆದು ಬಂದಿದೆ. ‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರು ಅಕ್ಷರಶಃ ನೊಂದವರು, ದಮನಿತರು, ಶೋಷಿತರಿಗೆ ಹೆಗಲು ನೀಡಿ ಮೇಲೆತ್ತಲು ಪತ್ರಿಕೆಯ ಮೂಲಕ ಅಪಾರವಾಗಿ ಶ್ರಮಿಸಿದ್ದಾರೆ. ಕನ್ನಡ ಭಾಷೆ, ನೆಲ, ಜಲಕ್ಕೆ ಧಕ್ಕೆ ಒದಗಿದಂತಹ ಸಂದರ್ಭಗಳಲ್ಲಿ ಪತ್ರಿಕೋದ್ಯಮದ ಮೂಲಕ ತಕ್ಕ ಉತ್ತರ ನೀಡಿದ ಕೋಟಿ ಅವರ ಸೇವೆ ಅವಿಸ್ಮರಣೀಯ. ಅಂತಹ ಕೋಟಿ ಅವರು ಭೌತಿಕವಾಗಿ ಮರೆಯಾಗಿ (ನ.23)ಕ್ಕೆ 6 ವರ್ಷಗಳು ಗತಿಸಿ ಹೋಗಿವೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…