ಅಂಕಣಗಳು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸವಾಲುಗಳ ಮಧ್ಯೆ ನಿಂತಿರುವ ಡಿಕೆಶಿ

ಬೆಂಗಳೂರು ಡೈರಿ

ಆರ್.ಟಿ.ವಿಠ್ಠಲಮೂರ್ತಿ 

ಮೊದಲ ಕಂತಿನ ಸಂಪುಟ ರಚನೆಯಲ್ಲಾಗಿರುವ ಪ್ರಮಾದ ಸರಿಪಡಿಸದಿದ್ದರೆ ಭವಿಷ್ಯಲ್ಲಿ ಪಕ್ಷಕ್ಕೆ ಮಾರಕ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸವಾಲುಗಳ ಮಧ್ಯೆ ನಿಂತಿದ್ದಾರೆ. ಕಳೆದ ಹಲವು ಕಾಲದಿಂದ ನಡೆದ ಅಽಕಾರ ಹಂಚಿಕೆಯ ಸಂಘರ್ಷ ತಾರ್ಕಿಕ ಅಂತ್ಯ ತಲುಪಲು ಮತ್ತು ಆ ಮೂಲಕ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಲು ಅವರು ಸಫಲರಾಗಿದ್ದರು.

ಹೀಗೆ ಮುಖ್ಯಮಂತ್ರಿ ಸ್ಥಾನವನ್ನು ಏರಿದ ಕೂಡಲೇ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ ಡಿ.ಕೆ.ಶಿವಕುಮಾರ್ ಒಂದು ಕುತೂಹಲ ಮೂಡಿಸಿದ್ದು ನಿಜ. ಆದರೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲೇ ರಚನೆಯಾದ ಅವರ ಸಂಪುಟವನ್ನು ನೋಡಿದಾಗ ಕೆಲ ಗುರುತರ ಕೊರತೆಗಳು ಕಾಣತೊಡಗಿದ್ದವು. ಈ ಪೈಕಿ ದಲಿತ ನಾಯಕ ಹೆಚ್.ಸಿ.ಮಹದೇವಪ್ಪ, ಅಲ್ಪಸಂಖ್ಯಾತ ನಾಯಕ ಜಮೀರ್ ಅಹ್ಮದ್ ಅವರಂತಹವರು ಸಂಪುಟಕ್ಕೆ ಸೇರ್ಪಡೆಯಾಗದ ಬೆಳವಣಿಗೆ ಒಂದು. ಅಂದ ಹಾಗೆ ಕಾಂಗ್ರೆಸ್ ಥಿಂಕ್ ಟ್ಯಾಂಕು ಗಮನದಲ್ಲಿಟ್ಟುಕೊಳ್ಳಬೇಕಾದ ಮುಖ್ಯ ವಿಷಯವೆಂದರೆ ಕಾಂಗ್ರೆಸ್ ಪಕ್ಷಕ್ಕೆ ಮೂಲ ಆಸರೆಯಾದ ಅಹಿಂದ ಮತ ಬ್ಯಾಂಕಿನ ಆಧಾರಸ್ತಂಭಗಳಲ್ಲಿ ಹೆಚ್.ಸಿ.ಮಹದೇವಪ್ಪ ಪ್ರಮುಖರು.

ಅಹಿಂದ ಮತ ಬ್ಯಾಂಕಿಗೆ ಫೋರ್ಸ್ ಕೊಡಲು ಹಲವು ವಿಭಾಗಗಳಿದ್ದರೂ ಅದಕ್ಕೆ ಐಡಿಯಾಲಜಿ ಎಂಬ ಉಸಿರನ್ನು ತುಂಬಿದ್ದು ದಲಿತ ಮತ ಬ್ಯಾಂಕು. ಈ ಮತ ಬ್ಯಾಂಕಿನ ಮುಂಚೂಣಿಯಲ್ಲಿರುವವರು ಹೆಚ್.ಸಿ.ಮಹದೇವಪ್ಪ. ಈ ಅಂಶವನ್ನು ಗಮನ ದಲ್ಲಿಟ್ಟುಕೊಂಡಿದ್ದರೆ ಡಿ.ಕೆ.ಶಿವಕುಮಾರ್ ನೇತೃತ್ವದ ಮೊದಲ ಕಂತಿನ ಸಚಿವ ಸಂಪುಟದಲ್ಲಿ ಹೆಚ್.ಸಿ.ಮಹದೇವಪ್ಪ ಅವರ ಉಪಸ್ಥಿತಿ ಇರಬೇಕಿತ್ತು. ಆದರೆ ಈ ಕೊರತೆ ಈಗಾಗಲೇ ಸರ್ಕಾರವನ್ನು ಕಾಡತೊಡಗಿದೆ.

ಹೀಗೆ ಮೊದಲ ಕಂತಿನ ಸಂಪುಟ ರಚನೆಯ ಸಂದರ್ಭದಲ್ಲಿ ಆಗಿರುವ ಪ್ರಮಾದ ಎರಡನೇ ಕಂತಿನ ಸಂಪುಟ ರಚನೆಯಲ್ಲಿ ಸರಿಹೋಗದೆ ಇದ್ದರೆ ಅದು ಭವಿಷ್ಯದಲ್ಲಿ ಕಾಂಗ್ರೆಸ್‌ನ ಪತನಕ್ಕೆ ಮುನ್ನುಡಿ ಬರೆಯಲಿದೆ. ಇದೇ ರೀತಿ ಮುಸ್ಲಿಂ ನಾಯಕ ಜಮೀರ್ ಅಹ್ಮದ್ ಅವರು ಸಂಪುಟಕ್ಕೆ ಸೇರ್ಪಡೆ ಆಗದಿರುವುದು ಕೂಡ ಮತ್ತೊಂದು ಪ್ರಮಾದ. ಹಾಗೆ ನೋಡಿ ದರೆ ೨೦೨೩ ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಮತ ಬ್ಯಾಂಕು ಒಗ್ಗೂಡುವ ವಿಷಯದಲ್ಲಿ ಜಮೀರ್ ಅಹ್ಮದ್ ಗುರುತರ ಪಾತ್ರ ವಹಿಸಿದ್ದರು. ಆದರೆ ಅವರಿಗೆ ಅವಕಾಶ ನಿರಾಕರಣೆ ಮಾಡಿರುವುದರಿಂದ ಮುಸ್ಲಿಂ ಮತ ಬ್ಯಾಂಕು ಬೇರೆ ಕಡೆ ವಲಸೆ ಹೋಗುತ್ತದೆ ಅಂತೇನೂ ಅಲ್ಲ. ಆದರೆ ಮುಸ್ಲಿಂ ಮತ ಬ್ಯಾಂಕಿನಲ್ಲಿ ಒಂದು ಅಸಮಾಧಾನ ಮೂಡಿರು ವುದಂತೂ ನಿಜ. ಇದು ಒಂದು ಕಡೆಗಾದರೆ ಮತ್ತೊಂದು ಕಡೆ ಸೃಷ್ಟಿಯಾಗಿರುವ ವಿವಿಧ ಪವರ್ ಸೆಂಟರ್‌ಗಳು ಕಾಂಗ್ರೆಸ್ ಪಾಲಿಗೆ ಮತ್ತೊಂದು ಸವಾಲು. ಡಿ. ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಮೊದಲು ಮೂರು ಪವರ್ ಸೆಂಟರ್‌ಗಳು ಇದ್ದವು.

ಈ ಪೈಕಿ ಹೈಕಮಾಂಡ್ ಒಂದು ಪವರ್ ಸೆಂಟರ್ ಅದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಎರಡನೇ ಪವರ್ ಸೆಂಟರ್ ಆಗಿದ್ದರು. ಉಳಿದಂತೆ ಡಿ. ಕೆ.ಶಿವಕುಮಾರ್ ಒಂದು ಪವರ್ ಸೆಂಟರ್ ಆಗಿದ್ದರು. ಆದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಈ ಪವರ್ ಸೆಂಟರ್‌ಗಳ ಸಂಖ್ಯೆ ನಾಲ್ಕಕ್ಕೇರಿದೆ. ಈ ಪೈಕಿ ಹೈಕಮಾಂಡ್ ಮತ್ತು ಡಿ.ಕೆ.ಶಿವಕುಮಾರ್ ಅವರಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಎಂಬ ಪವರ್ ಸೆಂಟರ್‌ಗಳು ಸೃಷ್ಟಿಯಾಗಿವೆ. ಮುಂದಿನ ದಿನಗಳಲ್ಲಿ ಈ ಪವರ್ ಸೆಂಟರ್‌ಗಳು ಪರಸ್ಪರ ವಿರುದ್ಧ ದಿಕ್ಕಿಗೆ ನಡೆಯತೊಡಗಿದರೆ ಸರ್ಕಾರ ಮತ್ತು ಪಕ್ಷ ಸಂಕಟ ಅನುಭವಿಸುವುದು ಅನಿವಾರ್ಯವಾಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ ಈ ಪವರ್ ಸೆಂಟರ್‌ಗಳಲ್ಲಿ ವಿಪರೀತ ಚಟುವಟಿಕೆ ಆರಂಭವಾಗಲು ತುಂಬ ಕಾಲ ಕಾಯಬೇಕಿಲ್ಲ. ಈ ತಿಂಗಳ ಹದಿನೆಂಟರಂದು ನಡೆಯಲಿರುವ ರಾಜ್ಯಸಭೆ ಮತ್ತುವಿಧಾನಪರಿಷತ್ ಚುನಾವಣೆಗಳು ಮುಗಿದ ಕೂಡಲೇ ಈ ಪವರ್ ಸೆಂಟರ್‌ಗಳು ಬಿಜಿಯಾಗಲಿವೆ. ಕಾರಣ ಎರಡನೇ ಕಂತಿನ ಸಚಿವ ಸಂಪುಟದಲ್ಲಿ ಯಾರು ಸೇರುವುದಿಲ್ಲವೋ ಅವರು ಅಸಮಾಧಾನಗೊಳ್ಳುತ್ತಾರೆ. ಬರೀ ಅಸಮಾಧಾನಗೊಳ್ಳುವುದಷ್ಟೇ ಅಲ್ಲ, ತಮಗಾದ ನೋವಿಗೆ ಪ್ರತಿಯಾಗಿ ಯಾವುದೇ ಹಂತಕ್ಕೆ ಹೋಗುವುದಕ್ಕೂ ಸಜ್ಜಾಗುತ್ತಾರೆ. ಇಂತಹ ಬೆಳವಣಿಗೆ ಸಹಜವಾಗಿಯೇ ಬಿಜೆಪಿ ಮತ್ತು ಜಾ.ದಳ ಮಿತ್ರಕೂಟಕ್ಕೆ ಲಾಭ ತಂದು ಕೊಡಲಿದೆ.

ಅಂದ ಹಾಗೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವ ಬೆಳವಣಿಗೆ ಹಳೆ ಮೈಸೂರು ಭಾಗದ ಒಕ್ಕಲಿಗ ಮತ ಬ್ಯಾಂಕ್ ಕಾಂಗ್ರೆಸ್ ಬಗ್ಗೆ ಹೆಚ್ಚು ಒಲವು ತೋರಿಸುತ್ತದೆ ಎಂಬ ಲೆಕ್ಕಾಚಾರ ಶುರುವಾಗಿತ್ತು.ಆದರೆ ದಿನ ಕಳೆದಂತೆ ಇಂತಹ ಲೆಕ್ಕಾಚಾರಗಳು ದುರ್ಬಲವಾಗಲುಶುರುವಾಗಿದೆಯಷ್ಟೇ ಅಲ್ಲ, ಬಿಜೆಪಿ-ಜಾ.ದಳ ಮಿತ್ರಕೂಟ ಒಗ್ಗಟ್ಟಿನಿಂದಿದ್ದರೆ ಮತ್ತು ಅದಕ್ಕೆ ಕಾಂಗ್ರೆಸ್ ಪಾಳೆಯದಿಂದಲೇ ದಕ್ಕಲಿರುವ ಶಕ್ತಿಯನ್ನು ಊಹಿಸಿದರೆ ಕಾಂಗ್ರೆಸ್ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆಗಳು ಕಾಣಿಸಿಕೊಂಡಿವೆ.

ಇದು ಒಂದು ಕಡೆಗಾದರೆ ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಹೇಗೆ ನಡೆಸಿಕೊಳ್ಳುತ್ತವೆ ಎಂಬುದು ಮುಖ್ಯವಾಗಲಿದೆ. ಅಂದ ಹಾಗೆ ಇದನ್ನು ಬಲ್ಲ ಕಾಂಗ್ರೆಸ್ ವರಿಷ್ಠರು ಬಹು ಉಪಾಯವಾಗಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳಲು ಯತ್ನಿಸಿದರು. ಸಿದ್ದರಾಮಯ್ಯನವರು ಕರ್ನಾಟಕದಲ್ಲಿದ್ದರೆ ತಾನೇ ಬಿಕ್ಕಟ್ಟು ಉದ್ಭವಿಸುವುದು? ಹೀಗಂತಲೇ ಕಾಂಗ್ರೆಸ್ ವರಿಷ್ಠರು: ನೀವು ರಾಜ್ಯಸಭೆಗೆ ಬನ್ನಿ. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿ ಎಂದು ಪುಸಲಾಯಿಸುವ ಯತ್ನ ಮಾಡಿದ್ದರು. ಎಷ್ಟೇ ಆದರೂ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಕುರುಬ ಸಮುದಾಯ ಗಣನೀಯ ಸಂಖ್ಯೆಯಲ್ಲಿದೆ. ಹೀಗಾಗಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಬಂದರೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಬಹುದು ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರವಾಗಿತ್ತು.

ಅರ್ಥಾತ್, ಸಿದ್ದರಾಮಯ್ಯ ರಾಷ್ಟ್ರರಾಜಕಾರಣಕ್ಕೆ ಬಂದರೆ ಒಂದು ಕಡೆಯಿಂದ ಕುರುಬ ಮತ ಬ್ಯಾಂಕನ್ನು ರಾಷ್ಟ್ರ ಮಟ್ಟದಲ್ಲಿ ಏಕತ್ರಗೊಳಿಸಿ ಕಾಂಗ್ರೆಸ್ಸಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು ಮತ್ತು ಇನ್ನೊಂದು ಕಡೆ ಡಿ.ಕೆ. ಶಿವಕುಮಾರ್ ಅವರ ಸುತ್ತ ಅಪಾಯದ ಕೋಟೆ ಗಟ್ಟಿಯಾಗದಂತೆ ನೋಡಿಕೊಳ್ಳಬಹುದು ಎಂಬುದು. ಆದರೆ ಕಾಂಗ್ರೆಸ್ ವರಿಷ್ಠರ ಈ ಲೆಕ್ಕಾಚಾರವನ್ನು ಅರ್ಥ ಮಾಡಿಕೊಂಡ ಸಿದ್ದರಾಮಯ್ಯ ಅದನ್ನು ಬಿಲ್ ಕುಲ್ ನಿರಾಕರಿಸಿದರು. ಅದರೆ ಪಟ್ಟು ಬಿಡದ ಕಾಂಗ್ರೆಸ್ ವರಿಷ್ಠರು, ನೀವಲ್ಲದಿದ್ದರೆ ನಿಮ್ಮ ಶ್ರೀಮತಿಯವರಿಗೆ ರಾಜ್ಯಸಭೆ ಟಿಕೆಟ್ ಕೊಡುತ್ತೇವೆ ಒಪ್ಪಿಕೊಳ್ಳಿ ಎಂದರು. ಆದರೆ ಸಿದ್ದರಾಮಯ್ಯ ಅದನ್ನೂ ಒಪ್ಪಲಿಲ್ಲ. ಇದರರ್ಥ ಬೇರೇನೂ ಅಲ್ಲ. ಮುಂದಿನ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಎಂಬ ಪವರ್ ಸೆಂಟರ್ ಕರ್ನಾಟಕದಲ್ಲಿ ಇದ್ದು ತನ್ನ ಶಕ್ತಿಯನ್ನು ತೋರಿಸಲಿದೆ. ಪರಿಣಾಮ ಮುಂದಿನ ದಿನಗಳುಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದೆ ಹಲವು ಸವಾಲುಗಳನ್ನು ಸೃಷ್ಟಿಸಲಿವೆ.

ಕೆಪಿಸಿಸಿ ಅಧ್ಯಕ್ಷರಾಗಿರುವ ಬಿ.ಕೆ.ಹರಿಪ್ರಸಾದ್ ಕೂಡ ಮತ್ತೊಂದು ಪವರ್ ಸೆಂಟರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಅವರು ಅಧ್ಯಕ್ಷರಾದ ದಿನ ಆಡಿದ ಮಾತೇ ಸಾಕ್ಷಿ. ಅಂದ ಹಾಗೆ ಬಿ.ಕೆ.ಹರಿಪ್ರಸಾದ್ ಹೇಳಿದ್ದೇನು? ಅಧಿಕಾರ ಬೇಕು ಎನ್ನುವವರು ಡಿ.ಕೆ.ಶಿವಕುಮಾರ್ ಅವರ ಹಿಂದೆ ಹೋಗಿ. ಪಕ್ಷ ಕಟ್ಟಬೇಕು ಎನ್ನುವವರು ನನ್ನ ಜತೆ ಬನ್ನಿ ಅಂತ ತಾನೇ? ಇದು ಕೂಡ ಪಕ್ಷ ಎಂದರೆ ತಾವೇ ಎಂಬ ಡಿ.ಕೆ.ಶಿವಕುಮಾರ್ ಅವರ ಲೆಕ್ಕಾಚಾರಕ್ಕೆ ವಿರುದ್ಧವಾದದ್ದು. ಹೀಗಾಗಿ ಇಂತಹ ಸವಾಲನ್ನು ಅವರು ಹೇಗೆ ಎದುರಿಸುತ್ತಾರೆ ಎಂಬುದರ ಮೇಲೆ ಸರ್ಕಾರ ಮತ್ತು ಕಾಂಗ್ರೆಸ್ಸಿನ ಭವಿಷ್ಯ ನಿರ್ಧಾರವಾಗಲಿದೆ

” ಎರಡನೇ ಕಂತಿನ ಸಚಿವ ಸಂಪುಟದಲ್ಲಿ ಯಾರು ಸೇರುವುದಿಲ್ಲವೋ ಅವರು ಅಸಮಾಧಾನಗೊಳ್ಳುತ್ತಾರೆ. ಬರೀ ಅಸಮಾಧಾನಗೊಳ್ಳುವುದಷ್ಟೇ ಅಲ್ಲ, ತಮಗಾದ ನೋವಿಗೆ ಪ್ರತಿಯಾಗಿ ಯಾವುದೇ ಹಂತಕ್ಕೆ ಹೋಗುವುದಕ್ಕೂ ಸಜ್ಜಾಗುತ್ತಾರೆ. ಇಂತಹ ಬೆಳವಣಿಗೆ ಸಹಜವಾಗಿಯೇ ಬಿಜೆಪಿ ಮತ್ತು ಜಾ.ದಳ ಮಿತ್ರಕೂಟಕ್ಕೆ ಲಾಭ ತಂದು ಕೊಡಲಿದೆ.”

 

 

ಆಂದೋಲನ ಡೆಸ್ಕ್

Recent Posts

ದೇಶ ವ್ಯಾಪಿ ಸಂಚಲನ ಮೂಡಿಸಿದ ‘ಕಾಕ್ರೋಚ್’ ಸಂಕುಲ

ನೀಟ್- ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್‌ಇ ಪರೀಕ್ಷಾ ಅವ್ಯವಸ್ಥೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್…

3 mins ago

‘ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡಿ’

ನವೀನ್ ಡಿಸೋಜ ಜಿಲ್ಲೆಯ ಶಾಸಕರಿಗೆ ಅವಕಾಶ ನೀಡಲು ಆಗ್ರಹ; ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರ ಒತ್ತಾಯ ಮಡಿಕೇರಿ: ನೂತನ…

14 mins ago

ಅರ್ಧಕ್ಕೆ ನಿಂತ ಕಾಮಗಾರಿ; ಸವಾರರಿಗೆ ಕಿರಿಕಿರಿ

ಮಹೇಶ್ ಕರೋಟಿ ಗುದ್ದಲಿ ಪೂಜೆಗಷ್ಟೇ ಸೀಮಿತವಾದ ರಸ್ತೆ ಕಾಮಗಾರಿ ; ಎಚ್ಚರ ತಪ್ಪಿದಲ್ಲಿ ಅನಾಹುತ; ದುರಸ್ತಿಗೆ ಗ್ರಾಮಸ್ಥರ ಒತ್ತಾಯ ಕಿಕ್ಕೇರಿ:…

3 hours ago

ಜೂ.13ರಂದು ಡೋರ‍್ನಹಳ್ಳಿಯಲ್ಲಿ ಸಂತ ಅಂತೋಣಿ ಜಾತ್ರೆ

ಭೇರ್ಯ ಮಹೇಶ್ ಕೆ.ಆರ್.ನಗರ: ತಾಲ್ಲೂಕು ಆಡಳಿತದಿಂದ ಸಕಲ ಸಿದ್ಧತೆ; ಸಾವಿರಾರು ಮಂದಿ ಸೇರುವ ನಿರೀಕ್ಷೆ ಕೆ.ಆರ್.ನಗರ: ತಾಲ್ಲೂಕಿನ ಡೋರ‍್ನಹಳ್ಳಿಯ ವಿಶ್ವವಿಖ್ಯಾತ…

4 hours ago

ಕೋಟೆಗೆ 15ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದ ಸಿದ್ದರಾಮಯ್ಯ

ಮಂಜು ಕೋಟೆ ಮುಖ್ಯಮಂತ್ರಿಯಾಗಿದ್ದ ೮ ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ಮಂಜೂರು ಎಚ್.ಡಿ.ಕೋಟೆ: ರಾಜ್ಯದ ಮತ್ತು…

4 hours ago

ಬುಡಕಟ್ಟು ಜೀವನ ಬಿಚ್ಚಿಡುವ ಮ್ಯೂಸಿಯಂ!

ಮದನ್ ಕೆ.ಪಿ ಸಾಂಪ್ರದಾಯಿಕ ಮನೆಗಳು, ಧರಿಸುವ ಉಡುಪುಗಳು, ಒಡವೆಗಳ ಅನಾವರಣ ಮೈಸೂರು: ನಗರದ ಬೋಗಾದಿಯಲ್ಲಿರುವ ಭಾರತೀಯ ಮಾನವ ವಿಜ್ಞಾನ ಸರ್ವೇಕ್ಷಣಾ…

4 hours ago