ಅಂಕಣಗಳು

ನಾನು ಸಹನಾ, ಮೈಸೂರಿನ ಜನಪ್ರಿಯ ರೇಡಿಯೋ ಧ್ವನಿ!

ನಾನು ಸಹನಾ, ರೇಡಿಯೋ ಜಾಕಿ. ಚಿಕ್ಕ ವಯಸ್ಸಿನಿಂದಲೂ ಸಂಗೀತದ ಮೇಲಿನ ಆಸಕ್ತಿಯಿಂದ ನನಗೆ ರೇಡಿಯೋವೊಂದರಲ್ಲಿ ಜಾಕಿಯಾಗಿ ಕೆಲಸ ಮಾಡುವ ಅವಕಾಶ ಒದಗಿಬಂತು. ಆ ಮೂಲಕ ನನ್ನ ಹವ್ಯಾಸ ವೃತ್ತಿಯಾಯಿತು. ನಾವು ಯಾರೊಂದಿಗಾದರೂ ಸಂವಹಿಸಬೇಕು, ಅವರೊಂದಿಗೆ ಆತ್ಮೀಯತೆ ಬೆಳೆಯಬೇಕು ಎಂದರೆ ನಮ್ಮ ಮಾತಿನಲ್ಲಿ ಸ್ಪಷ್ಟತೆ, ಪ್ರೀತಿ, ಮಧುರವಾದ ಧ್ವನಿ ಇರಬೇಕು ಎಂಬುದು ನಾನು ಕಂಡುಕೊಂಡ ಸತ್ಯ. ನಮ್ಮ ಮಾತು ಮತ್ತೊಬ್ಬರನ್ನು ಆಕರ್ಷಿಸಿದಾಗ ಮಾತ್ರ ಅವರ ಸ್ನೇಹ ಸಂಪಾದಿಸಲು ಸಾಧ್ಯ. ನಾನು ರೇಡಿಯೋದಲ್ಲಿ ನನ್ನ ವೃತ್ತಿ ಬದುಕು ಆರಂಭಿಸಿದ್ದು, 93.5 ರೆಡ್ ಎಫ್‌ಎಂ ನಲ್ಲೇ. ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ನನಗೆ ಸಂಗೀತದ ಹೆಚ್ಚು ಆಸಕ್ತಿ. ಸಂಗೀತ ಅಭ್ಯಾಸವನ್ನೂ ಮಾಡಿದ್ದೆ. ಪತ್ರಿಕೋದ್ಯಮದ ವ್ಯಾಸಂಗದ ನಡುವೆ ಹವ್ಯಾಸವಾಗಿ ಒಂದಿಷ್ಟು ಡಬ್ಬಿಂಗ್, ವಾಯ್ಸ್ ಓವರ್‌ಗಳನ್ನು ನೀಡಿದ್ದೇನೆ.

ಇವೆಲ್ಲದರ ಅನುಭವ ಈಗ ವಿದ್ಯಾಭ್ಯಾಸ ಮುಗಿಸಿದ ತಕ್ಷಣವೇ Radio Jockey ಆಗುವ ಅವಕಾಶ ದೊರಕಿಸಿದೆ. ರೇಡಿಯೋ ಜಾಕಿ ಎಂದರೆ ಕರೆ ಮಾಡಿ ಮಾತನಾಡುತ್ತಾರೆ, ನೆಚ್ಚಿನ ಗೀತೆಗಳನ್ನು ಪ್ರಸಾರ ಮಾಡುತ್ತಾರೆ, ಒಂದಿಷ್ಟು ಮಾತುಗಳು, ಒಂದಿಷ್ಟು ಪ್ರಶ್ನೆಗಳು, ಒಂದಿಷ್ಟು ಹಾಸ್ಯ ಮಾತ್ರವಲ್ಲ. ಕೇಳುಗರಿಗೆ ಒಬ್ಬ ರೇಡಿಯೋ ಜಾಕಿಯ ಕೆಲಸ ಸಾಧಾರಣವೆನಿಸಬಹುದು. ಆದರೆ, ಅದರ ಹಿಂದಿನ ಶ್ರಮ ಅಗೋಚರವಾದದ್ದು. ಕಾರ್ಯಕ್ರಮಕ್ಕೂ ಮುನ್ನ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕು. ಕೇಳುಗರಿಗೆ ಎಲ್ಲಿಯೂ ಬೇಸರವಾಗದಂತೆ ಮಾತನಾಡಬೇಕು, ಕರೆಯಲ್ಲಿಯೂ ಅವರನ್ನು ಆತ್ಮೀಯವಾಗಿ ಮಾತನಾಡಿಸಬೇಕು. ಇದೆಲ್ಲದರ ನಡುವೆ ನಾವು ನಮ್ಮ ಉತ್ಸಾಹವನ್ನು ಕಳೆದುಕೊಳ್ಳದೆ ಸುಲಲಿತವಾಗಿ ಕಾರ್ಯಕ್ರಮದ ಆರಂಭದಲ್ಲಿದ್ದ ಜೋಶ್‌ ಅನ್ನೇ ಕೊನೆಯವರೆಗೂ ಮುಂದುವರಿಸಬೇಕು. ಇಷ್ಟೆಲ್ಲ ಕಸರತ್ತುಗಳನ್ನು ನಾವೂ ಮಾಡಬೇಕಾಗುತ್ತದೆ. ನಾನು ನಿತ್ಯ ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ RED JUNCTION’ ಎನ್ನುವ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ.

ಇದರಲ್ಲಿ ಮಹಿಳೆಯರು, ಹಿರಿಯರು, ಸಣ್ಣಪುಟ್ಟ ವ್ಯಾಪಾರಸ್ಥರು, ಒಂದೇ ಸ್ಥಳದಲ್ಲಿ ಕುಳಿತು ದಿನವಿಡೀ ಕೆಲಸ ಮಾಡುವವರು ಈ ಕಾರ್ಯಕ್ರಮವನ್ನು ಕೇಳುತ್ತಾ ತಮ್ಮ ಕೆಲಸಗಳನ್ನು ಮಾಡುವುದರಿಂದ ಆ ಸಮಯದಲ್ಲಿ ಮಹಿಳಾ ಆಧಾರಿತ ವಿಚಾರಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡುತ್ತೇನೆ. ಕೆಲ ಬಾರಿ ಮಹಿಳಾ ಸಾಧಕರ ಸಂದರ್ಶನವೂ ಇರುತ್ತದೆ. ಇದು ಸಾಕಷ್ಟು ಮಹಿಳೆಯರಿಗೆ, ಸಾಧಿಸಬೇಕು ಎಂಬ ಹಂಬಲವಿರುವವರಿಗೆ ಒಂದಿಷ್ಟು ಉತ್ಸಾಹ ತುಂಬಬೇಕು ಎಂಬುದೇ ನಮ್ಮ ಬಯಕೆ. ಇದರೊಂದಿಗೆ ಪ್ರತಿ ಶನಿವಾರ SING WITH SAHANA’ ಎನ್ನುವ ಕಾರ್ಯಕ್ರಮ ಪ್ರಸಾರವಾಗಲಿದ್ದು, ಇದರಲ್ಲಿ ಕೇಳುಗರ ವಿನಂತಿ ಮೇರೆಗೆ ಸಿನಿಮಾ ಹಾಡುಗಳನ್ನು ನಾನೇ ಹಾಡುತ್ತೇನೆ. ಇದೆಲ್ಲದ್ದಕೂ ಸಿದ್ಧವಾಗುವುದು, ಉತ್ಸಾಹವನ್ನು ಕಾಪಿಟ್ಟುಕೊಳ್ಳುವುದು, ರೇಡಿಯೋ ಜಾಕಿಯ ಪ್ರಮುಖ ಗುಣಲಕ್ಷಣ.

ಯಾವುದೇ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವ ಮುನ್ನ ಹಿಂದಿನ ದಿನವೇ ಕಾರ್ಯಕ್ರಮದ ವಿಷಯ ವಸ್ತುವಿನ ಕುರಿತು ಅಧ್ಯಯನ ಮಾಡಿಕೊಳ್ಳಬೇಕು. ಕಾರ್ಯಕ್ರಮದ ಪ್ರಾಯೋಜಕರೊಂದಿಗೆ ಚರ್ಚಿಸಿ, ಅಗತ್ಯ ಮಾಹಿತಿಗಳ ಸಿದ್ಧತೆ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ರೇಡಿಯೋನಲ್ಲಿ ಬರುವ ಜಾಹೀರಾತುಗಳಿಗೂ ಸ್ಕ್ರಿಪ್ಟ್ ಬರೆಯುವುದೂ ತಿಳಿದಿರಬೇಕು. ಹಾಗೆಯೇ ಜಾಹೀರಾತುಗಳಿಗೆ ಧ್ವನಿ ನೀಡುವುದು, ನಿರೂಪಣೆ ಮಾಡುವುದು ಹೀಗೆ ಹಲವಾರು ಸವಾಲುಗಳನ್ನು ಎದುರಿಸಲು ಸಿದ್ಧರಾಗಿ ಎಲ್ಲ ಹಂತದಲ್ಲಿಯೂ ಉತ್ಸಾಹವನ್ನು ಕಾಪಾಡಿಕೊಂಡು ಧ್ವನಿಯಲ್ಲಿ ಆಕರ್ಷಣೆಯನ್ನು ದೀರ್ಘ ಕಾಲದವರೆಗೆ ಉಳಿಸಿಕೊಳ್ಳುವಂತಿದ್ದರೆ ಮಾತ್ರ ರೇಡಿಯೋ ಜಾಕಿಯಾಗಿ ಮುಂದುವರಿಯಲು ಸಾಧ್ಯ. ಇವೆಲ್ಲವುಗಳ ಜತೆಗೆ ಸಾಮಾಜಿಕ ಜಾಲತಾಣದ ಮೇಲೆ ನಿಗಾವಿರಬೇಕು. ಅಲ್ಲಿಯೂ ಕೇಳುಗರು ಪ್ರತಿಕ್ರಿಯಿಸುವುದರಿಂದ ಅವರಿಗೆ ಉತ್ತರಿಸುವ ಜವಾಬ್ದಾರಿಯೂ ನಮ್ಮ ಮೇಲಿರುತ್ತದೆ. ದಿನವಿಡಿಯ ಇಷ್ಟೆಲ್ಲಾ ಸಾಹಸದ ಮಧ್ಯೆ ನಾವು ನಮ್ಮ ಆರೋಗ್ಯ, ಕುಟುಂಬ, ಸ್ನೇಹಿತರು, ನಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯ ಮೀಸಲಿಡುವುದು ಸವಾಲಿನ ಕೆಲಸವೇ ಸರಿ. ಕೊನೆಯದಾಗಿ ಒಂದು ಮಾತು. ಹವ್ಯಾಸವನ್ನು ವೃತ್ತಿ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹವ್ಯಾಸದ ಮೇಲೆ ಅತಿಯಾದ ಪ್ರೀತಿ ಮತ್ತು ಶಿಸ್ತು ಮುಂದೆ ಅದನ್ನು ವೃತ್ತಿ ಮಾಡಿಕೊಳ್ಳಲು ಸಹಕಾರಿ.
sahanar1998@gmail.com

andolanait

Recent Posts

ಹೆಣ್ಣು ಮಗು ಮಾರಾಟ ; ಐವರ ಬಂಧನ

ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…

6 hours ago

ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ : ಗಡಿ ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…

7 hours ago

ಹಾಸನದಲ್ಲಿ ಜಾ.ದಳ ಶಕ್ತಿ ಪ್ರದರ್ಶನ : ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಕೆ ಎಚ್‌ಡಿಕೆ ಕರೆ

ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…

8 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ; 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…

8 hours ago

ನಂಜನಗೂಡು | ಶ್ರೀಕಂಠೇಶ್ವರ ದೇವಾಲಯದ ಮುಂದಿನ ಅನಧಿಕೃತ ಅಂಗಡಿ ತೆರವು

ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…

8 hours ago

ಚಿನ್ನ ಕಳ್ಳ ಸಾಗಾಣಿಕೆ ಪತ್ತೆ : 2.89 ಕೋಟಿ ರೂ. ಮೌಲ್ಯದ ಚಿನ್ನ ವಶ

ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…

9 hours ago