ರಾಜಕೀಯ

ಯತ್ನಾಳ್‌ ಮಹಾನ್‌ ಸುಳ್ಳುಗಾರ : ಸಿಎಂ ಸಿದ್ದು

ಬೆಳಗಾವಿ : ಯತ್ನಾಳ್‌ ಒಬ್ಬ ಮಹಾನ್‌ ಸುಳ್ಳುಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಜಯಪುರದ ಹಜರತ್‌ ಹಾಶಿಂಪೀರ ದರ್ಗಾದಲ್ಲಿ ಸಿದ್ದರಾಮಯ್ಯ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ, ಧರ್ಮಾಧಿಕಾರಿ ತನ್ವೀರ್‌ ಹಶ್ಮಿ ಅವರು ಐಸಿಸ್‌ ಜೊತೆ ನಂಟು ಹೊಂದಿದ್ದಾನೆ ಎಂಬ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ನನಗೆ ಬಹಳಾ ವರ್ಷಗಳಿಂದ ಹಾಶ್ಮಿಯವರ ಪರಿಚಯವಿದೆ. ಆಗೆಲ್ಲಾ ಇವರು ಸುಮ್ಮನಿದ್ದರು. ಯತ್ನಳ್‌ ಒಬ್ಬ ಮಹಾನ್‌ ಸುಳ್ಳುಗಾರ. ಅವರಿಗೆ ವಿಪಕ್ಷ ನಾಯಕ ಸ್ಥಾನ ಅಥವಾ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿಲ್ಲ ಅಂತಾ ಬೇಸರ, ಹತಾಶೆ, ಸಿಟ್ಟು. ಅದಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ತನಿಖೆ ಮಾಡಿಸಲಿ ಎಂದಿದ್ದಾರೆ.

ಯತ್ನಾಳ್‌ ಅವರ ಆರೋಪದ ಕುರಿತು ನೆನ್ನೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಪ್ರತಿಕ್ರಿಯಿಸಿದ್ದ ತನ್ವೀರ್‌ ಹಶ್ಮಿ ಅವರು ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಅವರು ನನ್ನ ಮೇಲೆ ಮಾಡಿರುವ ಆರೋಪವನ್ನು ಒಂದು ವಾರದಲ್ಲಿ ಸಾಬೀತು ಮಾಡಿದರೆ ನಾನು ಈ ದೇಶವನ್ನೇ ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ. ಒಂದು ವೇಳೆ ಆರೋಪ ಸಾಬೀತು ಮಾಡುವಲ್ಲಿ ವಿಫಲವಾದರೆ ಯತ್ನಾಳ್‌ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಪಾಕಿಸ್ತಾನಕ್ಕೆ ಫಲಾಯನ ಮಾಡಬೇಕು ಎಂದು ಸವಾಲು ಹಾಕಿದ್ದರು.

ಯತ್ನಾಳ್‌ ಅವರು ನನಗೆ ಐಸಿಸ್‌ ಜೊತೆ ನಂಟಿದೆ ಎಂದು ಬಿಡುಗಡೆ ಮಾಡಿರುವ ಚಿತ್ರಗಳು ನನ್ನ ಅಧಿಕೃತ ಫೇಸ್‌ ಬುಕ್‌ ಖಾತೆಗೆ ನಾನೇ ಅಪ್ಲೋಡ್‌ ಮಾಡಿದ್ದೆ. ಸುಮಾರು 12 ವರ್ಷಗಳ ಹಿಂದೆ ನಾನು ಇರಾಖ್‌ ನ ಬಾಗ್ದಾದ್‌ ಗೆ ತೆರಳಿದ್ದೆ. ಆಗ ತೆಗೆದಿರುವ ಫೊಟೋಗಳು ಎಂದಿದ್ದರು.

lokesh

Recent Posts

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾಗೆ ಡೇಟ್ ಫಿಕ್ಸ್!

ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…

40 mins ago

ಮೈಸೂರು ದಸರಾ 2026: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತ ಆಹ್ವಾನ

ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

46 mins ago

ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನ: ಚಾಲಕನಿಗೆ ₹5,000 ದಂಡ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…

51 mins ago

ಅಕ್ಟೋಬರ್.‌11ಕ್ಕೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ

ಮಂಡ್ಯ: ಇದೇ ಅಕ್ಟೋಬರ್.‌11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…

56 mins ago

ಹನೂರು-ಪಾಲಾರ್ ರಸ್ತೆಯ ಕೌದಳ್ಳಿ ಸೇತುವೆ ಹಾನಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…

1 hour ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

3 hours ago