ಅಂಕಣಗಳು

ಹಿರಿತನದ ಒಂಟಿತನ ನೀಗಿಸಿಕೊಳ್ಳುವುದು ಹೇಗೆ?

ಡಾ. ದುಷ್ಯಂತ್ ಪಿ.
ಪ್ರಸ್ತುತ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ವಯೋವೃದ್ಧರು ತಮ್ಮ ಕುಟುಂಬದವರೊಂದಿಗಿರದೆ ಒಂಟಿಯಾಗಿ ಜೀವನ ಸಾಗಿಸುತ್ತಿರುತ್ತಾರೆ. ವೃದ್ಧ ದಂಪತಿ ಮಕ್ಕಳಿಂದ ದೂರವಾಗಿ ಅಥವಾ ಒಂಟಿಯಾಗಿ ಜೀವನ ಸಾಗಿಸುವುದು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ.

ವೃದ್ಧರು ಒಂಟಿಯಾಗಿ ಜೀವನ ಸಾಗಿಸಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ಅವರಲ್ಲಿನ ಕೆಲವು ಆರೋಗ್ಯ ಸಮಸ್ಯೆಗಳು ಅವರನ್ನು ಒಂಟಿಯಾಗಿಸಬಹುದು.

ವೃದ್ಧರು ಒಂಟಿಯಾಗಿ ಬದುಕುವುದರಿಂದ ಅವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಅಲ್ಲದೆ ರಕ್ತದೊತ್ತಡ, ಮಾನಸಿಕ ಒತ್ತಡಗಳು ಹೆಚ್ಚಾಗಿ ಹೃದಯಾಘಾತ ಹಾಗೂ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ.

ಇನ್ನು ವೃದ್ಧರು ಒಂಟಿಯಾಗಿರುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ಅವರು ಬಹುಬೇಗನೆ ಹಲವಾರು ಸೋಂಕುಗಳಿಗೆ ತುತ್ತಾಗಬಹುದು. ಅಲ್ಲದೆ ವೈದ್ಯಕೀಯ ಆರೈಕೆ ನೀಡಿದ ಬಳಿಕವೂ ಮಕ್ಕಳ ಆರೈಕೆ ಸಿಗದೆ ಅವರು ಸೋಂಕಿನಿಂದ ಬೇಗ ಗುಣಮುಖರಾಗಲು ಕಷ್ಟವಾಗಬಹುದು. ಅಥವಾ ಗುಣವಾಗದೆಯೂ ಇರಬಹುದು. ವೃದ್ಧರು ಒಂಟಿಯಾಗುತ್ತಾ ಹೋದಂತೆ ಅವರಿಗೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಕಷ್ಟವಾಗುತ್ತದೆ. ಅವರಿಗೆ ಅಗತ್ಯಕ್ಕೆ ತಕ್ಕಂತೆ ಆಹಾರ ತಯಾರಿಸಿಕೊಳ್ಳಲು, ನಿಯಮಿತವಾಗಿ ಆಹಾರ ಸೇವಿಸಲು ಸಾಧ್ಯವಾಗದೆ ಇರಬಹುದು.

ಇದರಿಂದಾಗಿ ಅವರಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತದೆ. ಅಲ್ಲದೆ ಅವರು ಸಕ್ಕರೆ ಕಾಯಿಲೆಯಂತಹ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರಂತೂ ಕಾಯಿಲೆಗಳಿಗೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಪಾಲಿಸಲು ಕಷ್ಟವಾಗುತ್ತದೆ. ಇವುಗಳೊಂದಿಗೆ ವಯೋ ವೃದ್ಧರಿಗೆ ಹಲವು ಮಾನಸಿಕ ಸಮಸ್ಯೆಗಳು ಉಂಟಾಗಲೂ ಒಂಟಿತನ ಕಾರಣ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಖಿನ್ನತೆ ಮತ್ತು ಆತಂಕ ಹೆಚ್ಚಾಗಿ ಕಾಡುತ್ತವೆ. ಅದರಲ್ಲಿಯೂ ಮರೆಗುಳಿತನ ಹೆಚ್ಚಾಗಬಹುದು. ಅಲ್ಲದೆ ತಮ್ಮ ದಿನಚರಿ ಮತ್ತು ದೈನಂದಿನ ಜೀವನ ನಡೆಸಲೂ ಅವರಿಗೆ ಕಷ್ಟವಾಗುತ್ತದೆ. ವೃದ್ಧರನ್ನು ಕಾಡುವ ಒಂಟಿತನದಿಂದ ಅವರನ್ನು ಮುಕ್ತಗೊಳಿಸುವುದರಲ್ಲಿ ಕುಟುಂಬದ ಸದಸ್ಯರು ಹಾಗೂ ಸಮಾಜದ ಪಾತ್ರ ಬಹಳ ಮುಖ್ಯವಾಗಿರುತ್ತದೆ.

ಕುಟುಂಬದವರು ವೃದ್ಧರನ್ನು ನಿರ್ಲಕ್ಷಿಸದೆ ಅವರೊಂದಿಗೆ ಉತ್ತಮ ಸಂಬಂಧ ಮತ್ತು ಒಡನಾಟವನ್ನು ಇಟ್ಟುಕೊಳ್ಳಬೇಕು. ಕುಟುಂಬದವರ ಆಸರೆ ಇಲ್ಲದ ವೃದ್ಧರಿಗೆ ಸಮಾಜದ ಜನರೇ ಬೆನ್ನೆಲುಬಾಗಿ ನಿಲ್ಲಬಹುದು. ಒಂಟಿಯಾಗಿ ಜೀವಿಸುತ್ತಿರುವ ವೃದ್ಧರೊಂದಿಗೆ ಉತ್ತಮ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡು ಅವರಿಗೆ ಬೆಂಬಲವಾಗಿ ನಿಲ್ಲಬೇಕು. ಇದರಿಂದ ವೃದ್ಧರು ಆತ್ಮವಿಶ್ವಾಸವನು, ಹೆಚ್ಚಾಗಿ ಅವರ ಆರೋಗ್ಯವನ್ನು ಕಾಪಾಡಿಕೊಂಡು ತೃಪ್ತಿಕರ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ವಯಸ್ಸಾದ ಮೇಲೆ ಆರೋಗ್ಯಯುತ ಜೀವನ ಸಾಗಿಸಬೇಕು ಎಂದರೆ ಮೊದಲು ವೃದ್ಧರು ಒಂಟಿತನದಿಂದ ಹೊರಬರಬೇಕು. ಅದಕ್ಕಾಗಿ ಅವರು ಹಲವು ಮಾರ್ಗೋಪಾಯಗಳನ್ನು ಅನುಸರಿಸಬೇಕು.

೧.  ವೃದ್ಧರು ತಮ್ಮ ಸುತ್ತಲಿನ ಸಮಾಜದೊಂದಿಗೆ ಹೆಚ್ಚು ಬೆರೆಯಲು ಪ್ರಯತ್ನಿಸಬೇಕು. ಸಮಾನ ವಯಸ್ಕ ಗುಂಪಿನವರೊಂದಿಗೆ ಒಡನಾಟವನ್ನಿಟ್ಟುಕೊಂಡು ಅವರೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಕುಟುಂಬದ ಸದಸ್ಯರೊಡನೆ ಸಂಪರ್ಕ ಹೊಂದಬೇಕು. ಜತೆಗೆ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕು.

೨.  ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮೊಬೈಲ್, ಇಂಟರ್ನೆಟ್ ಮುಖಾಂತರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಒಡನಾಟ ಹೆಚ್ಚಿಸಿಕೊಳ್ಳಬಹುದು. ತುರ್ತು ಪರಿಸ್ಥಿತಿಗಳಲ್ಲೂ ತಂತ್ರಜ್ಞಾನದ ಬಳಕೆ ಸಹಾಯವಾಗುತ್ತದೆ.

೩. ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಸಂಗೀತ ಆಲಿಸುವುದು, ಓದುವುದು, ತೋಟಗಾರಿಕೆ ಮುಂತಾದ ಚಟುವಟಿಕೆಗಳನ್ನು ರೂಢಿಸಿಕೊಂಡರೆ ಒಂಟಿತನ ದೂರವಾಗುತ್ತದೆ.

೪. ದೈಹಿಕ ವ್ಯಾಯಾಮ ಮತ್ತು ಚಟುವಟಿಕೆ ಅಭ್ಯಾಸ ಮಾಡಿಕೊಳ್ಳುವುದು, ಯೋಗ, ನಡಿಗೆ, ಪ್ರಾಣಾಯಾಮ ಹೀಗೆ ಹಲವು ರೀತಿಯ ಅಭ್ಯಾಸಗಳು ಉತ್ತಮ ಜೀವನಕ್ಕೆ ಸಹಕಾರಿಯಾಗಿರುತ್ತವೆ.

೫. ಸಾಕು ಪ್ರಾಣಿಗಳ ಜೊತೆ ಒಡನಾಟ, ಸಾಕು ಪ್ರಾಣಿಗಳ ಜೊತೆಗಿನ ಭಾವನಾತ್ಮಕ ಸಂಬಂಧದಿಂದ ವೃದ್ಧರಲ್ಲಿ ಒಂಟಿತನ ದೂರವಾಗುತ್ತ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

4 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

4 hours ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

4 hours ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

4 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…

4 hours ago

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…

4 hours ago