ಅಂಕಣಗಳು

ಕೊನೆಯ ದಿನಗಳ ಆಸೆಗಳನ್ನು ಈಡೇರಿಸಿ

ಸೌಮ್ಯ ಕೋಠಿ, ಮೈಸೂರು.

ಕೊನೆಗಾಲ ಎಂದಾಕ್ಷಣ ಎಲ್ಲರಿಗೂ ಕಣ್ಣಂಚಲ್ಲಿ ನೀರು ಬರುವುದು ಸಹಜ. ಸಾಮಾನ್ಯವಾಗಿ ಹಿರಿಯರಿಗೆ ಕೊನೆಗಾಲದಲ್ಲಿ ಸಾಕಷ್ಟು ಬಯಕೆಗಳಿರುತ್ತವೆ. ಅವುಗಳ ಈಡೇರಿಕೆಗಾಗಿ ಅವರು ಹಾತೊರೆಯುತ್ತಾರೆ. ಅವುಗಳನ್ನು ಅರ್ಥ ಮಾಡಿಕೊಂಡು ಈಡೇರಿಸುವುದು ನಮ್ಮ ಹೊಣೆಗಾರಿಕೆಯಾಗಬೇಕು.

ಆಸ್ತಿವಂತರಾಗಿದ್ದರೆ, ಹತ್ತಾರು ಎಕರೆ ಗದ್ದೆ ತೋಟಗಳಿದ್ದರೆ ಅವುಗಳನ್ನು ತಮ್ಮ ಮಕ್ಕಳಿಗೆ, ಕೊನೆಗಾಲದಲ್ಲಿ ತನ್ನ ಹೆಂಡತಿಗೂ ಆಸರೆಯಾಗಬೇಕು ಎಂಬ ದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ಆಸ್ತಿಯನ್ನು ವಿಲ್ ಮಾಡಿಡುವವರಿದ್ದಾರೆ. ಇದರ ಬಗ್ಗೆ ಅವರು ಕೊನೆಯ ದಿನಗಳಲ್ಲಿ ಗಂಭೀರವಾಗಿ ಯೋಚಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರ ನಿರ್ಧಾರವನ್ನು ಗೌರವಿಸುವುದು ಮಕ್ಕಳ ಜವಾಬ್ದಾರಿಯಾಗಿರುತ್ತದೆ. ಅವರಿಗೆ ಕೊನೆಗಾಲದಲ್ಲಿ ಯಾವುದೇ ನೋವು ನೀಡುವುದು ಅಷ್ಟು ಸೂಕ್ತವಲ್ಲ.

ಇದೆಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಕಾಡುವುದು ಮರಣದ ನಂತರ ತಮ್ಮ ಅಂತ್ಯಕ್ರಿಯೆ ಎಷ್ಟು ಅಚ್ಚುಕಟ್ಟಾಗಿ ಪದ್ಧತಿಯನುಸಾರ ಜರುಗುತ್ತದೆ ಎಂಬುದು. ಜತೆಗೆ ಕೆಲವರಿಗೆ ತಮ್ಮ ದೇಹ ಮತ್ತೊಬ್ಬರಿಗೆ ಉಪಯೋಗವಾಗಬೇಕು ಎಂಬ ಬಯಕೆಯೂ ಇರುತ್ತದೆ. ಅದರ ಬಗ್ಗೆ ಅವರು ಮೊದಲೇ ತೀರ್ಮಾನಿಸಿ ಅಂಗಾಂಗ, ದೇಹದಾನ ಕುರಿತು ಕುಟುಂಬದ ಆಪ್ತರೊಡನೆ ಸಮಾಲೋಚನೆ ನಡೆಸುತ್ತಿರುತ್ತಾರೆ. ಅವುಗಳನ್ನು ಈಡೇರಿಸುವ ಜವಾಬ್ದಾರಿಯನ್ನು ಹೊರುವುದು ಮಕ್ಕಳಾದ ನಮ್ಮ ಕರ್ತವ್ಯ.

ಡಾ. ರಾಜ್ ಕುಮಾರ್‌ರಂತೆ ನಾವೂ ನೇತ್ರದಾನ ಮಾಡಬೇಕು ಎಂದುಕೊಳ್ಳುವ ಸಾಕಷ್ಟು ಹಿರಿಯರನ್ನು ನಾವು ನೋಡಿದ್ದೇವೆ. ಅಂಗಾಂಗಗಳನ್ನು ದಾನ ಮಾಡಬೇಕು ಎಂದುಕೊಂಡಿರುವವರು ಸಾಕಷ್ಟಿದ್ದಾರೆ. ಇದು ಸಾಕಷ್ಟು ಹಿರಿಯರ ಬಯಕೆಯಾಗಿದ್ದರೂ ಅದನ್ನು ಹಂಚಿಕೊಳ್ಳುವ ಧೈರ್ಯ ಅವರಿಗೆ ಕಡಿಮೆ. ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿ ಉತ್ತಮ ಬದುಕು ಕಟ್ಟಿಕೊಂಡ ಹಿರಿಯರಿಗೆ ಅವರ ಕಾಲಾನಂತರವೂ ಮತ್ತೊಬ್ಬರಿಗೆ ನೆರವಾಗಬೇಕು ಎಂಬ ಬಯಕೆ ಸದಾ ಇರುತ್ತದೆ.

ಈ ಸಂದರ್ಭದಲ್ಲಿ ಒಂದು ಘಟನೆಯನ್ನು ನೆನಪಿಸಲು ಇಚ್ಛಿಸುತ್ತೇನೆ. ನನಗೆ ತಿಳಿದ ಹಿರಿಯರೊಬ್ಬರು ತಮ್ಮ ಇಳಿವಯಸ್ಸಿನಲ್ಲಿ ಅವರ ಮಗ ನೋಡಿಕೊಳ್ಳಲಿಲ್ಲ ಎಂದು ಬೇಸರಗೊಂಡು ವೃದ್ಧಾಶ್ರಮವನ್ನು ಸೇರಿಕೊಂಡರು. ಅಲ್ಲಿಯೇ ಒಂದಿಷ್ಟು ವರ್ಷ ದೂಡಿದ ಅವರು, ಕೊನೆಗಾಲದಲ್ಲಿ ವೃದ್ಧಾಶ್ರಮದವರಿಗೆ ನನ್ನ ದೇಹವನ್ನು ದಯವಿಟ್ಟು ದಾನ ಮಾಡಿಬಿಡಿ. ನನ್ನ ಮಗ ಬಂದು ಕೇಳಿದರೆ ಕೊಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಅವರ ಆಸೆ ಈಡೇರದೆ ಹಠಕ್ಕೆ ಬಿದ್ದ ಮಗ ಅವರ ದೇಹವನ್ನು ಅಂತ್ಯಕ್ರಿಯೆ ಮಾಡಿದ. ಇರುವಾಗ ಒಂದು ತುತ್ತು ಅನ್ನ ಹಾಕದವರು, ಸತ್ತಾಗ ತಂದೆಯ ಆಸೆಯಂತಾದರೂ ದೇಹವನ್ನು ದಾನ ಮಾಡಲು ಬಿಡದೆ, ಅಂತ್ಯಸಂಸ್ಕಾರ ನೆರವೇರಿಸಿ ಅಪರ ಕಾರ್ಯವನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ? ಈ ಬಗ್ಗೆ ನಾವು ಚಿಂತಿಸುವುದು ಅವಶ್ಯ.

ಭಗವದ್ಗೀತೆಯ ಉಲ್ಲೇಖದಂತೆ ಆತ್ಮ ಮತ್ತು ದೇಹ ಜೀವನದ ನಿಜವಾದ ಸಂಗಾತಿಗಳು. ಹಾಗಾಗಿ ನಮ್ಮ ದೇಹದ ಮೇಲೆ ನಮಗೆ ಅಧಿಕಾರವಿರುತ್ತದೆ. ನಾವು ಸತ್ತ ಮೇಲೂ ಆ ದೇಹ ಏನಾಗಬೇಕು ಎಂಬ ನಿರ್ಧಾರವನ್ನು ನಾವೇ ತೆಗೆದುಕೊಳ್ಳಬಹುದಾಗಿದೆ. ಹಾಗಾಗಿ ಹಿರಿಯರ ನಿರ್ಧಾರವನ್ನು ಗೌರವಿಸುವುದು, ಅವರ ಬಯಕೆಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಈ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ರವರನ್ನು ಸ್ಮರಿಸುವುದು ಅತ್ಯಗತ್ಯ. ಅವರ ಅಭಿಮಾನಿಯಾಗಿರುವ ಹಿರಿಜೀವಗಳು ಅವರಂತೆಯೇ ನೇತ್ರದಾನಕ್ಕೆ ಮುಂದಾಗಿರುವುದು ನಿಜಕ್ಕೂ ಮೆಚ್ಚುವ ಕೆಲಸ. ಹಿರಿಯರ ಆಸರೆಯಲ್ಲಿ ಕಿರಿಯರು ಬದುಕುತ್ತಾರೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.

 

ಆಂದೋಲನ ಡೆಸ್ಕ್

Recent Posts

ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರು: ಸಿಎಂ ಡಿಕೆಶಿ ಬಾಂಬ್

ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…

4 hours ago

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್!

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…

5 hours ago

ಎಸ್‌ಐಆರ್‌ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…

6 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಶಾಕ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…

7 hours ago

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

10 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

11 hours ago