ಅಂಕಣಗಳು

ಶಿಕ್ಷಣ ಮತ್ತು ಸ್ವಾವಲಂಬನೆ ನನ್ನ ಬದುಕಿನ ಎರಡು ಕಣ್ಣುಗಳು

  • ಡಾ.ಮಾಲ ಬಿ.ಎಂ.
ನಾನು ಹುಟ್ಟಿನಿಂದಲೇ ಅಂಧಳು. ಅಂಧಮಕ್ಕಳಿಗೂ ವಿಶೇಷ ಶಾಲೆಗಳಿವೆ ಎಂಬುದರ ಬಗ್ಗೆ ನಮ್ಮ ಮನೆಯಲ್ಲಿ ಮಾಹಿತಿ ಇರಲಿಲ್ಲ. ಇದರಿಂದಾಗಿಯೇ ಅವರು ನನ್ನನ್ನು ಶಾಲೆಗೆ ಸೇರಿಸಲು ತಡ ಮಾಡಿದರು. ಆದರೆ ನನ್ನಲ್ಲಿದ್ದ ಓದುವ ಹಂಬಲದಿಂದ ನಾನು 15 ವರ್ಷಗಳಾದ ಮೇಲೆ ಹತ್ತನೇ ತರಗತಿ ಪರೀಕ್ಷೆಯನ್ನು ತೆಗೆದುಕೊಂಡೆ. ನನ್ನ ಸಹೋದರಿಯರ ಸಹಾಯ ಪಡೆದು ವಿದ್ಯಾಭ್ಯಾಸ ಮುಂದುವರಿಸಿದೆ. ಓದುವುದನ್ನು ಮುಂದುವರಿಸಲು ವಯಸ್ಸಿನ ಪರಿಮಿತಿ ಇಲ್ಲ ಮನಸ್ಸು ಮಾಡಿದರೆ ಸಾಕು ಯಾವ ಸಮಸ್ಯೆಗಳೂ ಅಡ್ಡಿಯಾಗುವುದಿಲ್ಲ ಎಂಬುದು ನನ್ನ ಭಾವನೆ. 90 ವರ್ಷ ದಾಟಿದ ವಯೋವೃದ್ದೆ ಒಬ್ಬರು ಪಿಎಚ್‌.ಡಿ. ಪದವಿ ಪಡೆದ ಉದಾಹರಣೆಯು ನಮ್ಮಲ್ಲಿದೆ. ಅಷ್ಟೇ ಏಕೆ ನನ್ನ ವಿದ್ಯಾಭ್ಯಾಸವು ತಡವಾಗಿಯೇ ಶುರುವಾಯಿತು. ಕಾರಣ ನಾನು ಹುಟ್ಟಿನಿಂದಲೇ ಅಂಧಳಾಗಿದ್ದರಿಂದ, ನಮ್ಮ ಮನೆಯಲ್ಲಿ ವಿಶೇಷ ಶಾಲೆಗಳ ಬಗ್ಗೆ ಮಾಹಿತಿ ಇಲ್ಲದೆ ಇದ್ದುದ್ದರಿಂದ. ನಾನು ಶಾಲೆಯ ಮೆಟ್ಟಿಲನ್ನೇ ಹತ್ತಲು ಸಾಧ್ಯವಾಗಿರಲಿಲ್ಲ. ಆದರೂ ಓದುವ ಹಂಬಲದಿಂದ ನನಗೆ 15 ವರ್ಷಗಳಾದ ಮೇಲೆ ನಾನು ಹತ್ತನೇ ತರಗತಿ ಪರೀಕ್ಷೆಯನ್ನು ನೇರವಾಗಿ ಖಾಸಗಿ ವಿದ್ಯಾರ್ಥಿನಿಯಾಗಿ ತೆಗೆದುಕೊಂಡೆ. ನಂತರ ನನ್ನ ಸಹೋದರಿಯರ ಸಹಾಯ ಪಡೆದು ಮನೆಯಲ್ಲಿಯೇ ಪಾಠಗಳನ್ನು ಓದಿಸಿಕೊಂಡು ಅರ್ಥ ಮಾಡಿಕೊಳ್ಳ ತೊಡಗಿದೆ. ಪರಿಣಾಮವಾಗಿ ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆ. ಅಲ್ಲಿಂದ ಪ್ರಾರಂಭವಾದ ನನ್ನ ವಿದ್ಯಾಭ್ಯಾಸವು ಇಲ್ಲಿಯವರೆಗೂ ಮುಂದುವರಿಯುತ್ತಾ ಬಂದಿದೆ. ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನೂ ಪಡೆದು ಕೊಂಡಿದ್ದೇನೆ. ಪ್ರಸ್ತುತ ಇತಿಹಾಸ ವಿಭಾಗದಲ್ಲಿ ಪಿಹೆಚ್.ಡಿ ಪದವಿಗಾಗಿ ಮಹಾ ಪ್ರಬಂಧವನ್ನು ಸಿದ್ಧಪಡಿಸುತ್ತಿದ್ದೇನೆ.
ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢರಾಗಬೇಕಾದರೆ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಆಗ ಅದೆಷ್ಟೋ ಅವಕಾಶಗಳು ಅವರಿಗೆ ತೆರೆದುಕೊಳ್ಳುತ್ತವೆ. ಹತ್ತನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಖಾಸಗಿಯಾಗಿಯೇ ತೆಗೆದುಕೊಂಡು ಮನೆಯಲ್ಲೇ ಓದಿಕೊಳ್ಳಬಹುದು. ನಂತರ ಉನ್ನತ ಶಿಕ್ಷಣದ ಕೋರ್ಸ್‌ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳಿಂದ ಪಡೆದುಕೊಳ್ಳಬಹುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಶಿಕ್ಷಣವೇ ಮೂಲ ಮಂತ್ರವಾಗಿದೆ. ಹಾಗಾಗಿ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಒಳ್ಳೆಯ ಉದ್ಯೋಗ ಪಡೆದರೆ ಮಹಿಳೆಯರು ಉತ್ತಮ ಜೀವನ ನಡೆಸಬಹುದು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಪ್ರಸಿದ್ಧವಾದ ನಾಣ್ಣುಡಿಯಂತೆ, ಮಹಿಳೆಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿದಾಗ ಮಾತ್ರ ಉತ್ತಮ ಕುಟುಂಬ, ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ.
ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ನನ್ನನ್ನು ಸಾಕಷ್ಟು ಮಹಿಳೆಯರು ಕೇಳುವ ಪ್ರಶ್ನೆ, ‘ಮೇಡಂ ನನಗೆ ಓದುವ ಹಂಬಲವಿದೆ.
ಆದರೆ ನನಗೆ 18 ವರ್ಷಗಳು ತುಂಬಿ ಹೋಗಿದೆ. ನಾನು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ನಾನು ಈಗಲೂ ಓದಬಹುದೇ?’ ಮತ್ತೆ ಕೆಲವರು ‘ತಮ್ಮ ವಿದ್ಯಾಭ್ಯಾಸವು ಅರ್ಧಕ್ಕೆ ನಿಂತುಹೋಗಿದೆ, ಈಗ ನಾನು ಓದನ್ನು ಮುಂದುವರಿಸಬಹುದೇ?’ ಎಂಬುದಾಗಿದೆ.
ಇದಕ್ಕೆಲ್ಲ ನಾನು ಹೇಳುವುದು ಒಂದೇ ಮಾತು, ಖಂಡಿತಗಿಯೂ ನಿಮ್ಮ ವಿದ್ಯಾಭ್ಯಾಸವನ್ನು ನೀವು ಈಗಲೂ ಮುಂದುವರಿಸಬಹುದು ಎಂದು.
ಓದನ್ನು ಮುಂದುವರಿಸಲು, ಶಿಕ್ಷಿತರಾಗಲು ವಯಸ್ಸಿನ ಪರಿಮಿತಿ ಇಲ್ಲ. ಮನಸ್ಸು ಮಾಡಿದರೆ ಸಾಕು ಯಾವ ಸಮಸ್ಯೆಗಳೂ ಅಡ್ಡಿಯಾಗುವುದಿಲ್ಲ ಎಂಬುದು ನನ್ನ ಭಾವನೆ.
alabm2014@gmail.com
lokesh

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

3 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

4 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

4 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

5 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

5 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

9 hours ago