ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ
ಈಗ ಸ್ಥಗಿತಗೊಂಡ ತತ್ಕಾಲ್ ಪ್ರಮಾಣಪತ್ರ ನೀಡುವ ವ್ಯವಸ್ಥೆ
ಸೆನ್ಸಾರ್ ಮಂಡಳಿಯ ಹೆಸರು ಬದಲಾಗಿ ವರ್ಷಗಳೇ ಆಗಿವೆ. ಈಗ ಅದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್-ಸಿಬಿಎಫ್ಸಿ). ಈಗಲೂ ಅದನ್ನು ಸೆನ್ಸಾರ್ ಬೋರ್ಡ್ ಎಂದು ಕರೆಯುವವರೇ ಹೆಚ್ಚು. ಚಲನಚಿತ್ರವೊಂದು ತಯಾರಾದ ಮೇಲೆ ಅದನ್ನು ಸಾರ್ವಜನಿಕ ಪ್ರದರ್ಶನಕ್ಕೆ ಪ್ರಮಾಣ ಪತ್ರ ಪಡೆಯಲು ಯಾವೆಲ್ಲ ಹಂತಗಳು, ಯಾವ ಯಾವ ಪ್ರಮಾಣ ಪತ್ರಗಳು, ದಾಖಲೆಗಳು ಬೇಕು ಎನ್ನುವುದು ಹೊಸ ನಿರ್ಮಾಪಕರು ಬಿಡಿ,ಆಯಕಟ್ಟಿನ ಜಗದಲ್ಲಿರುವ ಮಂದಿಗೂ ಪೂರ್ತಿ ಮಾಹಿತಿ ಇದ್ದಂತಿಲ್ಲ.
ಸಿಬಿಎಫ್ಸಿಯ ಜಲತಾಣದಲ್ಲಿ ಅದಕ್ಕೆ ಬೇಕಾದ ಎಲ್ಲ ವಿವರಗಳೂ ಇವೆ ಎನ್ನಿ. ಆದರೆ ಸಾಮಾನ್ಯವಾಗಿ ಮಧ್ಯವರ್ತಿ ನೆರವಿನಿಂದಲೇ ಪ್ರಮಾಣಪತ್ರ ಪಡೆಯುವವರೇ ಹೆಚ್ಚು. ಚಲನಚಿತ್ರವೊಂದು ಪ್ರಮಾಣಪತ್ರ ಪಡೆದ ನಂತರ ಅದರ ಪ್ರಚಾರ ಭಿತ್ತಿಪತ್ರ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗುವ ಜಹೀರಾತುಗಳಲ್ಲಿ ‘ಯು’, ‘ಎ’, ಯು/ಎ ೭+, ಯು/ಎ ೧೩+ ಯು/ಎ ೧೬+ ಇವುಗಳಲ್ಲಿ ಯಾವುದು ಎನ್ನುವುದನ್ನು ಪ್ರಕಟಿಸದಿದ್ದರೆ ಅದು ಅಪರಾಧವಾಗುತ್ತದೆ. ಚಿತ್ರಮಂದಿರಗಳ ಒಳಗೆ ಪ್ರಮುಖ ಜಗದಲ್ಲಿ, ಪ್ರದರ್ಶನವಾಗುತ್ತಿರುವ ಚಿತ್ರಕ್ಕೆ ಸಿಬಿಎಫ್ ಸಿಸೂಚಿಸಿದ ಕಟ್ ಅಥವಾ ಬದಲಾವಣೆಗಳ ವಿವರಗಳನ್ನು ಪ್ರದರ್ಶಿಸಲಾಗಿದೆಯೇ? ಚಿತ್ರದ ಆರಂಭದಲ್ಲಿ ಅದಕ್ಕೆ ಯಾವ ಪ್ರಮಾಣಪತ್ರ ನೀಡಲಾಗಿದೆ ಎಂಬುದನ್ನು ತೋರಿಸಿದರೇ? ‘ವಯಸ್ಕರಿಗೆ ಮಾತ್ರ’ ಇರುವ ‘ಎ’ ಪ್ರಮಾಣಪತ್ರ ಪಡೆದ ಚಿತ್ರದ ಪ್ರದರ್ಶನಕ್ಕೆ ೧೮ ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ ನೀಡಲಾಗಿದೆಯೇ? ಸಿಬಿಎಫ್ಸಿ ಕತ್ತರಿಸಿದ್ದಾಗಿ ಹೇಳಿದ ದೃಶ್ಯ ಅಥವಾ ಸಂಭಾಷಣೆಗಳು ಚಿತ್ರದಲ್ಲಿದ್ದವೇ? ಸಿಬಿಎಫ್ಸಿ ಪ್ರಮಾಣೀಕರಿಸದೆ ಇರಬಹುದಾದ ಅಶ್ಲೀಲ, ಅಸಹ್ಯ ಸಂಭಾಷಣೆಗಳು ಅತಿಯಾದ ಕ್ರೌರ್ಯವೇ ಮೊದಲಾದ ದೃಶ್ಯಗಳು, ಪ್ರಮಾಣಪತ್ರ ಪಡೆದ ನಂತರ ಸೇರಿಸಿರಬಹುದಾದ ದೃಶ್ಯ, ಸಂಭಾಷಣೆಗಳಿದ್ದವೇ? ಇದ್ದರೆ ಸಿನಿಮಾಟೋಗ್ರಫಿ ಕಾಯ್ದೆ ೧೯೫೨ ಮತ್ತು ನಂತರದ ತಿದ್ದುಪಡಿಗಳ ಪ್ರಕಾರ ಇದು ಶಿಕ್ಷಾರ್ಹ ಅಪರಾಧ. ಪ್ರೇಕ್ಷಕರು, ಪ್ರಮಾಣೀಕರಣ ಮಂಡಳಿಯ ಸಲಹಾ ಸಮಿತಿಯ ಸದಸ್ಯರು ಈ ಉಲ್ಲಂಘನೆಯ ದೂರನ್ನು ನೇರವಾಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದು. ಅದು ಇಷ್ಟವಿಲ್ಲದೆ ಇದ್ದರೆ, ಸಿಬಿಎಫ್ಸಿ ಇಲ್ಲವೇ ಮಾಧ್ಯಮ ಇಲ್ಲವೇ ಜಿಲ್ಲಾಧಿಕಾರಿಯ ಗಮನಕ್ಕೆ ತರಬಹುದು.
ಪ್ರಮಾಣೀಕರಣ ನಿಬಂಧನೆಗಳ ಉಲ್ಲಂಘನೆಗೆ ಸಂಬಂಧಿಸಿದ ಅಪರಾಧಗಳು ಪೊಲೀಸರು ವಾರಂಟ್ ಇಲ್ಲದೆ ಬಂಧಿಸಬಹುದಾದ ಅಪರಾಧಗಳಾಗಿವೆ. ಅಲ್ಲದೆ, ಇವು ಜಾಮೀನು ರಹಿತ ಅಪರಾಧಗಳು ಕೂಡ. ಚಲನಚಿತ್ರಗಳನ್ನು ಪ್ರದರ್ಶಿಸುವಾಗ ನಿಯಮ ಉಲ್ಲಂಸಿದ ವ್ಯಕ್ತಿಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಅಥವಾ ಒಂದು ಲಕ್ಷ ರೂಪಾಯಿ ವರೆಗಿನ ದಂಡ, ಅಥವಾ ಇವೆರಡನ್ನೂ ವಿಧಿಸಬಹುದು. ಅಪರಾಧವು ಮುಂದುವರಿದಲ್ಲಿ, ಪ್ರತಿ ದಿನಕ್ಕೆ ಹೆಚ್ಚುವರಿಯಾಗಿ ೨೦,೦೦೦ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ. ಅದೇ ರೀತಿ, ಈ ಸೆಕ್ಷನ್ನಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳನ್ನು ಉಲ್ಲಂಸಿ ವಿಡಿಯೋ ಚಲನಚಿತ್ರಗಳನ್ನು ಪ್ರದರ್ಶಿಸಿದರೆ, ಮೂರು ತಿಂಗಳಿಗಿಂತ ಕಡಿಮೆಯಲ್ಲದ ಮತ್ತು ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ೨೦,೦೦೦ ರೂಪಾಯಿಗಿಂತ ಕಡಿಮೆಯಲ್ಲದ ಮತ್ತು ಒಂದು ಲಕ್ಷ ರೂಪಾಯಿವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲಾಗುತ್ತದೆ. ಜೊತೆಗೆ, ಅಪರಾಧವು ಮುಂದುವರಿದಲ್ಲಿ ಪ್ರತಿ ದಿನಕ್ಕೆ ಹೆಚ್ಚುವರಿಯಾಗಿ ೨೦,೦೦೦ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ಇದಲ್ಲದೆ, ವಿಚಾರಣಾ ನ್ಯಾಯಾಲಯವು ನಿಯಮ ಉಲ್ಲಂಸಿದ ಚಲನಚಿತ್ರವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಬಹುದು. ಸೆಕ್ಷನ್ ೭ಅ ಅಡಿಯಲ್ಲಿ, ಯಾವುದೇ ಪೊಲೀಸ್ ಅಧಿಕಾರಿ ನಿಯಮ ಉಲ್ಲಂಸಿದ ಚಲನಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಕ್ಕೆ ಪ್ರವೇಶಿಸಿ, ಆ ಸ್ಥಳವನ್ನು ಪರಿಶೀಲಿಸಬಹುದು, ಚಿತ್ರದ ಪ್ರತಿಯನ್ನು ವಶಪಡಿಸಿಕೊಳ್ಳಬಹುದು. ಸಿನಿಮಾಟೋಗ್ರಾಫ್ ಕಾಯಿದೆಯನ್ನು ಉಲ್ಲಂಸಿ ಪ್ರದರ್ಶಿಸುವ ಸಾಧ್ಯತೆಯ ಚಿತ್ರಗಳನ್ನು ಸಹ ವಶಪಡಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಚಿತ್ರ ಸಿದ್ಧವಾಗುವ ಮೊದಲೇ ಅದರ ಬಿಡುಗಡೆ ದಿನಾಂಕವನ್ನು ಪ್ರಕಟಿಸುವ, ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿತ್ತು. ದುಬಾರಿ ವೆಚ್ಚದ, ಚಿತ್ರಗಳಿಗೆ ತತ್ಕಾಲ್ ಎಂದು ಸರದಿ ತಪ್ಪಿಸಿ ಪ್ರಮಾಣಪತ್ರ ನೀಡುವ ಸೌಲಭ್ಯವನ್ನು ಸಿಬಿಎ-ಸಿಯೇ ಮಾಡಿತ್ತು. ಇದರಿಂದ ಕೆಲವು ನಿರ್ಮಾಪಕರಿಗೆ ತೊಂದರೆಯೂ ಆಗಿತ್ತಂತೆ. ಉದ್ಯಮದ ಬೇಡಿಕೆಯಂತೆ ಆರಂಭಿಸಿದ ಈ ತತ್ಕಾಲ್ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ಈಗ ನಿಲ್ಲಿಸಲಾಗಿದೆ. ಜೊತೆಗೆ ಕಳೆದ ತಿಂಗಳ ೨೬ರಂದು ಮಂಡಳಿ, ಪ್ರಮಾಣಪತ್ರ ಪಡೆಯಲು ಚಲನಚಿತ್ರಗಳು ಅನುಸರಿಸಬೇಕಾದ ಅಧಿಕೃತ ನಿರ್ದೇಶನವನ್ನು ನೀಡಿದೆ.
ಪ್ರಮಾಣೀಕರಣಕ್ಕೆ ಸಲ್ಲಿಸುವ ಚಲನಚಿತ್ರವು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಸಿದ್ಧವಾಗಿರುವ ಅಂತಿಮ ಆವೃತ್ತಿಯಾಗಿರಬೇಕು, ಚಿತ್ರದ ಎ ತಾಂತ್ರಿಕ ಅಂಶಗಳು-ಗ್ರಾಫಿಕ್ಸ್/ವಿಎಫ್ಕ್ಸ್ ಹಿನ್ನೆಲೆ ಸಂಗೀತ, ಶಬ್ದ ಸಂಯೋಜನೆ , ಶೀರ್ಷಿಕೆ ಕಾರ್ಡ್ಗಳು, ಕ್ರೆಡಿಟ್ಸ್, ಎಚ್ಚರಿಕೆ ಫಲಕಗಳು ಮತ್ತು ಉಪಶೀರ್ಷಿಕೆಗಳು ಸಂಪೂರ್ಣವಾಗಿ ಆಗಿರಬೇಕು. ಅಂಗವಿಕಲ ಪ್ರೇಕ್ಷಕರಿಗೆ ಇರುವ ಕ್ಲೋಸ್ಡ್ಕ್ಯಾಪ್ಶನ್ಗಳು ಮತ್ತು ಆಡಿಯೋ ವಿವರಣೆಗಳು ಸಹ ಅರ್ಜಿ ಸಲ್ಲಿಕೆಯ ಹಂತದ ಅಂತಿಮಗೊಂಡಿರಬೇಕು. ಮಂಡಳಿಯು ಪ್ರಮಾಣೀಕರಿಸಿದ ಆವೃತ್ತಿಯನ್ನು ಮಾತ್ರ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಕಾನೂನಿನಲ್ಲಿ ಅವಕಾಶವಿದೆ.
ತಾತ್ಕಾಲಿಕ ಧ್ವನಿ/ಸಂಗೀತ, ಅಪೂರ್ಣ ದೃಶ್ಯಗಳು ಅಥವಾ ಅರೆಬರೆ ಸಂಕಲನ ಹೊಂದಿರುವ ರಫ್ ಕಟ್ ಮುದ್ರಣಗಳನ್ನು ಪ್ರಮಾಣಪತ್ರಕ್ಕೆ ಸಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದ್ದೇ ಅಲ್ಲದೆ, ಇಂತಹ ಅಪೂರ್ಣ ಅರ್ಜಿಗಳನ್ನು ‘ನಿಯಮಬಾಹಿರ’ಎಂದು ಪರಿಗಣಿಸಿ, ಅವುಗಳನ್ನು ವಿಳಂಬಗೊಳಿಸುವ ಅಥವಾ ನೇರವಾಗಿ ತಿರಸ್ಕರಿಸುವ ಹಕ್ಕನ್ನು ಸಿಬಿಎಫ್ಸಿ ಹೊಂದಿದ್ದು, ಅರ್ಜಿಗೆ ಅಗತ್ಯವಿರುವ ಎ ದಾಖಲೆಗಳು ಮತ್ತು ಸಂಪೂರ್ಣ ಚಿತ್ರ ಸಲ್ಲಿಕೆಯಾದ ದಿನವನ್ನು ಮಾತ್ರ ಅರ್ಜಿಯ ‘ಅಧಿಕೃತ ಸ್ವೀಕೃತಿ ದಿನಾಂಕ’ ಎಂದು ಪರಿಗಣಿಸಲಾಗುತ್ತದೆ ಎಂದಿದೆ.
ಸಿನಿಮಾ ನಿರ್ಮಾಣದ ವೇಳೆ ಮತ್ತಿತರ ಸಂದರ್ಭದಲ್ಲಿ, ಪ್ರಚಾರ ಸಾಮಗ್ರಿಗಳಲ್ಲಿ ಬಳಸಲಾದ ಹೆಸರೇ ಅಂತಿಮ ಆಗಬೇಕೆಂದೇನೂ ಇಲ್ಲ. ಮಂಡಳಿಯ ಅಂತಿಮ ಅನುಮೋದನೆ ದೊರೆಯುವವರೆಗೂ ಅಧಿಕೃತ ಅಥವಾ ಅಂತಿಮವೆಂದು ಪರಿಗಣಿಸುವಂತಿಲ್ಲ. ಸಿನೆಮಾಟೋಗ್ರಾ- ಕಾಯ್ದೆ ೧೯೫೨ರ ಕಲಂ ೫ಆ (೧) ಮತ್ತು ೨೦೨೪ರ ನಿಯಮ ೨೫ರ ಪ್ರಕಾರ, ಪರೀಕ್ಷಾ ಸಮಿತಿ ಅಥವಾ ಪರಿಷ್ಕರಣಾ ಸಮಿತಿಯು ಶೀರ್ಷಿಕೆಯನ್ನು ಪರಿಶೀಲಿಸಿ, ತಿದ್ದುಪಡಿ ಮಾಡಲು ಅಥವಾ ಬದಲಾಯಿಸಲು ನಿರ್ದೇಶಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿದೆ. ಆದ್ದರಿಂದ, ಪ್ರಮಾಣಪತ್ರ ಕೈಸೇರುವ ಮುನ್ನವೇ ಶೀರ್ಷಿಕೆಯನ್ನು ಅಂತಿಮ ಎಂದು ಭಾವಿಸದಂತೆ ನಿರ್ಮಾಪಕರಿಗೆ ಸೂಚಿಸಲಾಗಿದೆ.
ನಿರ್ಮಾಪಕರು ಮುಂಚಿತವಾಗಿಯೇ ಪ್ರಕಟಿಸಿದ ಬಿಡುಗಡೆ ದಿನಾಂಕ ಪರಿಗಣಿಸಿ ಮಂಡಳಿ ಪ್ರಮಾಣಪತ್ರ ನೀಡುವುದಿಲ್ಲ. ಇದರಿಂದ ಉಂಟಾಗುವ ಯಾವುದೇ ವಿಳಂಬ ಅಥವಾ ನಷ್ಟಕ್ಕೆ ಸಿಬಿಎಫ್ಸಿ ಹೊಣೆಯಲ್ಲ. ಆದ್ದರಿಂದ ಚಿತ್ರದ ಪರಿಶೀಲನೆ, ಸಮಿತಿಯ ವೀಕ್ಷಣೆ ಮತ್ತು ಮಂಡಳಿ ಸೂಚಿಸಬಹುದಾದ ಕತ್ತರಿ/ಬದಲಾವಣೆಗಳಿಗೆ ತಗಲುವ ಸಮಯವನ್ನು ಲೆಕ್ಕಹಾಕಿ, ಬಿಡುಗಡೆ ದಿನಾಂಕಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಅರ್ಜಿ ಸಲ್ಲಿಸಲು ಅದು ಹೇಳಿದೆ.
ಚಲನಚಿತ್ರಗಳು ಪ್ರಮಾಣಪತ್ರ ಪಡೆದೇ ಸಾರ್ವಜನಿಕ ಪ್ರದರ್ಶನಕ್ಕೆ ಹೋಗಬೇಕು ಎನ್ನುವುದರ ಕುರಿತಂತೆ ಪರ ಮತ್ತು ವಿರೋಧ ಅಭಿಪ್ರಾಯಗಳಿವೆ. ಸಾಮಾಜಿಕ ಜಲತಾಣಗಳು, ಒಟಿಟಿ ತಾಣಗಳಲ್ಲಿ ಯಾವುದೇ ಕತ್ತರಿ ಪ್ರಯೋಗಗಳಿಲ್ಲದೆ ಲೈಂಗಿಕ ಮತ್ತು ಹಿಂಸಾ ವಿಜೃಂಭಣೆಯ ಕಾರ್ಯಕ್ರಮಗಳ ಪ್ರಸಾರದ ಕುರಿತ, ಅವುಗಳ ನಿಯಂತ್ರಣದ ಅಗತ್ಯದ ಕುರಿತ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಕುರಿತಂತೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಕ್ಕೆ ಕಾನೂನು ತರಬಹುದೆಂಬ ನಿರೀಕ್ಷೆಯೂ ಇದೆ. ಚಲನಚಿತ್ರಗಳ ಪ್ರಮಾಣೀಕರಣದ ವೇಳೆ ಅದು, ಈ ಮಾಧ್ಯಮವು ಸಮಾಜದ ಮೌಲ್ಯಗಳು ಮತ್ತು ಮಾನದಂಡಗಳ ಬಗ್ಗೆ ಜವಾಬ್ದಾರಿಯುತವಾಗಿ ಮತ್ತು ಸೂಕ್ಷ್ಮವಾಗಿರಬೇಕು; ಕಲಾತ್ಮಕ ಅಭಿವ್ಯಕ್ತಿ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಅನಗತ್ಯವಾಗಿ ನಿರ್ಬಂಧಿಸಬಾರದು; ಪ್ರಮಾಣೀಕರಣ ಪ್ರಕ್ರಿಯೆಯು ಸಾಮಾಜಿಕ ಬದಲಾವಣೆಗಳಿಗೆ ಸ್ಪಂದಿಸುವಂತಿರಬೇಕು; ಮಾಧ್ಯಮವು ಶುದ್ಧ ಮತ್ತು ಆರೋಗ್ಯಕರ ಮನರಂಜನೆಯನ್ನು ಒದಗಿಸಬೇಕು; ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ಅದು ಸೌಂದರ್ಯಾತ್ಮಕ ಮೌಲ್ಯವನ್ನು ಹೊಂದಿರಬೇಕು ಮತ್ತು ಚಲನಚಿತ್ರ ಕಲೆಯ ದೃಷ್ಟಿಯಿಂದ ಉತ್ತಮ ಗುಣಮಟ್ಟದ್ದಾಗಿರಬೇಕು ಎನ್ನುವ ಉದ್ದೇಶವನ್ನು ಹೊಂದಿದೆ.
ಅದಕ್ಕಾಗಿ ಹಿಂಸಾಚಾರದಂತಹ ಸಮಾಜವಿರೋಧಿ ಚಟುವಟಿಕೆಗಳ ವೈಭವೀಕರಣ ಅಥವಾ ಸಮರ್ಥನೆ ಕೂಡದು, ಅಪರಾಧಿಗಳ ಕಾರ್ಯವಿಧಾನಗಳು ಅಥವಾ ಅಪರಾಧ ಎಸಗಲು ಪ್ರಚೋದನೆ ನೀಡುವಂತಹ ದೃಶ್ಯಗಳು ಅಥವಾ ಪದಗಳಿರಬಾರದು, ಹಿಂಸಾಚಾರದಲ್ಲಿ ಮಕ್ಕಳು ಸಂತ್ರಸ್ತರಾಗಿ, ಅಪರಾಧಿಗಳಾಗಿ ಅಥವಾ ಹಿಂಸಾಚಾರಕ್ಕೆ ಬಲವಂತದ ಸಾಕ್ಷಿಗಳಾಗಿ ಭಾಗಿ ಯಾಗಿರುವುದನ್ನು ತೋರಿಸುವ ದೃಶ್ಯಗಳು, ಅಥವಾ ಮಕ್ಕಳು ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾಗಿರುವುದನ್ನು ತೋರಿಸುವ ದೃಶ್ಯಗಳು; ದೈಹಿಕ ಮತ್ತು ಮಾನಸಿಕ ಅಂಗವೈಕಲ್ಯವುಳ್ಳ ವ್ಯಕ್ತಿಗಳನ್ನು ನಿಂದಿಸುವ ಅಥವಾ ಅಪಹಾಸ್ಯ ಮಾಡುವ ದೃಶ್ಯಗಳು; ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯುವ ಅಥವಾ ಅವುಗಳನ್ನು ದುರುಪಯೋಗಪಡಿಸಿಕೊಳ್ಳುವ ದೃಶ್ಯಗಳು ಇರಕೂಡದು. ಮಹಿಳೆಯರನ್ನು ಯಾವುದೇ ರೀತಿಯಲ್ಲಿ ಕೀಳಾಗಿ ಕಾಣುವ ಅಥವಾ ಅವಮಾನಿಸುವ ದೃಶ್ಯಗಳನ್ನು ಪ್ರದರ್ಶಿಸಬಾರದು, ಲೈಂಗಿಕ ವಿಕೃತಿಗಳನ್ನು ತೋರಿಸುವ ದೃಶ್ಯಗಳನ್ನು ತಪ್ಪಿಸಬೇಕು, ಕೀಳು ಪ್ರವೃತ್ತಿಗಳನ್ನು ಪ್ರಚೋ ದಿಸುವಂತಹ, ದ್ವಂದಾರ್ಥ ಹೊಮ್ಮಿಸುವ ಪದಗಳ ಬಳಕೆಗೆ ಅವಕಾಶವಿಲ್ಲ ಇವೇ ಮೊದಲಾದ ನಿಯಮಗಳು ಅಲ್ಲಿವೆ. ಹೊಸದಾಗಿ ಬರುವ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಪ್ರಮಾಣೀಕರಣ ಮಂಡಳಿಯ ಕುರಿತ ಸಮಗ್ರ ಮಾಹಿತಿ ಇರಬೇಕು. ಆ ನಿಟ್ಟಿನಲ್ಲಿ ಮಾರ್ಗದರ್ಶನದ ಅಗತ್ಯವಿದೆ.
ರಾಜ್ಯ ಚಲನಚಿತ್ರ ಅಕಾಡೆಮಿ ಮುಂದಿನ ವಾರ ಚಿತ್ರೋದ್ಯಮದಲ್ಲಿರುವ, ಅಲ್ಲಿ ಆಸಕ್ತರಾಗಿರುವ ಮಂದಿಗೆ ನಾಲ್ಕು ದಿನಗಳ ‘ಸಿನಿ ಸಂವಾದ’ ಹೆಸರಿನ ಕಮ್ಮಟವೊಂದನ್ನು ಆಯೋಜಿಸಿದೆ. ಚಿತ್ರ ನಿರ್ಮಾಣದ ಮೊದಲೇ ಪ್ರಮಾಣೀಕರಣ ಮಂಡಳಿಯ ನಿಯಮಾ ವಳಿಗಳ ಮಾಹಿತಿ ಇದ್ದರೆ, ವೃಥಾ ಆಗುವ ತೊಂದರೆಗಳಿಂದ ತಪ್ಪಿಸಿಕೊಳ್ಳ ಬಹುದು, ಚಿತ್ರಕಥೆಯ ರಚನೆಯ ವೇಳೆ ಎಚ್ಚರ ವಹಿಸಿಕೊಳ್ಳಬಹುದು. ‘ಸಿನಿ ಸಂವಾದ’ ಈ ಕಡೆಗೂ ಗಮನ ಕೊಡಬಹುದು.
” ಹೊಸದಾಗಿ ಬರುವ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಪ್ರಮಾಣೀಕರಣ ಮಂಡಳಿಯ ಕುರಿತ ಸಮಗ್ರ ಮಾಹಿತಿ ಇರಬೇಕು. ಆ ನಿಟ್ಟಿನಲ್ಲಿ ಮಾರ್ಗದರ್ಶನದ ಅಗತ್ಯವಿದೆ. ರಾಜ್ಯ ಚಲನಚಿತ್ರ ಅಕಾಡೆಮಿ ಮುಂದಿನ ವಾರ ಚಿತ್ರೋದ್ಯಮದಲ್ಲಿರುವ, ಅಲ್ಲಿ ಆಸಕ್ತರಾಗಿರುವ ಮಂದಿಗೆ ನಾಲ್ಕು ದಿನಗಳ ‘ಸಿನಿ ಸಂವಾದ’ ಹೆಸರಿನ ಕಮ್ಮಟವೊಂದನ್ನು ಆಯೋಜಿಸಿದೆ.”
ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟರೆ, ಅದರ ಪರಿಣಾಮ ನಮ್ಮ ಅಡುಗೆ ಮನೆಯ ಬಜೆಟ್ ಮೇಲೂ ಬೀಳುತ್ತಾ? ಎಲ್ ನಿನೊ ಪ್ರಭಾವದಿಂದ…
ಚೆನ್ನೈ: ದೀಪಾವಳಿ ಹಬ್ಬಕ್ಕೆ ತಮಿಳುನಾಡು ಸರ್ಕಾರ ವಿಶೇಷ ತರಕಾರಿ ಕಿಟ್ ಪರಿಚಯಿಸಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ‘ವೆಟ್ರಿ’ ಯೋಜನೆಯಡಿ,…
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ 18 ತಿಂಗಳ ಕಾಲ ಕೆಎಸ್ಆರ್ಟಿಸಿ…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಕ್ಟೋಬರ್ 23ರಿಂದ ಕರ್ನಾಟಕ…
ಹಾಸನ: ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಮೃತಪಟ್ಟ ಬೆನ್ನಲ್ಲೇ, ಅವರ ತಂದೆ ನಿಂಗರಾಜು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ…
ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದಡಿ ಕ್ಯಾಬ್ ಚಾಲಕ ಇಂದುಶೇಖರ್ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.…