Andolana originals

ಇತಿಹಾಸದ ಪುಟ ಸೇರಿದ ಹಳೆಯ ರಂಗಮಂದಿರ

ಪುನೀತ್ ಮಡಿಕೇರಿ

೨.೧೦ ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನೂತನ ರಂಗಮಂದಿರ ನಿರ್ಮಾಣಕ್ಕೆ ಸಿದ್ಧತೆ

ಮಡಿಕೇರಿ: ನಗರದ ಗಾಂಧಿ ಮೈದಾನದಲ್ಲಿದ್ದ ಹಲವು ದಶಕಗಳ ಸಾಂಸ್ಕೃತಿಕ ನೆನಪುಗಳನ್ನು ಹೊತ್ತ ಹಳೆಯ ರಂಗಮಂದಿರ ಇದೀಗ ಇತಿಹಾಸದ ಪುಟ ಸೇರಿದೆ. ೨.೧೦ ರೂ. ಕೋಟಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನೂತನ ರಂಗಮಂದಿರ ನಿರ್ಮಾಣಕ್ಕೆ ನಗರಸಭೆ ಮುಂದಾಗಿದ್ದು, ಕಾಮಗಾರಿಯ ಮೊದಲ ಹಂತವಾಗಿ ಹಳೆಯ ಕಟ್ಟಡವನ್ನು ಯಂತ್ರಗಳ ಮೂಲಕ ನೆಲಸಮಗೊಳಿಸಲಾಗಿದೆ.

ನಗರದ ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ವೇದಿಕೆಯಾಗಿದ್ದ ಈ ರಂಗಮಂದಿರದಲ್ಲಿ ನಾಟಕ, ಸಂಗೀತ, ನೃತ್ಯ, ಯಕ್ಷಗಾನ, ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳು, ದಸರಾ ಉತ್ಸವ ಹಾಗೂ ವಿವಿಧ ಪ್ರತಿಭಟನಾ ಸಭೆಗಳು ನಡೆದಿದ್ದವು. ಇದೀಗ ಹೊಸ ರಂಗಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಹಳೆಯ ವೇದಿಕೆ ತೆರವಾಗಿದ್ದು, ಅನೇಕ ಕಲಾವಿದರು ಹಾಗೂ ಸಾರ್ವಜನಿಕರ ನೆನಪುಗಳನ್ನು ಮೆಲುಕು ಹಾಕುವಂತಾಗಿದೆ.

ನೂತನ ರಂಗಮಂದಿರದಲ್ಲಿ ಬೃಹತ್ ವೇದಿಕೆ, ಕಲಾವಿದರಿಗಾಗಿ ಗ್ರೀನ್ ರೂಂ, ಶೌಚಾಲಯ, ಗ್ಯಾಲರಿ ಹಾಗೂ ವಾಹನ ನಿಲುಗಡೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರು ಮೂಲದ ರಫಿ ಅವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಪ್ರತಿವರ್ಷ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತಾತ್ಕಾಲಿಕ ವೇದಿಕೆ ನಿರ್ಮಿಸಲು ೬೦ರಿಂದ ೭೦ ಲಕ್ಷ ರೂ. ವೆಚ್ಚವಾಗುತ್ತಿತ್ತು. ಈ ಅನಗತ್ಯ ವೆಚ್ಚ ತಡೆದು, ವರ್ಷವಿಡೀ ಬಳಕೆಗೆ ಅನುಕೂಲವಾಗುವ ಶಾಶ್ವತ ವೇದಿಕೆ ನಿರ್ಮಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಕಳೆದ ವರ್ಷ ಕಾಮಗಾರಿ ಪೂರ್ಣಗೊಳಿಸಿ ದಸರಾ ವೇಳೆಗೆ ಲೋಕಾರ್ಪಣೆ ಮಾಡುವ ಚಿಂತನೆಯಿದ್ದರೂ ಯೋಜನೆ ವಿಳಂಬವಾಗಿತ್ತು.

ಅಂದಿನ ಪುರಸಭೆ ವತಿಯಿಂದ ೨೦೦೨ರಲ್ಲಿ ಸುಮಾರು ೧೦ ಲಕ್ಷ ರೂ. ವೆಚ್ಚದಲ್ಲಿ ಹಳೆಯ ರಂಗಮಂದಿರ ನಿರ್ಮಿಸಲಾಗಿತ್ತು. ಬಳಿಕ ಅಂದಿನ ವಿಧಾನಪರಿಷತ್ ಸದಸ್ಯ ಬಿ.ಎ. ಹಸನಬ್ಬ ಅವರು ಸುಮಾರು ೫ ಲಕ್ಷ ರೂ. ವೆಚ್ಚದಲ್ಲಿ ಪ್ರೇಕ್ಷಕರು ಕುಳಿತುಕೊಳ್ಳಲು ಸಿಮೆಂ ಟ್ ಮೆಟ್ಟಿಲುಗಳನ್ನು ನಿರ್ಮಿಸಿದ್ದರು. ೨೦೨೧ರಲ್ಲಿ ದಸರಾ ಉತ್ಸವದ ಸಂದರ್ಭದಲ್ಲಿ ಉಳಿಸಲಾದ ೭೫ ಲಕ್ಷ ವೆಚ್ಚದಲ್ಲಿ ರಂಗಮಂದಿರದ ಮುಂಭಾಗದ ಗಾಂಧಿ ಮೈದಾನಕ್ಕೆ ಚಾವಣಿ ನಿರ್ಮಿಸಲಾಗಿತ್ತು.

ಅಂದಿನ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ವೆಂಕಟ್ ರಾಜಾ ಅವರು ೨೦೨೪ರ ಅ.೨೨ರಂದು ನಗರಸಭೆ ಕೌನ್ಸಿಲ್‌ನಲ್ಲಿ ಶಾಶ್ವತ ರಂಗಮಂದಿರ ನಿರ್ಮಾಣದ ಪ್ರಸ್ತಾವನೆ ಮಂಡಿಸಿ ಅನುಮೋದನೆ ಪಡೆದಿದ್ದರು. ಎಂಟರ್ ಪ್ರೆ ಸಸ್ ನಿಧಿಯ ೭ ಕೋಟಿ ರೂ. ವೆಚ್ಚದಲ್ಲಿ ೨ ಕೋಟಿ ರೂ. ಬಳಸಿಕೊಂಡು ಗ್ರೀನ್ ರೂಂ, ಗ್ಯಾಲರಿ, ಶೌಚಾಲಯ, ವಾಹನ ನಿಲುಗಡೆ ಹಾಗೂ ವೈದ್ಯಕೀಯ ಸಹಾಯ ಕೇಂದ್ರ ನಿರ್ಮಿಸುವ ಯೋಜನೆಯನ್ನೂ ರೂಪಿಸಲಾಗಿತ್ತು. ಅದರಂತೆ ಇದೀಗ ನೂತನ ರಂಗಮಂದಿರ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

” ಗಾಂಧಿ ಮೈದಾನದ ಹಳೆಯ ವೇದಿಕೆ ಸುಮಾರು ಎಂಟು ವರ್ಷಗಳ ಕಾಲ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಮುಖ ವೇದಿಕೆಯಾಗಿತ್ತು. ಸಾವಿರಾರು ಕಲಾವಿದರಿಗೆ ಇಲ್ಲಿ ಪ್ರತಿಭೆ ಪ್ರದರ್ಶಿಸಲು ಅವಕಾಶ ದೊರೆತಿತ್ತು. ಪ್ರತಿಭಟನಾ ಸಭೆ, ಜಯಂತಿ, ಸಂಗೀತ ರಸಮಂಜರಿ ಸೇರಿದಂತೆ ಹಲವು ಕಾರ್ಯಕ್ರಮಗಳಿಗೂ ಈ ವೇದಿಕೆ ಸಾಕ್ಷಿಯಾಗಿತ್ತು. ಹಳೆಯ ವೇದಿಕೆಗೆ ದಸರಾ ಸಂದರ್ಭದಲ್ಲಿ ಕಲಾಸಂಭ್ರಮ ವೇದಿಕೆ ಎಂದು ಹೆಸರಿಡಲಾಗಿತ್ತು. ಇದೀಗ ಹೊಸ ರಂಗಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೂ ಕಲಾಸಂಭ್ರಮ ಎಂಬ ಹೆಸರನ್ನೇ ಇಡಬೇಕು.”

-ಹೆಚ್.ಟಿ. ಅನಿಲ್, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಮಾಜಿ ಅಧ್ಯಕ್ಷ

” ೨.೧೦ ಕೋಟಿ ರೂ. ವೆಚ್ಚದಲ್ಲಿ ನೂತನ ರಂಗಮಂದಿರ ನಿರ್ಮಿಸಲು ಉದ್ದೇಶಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹಳೆಯ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಹೊಸ ರಂಗಮಂದಿರದಲ್ಲಿ ಬೃಹತ್ ವೇದಿಕೆ, ಗ್ರೀನ್ ರೂಂ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು.”

-ಎಚ್.ಆರ್. ರಮೇಶ್, ಪೌರಾಯುಕ್ತರು, ಮಡಿಕೇರಿ ನಗರಸಭೆ 

 

 

 

ಆಂದೋಲನ ಡೆಸ್ಕ್

Recent Posts

ಎಲ್ ನಿನೊ ಬಿಸಿ ಅಡುಗೆ ಮನೆಗೂ ತಟ್ಟುತ್ತಾ? ಅಕ್ಕಿ, ಬೇಳೆ, ಎಣ್ಣೆ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ

ಬೆಂಗಳೂರು: ಮುಂಗಾರು ಮಳೆ ಕೈಕೊಟ್ಟರೆ, ಅದರ ಪರಿಣಾಮ ನಮ್ಮ ಅಡುಗೆ ಮನೆಯ ಬಜೆಟ್‌ ಮೇಲೂ ಬೀಳುತ್ತಾ? ಎಲ್ ನಿನೊ ಪ್ರಭಾವದಿಂದ…

31 mins ago

ತಮಿಳುನಾಡಿನಲ್ಲಿ ದೀಪಾವಳಿಗೆ ‘ವೆಟ್ರಿ’ ತರಕಾರಿ ಕಿಟ್ | ₹100ಕ್ಕೆ 10 ಬಗೆಯ ತರಕಾರಿ

ಚೆನ್ನೈ: ದೀಪಾವಳಿ ಹಬ್ಬಕ್ಕೆ ತಮಿಳುನಾಡು ಸರ್ಕಾರ ವಿಶೇಷ ತರಕಾರಿ ಕಿಟ್ ಪರಿಚಯಿಸಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರದ ‘ವೆಟ್ರಿ’ ಯೋಜನೆಯಡಿ,…

40 mins ago

ಬೆಂಗಳೂರು ಏರ್‌ಪೋರ್ಟ್‌ ರಸ್ತೆ | ಇಂದಿನಿಂದ 18 ತಿಂಗಳು ಬಸ್‌, ಸರಕು ವಾಹನ ಸಂಚಾರಕ್ಕೆ ನಿರ್ಬಂಧ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ 18 ತಿಂಗಳ ಕಾಲ ಕೆಎಸ್‌ಆರ್‌ಟಿಸಿ…

50 mins ago

ಕಾವೇರಿ ನೀರು ಬಿಡುಗಡೆ ಮಾಡಿಲ್ಲ ಎಂಬ ಆರೋಪ | ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋದ ತಮಿಳುನಾಡು

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಅಕ್ಟೋಬರ್ 23ರಿಂದ ಕರ್ನಾಟಕ…

52 mins ago

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಸಾವು | ಬೆನ್ನಲ್ಲೇ ತಂದೆ ನಿಂಗರಾಜು ನಿಧನ

ಹಾಸನ: ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಮೃತಪಟ್ಟ ಬೆನ್ನಲ್ಲೇ, ಅವರ ತಂದೆ ನಿಂಗರಾಜು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ…

55 mins ago

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಆರೋಪ: ಪತಿ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದಡಿ ಕ್ಯಾಬ್ ಚಾಲಕ ಇಂದುಶೇಖರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.…

59 mins ago