ಅಂಕಣಗಳು

ಚಳಿಯಲ್ಲಿ ನಡೆಯುವ ಮುನ್ನ ಇರಲಿ ಕೆಲ ಎಚ್ಚರ

ನಿತ್ಯ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಂತೀರಾ? ವಾಕಿಂಗ್ ಒಂದು ಆರೋಗ್ಯಕರ ವ್ಯಾಯಾಮವೇ ಆಗಿದ್ದರೂ ಕ್ರಮಬದ್ಧವಾಗಿ ಅದನ್ನು ಮಾಡದಿದ್ದರೆ ಅಥವಾ ಸಮಯವಲ್ಲದ ಸಮಯದಲ್ಲಿ ಮಾಡಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನೂ ಉಂಟು ಮಾಡಬಹುದು.

ಈಗ ಮೈಕೊರೆಯುವ ಚಳಿ ಆವರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಾಸಿಗೆ ಬಿಟ್ಟು ಮೇಲೇಳುವುದೇ ಕಷ್ಟವಾಗಿರುವಾಗ ವಾಕಿಂಗ್ ಮಾಡುವುದು ಅಂದರೆ ಹೇಗೆ? ಅದರಲ್ಲೂ ವಯಸ್ಸು ೬೦ ದಾಟಿದವರಿಗಂತೂ ಚಳಿಗಾಲದಲ್ಲಿ ವಾಕಿಂಗ್ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಗಳನ್ನೂ ತಂದಿಡಬಹುದು. ಹೃದಯ ಸಂಬಂಧಿ ಕಾಯಿಲೆ ಇರುವವರಂತೂ ಎಚ್ಚರಿಕೆಯಿಂದ ಇರುವಂತೆ ವೈದ್ಯರು ಸೂಚಿಸುತ್ತಾರೆ.

ಮೈಕೊರೆಯುವ ಚಳಿಯಲ್ಲಿ ಮುಂಜಾನೆಯೇ ಎದ್ದು ಇಬ್ಬನಿಯಲ್ಲಿ ವಾಕಿಂಗ್ ಮಾಡುವುದು ಹೃದಯ ಸಂಬಂಧಿ ಕಾಯಿಲೆಗಳಿರುವ ವೃದ್ಧರಿಗೆ ತೊಂದರೆಯನ್ನುಂಟು ಮಾಡಬಹುದು. ಏಕಾಏಕಿ ಚಳಿ ಹೆಚ್ಚಾದರೆ ಹೃದಯಾಘಾತವಾಗುವ ಸಂಭವವೂ ಇರುತ್ತದೆ ಎನ್ನುತ್ತಾರೆ ತಜ್ಞರು. ಚಳಿಯ ತೀವ್ರತೆಗೆ, ವಾಕಿಂಗ್ ಮಾಡು ವಾಗ ಎದೆಬಡಿತ ಹೆಚ್ಚಳವಾಗಿ ರಕ್ತಸಂಚಲನ ಏರು ಪೇರಾಗುವುದರಿಂದ ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುವ ಹಿರಿಯರು ಚಳಿಗಾಲದ ಸಂದರ್ಭದಲ್ಲಿ ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಬ್ರೇಕ್ ಹಾಕುವುದೇ ಉತ್ತಮ. ಹೃದಯ ಸಂಬಂಧಿ ಕಾಯಿಲೆ ಇರುವವರು ಮಾತ್ರವಲ್ಲದೆ ೪೫ ವರ್ಷ ಮೇಲ್ಪಟ್ಟವರೂ ಸೂಕ್ತ ಉಡುಪುಗಳನ್ನು ಧರಿಸಿ ಚಳಿಯಿಂದ ರಕ್ಷಣೆ ಪಡೆದುಕೊಳ್ಳದೆ ವಾಕಿಂಗ್ ಮಾಡುವುದೂ ಒಳ್ಳೆಯದಲ್ಲ ಎಂಬುದು ತಜ್ಞರ ಸಲಹೆಯಾಗಿದೆ.

ಇದಕ್ಕೆ ಏನು ಮಾಡಬೇಕು? ವ್ಯಾಯಾಮವಿಲ್ಲದೆ ಮನೆಯಲ್ಲಿಯೇ ಕೂರುವುದೂ ಆರೋಗ್ಯಕ್ಕೆ ಮಾರಕ. ಹೀಗಾಗಿ ಹೃದಯಕ್ಕೆ ಒತ್ತಡವಾಗ ದಂತೆ ಮನೆಯಲ್ಲಿಯೇ ವ್ಯಾಯಾಮ ಮಾಡುವುದು ಉತ್ತಮ. ಮನೆಯ ವರಾಂಡದಲ್ಲಿಯೇ ವಾಕಿಂಗ್ ಮಾಡಬೇಕು. ವಾಕಿಂಗ್ ಅಥವಾ ವ್ಯಾಯಾಮ ಮಾಡುವಾಗ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಸೂಕ್ತ ಉಡುಪುಗಳನ್ನು ಧರಿಸ ಬೇಕು. ಅಲ್ಲದೆ ವ್ಯಾಯಾಮಕ್ಕಿಳಿಯುವ ಮೊದಲು ವೈದ್ಯರ ಸಲಹೆ ಪಡೆದು, ಅದರಂತೆ ತಮ್ಮ ದಿನಚರಿ ರೂಢಿಸಿಕೊಳ್ಳುವುದು ಉತ್ತಮ.

ವಾಕಿಂಗ್ ಮುನ್ನ ಏನು ಮಾಡಬೇಕು: ಚಳಿಗಾಲದಲ್ಲಿ ರಕ್ತದ ಒತ್ತಡ ಹೆಚ್ಚಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದೇ ಆಗಿದೆ ಇದು ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ, ಮಧುಮೇಹಿಗಳಿಗೂ ಉತ್ತಮ ವ್ಯಾಯಾಮವಾಗಿದ್ದರೂ ಚಳಿಗಾಲದಲ್ಲಿ ವಾಕಿಂಗ್ ಮಾಡುವಾಗ ನಿಮ್ಮ ದೇಹವನ್ನು ಬೆಚ್ಚಗಾಗಿಟ್ಟುಕೊಳ್ಳಬೇಕು. ಸ್ವೆಟರ್, ತಲೆಗೆ ಟೋಪಿ, ಶಾಲುಗಳನ್ನು ಬಳಸಿ ಕೊರೆಯುವ ಚಳಿಯಿಂದ ರಕ್ಷಣೆ ಪಡೆದುಕೊಳ್ಳಬೇಕು.

ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಎಚ್ಚರಿಕೆ ಅಗತ್ಯ: ಸಂಶೋಧನೆಗಳ ಪ್ರಕಾರ ಹೆಚ್ಚಿನ ಹೃದಯಾಘಾತಗಳು ಬೆಳಿಗ್ಗೆ ೪ರಿಂದ ೧೦ ಗಂಟೆಯವರೆಗೆ ಸಂಭವಿಸುತ್ತವೆ. ಈ ಸಂದರ್ಭದಲ್ಲಿ ಹೃದಯದ ರಕ್ಷಣೆ ಮಾಡುವುದು ಅತ್ಯ ವಶ್ಯ. ಚಳಿಗಾಲದಲ್ಲಿ ಮುಂಜಾನೆಯ ಸಮಯ ಈ ಹೃದಯಾಘಾತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬೆಳಗಿನ ಚಳಿಯು ಹೃದಯ ಹಾಗೂ ರಕ್ತ ಸಂಚಲನದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಅಧಿಕ ಬಿಪಿ, ಮಧುಮೇಹ ಅಥವಾ ಶ್ವಾಸಕೋಶದ ತೊಂದರೆ ಇರುವವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗ ಬಹುದು. ಆದ್ದರಿಂದ ಇಂತಹ ಆರೋಗ್ಯ ಸಮಸ್ಯೆಗಳಿರು ವವರು ಬೆಳಗಿನ ವ್ಯಾಯಾಮ ಅಥವಾ ವಾಕಿಂಗ್ ತಪ್ಪಿಸುವುದು ಉತ್ತಮ. ಒಂದು ವೇಳೆ ವಾಕಿಂಗ್ ಮಾಡುವುದಾದರೆ ಕಿವಿ, ಎದೆ, ಕಾಲು ಗಳು ಮತ್ತು ತಲೆಯನ್ನು ಮುಚ್ಚು ವಂತೆ ಬೆಚ್ಚ ನೆಯ ಉಡುಪುಗಳನ್ನು ಧರಿಸಿಕೊಳ್ಳಬೇಕು.

ಸರಿಯಾದ ಅಭ್ಯಾಸ/ ವಾರ್ಮ್-ಅಪ್ ಮಾಡುವುದು ಮುಖ್ಯ: ಚಳಿಗಾಲದಲ್ಲಿ ವಾಕಿಂಗ್ ಆರಂಭಿಸುವ ಮೊದಲು ವಾರ್ಮ್- ಅಪ್ ವ್ಯಾಯಾಮಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದು ಉತ್ತಮ. ಸರಿಯಾದ ತಯಾರಿ ಮತ್ತು ಅಭ್ಯಾಸವಿಲ್ಲದೆ ವ್ಯಾಯಾಮ ಮಾಡುವುದೂ ಅಪಾಯ ತಂದೊಡ್ಡಬಹುದು. ಅದು ಹೃದಯಾಘಾತ ಮತ್ತು ಪಾರ್ಶ್ವ ವಾಯುವಿ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರಂಭ ದಲ್ಲಿ ಸ್ವಲ್ಪ ವಾರ್ಮ್-ಅಪ್ ವ್ಯಾಯಾಮಗಳನ್ನು ಮಾಡಿಕೊಂಡು ನಂತರ ಮುಂದಿನ ವಾಕಿಂಗ್ ಆರಂಭಿಸುವುದು ಉತ್ತಮ.

ಸೂರ್ಯನ ಕಿರಣಗಳು ಕಂಡಾಗ ವಾಕಿಂಗ್ ಉತ್ತಮ: ಮುಂಜಾನೆ ೫ ಗಂಟೆಗೆ ಎದ್ದು ವಾಕಿಂಗ್ ಹೋಗುವವರಿದ್ದಾರೆ. ಇನ್ನೂ ಸೂರ್ಯನ ಬೆಳಕೆ ಬಾರದ ಸಂದರ್ಭದಲ್ಲಿ ವಾಕಿಂಗ್ ಹೋಗುವುದು ಅಷ್ಟು ಒಳ್ಳೆಯದಲ್ಲ. ಅದರಲ್ಲಿಯೂ ಚಳಿಗಾಲದಲ್ಲಿ ಅದು ಬೇಡವೇ ಬೇಡ ಎನ್ನುತ್ತಾರೆ ವೈದ್ಯರು. ಕೊರೆಯುವ ಚಳಿ ಜತೆಗೆ ಮಂಜು ದೇಹಕ್ಕೆ ಹೆಚ್ಚು ಹಾನಿಯುಂಟು ಮಾಡಬಹುದು.ಅದರಲ್ಲೂ ವೃದ್ಧರಿಗೆ ಈ ಸಮಯ ಅಷ್ಟು ಸೂಕ್ತವಲ್ಲ. ಆದ್ದ ರಿಂದ ಮುಂಜಾನೆ ಸೂರ್ಯನ ರಶ್ಮಿ ಕಾಣಿಸಿಕೊಂಡ ನಂತರ ವಾಕಿಂಗ್ ಹೋಗುವುದು ಉತ್ತಮ. ಈ ಸಮಯದಲ್ಲಿ ಬೆಚ್ಚಗಿನ ವಾತಾವರಣವಿರುತ್ತದೆ

ಆಂದೋಲನ ಡೆಸ್ಕ್

Recent Posts

ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್‌ಗೆ 20ನೇ ವರ್ಷದ ಸಂಭ್ರಮ

ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…

16 mins ago

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…

3 hours ago

ಓದುಗರ ಪತ್ರ: ರೈಲು ನೀರಿನ ಬಾಟಲಿಗೆ ಒಂದು ರೂ. ಹೆಚ್ಚು ವಸೂಲಿ!

ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…

3 hours ago

ಓದುಗರ ಪತ್ರ: ಹೆಚ್ಚಿನ ಟಿಕೆಟ್ ದರ ನೀಡಲು ಸಿದ್ಧರಾಗಬೇಕಾ?

ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…

3 hours ago

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ  ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…

3 hours ago

ಬಸವನಹುಳು ಸಾಕಣೆಯೂ ಲಾಭದಾಯಕ

ಕೇಶವ್ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ! ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ…

3 hours ago