ಅಂಕಣಗಳು

ಒಂದು ಇರುಳು ಪ್ರಖರವಾಗಿ ಮಿನುಗಿದ ನಕ್ಷತ್ರ

• ವಿನಯ ಪ್ರಭಾವತಿ

ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆ ಬಾನಿನಲ್ಲಿ ಪ್ರಖರವಾಗಿ ನಕ್ಷತ್ರವೊಂದು ಮಿನುಗುತ್ತಿತ್ತು. ಬೇರೆ ನಕ್ಷತ್ರಗಳಿಗಿಂತ ಸಾವಿರ ಪಟ್ಟು ಹೆಚ್ಚು ಮಿನುಗುತ್ತಿದ್ದ ಆ ನಕ್ಷತ್ರದ ಬೆಳಕು ಬೆಟ್ಟಗುಡ್ಡವನ್ನು ಆವರಿಸಿತ್ತು. ಬೆಟ್ಟದಲ್ಲಿ ಮಲಗಿದ್ದ ಕುರಿಗಾಯಿಗಳಿಗೆ ಈ ಬೆಳಕು ಅಚ್ಚರಿ, ಭಯ ತಂದಿತ್ತು. ಇಷ್ಟು ಬೆಳಕನ್ನು ನೀಡುತ್ತಿರುವ ಈ ನಕ್ಷತ್ರ ಏನನ್ನು ಸೂಚಿಸುತ್ತಿದೆ ಎಂದು ಅರೆಕ್ಷಣ ದಿಗಿಲಾ ದರು. ಆದರೆ ಪಕ್ಕನೆ ಕರ್ತನ ದೂತನೊಬ್ಬನು ಬಂದು ಅವರ ಎದುರಿನಲ್ಲಿ ನಿಂತನು. ಕರ್ತನ ಪ್ರಭೆಯು ಅವರ ಸುತ್ತಲೂ ಪ್ರಕಾಶಿಸಿತು, ಕುರುಬರು ಬಹಳವಾಗಿ ಹೆದರಿದರು. ಆ ದೂತನು ಅವರಿಗೆ -‘ಹೆದರಬೇಡಿರಿ, ಕೇಳಿರಿ ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭ ಸಮಾಚಾರವನ್ನು ನಿಮಗೆ ತಿಳಿಸುತ್ತೇನೆ, ನಿಮಗೆ ಒಳಿತನ್ನು ಮಾಡುವ ಸಂಕೇತ ವಾಗಿಯೇ ಈ ನಕ್ಷತ್ರ ಕಾಣಿಸಿಕೊಂಡಿದೆ. ಮುಂದೆ ವಿಶ್ವದಲ್ಲಿ ಸಂತಸ, ನೆಮ್ಮದಿ ಮನೆ ಮಾಡಲಿದೆ. ಇದಕ್ಕೆ ಕಾರಣವಾಗುವ ದೇವಮಾನವನ ಜನನದ ಸಂಕೇತವೇ ಈ ನಕ್ಷತ್ರವಾಗಿದೆ. ಆತ ಇಡೀ ಜಗತ್ತಿಗೆ ಬೆಳಕು ನೀಡಲಿರುವನು’ ಎಂದು ದೂತನು ಹೇಳಿದನು. ನಂತರ ಆ ಕುರಿಗಾಹಿಗಳು ನಕ್ಷತ್ರದ ಹಾದಿಯನ್ನೇ ಹಿಂಬಾಲಿಸಿ ನಡೆದರು. ಆ ನಕ್ಷತ್ರ ಅವರನ್ನು ಯೇಸುಕ್ರಿಸ್ತ ಜನಿಸಿದ್ದ ಬೆಥ್ಲೆಹೆಮ್‌ಗೆ ಕರೆದುಕೊಂಡು ಹೋಯಿತು.

ನಕ್ಷತ್ರ ದೈವತ್ವವನ್ನು ಸೂಚಿಸುವಂಥದು. ಮೂಡಣ ದೇಶದಿಂದ ಬಂದ ಮೂವರು ಜೋಯಿಸ ಪಂಡಿತರಿಗೂ ಯೇಸು ಹುಟ್ಟಿದ ಸ್ಥಳ ತೋರಿಸಿದ್ದು ಈ ನಕ್ಷತ್ರವೇ. ಪಂಡಿತರು ಕೂಸನ್ನು ಕಂಡು, ಅದಕ್ಕೆ ಸಾಷ್ಟಾಂಗ ನಮ ಸ್ಕಾರ ಮಾಡಿ ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ, ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು.

ಎಲ್ಲ ಕ್ರೈಸ್ತ ಮನೆಗಳಲ್ಲೂ ಒಂದು ಕ್ರಿಸ್‌ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಕ್ರಿಸ್‌ಮಸ್ ಆಚರಣೆಯಲ್ಲಿ ಕ್ರಿಸ್‌ಮಸ್‌ ಮರವೇ ಪ್ರಮುಖ ಆಕರ್ಷಣೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತು ಗಳಿಂದ ಅಲಂಕಾರಗೊಳಿಸಲಾಗುತ್ತದೆ. ಇದು ನಿತ್ಯ ಹರಿ ದ್ವರ್ಣದ ಮರ. ಈ ಮರವು ಸದಾ ಹಸಿರಾಗಿರುವ ಕಾರಣ ಮನೆಯ ಮುಂದೆ ಇಡುತ್ತಿದ್ದರಂತೆ ಕಾರಣ ಮನೆಗೆ ಯಾವುದೇ ದುಷ್ಟಶಕ್ತಿಗಳ ಪ್ರವೇಶಿಸಬಾರದು ಎಂಬುದಾಗಿತ್ತು. ಆ ನಂಬಿಕೆಯೇ ಇಂದಿಗೂ ಮುಂದುವರಿದಿದೆ. ನಮ್ಮ ಮನಸ್ಸು ಸದಾ ಹಸಿರಾಗಿ ಪ್ರಫುಲ್ಲವಾಗಿ ಇರಲಿ ಎಂಬುದೇ ಇದರ ಸಂಕೇತ.

ಕ್ರಿಸ್‌ಮಸ್ ಹಬ್ಬ, ಕೊಡುಗೆಯ ಹಬ್ಬ ಕೂಡ ಹೌದು. ಉಡುಗೊರೆಗಳನ್ನು ಕೊಡುವುದು, ವಿನಿಮಯ ಮಾಡಿಕೊಳ್ಳುವುದು. ತಿಂಡಿ ತಿನಿಸುಗಳು, ಊಟವನ್ನು ಹಂಚಿಕೊಳ್ಳುವುದು ಈ ಹಬ್ಬದ ವಿಶೇಷತೆ, ಅಂದು ಎಷ್ಟು ಜನ ಕ್ರೈಸ್ತರು ಹಬ್ಬವನ್ನು ಅನಾಥಾಶ್ರಮದಲ್ಲಿ, ವೃದ್ಧಾಶ್ರಮದಲ್ಲಿ ಆಚರಿಸುತ್ತಾರೆ. ಕ್ರಿಸ್ಮಸ್ ಹಬ್ಬದ ಮೂಲ ಉದ್ದೇಶವೇ ಬಡವರಿಗೆ, ಅನಾಥರಿಗೆ, ನಿರ್ಗತಿಕರಿಗೆ ಉಡುಗೊರೆಗಳನ್ನು ಯಾವುದೇ ರೂಪದಲ್ಲಾದರೂ ನೀಡುವುದು.

ಕ್ರಿಸ್‌ಮಸ್ ಹಬ್ಬದಲ್ಲಿ ಸಾಂಟಾಕ್ಲಾಸ್‌ನದು ಒಂದು ವಿಶೇಷ ಸ್ಥಾನ. ಆತನ ವೇಷ ಭೂಷಣ ಮೆಚ್ಚಿಗೆ ಆಗುವಂತದ್ದು. ಕೆಂಪು ಬಟ್ಟೆ, ಹಾಟ್ ತೊಟ್ಟು, ಬಿಳಿ ಗಡ್ಡ, ಡೊಳ್ಳು ಹೊಟ್ಟೆ, ಉಡುಗೊರೆಗಳನ್ನು ಚೀಲದಲ್ಲಿ ತುಂಬಿ ಕೊಂಡು ಬರುವುದು. ಸಾಂಟಾಕ್ಲಾಸಿನ ನಿಜವಾದ ಹೆಸರು ಸಂತ ನಿಕೋಲಸ್ ಅಂತ. ಈತನು ನಾಲ್ಕನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ, ಈತನು ರಹಸ್ಯವಾಗಿ ನಿರ್ಗತಿ ಕರಿಗೆ ಸಹಾಯ ಮಾಡುತ್ತಿದ್ದನಂತೆ. ಮಕ್ಕಳು ಅಂದರೆ ಸಾಂಟಾ ಕ್ಲಾಸ್‌ಗೆ ತುಂಬಾ ಪ್ರೀತಿ, ಕ್ರಿಸ್‌ಮಸ್‌ ಹಬ್ಬಕ್ಕೆ ಚಕ್ಕುಲಿ, ಕರ್ಜಿಕಾಯಿ, ಡೈಮಂಡ್ ಕಟ್ಸ್, ರೋಸ್ ಕುಕ್ಕೀಸ್, ರವೆ ಉಂಡೆ, ಕೊಬ್ಬರಿ ಮಿಠಾಯಿ ವಿವಿಧ ರೀತಿಯ ಕೇಕ್‌ಗಳನ್ನು ಕೂಡ ಮಾಡಿ ನೆರೆಹೊರೆಯವರಿಗೆ, ಸ್ನೇಹಿತರಿಗೆ ಹಂಚುವುದು.
p.j.vinaya@gmail.com

andolanait

Recent Posts

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

24 mins ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

27 mins ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

38 mins ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

43 mins ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

46 mins ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

47 mins ago