ಅಂಕಣಗಳು

ಇಂದು ದಿಲ್ಲಿಯಲ್ಲಿ ಸೃಜನಶೀಲ ಸಂಗೀತ ವೈವಿಧ್ಯತೆಯ ಸಂಭ್ರಮ

ಕೆಎನ್‌ಎಂ ವೇದಿಕೆಯಡಿ ‘ವಾಯ್ಸಸ್ ಆಫ್ ಡೈವರ್ಸಿಟಿ’ಗೆ ಚಾಲನೆ

ದಿಲ್ಲಿಯಲ್ಲಿನ ಕೆಎನ್‌ಎಂಎ- (ಕಿರಣ್ ನಾಡಾರ್ ಮ್ಯೂಸಿಯಂ ಆಫ್ ಆರ್ಟ್) ೨೦೨೩ರಿಂದ ಪ್ರತಿವರ್ಷವೂ ಒಂದು ಪ್ರದರ್ಶಕ ಕಲೆಯ ವೈವಿಧ್ಯತೆಯನ್ನು ಸಂಭ್ರಮಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರದರ್ಶಕ ಕಲೆಗಳಲ್ಲಿ ಯಾವುದೂ ಶ್ರೇಷ್ಠವಲ್ಲ ಮತ್ತು ಯಾವುದೂ ಕನಿಷ್ಠವಲ್ಲ. ಎಲ್ಲ ಕಲೆಗಳೂ ವಿಭಿನ್ನ ಹಾಗೂ ವಿಶಿಷ್ಟ. ವಿಭಿನ್ನತೆಯನ್ನು ಸಂಭ್ರಮಿಸಬೇಕೇಹೊರತು ತರತಮ ಸೃಷ್ಟಿಸುವಹತಾರವನ್ನಾಗಿಸಿ ಕೊಳ್ಳಬಾರದು ಎನ್ನುವ ಚಿಂತನೆ ಇದರ ಹಿಂದಿದೆ.

ವಿಭಿನ್ನ ಕಲೆಗಳ ನಡುವಿನ ಅಂತರ್‌ಶಿಸ್ತೀಯತೆಯನ್ನು ಮುನ್ನೆಲೆಗೆ ತರಬೇಕೆನ್ನುವ ವಿಚಾರವೂ ಅವರದಾಗಿದೆ. ಈ ವರ್ಷಕ್ಕೆ ಎನ್‌ಎಂಎ ಸಂಗೀತವನ್ನು ತನ್ನ ಉತ್ಸವದ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಈ ಬಾರಿಯ ಕಾರ್ಯಕ್ರಮವನ್ನು ಸಂಯೋಜಿಸುತ್ತಿರುವ ವಿಶೇಷ ಅತಿಥಿ ಮ್ಯಾಗ್ಸೆಸೆ ಹಾಗೂ ಸಂಗೀತ ಕಲಾನಿಧಿ ಪುರಸ್ಕ ತ ವಿದ್ವಾನ್ ಟಿ.ಎಂ.ಕೃಷ್ಣ. ಈ ಉತ್ಸವ ‘ವಾಯ್ಸಸ್ ಆಫ್ ಡೈವರ್ಸಿಟಿ’ ಎನ್ನುವ ಶೀರ್ಷಿಕೆಯಲ್ಲಿ ಯೋಜಿತವಾಗಿದೆ.

“ಭಾರತದಲ್ಲಿ ಕಲೆ ಎನ್ನುವುದು ರಸ್ತೆ ಬದಿಯಲ್ಲಿ ಸಾಗುವ ಮೆರವಣಿಗೆಯಲ್ಲಿನ ಹಾಡು, ಅದರಲ್ಲಿನ ಕುಣಿತಕ್ಕೆ ನುಡಿಸುವ ಸಂಗೀತ, ಊರ ಜಾತ್ರೆಯಲ್ಲಿನ ನಾಟಕದಲ್ಲಿನ ಸಂಗೀತ, ದೇವಾಲಯದಲ್ಲಿನ ಸಂಗೀತ, ಹಳ್ಳಿಗಳು, ಗುಡ್ಡಗಾಡುಗಳಲ್ಲಿನ ದೇಸೀ ವಾದ್ಯಗಳ ಜೊತೆಗೆ ಸಾಗುವ ಸಂಗೀತ… ಹೀಗೆ ಹಲವು ಸಂಗೀತಗಳನ್ನು ಒಳಗೊಂಡಿದೆ. ಇವುಗಳಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಪ್ರತಿಯೊಬ್ಬರೂ ಆಯಾ ಸಂಗೀತದಲ್ಲಿ ಬೆಲೆ ಕಟ್ಟಲಾಗದ ಸೃಜನಶೀಲತೆಯನ್ನು ಮೆರೆದಿದ್ದಾರೆ. ಈ ಸಂಗೀತಗಳಲ್ಲಿ ಅಲ್ಲಲ್ಲಿನ ಸಂಸ್ಕೃತಿ, ಚಿಂತನೆ, ಭಾವನೆ ಇವೆಲ್ಲವೂ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿವೆ. ಇಂತಹ ವಿಭಿನ್ನ ಸೃಜನಶೀಲ ಸಂಗೀತ ಪ್ರಕಾರಗಳನ್ನು ಒಂದೆಡೆಗೆ ತರುವ ಕ್ರಿಯೆ ಎಲ್ಲ ಬಗೆಯ ಸ್ಥಾಪಿತ ಮೌಲ್ಯಗಳು ಹಾಗೂ ಶ್ರೇಷ್ಠತೆಯ ಕಥನಗಳಿಗೆ ಸವಾಲೆಸೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್ಲ ವಿಭಿನ್ನ ದನಿಗಳೂ ಪರಸ್ಪರ ಮಾತುಕತೆಯಲ್ಲಿ ತೊಡಗುತ್ತವೆ” ಎನ್ನುತ್ತಾರೆ ಟಿ.ಎಂ.

ಇದನ್ನು ಓದಿ: ಜಾಲತಾಣಗಳ ಗುಲಾಮರಾಗುತ್ತಿರುವ ಯುವ ಪೀಳಿಗೆ

ಕೃಷ್ಣ. ಈ ಉತ್ಸವದಲ್ಲಿ ಬಹು ಸಂಸ್ಕೃತಿಯ ಭಾರತದ ವಿಭಿನ್ನ ದನಿಗಳು ಅಸಾಧಾರಣವಾದ ರೀತಿಯಲ್ಲಿ ಮೇಳೈಸಲಿವೆ. ಕಾಶ್ಮೀರಿ ಬ್ಯಾಂಡ್, ಮಣಿಪುರದ ತಂಡ, ಅಂಬೇಡ್ಕರ್ ರಂಗತಂಡ, ಮಹಿಳೆಯರ ಹಿಪ್ ಹಾಪ್ ತಂಡ, ಮಹಾರಾಷ್ಟ್ರದ ಲಾವಣಿ, ನಮ್ಮ ಕರ್ನಾಟಕದ ಎಂ.ಡಿ.ಪಲ್ಲವಿ ಮತ್ತು ಬಿಂದು ಮಾಲಿನಿ ಅವರ ‘ಹೊಸ್ತಿಲು’ ಮಹಿಳಾ ಸಂತರ ರಚನೆಗಳ ಪ್ರಸ್ತುತಿ, ಕರ್ನಾಟಕದ ಜಂಗಮ ಕಲೆಕ್ಟಿವ್‌ನ ‘ನನ್ನಜ್ಜ,’ ಪ್ರಹ್ಲಾದ್ ಟಿಪಾಣಿಯಾ ಮತ್ತು ಮುಕ್ತಿಯಾರ್ ಅಲಿ ಅವರ ‘ಪ್ರೇಮರಸ್’ ಇವೆಲ್ಲವೂ ಇಲ್ಲಿ ಮೇಳೈಸಲಿವೆ. ಜಾತಿ, ಲಿಂಗ, ಧರ್ಮ, ಪ್ರಾಂತ್ಯ ಭಾಷೆ, ಇವುಗಳಿಗೆ ಸಂಬಂಧಿಸಿದ ಎಲ್ಲ ಸ್ಥಾಪಿತ ಕಥನಗಳನ್ನು ಈ ಎಲ್ಲಾ ಕಲಾವಿದರೂ ಕಲೆಯ ಮೂಲಕವೇ ಪ್ರಶ್ನಿಸುತ್ತಾ, ಮನುಷ್ಯ ತನ್ನ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ದಿಲ್ಲಿಯ ಸುಂದರ್ ನರ್ಸರಿಯಲ್ಲಿಇದೇ ಅಕ್ಟೋಬರ್ ೯ರಿಂದ ೧೨ರ ತನಕ ನಡೆಯುವ ಈ ಉತ್ಸವದಲ್ಲಿ ನಿಜವಾದ ಅರ್ಥದಲ್ಲಿ ಭಾರತದ ವಿಭಿನ್ನ, ವೈವಿಧ್ಯಮಯ ಕಲಾದನಿಗಳು ಹೊರಹೊಮ್ಮಲಿವೆ. ಬಹುದನಿಗಳನ್ನು ಬಹು ಸಂಸ್ಕೃತಿಗಳನ್ನು ಪ್ರೀತಿಸಿ, ಗೌರವಿಸುವ ಎಲ್ಲರೂ ಇದನ್ನು ಸಂಭ್ರಮಿಸಬೇಕು.

” ಜಾತಿ, ಲಿಂಗ, ಧರ್ಮ, ಪ್ರಾಂತ್ಯ ಭಾಷೆ, ಇವುಗಳಿಗೆ ಸಂಬಂಧಿಸಿದ ಎಲ್ಲಾ ಸ್ಥಾಪಿತ ಕಥನಗಳನ್ನು ಈ ಎಲ್ಲ ಕಲಾವಿದರೂ ಕಲೆಯ ಮೂಲಕವೇ ಪ್ರಶ್ನಿಸುತ್ತಾ, ಮನುಷ್ಯ ತನ್ನ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.”

– ಶೈಲಜಾ, ಮೈಸೂರು

ಆಂದೋಲನ ಡೆಸ್ಕ್

Recent Posts

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

13 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

13 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

13 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

14 hours ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

17 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

23 hours ago