ಯುವ ಡಾಟ್ ಕಾಂ

ಗೇಟ್ ಪರೀಕ್ಷೆ ಒಂದು; ಅವಕಾಶಗಳು ಹಲವು

ಗೇಟ್ (GATE) ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಎಂ.ಟೆಕ್ ಪ್ರವೇಶ, PSU ಉದ್ಯೋಗಗಳು, ಸಂಶೋಧನಾ ಫೆಲೋಶಿಪ್‌ಗಳು ಮತ್ತು ಖಾಸಗಿ ಕಂಪೆನಿಗಳಲ್ಲಿ ಹಲವು ವೃತ್ತಿ ಆಯ್ಕೆಗಳಿವೆ. ಉನ್ನತ ಶಿಕ್ಷಣ, ಸರ್ಕಾರಿ ಉದ್ಯೋಗ ಅಥವಾ ಖಾಸಗಿ ವಲಯದಲ್ಲಿ ಯಶಸ್ವಿ ವೃತ್ತಿ ಜೀವನಕ್ಕೆ ಇದೊಂದು ಪ್ರಮುಖ ಹೆಜ್ಜೆಯಾಗಿದೆ.

ಫೆಲೋಶಿಪ್‌ಗಳು ಮತ್ತು ಉತ್ತಮ ಸಂಬಳದೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಗೇಟ್ ಪರೀಕ್ಷೆ ಸಹಕಾರಿಯಾಗಲಿದೆ. ಗೇಟ್ ಪರೀಕ್ಷೆ ಉತ್ತೀರ್ಣರಾಗುತ್ತಿದ್ದಂತೆ ಹಲವು ವೃತ್ತಿ ಆಯ್ಕೆಗಳು ತೆರೆದು ಕೊಳ್ಳಲಿವೆ. ಗೇಟ್ ಪರೀಕ್ಷೆಯ ಅಂಕಗಳಿಂದ Ü IIT, NIT,IISc ಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ದೊರೆ ಯಲಿದೆ. ಪ್ರವೇಶಾತಿಯ ಜೊತೆಗೆ ತಿಂಗಳಿಗೆ ೧೨,೪೦೦ ರೂ.ಗಳವರೆಗೆ ಫೆಲೋಶಿಪ್ ಕೂಡ ದೊರೆಯಲಿದೆ.

ವಿದ್ಯಾರ್ಥಿಗಳಿಗೆ ಈ ಕೋರ್ಸ್ ನಿರ್ದಿಷ್ಟ ತಾಂತ್ರಿಕ ಜ್ಞಾನ, ಉತ್ತಮ ರಚನೆ ಮತ್ತು ಮುಂದಿನ ಅಧ್ಯಯನ ಅಥವಾ ವೃತ್ತಿ ಜೀವನದಲ್ಲಿನ ಬೆಳವಣಿಗೆಗೆ ಕಾರಣವಾಗಲಿದೆ. ಅಲ್ಲದೇ ONGC, NTPC, BHEL, IOCL ಮುಂತಾದ ಹಲವು PSU ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಈ ಉದ್ಯೋಗಳು ಉತ್ತಮ ಸಂಬಳ, ಸರ್ಕಾರಿ ಸವಲತ್ತುಗಳು ಮತ್ತು ಪಿಂಚಣಿ ಸೌಲಭ್ಯಗಳನ್ನೂ ನೀಡುತ್ತವೆ.

ಸಂಶೋಧನೆ ಮಾಡಲು ಬಯಸಿದರೆ ಪಿಎಚ್.ಡಿ. ಮಾಡಲೂ ಉತ್ತಮ ಆಯ್ಕೆಗಳಿವೆ. ಕೆಲವು ಸಂಸ್ಥೆಗಳು ಗೇಟ್ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಪಿಎಚ್.ಡಿ.ಗೆ ನೇರವಾಗಿ ಆಯ್ಕೆ ಮಾಡಿಕೊಳ್ಳಲಿವೆ. ಹೀಗಾಗಿ ಗೇಟ್ ಪರೀಕ್ಷೆ ಕೇವಲ ಎಂ.ಟೆಕ್. ಪ್ರವೇಶಕ್ಕೆ ಮಾತ್ರ ಸೀಮಿತವಾಗದೆ, ಸಂಶೋಧನೆ, ಬೋಧನೆ, ಸರ್ಕಾರಿ ಉದ್ಯೋಗ ಅಥವಾ ಖಾಸಗಿ ವಲಯವನ್ನೂ ಆಯ್ಕೆ ಮಾಡಿಕೊಳ್ಳಲು ಬಹು ಅವಕಾಶಗಳನ್ನು ತೆರೆದಿಡಲಿದೆ. ಆದ್ದರಿಂದ ಗೇಟ್ ಪರೀಕ್ಷೆಯ ಬಹುಮುಖಿ ಅವಕಾಶವಾಗಿ ಕಂಡು ಮುಂದಿನ ಹಂತವನ್ನು ಜಾಣ್ಮೆಯಿಂದ ಆರಿಸಿಕೊಳ್ಳಿ.

ಆಂದೋಲನ ಡೆಸ್ಕ್

Recent Posts

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

12 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

13 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

13 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

13 hours ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

16 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

22 hours ago