ಕೆಎನ್‌ಎಂ ವೇದಿಕೆಯಡಿ ‘ವಾಯ್ಸಸ್ ಆಫ್ ಡೈವರ್ಸಿಟಿ’ಗೆ ಚಾಲನೆ
ದಿಲ್ಲಿಯಲ್ಲಿನ ಕೆಎನ್‌ಎಂಎ- (ಕಿರಣ್ ನಾಡಾರ್ ಮ್ಯೂಸಿಯಂ ಆಫ್ ಆರ್ಟ್) ೨೦೨೩ರಿಂದ ಪ್ರತಿವರ್ಷವೂ ಒಂದು ಪ್ರದರ್ಶಕ ಕಲೆಯ ವೈವಿಧ್ಯತೆಯನ್ನು ಸಂಭ್ರಮಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರದರ್ಶಕ ಕಲೆಗಳಲ್ಲಿ ಯಾವುದೂ ಶ್ರೇಷ್ಠವಲ್ಲ ಮತ್ತು ಯಾವುದೂ ಕನಿಷ್ಠವಲ್ಲ. ಎಲ್ಲ ಕಲೆಗಳೂ ವಿಭಿನ್ನ ಹಾಗೂ ವಿಶಿಷ್ಟ. ವಿಭಿನ್ನತೆಯನ್ನು ಸಂಭ್ರಮಿಸಬೇಕೇಹೊರತು ತರತಮ ಸೃಷ್ಟಿಸುವಹತಾರವನ್ನಾಗಿಸಿ ಕೊಳ್ಳಬಾರದು ಎನ್ನುವ ಚಿಂತನೆ ಇದರ ಹಿಂದಿದೆ.
ವಿಭಿನ್ನ ಕಲೆಗಳ ನಡುವಿನ ಅಂತರ್‌ಶಿಸ್ತೀಯತೆಯನ್ನು ಮುನ್ನೆಲೆಗೆ ತರಬೇಕೆನ್ನುವ ವಿಚಾರವೂ ಅವರದಾಗಿದೆ. ಈ ವರ್ಷಕ್ಕೆ ಎನ್‌ಎಂಎ ಸಂಗೀತವನ್ನು ತನ್ನ ಉತ್ಸವದ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಈ ಬಾರಿಯ ಕಾರ್ಯಕ್ರಮವನ್ನು ಸಂಯೋಜಿಸುತ್ತಿರುವ ವಿಶೇಷ ಅತಿಥಿ ಮ್ಯಾಗ್ಸೆಸೆ ಹಾಗೂ ಸಂಗೀತ ಕಲಾನಿಧಿ ಪುರಸ್ಕ ತ ವಿದ್ವಾನ್ ಟಿ.ಎಂ.ಕೃಷ್ಣ. ಈ ಉತ್ಸವ ‘ವಾಯ್ಸಸ್ ಆಫ್ ಡೈವರ್ಸಿಟಿ’ ಎನ್ನುವ ಶೀರ್ಷಿಕೆಯಲ್ಲಿ ಯೋಜಿತವಾಗಿದೆ.
“ಭಾರತದಲ್ಲಿ ಕಲೆ ಎನ್ನುವುದು ರಸ್ತೆ ಬದಿಯಲ್ಲಿ ಸಾಗುವ ಮೆರವಣಿಗೆಯಲ್ಲಿನ ಹಾಡು, ಅದರಲ್ಲಿನ ಕುಣಿತಕ್ಕೆ ನುಡಿಸುವ ಸಂಗೀತ, ಊರ ಜಾತ್ರೆಯಲ್ಲಿನ ನಾಟಕದಲ್ಲಿನ ಸಂಗೀತ, ದೇವಾಲಯದಲ್ಲಿನ ಸಂಗೀತ, ಹಳ್ಳಿಗಳು, ಗುಡ್ಡಗಾಡುಗಳಲ್ಲಿನ ದೇಸೀ ವಾದ್ಯಗಳ ಜೊತೆಗೆ ಸಾಗುವ ಸಂಗೀತ… ಹೀಗೆ ಹಲವು ಸಂಗೀತಗಳನ್ನು ಒಳಗೊಂಡಿದೆ. ಇವುಗಳಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಪ್ರತಿಯೊಬ್ಬರೂ ಆಯಾ ಸಂಗೀತದಲ್ಲಿ ಬೆಲೆ ಕಟ್ಟಲಾಗದ ಸೃಜನಶೀಲತೆಯನ್ನು ಮೆರೆದಿದ್ದಾರೆ. ಈ ಸಂಗೀತಗಳಲ್ಲಿ ಅಲ್ಲಲ್ಲಿನ ಸಂಸ್ಕೃತಿ, ಚಿಂತನೆ, ಭಾವನೆ ಇವೆಲ್ಲವೂ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿವೆ. ಇಂತಹ ವಿಭಿನ್ನ ಸೃಜನಶೀಲ ಸಂಗೀತ ಪ್ರಕಾರಗಳನ್ನು ಒಂದೆಡೆಗೆ ತರುವ ಕ್ರಿಯೆ ಎಲ್ಲ ಬಗೆಯ ಸ್ಥಾಪಿತ ಮೌಲ್ಯಗಳು ಹಾಗೂ ಶ್ರೇಷ್ಠತೆಯ ಕಥನಗಳಿಗೆ ಸವಾಲೆಸೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಎಲ್ಲ ವಿಭಿನ್ನ ದನಿಗಳೂ ಪರಸ್ಪರ ಮಾತುಕತೆಯಲ್ಲಿ ತೊಡಗುತ್ತವೆ” ಎನ್ನುತ್ತಾರೆ ಟಿ.ಎಂ.
ಇದನ್ನು ಓದಿ: ಜಾಲತಾಣಗಳ ಗುಲಾಮರಾಗುತ್ತಿರುವ ಯುವ ಪೀಳಿಗೆ
ಕೃಷ್ಣ. ಈ ಉತ್ಸವದಲ್ಲಿ ಬಹು ಸಂಸ್ಕೃತಿಯ ಭಾರತದ ವಿಭಿನ್ನ ದನಿಗಳು ಅಸಾಧಾರಣವಾದ ರೀತಿಯಲ್ಲಿ ಮೇಳೈಸಲಿವೆ. ಕಾಶ್ಮೀರಿ ಬ್ಯಾಂಡ್, ಮಣಿಪುರದ ತಂಡ, ಅಂಬೇಡ್ಕರ್ ರಂಗತಂಡ, ಮಹಿಳೆಯರ ಹಿಪ್ ಹಾಪ್ ತಂಡ, ಮಹಾರಾಷ್ಟ್ರದ ಲಾವಣಿ, ನಮ್ಮ ಕರ್ನಾಟಕದ ಎಂ.ಡಿ.ಪಲ್ಲವಿ ಮತ್ತು ಬಿಂದು ಮಾಲಿನಿ ಅವರ ‘ಹೊಸ್ತಿಲು’ ಮಹಿಳಾ ಸಂತರ ರಚನೆಗಳ ಪ್ರಸ್ತುತಿ, ಕರ್ನಾಟಕದ ಜಂಗಮ ಕಲೆಕ್ಟಿವ್‌ನ ‘ನನ್ನಜ್ಜ,’ ಪ್ರಹ್ಲಾದ್ ಟಿಪಾಣಿಯಾ ಮತ್ತು ಮುಕ್ತಿಯಾರ್ ಅಲಿ ಅವರ ‘ಪ್ರೇಮರಸ್’ ಇವೆಲ್ಲವೂ ಇಲ್ಲಿ ಮೇಳೈಸಲಿವೆ. ಜಾತಿ, ಲಿಂಗ, ಧರ್ಮ, ಪ್ರಾಂತ್ಯ ಭಾಷೆ, ಇವುಗಳಿಗೆ ಸಂಬಂಧಿಸಿದ ಎಲ್ಲ ಸ್ಥಾಪಿತ ಕಥನಗಳನ್ನು ಈ ಎಲ್ಲಾ ಕಲಾವಿದರೂ ಕಲೆಯ ಮೂಲಕವೇ ಪ್ರಶ್ನಿಸುತ್ತಾ, ಮನುಷ್ಯ ತನ್ನ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ದಿಲ್ಲಿಯ ಸುಂದರ್ ನರ್ಸರಿಯಲ್ಲಿಇದೇ ಅಕ್ಟೋಬರ್ ೯ರಿಂದ ೧೨ರ ತನಕ ನಡೆಯುವ ಈ ಉತ್ಸವದಲ್ಲಿ ನಿಜವಾದ ಅರ್ಥದಲ್ಲಿ ಭಾರತದ ವಿಭಿನ್ನ, ವೈವಿಧ್ಯಮಯ ಕಲಾದನಿಗಳು ಹೊರಹೊಮ್ಮಲಿವೆ. ಬಹುದನಿಗಳನ್ನು ಬಹು ಸಂಸ್ಕೃತಿಗಳನ್ನು ಪ್ರೀತಿಸಿ, ಗೌರವಿಸುವ ಎಲ್ಲರೂ ಇದನ್ನು ಸಂಭ್ರಮಿಸಬೇಕು.
” ಜಾತಿ, ಲಿಂಗ, ಧರ್ಮ, ಪ್ರಾಂತ್ಯ ಭಾಷೆ, ಇವುಗಳಿಗೆ ಸಂಬಂಧಿಸಿದ ಎಲ್ಲಾ ಸ್ಥಾಪಿತ ಕಥನಗಳನ್ನು ಈ ಎಲ್ಲ ಕಲಾವಿದರೂ ಕಲೆಯ ಮೂಲಕವೇ ಪ್ರಶ್ನಿಸುತ್ತಾ, ಮನುಷ್ಯ ತನ್ನ ಆತ್ಮಸಾಕ್ಷಿಯನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.”
– ಶೈಲಜಾ, ಮೈಸೂರು
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…