ನಿನ್ನೆಯಿಂದ ( ಜನವರಿ 19 ) ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಿದ್ದು, ಇಂದು ( ಜನವರಿ 20 ) ನಡೆದ ಟೂರ್ನಿಯ ಮೂರನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಬ್ಲೂಮ್‌ಫಾಂಟಿನ್‌ನ ಮಾಂಗೌಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ 84 ರನ್‌ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲು 252 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಬಾಂಗ್ಲಾದೇಶ 45.5 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಭಾರತದ ಇನ್ನಿಂಗ್ಸ್: ಆರಂಭಿಕನಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ ಆದರ್ಶ್ ಸಿಂಗ್ 76 ರನ್, ಅರ್ಷಿನ್ ಕುಲ್ಕರ್ಣಿ 7, ಮುಷೀರ್ ಖಾನ್ 3, ನಾಯಕ ಉದಯ್ ಸಹರಣ್ 64, ಪ್ರಿಯಂಶು ಮೊಲಿಯಾ 23, ಅರವೆಲ್ಲಿ ಅವಿನಾಶ್ 23, ಮುರುಗನ್ ಅಭಿಷೇಕ್ 4, ರಾಜ್ ಲಿಂಬಾನಿ ಅಜೇಯ 2 ಹಾಗೂ ಸಚಿನ್ ದಾಸ್ ಅಜೇಯ 26 ರನ್ ಗಳಿಸಿದರು.
ಬಾಂಗ್ಲಾದೇಶದ ಪರ ಮರುಫ್ ಮೃಧಾ 5 ವಿಕೆಟ್, ಚೌಧುರಿ ಮೊಹಮ್ಮದ್ ರಿಜ್ವಾನ್ ಹಾಗೂ ಮಹ್ಫಜುರ್ ರಹಮಾನ್ ರಾಬ್ಬಿ ತಲಾ ಒಂದೊಂದು ವಿಕೆಟ್ ಪಡೆದರು.
ಬಾಂಗ್ಲಾದೇಶ ಇನ್ನಿಂಗ್ಸ್: ಆಶಿಖುರ್ ರಹಮಾನ್ ಶಿಬ್ಲಿ 14, ಜಿಶನ್ ಅಲಮ್ 14, ಚೌಧುರಿ ಮೊಹಮ್ಮದ್ ರಿಜ್ವಾನ್ ಡಕ್‌ಔಟ್, ಅರಿಫುಲ್ ಇಸ್ಲಾಂ 41, ಅಹ್ರರ್ ಅಮಿನ್ 5, ಮೊಹಮ್ಮದ್ ಶಿಹಬ್ ಜೇಮ್ಸ್ 54, ನಾಯಕ ಮಹ್ಫಜುರ್ ರಹಮಾನ್ ರಾಬ್ಬಿ 4, ರೋಹನತ್ ದೌಲಾ ಬೋರ್ಸೊನ್ ಡಕ್‌ಔಟ್, ಮೊಹಮ್ಮದ್ ಇಕ್ಬಾಲ್ ಹೊಸೈನ್ ಎಮ್ಮಾನ್ ಡಕ್‌ಔಟ್, ಮರುಫ್ ಮೃಧಾ 1 ಹಾಗೂ ಶೈಕ್ ಪೇವೆಝ್ ಜಿಬೊನ್ ಅಜೇಯ 15 ರನ್ ಗಳಿಸಿದರು.
ಭಾರತದ ಪರ ಸೌಮಿ ಪಾಂಡೆ 4 ವಿಕೆಟ್, ಮುಶೀರ್ ಖಾನ್ 2 ವಿಕೆಟ್, ರಾಜ್ ಲಿಂಬಾನಿ, ಅರ್ಶಿನ್ ಕುಲ್ಕರ್ಣಿ ಹಾಗೂ ಪ್ರಿಯಂಶು ಮೊಲಿಯಾ ತಲಾ ಒಂದೊಂದು ವಿಕೆಟ್ ಪಡೆದರು.
ಪಿ.ಜೆ.ರಾಘವೇಂದ್ರ, ನ್ಯಾಯವಾದಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮುಡಾ ಮಾಜಿ…
ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಅರಮನೆ ನಗರಿ ಮೈಸೂರಿನ ಸೌಂದರ್ಯವನ್ನು ಹದಗೆಡಿಸುವಂತಹ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳ ಹಾವಳಿ ತಡೆಗಟ್ಟಲು ರೂಪಿಸಿರುವ…
ಸಿದ್ದರಾಮಯ್ಯರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಆಪತ್ತು ಎಂಬ ಆತಂಕ ಇಂತಹದೊಂದು ಪ್ರಶ್ನೆ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳೆಯಗಳಲ್ಲಿ…
ಅವಳಿ ತಾಲ್ಲೂಕುಗಳ ಹಲವೆಡೆ ಅವಾಂತರ; ಕಾವಲು ಹೊಸೂರು ಗ್ರಾಮದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲು ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ…
ಎಸ್.ಎಸ್.ಭಟ್ ನಂಜನಗೂಡು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪೂರಕವಾಗಿ ೧೯೨೪ರಲ್ಲೇ ಆರಂಭವಾದ ಈ ಪ್ರೌಢಶಾಲೆ ಪ್ರಸ್ತುತ ಉದುರಿಬೀಳುವ ಹಂತದ ಗೋಡೆ ಹಾಗೂ ಮಳೆ…