BREAKING NEWS

ರಾಜ್ಯದ ೯೮ ನಗರಗಳಲ್ಲಿ ಮೂರ ದಿನಗಳು ವಿದ್ಯುತ್‌ ಆನ್‌ಲೈನ್‌ ಸೇವೆ ವ್ಯತ್ಯಯ: ಯಾಕೆ ಗೊತ್ತಾ?

ಬೆಂಗಳೂರು : ರಾಜ್ಯದ ೫ ಎಸ್ಕಾಂಗಳ( ವಿದ್ಯುತ್‌ ಸರಬರಾಜು ನಿಗಮ) ವ್ಯಾಪ್ತಿಯಲ್ಲಿನ ವೆಬ್‌ ಪೋರ್ಟಲ್‌ಗಳ ತಾಂತ್ರಿಕ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ರಾಜ್ಯದ ೯೮ ನಗರಗಳಲ್ಲಿ ಆನ್‌ಲೈನ್‌ ಸೇವೆಗಳು ಮೂರು ದಿನಗಳವರೆಗೆ ಬಂದ್‌ ಆಗಲಿವೆ.

ತುರ್ತು ತಾಂತ್ರಿಕ ಕಾಮಗಾರಿ ಹಿನ್ನೆಲೆ ನವೆಂಬರ್‌೨೪ರ ರಾತ್ರಿ ೧೨ರಿಂದ ನವೆಂಬರ್‌ ೨೬ರ ಬೆಳಿಗ್ಗೆ ೧೧.೫೯ ವರೆಗೆ ಎಲ್ಲಾ ರೀತಿಯ ಆನ್‌ಲೈನ್‌ ಸೇವೆಗಳು ಬಂದ್‌ ಆಗಲಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ತಾಂತ್ರಿಕ ಕಾಮಗಾರಿಯೇನು? : ಎಲ್ಲಾ ಐದು ಎಸ್ಕಾಂ ಪೋರ್ಟಲ್‌ಗಳನ್ನು ಒಂದೇ ಸೂರಿನಡಿ ಆನ್‌ಲೈನ್‌ ಪಾವತಿ ಸೇವೆ ಕಲ್ಪಿಸಲು ಆರ್‌-ಎಪಿಡಿಆರ್‌ಪಿ ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲಾ ಪೋರ್ಟಲ್‌ಗಳ ಡಾಟಾವನ್ನು ನೂತನ ಪೋರ್ಟಲ್‌ಗೆ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ಪೋರ್ಟಲ್‌ ಸೇವೆ ಬಂದ್‌ ಆಗಲಿದ್ದು, ವಿದ್ಯುತ್‌ ಬಿಲ್‌ ಪಾವತಿ, ಆನ್‌ಲೈನ್‌ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ.

ಈ ಮೂರು ದಿನಗಳು ಎಲ್ಲಾ ಮಾಹಿತಿ ತಂತ್ರಜ್ಞಾನ ಆಧಾರಿತ ಹಾಗೂ ವಿದ್ಯುತ್‌ ಕಚೇರಿಗಳಲ್ಲಿ ನಗದು ಪಾವತಿ ಸೇವೆಗಳು ಲಭ್ಯವಿರುವುದಿಲ್ಲ. ಹಾಗೂ ಆನ್‌ಲೈನ್‌ ಸೇವೆಗಳಾದ ಹೊಸ ವಿದ್ಯುತ್‌ ಸಂಪರ್ಕ, ಹೆಸರು/ ಲೋಡ್‌ ಬದಲಾವಣೆ, ನಗದು ಪಾವತಿ, ಬಿಲ್‌ ಪಾವತಿ ಸೇವೆಗಳು ಇರುವುದಿಲ್ಲ. ಆದರೆ ಈ ಅವಧಿಯಲ್ಲಿ ವಿದ್ಯುತ್‌ ಸರಬರಾಜು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವ್ಯಾವ ನಗರಳಲ್ಲಿ ಸೇವೆ ಸ್ಥಗಿತ :

ಬೆಸ್ಕಾಂ: ಬೆಂಗಳೂರು ನಗರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಕ್ಯಾತಸಂದ್ರ, ಸಿರಾ, ಚನ್ನಪಟ್ಟಣ, ಆನೇಕಲ್‌, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್‌, ಚಳ್ಳಕೆರೆ, ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು ಹಾಗೂ ಗೌರಿ ಬಿದನೂರು.

ಮೆಸ್ಕಾಂ: ಬಂಟ್ವಾಳ, ಕಡೂರು, ತರಿಕೇರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು.

ಸೆಸ್ಕ್‌: ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ಆರ್.‌ ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೆಗಾಲ, ಹಾಸನ ಹಾಗೂ ಚೆನ್ನರಾಯಪಟ್ಟಣ.

ಜೆಸ್ಕಾಂ: ಮಾನವಿ, ಸಿಂಧನೂರು, ಬೀದರ್‌, ಗಂಗಾವತಿ, ಕಲಬುರಗಿ, ಸೇಡಂ, ಬಸವಕಲ್ಯಾಣ, ವಾಡಿ, ಅಲನಾಡ್‌, ಭಾಲ್ಕಿ, ಶಹಬಾದ್‌, ಶಹಾಪುರ, ಶೋರಾಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್‌ ಹಾಗೂ ಹೊಸಪೇಟೆ.

ಹೆಸ್ಕಾಂ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸೇವನೂರು, ಸಿರಸಿ, ಕುಮಟಾ, ಬಾಗಲಕೋಟೆ, ರಮಬಕವಿ-ಬನಹಟ್ಟಿ, ಗದಗ, ಗೋಕಾಕ್‌, ಹಾವೇರಿ, ಇಳಕಲ್‌, ಮುಧೋಳ, ರಾಣೆಬೆನ್ನೂರು ಹಾಗೂ ವಿಜಾಪುರ ನಗರದಲ್ಲಿ ಮಾಹಿತಿ ತಂತ್ರಜ್ಞಾನ ತಂತ್ರಾಂಶ ಸೇವೆಗಳು ಲಭ್ಯವಿರುವುದಿಲ್ಲ.

andolanait

Recent Posts

ದಸರಾ ಖರ್ಚಿನ ಭಾರ ಇಳಿಸಿದ ಟಿಕೆಟ್ ಮಾರಾಟದ ಆದಾಯ

ಕೆ.ಬಿ.ರಮೇಶನಾಯಕ ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು ಟಿಕೆಟ್ ಸೋಲ್ಡ್ ಔಟ್ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಪ್ಲಾನ್ ಯಶಸ್ವಿ ಮೈಸೂರು:…

8 mins ago

ದಸರಾ: ರಾಜಪಥದಲ್ಲಿ ಅಂಬಾರಿ ಸಂಚಾರ!

ಪ್ರಶಾಂತ್ ಎಸ್. ಕೆಎಸ್‌ಟಿಡಿಸಿ ವತಿಯಿಂದ ವ್ಯವಸ್ಥೆ; ಪ್ರತಿನಿತ್ಯ ೩ ಟ್ರಿಪ್‌ಗಳಲ್ಲಿ ಪ್ರಯಾಣ ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ‘ಅಂಬಾರಿ ಬಸ್’…

14 mins ago

ವರ್ತಕರಿಗೆ ಹಬ್ಬದ ನಿರಾಳತೆ: ದೀಪಾವಳಿ ನಂತರಕ್ಕೆ UPI ಮರ್ಚೆಂಟ್‌ ಶುಲ್ಕ ಜಾರಿ ಮುಂದೂಡಿಕೆ

ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್‌ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್‌ ಪಾವತಿಗಳ ಮೇಲಿನ…

18 hours ago

ಸ್ಟಿಂಗ್ ಆಪರೇಷನ್ ಬಗ್ಗೆ ಕುಮಾರಸ್ವಾಮಿಯನ್ನೇ ಕೇಳಿ: ಸಚಿವ ಪುಟ್ಟರಂಗಶೆಟ್ಟಿ

ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…

19 hours ago

ಸ್ಟಿಂಗ್ ಆಪರೇಷನ್ ಆರೋಪ: ಸಾಕ್ಷಿ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಒತ್ತಾಯ

ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…

19 hours ago

ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…

19 hours ago