BREAKING NEWS

ಅಭಿ​ವೃದ್ಧಿ ಬಿಟ್ಟು ಹಿಂದೂ ಧರ್ಮ ವಿರೋ​ಧಿ​ಸುವ ಹೊಸ ಸರ್ಕಾ​ರ : ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಹೊಸ ಸರ್ಕಾರದ ಸಚಿವರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೇಳುವುದನ್ನು ಬಿಟ್ಟು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮೋಸದ ಕಾರ್ಡಿಗೆ ಗೆಲುವಾಗಿದೆಯೇ ಹೊರತು, ಕಾಂಗ್ರೆಸ್‌ ಪಕ್ಷಕ್ಕಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಸುವರ್ಣ ಸಹಕಾರಿ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯ​ಕ್ರ​ಮ​ದ​ಲ್ಲಿ ಮಾತನಾಡಿದ ಅವರು, 65 ವರ್ಷಗಳಿಂದ ಆ ಪಕ್ಷ ಜನರನ್ನು ವಂಚಿಸುವ ಮೂಲಕ ಆಡಳಿತ ನಡೆಸಿಕೊಂಡು ಬಂದಿದೆ. ಗ್ಯಾರಂಟಿ ಕಾರ್ಡ್‌ನ ಘೋಷಣೆಯಿಂದ ಕಾಂಗ್ರೆಸ್‌ನವರು ಹುಲಿ ಸವಾರಿ ಮಾಡುವಂತಾಗಿದೆ.

ಅವರ ಮುಖದಲ್ಲಿ ಗೆಲುವಿನ ನಗುವೇ ಕಾಣಿಸುತ್ತಿಲ್ಲ. ವಂಚನೆಯ ಗ್ಯಾರಂಟಿ ಕಾರ್ಡ್‌ನಿಂದ ನಮ್ಮ ಪಕ್ಷದ ಸುಮಾರು 50 ಸ್ಥಾನಗಳಿಗೆ ಸೋಲುಂಟಾಗಿದೆ. ಆದರೆ, ಈ ಕ್ಷೇತ್ರದಲ್ಲಿ ಅದರ ಪ್ರಭಾವ ಮತದಾರರ ಮೇಲೆ ಪರಿಣಾಮವಾಗಿಲ್ಲ ಎಂದರು. ಸರ್ಕಾರ ರಚನೆಯಾಗಿ ಐದಾರು ದಿನಗಳು ಕಳೆದಿದ್ದು, ಹಿಂದಿನ ಸರ್ಕಾರದಲ್ಲಿ ಟೆಂಡರ್‌ ಆಗಿರುವುದಕ್ಕೆ ತಡೆ ನೀಡಲಾಗಿದೆ. ಇದರಿಂದ ಈ ಕ್ಷೇತ್ರದಲ್ಲಿ ಟೆಂಡರ್‌ ಆಗಿರುವ ಸುಮಾರು .100 ಕೋಟಿಗಳ ಕಾಮಗಾರಿಗೆ ಹಿನ್ನಡೆ ಆಗುವ ಸಾಧ್ಯತೆಯಿದೆ ಎಂದರು. ಪಿಎಸ್‌ಐ ಹಗರಣ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗಟ್ಟಬೇಕು.

ತಾಲೂಕಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಕಾಂಗ್ರೆಸ್‌ ಮುಖಂಡರ ಹೇಳಿಕೆಯನ್ನು ಖಂಡಿಸಿ, ಅಧಿಕಾರಿಗಳನ್ನು ಬ್ಲಾಕ್‌ ಮೈಲ್‌ ಮಾಡುವ ಯತ್ನ ಕೈಬಿಡಬೇಕು. ಇಲ್ಲಿಗೆ ನಾನು ಶಾಸಕನಾಗಿದ್ದೇನೆ. ಈ ಕ್ಷೇತ್ರದ ಜನತೆಯ ನಾಡಿಮಿಡಿತವನ್ನು ಅರಿತಿರುವ ನಾನು ಈ ಕ್ಷೇತ್ರಕ್ಕೆ ಈ ಮೊದಲು ಯಾರೂ ಮಾಡಿರದಷ್ಟುಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ರಾಜಕೀಯವನ್ನು ವ್ರತವಾಗಿ ಸ್ವೀಕರಿಸಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಕರ್ತರ ಶ್ರಮದಿಂದ ದಾಖಲೆಯ 5ನೇ ಬಾರಿಗೆ ಗೆಲುವು ಸಾಧಿಸಿದ್ದೇವೆ. ಪ್ರಾಮಾಣಿಕ ಕಾರ್ಯಕರ್ತರೇ ಇಲ್ಲದ ಕಾಂಗ್ರೆಸ್‌ನವರು ಗೆದ್ದೇ ಗೆಲ್ತೀವಿ ಎಂಬ ಭ್ರಮೆಯಲ್ಲಿದ್ದರು ಎಂದೂ ಟೀಕಿಸಿದರು.

lokesh

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

6 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

7 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

7 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

8 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

8 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

12 hours ago