BREAKING NEWS

ಪುಲ್ವಾಮಾ ದಾಳಿ ಸರ್ಕಾರದ್ದೇ ಲೋಪ: ಕಾಶ್ಮೀರದ ಮಾಜಿ ರಾಜ್ಯಪಾಲ

ಬೆಂಗಳೂರು: ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌‍ಪಿಎಫ್‌ ಅದಕ್ಷತೆಯೇ ಕಾರಣ. ಯೋಧರ ಪ್ರಯಾಣಕ್ಕೆ ವಿಮಾನವನ್ನು ಕೇಳಿದ್ದರೂ, ಗೃಹ ಸಚಿವಾಲಯ ನೀಡಿರಲಿಲ್ಲ. ಇದು ಸರ್ಕಾರದ್ದೇ ಲೋಪ. ಈ ಬಗ್ಗೆ ಏನೂ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನನಗೆ ತಾಕೀತು ಮಾಡಿದ್ದರು ಎಂದು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ರಾಜನಾಥ್‌ ಸಿಂಗ್ ಅವರು ಆಗ ಕೇಂದ್ರ ಗೃಹಸಚಿವರಾಗಿದ್ದರು.

‘ದಿ ವೈರ್‌’ ಪೋರ್ಟಲ್‌ಗಾಗಿ ಕರಣ್‌ ಥಾಪರ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಮಲಿಕ್‌ ಹೀಗೆ ಹೇಳಿದ್ದಾರೆ.

2019ರ ಫೆಬ್ರುವರಿಯಲ್ಲಿ ಜಮ್ಮ-ಕಾಶ್ಮೀರದ ಪುಲ್ವಾಮಾ ಬಳಿ ಸಾಗುತ್ತಿದ್ದ ಸಿಆರ್‌‍ಪಿಎಫ್‌ ಯೋಧರ ಮೇಲೆ ಉಗ್ರರು ದಾಳಿ ನಡೆಸಿ
ದ್ದರು. ದಾಳಿಯಲ್ಲಿ 40 ಯೋಧರು ಹತರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಈ ದಾಳಿಯು ಚರ್ಚೆಯ ದೊಡ್ಡ ವಿಷಯವಾ
ಗಿತ್ತು. ಪುಲ್ವಾಮಾ ದಾಳಿ ಮತ್ತು ಜಮ್ಮು–ಕಾಶ್ಮೀರದ ವಿಶೇಷ ಸ್ಥಾನ ರದ್ದತಿ ಸಂದರ್ಭದಲ್ಲಿ ಮಲಿಕ್ ಅವರು ಆ ರಾಜ್ಯದ ರಾಜ್ಯಪಾಲರಾಗಿ ಇದ್ದರು.

ಸಿಆರ್‌ಪಿಎಫ್‌ ಯೋಧರು ‍‍ಪ್ರಯಾಣಿಸಬೇಕಿದ್ದ ಮಾರ್ಗದ ಸುರಕ್ಷತೆಯ ತಪಾಸಣೆಯೂ ಸಮರ್ಪಕವಾಗಿ ನಡೆದಿರಲಿಲ್ಲ ಎಂಬುದನ್ನು ಮಲಿಕ್‌ ಅವರು ಎಳೆ ಎಳೆಯಾಗಿ ವಿವರಿಸಿದ್ದಾರೆ.

‘ಪುಲ್ವಾಮಾ ದಾಳಿಯು ದೇಶದಲ್ಲಿಯೇ ಅತ್ಯಂತ ದುರಂತಮಯ ಅವಘಡವಾಗಿದೆ. ನಮ್ಮ ಅಸಮರ್ಥತೆಯ ಕಾರಣಕ್ಕೆ 40 ಯೋಧರು ಪ್ರಾಣ ಕಳೆದುಕೊಂಡರು’ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

‘ಭ್ರಷ್ಟಾಚಾರದ ಕುರಿತು ಮೋದಿ ತಲೆಕೆಡಿಸಿಕೊಳ್ಳುವುದಿಲ್ಲ’

ಭ್ರಷ್ಟಾಚಾರದ ಕುರಿತು ಮೋದಿ ಅವರು ತಲೆಯೇ ಕೆಡಿಸಿಕೊಂಡಿಲ್ಲ. ಭ್ರಷ್ಟಾಚಾರದ ಹಲವು ಪ್ರಕರಣಗಳನ್ನು ಮೋದಿ ಅವರ ಗಮನಕ್ಕೆ ಪದೇ ಪದೇ ತಂದ ಕಾರಣಕ್ಕಾಗಿಯೇ ತಮ್ಮನ್ನು ಗೋವಾ ರಾಜ್ಯಪಾಲ ಹುದ್ದೆಯಿಂದ ಮೇಘಾಲಯಕ್ಕೆ 2020ರ ಆಗಸ್ಟ್‌ನಲ್ಲಿ ಕಳುಹಿಸಲಾಯಿತು. ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವುದರ ಬದಲಿಗೆ ನಿರ್ಲಕ್ಷಿಸಲು ಸರ್ಕಾರ ನಿರ್ಧರಿಸಿತು. ಪ್ರಧಾನಿಯ ಸುತ್ತಲೂ ಇರುವ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರು ಪ್ರಧಾನಿ ಕಚೇರಿಯ ಹೆಸರನ್ನೂ ಬಳಸಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನೂ ಮೋದಿ ಅವರ ಗಮನಕ್ಕೆ ತಂದರೂ ಅವರು ಅದರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಮಲಿಕ್‌ ವಿವರಿಸಿದ್ದಾರೆ.

ಮಲಿಕ್‌ ಹೇಳಿದ್ದೇನು?

*ಪ್ರಧಾನಿಯು ಬಿಬಿಸಿ ಪ್ರಕರಣವನ್ನು ನಿರ್ವಹಿಸಿದ ರೀತಿ ಅತ್ಯಂತ ಕೆಟ್ಟದಾಗಿತ್ತು

*ಅದಾನಿ ಪ್ರಕರಣವು ಪ್ರಧಾನಿ ವರ್ಚಸ್ಸಿಗೆ ಗಂಭೀರವಾದ ಹಾನಿ ಉಂಟು ಮಾಡಿದೆ. ಈ ಪ್ರಕರಣವು ಗ್ರಾಮಗಳ ಮಟ್ಟದಲ್ಲಿಯೂ ಚರ್ಚೆ ಆಗುತ್ತಿದೆ. ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಟ್ಟಾಗಿ ಬಿಜೆಪಿಯ ವಿರುದ್ಧ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ ಬಿಜೆಪಿಗೆ ಅದು ಪ್ರತಿಕೂಲ ಆಗಲಿದೆ

*ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೊಡದೇ ಇದ್ದದ್ದು ಹಿಂದೆಂದೂ ಆಗಿರದಂತಹ ತಪ್ಪು. ಅದಾನಿ ಪ್ರಕರಣದಲ್ಲಿ ರಾಹುಲ್ ಅವರು ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರ ಕೊಡುವುದು ಸಾಧ್ಯವಿಲ್ಲ

ವಿಮಾನ ಏಕೆ ಕೊಟ್ಟಿಲ್ಲ: ಕಾಂಗ್ರೆಸ್‌ ಪ್ರಶ್ನೆ

ಸಿಆರ್‌ಪಿಎಫ್‌ ಸಿಬ್ಬಂದಿಯು ರಸ್ತೆ ಮಾರ್ಗದಲ್ಲಿ ಸಂಚರಿಸಿದರೆ ಉಗ್ರರ ದಾಳಿಯ ಅಪಾಯ ಇದ್ದರೂ ವಿಮಾನದ ವ್ಯವಸ್ಥೆ ಏಕೆ ಮಾಡಿಲ್ಲ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಪುಲ್ವಾಮಾ ದಾಳಿಯ ಕುರಿತ ತನಿಖೆಯ ಫಲಿತಾಂಶ ಏನಾಗಿದೆ ಎಂದೂ ಕೇಳಿದೆ.

ಸತ್ಯಪಾಲ್‌ ಮಲಿಕ್‌ ಅವರು ಮಾಡಿರುವ ಆರೋಪಗಳ ಕುರಿತು ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಕನಿಷ್ಠ ಆಳ್ವಿಕೆ, ಗರಿಷ್ಠ ಮೌನ’ ಎಂದು ಅವರು ಬಣ್ಣಿಸಿದ್ದಾರೆ.

‘ಜೈಷ್‌ ಎ ಮೊಹಮ್ಮದ್‌ ಉಗ್ರರಿಂದ ಇದ್ದ ಬೆದರಿಕೆಯನ್ನು ನಿರ್ಲಕ್ಷಿಸಿದ್ದು ಏಕೆ? 2019ರ ಜನವರಿ 2ರಿಂದ 2019ರ ಫೆಬ್ರುವರಿ 13ರ ನಡುವೆ ಗುಪ್ತಚರ ವಿಭಾಗದಿಂದ 11 ಮಾಹಿತಿಗಳು ಬಂದಿದ್ದವು. ಅವುಗಳನ್ನು ನಿರ್ಲಕ್ಷಿಸಿದ್ದು ಏಕೆ? ಉಗ್ರರಿಗೆ 300 ಕಿಲೋ ಆರ್‌ಡಿಎಕ್ಸ್‌ ಸಿಕ್ಕಿದ್ದು ಹೇಗೆ’ ಎಂದು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನಾತೆ ಪ್ರಶ್ನಿಸಿದ್ದಾರೆ.

‘ಪುಲ್ವಾಮಾ ದಾಳಿಯಾಗಿ ನಾಲ್ಕು ವರ್ಷಗಳಾದವು. ತನಿಖೆ ಎಲ್ಲಿಗೆ ಬಂದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡಭಾಲ್‌ ಮತ್ತು ಆಗಿನ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮೇಲೆ ಯಾವಾಗ ಹೇಗೆ ಉತ್ತರದಾಯಿತ್ವ ಹೊರಿಸುವಿರಿ’ ಎಂದು ಅವರು ಕೇಳಿದ್ದಾರೆ.

andolanait

Recent Posts

ಓದುಗರ ಪತ್ರ: ಕೆರೆ, ಕಟ್ಟೆಗಳ ಹೂಳೆತ್ತಿಸಿ

ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…

25 mins ago

ಓದುಗರ ಪತ್ರ: ಪ್ರಜಾಪ್ರಭುತ್ವ ಎಂಬ ಮೃಷ್ಟಾನ್ನ ಭೋಜನ ಶಾಲೆ!

ಭ್ರಷ್ಟಾಚಾರವೇ ಇಲ್ಲದ ವ್ಯವಸ್ಥೆ ನಿರ್ಮಾಣ ಮಾಡುವುದು ಇನ್ನು ತುಂಬಾ ಕಷ್ಟಕರವಾದ ಕೆಲಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್.ಸಂತೋಷ್…

27 mins ago

ಓದುಗರ ಪತ್ರ: ಡಿಜಿಟಲ್ ತಂತ್ರಜ್ಞಾನ ಸದ್ಬಳಕೆಯಾಗಲಿ

ಇಂದು ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದರಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಆನ್ಲೈನ್ ತರಗತಿಗಳು, ಯೂಟ್ಯೂಬ್ ಶಿಕ್ಷಣ…

29 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಪೈರೆಸಿ ವಿರುದ್ಧ ಚಿತ್ರೋದ್ಯಮ ಯುದ್ಧ ಸನ್ನದ್ಧ!?

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ೨೦೨೬ರ ಆರಂಭದ ವೇಳೆ ಹಲವು ಬೆಳವಣಿಗೆಗಳು. ೨೦೨೫ರ ಕೊನೆಯ ಶುಕ್ರವಾರ ತೆರೆ ಕಂಡ ೨ ಚಿತ್ರಗಳ…

32 mins ago

ಸಿದ್ದಾಪುರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

ಕೃಷ್ಣ ಸಿದ್ದಾಪುರ ಸಿಬ್ಬಂದಿ ಕೊರತೆ, ಜನಸಂಖ್ಯೆ ಆಧಾರದಲ್ಲಿ ಹೊಸ ಠಾಣೆ ಸ್ಥಾಪನೆ, ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಆಗ್ರಹ  ಸಿದ್ದಾಪುರ:ಸಿದ್ದಾಪುರ ಪೊಲೀಸ್…

37 mins ago

ಮೈಮುಲ್ ಆಡಳಿತ ಮಂಡಳಿ ಚುನಾವಣೆಯತ್ತ ಎಲ್ಲರ ಚಿತ್ತ

ಕೆ.ಬಿ.ರಮೇಶನಾಯಕ ಮೈಸೂರು: ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮೈಮುಲ್) ಆಡಳಿತ ಮಂಡಳಿಯ ಐದು ವರ್ಷಗಳ ಆಡಳಿತ ಮುಂದಿನ…

43 mins ago