BREAKING NEWS

ಲೋಕಸಭೆಯಲ್ಲಿ ‘ಗಾಂಧಿ ಪರಿವಾರ’ದ ವಿರುದ್ಧ ಪ್ರಧಾನಿ ಮೋದಿ ಸಿಡಿ ಗುಂಡು!

ನವದೆಹಲಿ : ಮಣಿಪುರ ವಿಚಾರವಾಗಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡನೆ ಮಾಡಿರುವ ಅವಿಶ್ವಾಸ ನಿರ್ಣಯದ ವಿಚಾರವಾಗಿ ಉತ್ತರ ನೀಡಿದ ಪ್ರಧಾನಿ ಮೋದಿ, ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅದರಲ್ಲೂ ವಿಪಕ್ಷಗಳ ನೇತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಪರಿವಾರವನ್ನೇ ಗುರಿಯಾಗಿಸಿ ಪ್ರಧಾನಿ ಮೋದಿ ಅಬ್ಬರಿಸಿದರು.

ಗಾಂಧಿ ಪರಿವಾರದ ವಿರುದ್ಧ ಪ್ರಧಾನಿ ಮೋದಿ ನಡೆಸಿದ ವಾಗ್ದಾಳಿಯ ಪ್ರಮುಖಾಂಶಗಳು ಇಂತಿವೆ:

ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಸೇರಿದಂತೆ ಕ್ರೀಡೆವರೆಗೂ ಎಲ್ಲೆಡೆ ಗಾಂಧಿ ಕುಟುಂಬದ ಹೆಸರನ್ನೇ ಈವರೆಗೂ ಇಡಲಾಗಿತ್ತು
ಚುನಾವಣೆಯಲ್ಲಿ ದೇಶದಮತದಾರರ ಗಮನ ಸೆಳೆಯಲು ‘ಗಾಂಧಿ’ ಹೆಸರನ್ನು ದುರ್ಬಳಕೆ ಮಾಡಿಕೊಂಡರು
ಹುಟ್ಟುಹಬ್ಬ ಹಾಗೂ ತಮ್ಮ ಬಟ್ಟೆಗಳನ್ನು ಒಗೆದು ಇಸ್ತ್ರಿ ಮಾಡಿಸಲು ವಿಮಾನ ಬಳಸುತ್ತಿದ್ದರು. ನಾವು ಬಡವರಿಗೆಔಷಧ ಹಾಗೂ ಅಗತ್ಯ ವಸ್ತು ರವಾನೆಗೆ ವಿಮಾನ ಬಳಸುತ್ತಿದ್ದೇವೆ
ದೇಶದ ಸಂಸತ್‌ನಲ್ಲಿ ಗಾಂಧಿ ಪರಿವಾರ ಬಿಟ್ಟರೆ ಬೇರೆಯವರ ಫೋಟೋ, ಪ್ರತಿಮೆಗಳನ್ನು ಸ್ಥಾಪಿಸಲು ಸಿದ್ದರಿರಲಿಲ್ಲ
ಕಾಂಗ್ರೆಸ್ ಪಕ್ಷವು ವಿಫಲವಾದ ಉತ್ಪನ್ನವನ್ನೇ ಪದೇ ಪದೇ ‘ಲಾಂಚ್’ ಮಾಡಲು ಪ್ರಯತ್ನ ಪಡುತ್ತಿದೆ (ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ)
ಕಾಂಗ್ರೆಸ್ ಪಕ್ಷವು ‘ಪರಿವಾರವಾದ’ ಹಾಗೂ ‘ದರ್ಬಾರ್ ವಾದ’ದ ಪದ್ದತಿಯಲ್ಲಿ ನಂಬಿಕೆ ಇರಿಸಿದೆ
ಕಾಂಗ್ರೆಸ್ ಪಕ್ಷದ ಪರಿವಾರ ರಾಜಕಾರಣವು ಡಾ. ಬಿ. ಆರ್. ಅಂಬೇಡ್ಕರ್, ಬಾಬು ಜಗಜೀವನ ರಾಂ ಹಾಗೂ ಚಂದ್ರಶೇರ್ ಅವರ ಹಕ್ಕುಗಳನ್ನು ಕಿತ್ತುಕೊಂಡರು. ಅಂಬೇಡ್ಕರ್ ಅವರ ವೇಷ ಭೂಷಣದ ಬಗ್ಗೆ ಕಾಂಗ್ರೆಸ್ಸಿಗರು ಗೇಲಿ ಮಾಡಿದರು
ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಪಾಪಗಳೇ ಅವರ ಇಂದಿನ ಕುಸಿತಕ್ಕೆ ಕಾರಣ
ನಮ್ಮ ಸಂವಿಧಾನವು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತದೆ. ಇದು ಸಾಮಾನ್ಯ ಜನರ ಹಕ್ಕುಗಳಿಗೆ ಹಾನಿ ಉಂಟು ಮಾಡುತ್ತದೆ
ಭಾರತ ಮಾತೆಯ ಸಾವನ್ನು ವಿರೋಧ ಪಕ್ಷಗಳು ಬಯಸುತ್ತಿವೆ. ಇವರ ಮನಸ್ಸಿನಲ್ಲಿ ಪ್ರಜಾಪ್ರಭುತ್ವದ ಹತ್ಯೆಯ ಕಲ್ಪನೆ ಇದೆ. ಅದೇ ಮಾತುಗಳನ್ನು ಆಡುತ್ತಿದ್ದಾರೆ (ರಾಹುಲ್ ಗಾಂಧಿ ಭಾಷಣಕ್ಕೆ ತಿರುಗೇಟು)
ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ದೇಶದ ಒಳಗೇ ಹಲವೆಡೆ ವಾಯು ದಾಳಿ ನಡೆದಿವೆ. 1966ರಲ್ಲಿ ಮಿಜೋರಾಂನಲ್ಲಿ ವಾಯು ದಾಳಿ ನಡೆಸಿದ್ದರು, ಅಕಾಲ್ ತಕ್ತ್‌ ಮೇಲೆ ದಾಳಿ ನಡೆಸಿದ್ದರು ಎಂದು ಇತಿಹಾಸ ಸ್ಮರಿಸಿದ ಪ್ರಧಾನಿ ಮೋದಿ
ಪಂಡಿತ್ ಜವಹರಲಾಲ್ ನೆಹರೂ ಅವರು ಚೀನಾ ವಿರುದ್ಧದ ಸಮರದ ವೇಳೆ ಮಾಡಿದ ಆಕ್ಷೇಪಾರ್ಹ ರೇಡಿಯೋ ಭಾಷಣ ಸ್ಮರಿಸಿದ ಪ್ರಧಾನಿ ಮೋದಿ
ಲೋಹಿಯಾ ಅವರು ನೆಹರೂ ವಿರುದ್ಧ ಮಾಡಿದ್ದ ಆರೋಪ ಸ್ಮರಿಸಿದ ಪ್ರಧಾನಿ ಮೋದಿ – ಈಶಾನ್ಯ ರಾಜ್ಯಗಳ ಅಭಿವೃದ್ದಿಯನ್ನು ನೆಹರೂ ಅವರು ಬೇಕಂತಲೇ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದ ಲೋಹಿಯಾ.

ಇದಲ್ಲದೆ ಕಾಂಗ್ರೆಸ್ ಪಕ್ಷದ ಸಂಸ್ಥಾಪಕರೂ ಕೂಡಾ ವಿದೇಶೀಯರು ಎಂದು ಇತಿಹಾಸ ನೆನಪಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ದೇಶದ ತ್ರಿವರ್ಣ ಧ್ವಜವನ್ನು ತನ್ನದನ್ನಾಗಿ ಮಾಡಿಕೊಳ್ತು ಎಂದು ಕಿಡಿ ಕಾರಿದರು. ಇದೇ ವೇಳೆ, ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟದ ವಿರುದ್ಧವೂ ಹರಿಹಾಯ್ದ ಪ್ರಧಾನಿ ಮೋದಿ, ಮೈತ್ರಿ ಕೂಟದ ಹೆಸರು ಇಂಡಿಯಾ ಅಲ್ಲ, ಘಮಂಡಿಯಾ ಎಂದು ಹೇಳಿದರು.

ಮಣಿಪುರದ ಜನತೆ ಜೊತೆಗೆ ಇಡೀ ದೇಶ ಹಾಗೂ ಸರ್ಕಾರ ಎಂದೆಂದಿಗೂ ಇರುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ, ಶೀಘ್ರದಲ್ಲೇ ಇಲ್ಲಿ ಶಾಂತಿ ನೆಲೆಸುತ್ತದೆ ಎಂದು ಆಶ್ವಾಸನೆ ನೀಡಿದರು. ದೇಶದ ಪ್ರಜಾಪ್ರಭುತ್ವ ಹಾಗೂ ಭಾರತ ಮಾತೆಯ ವಿರುದ್ದ ಮಾತುಗಳನ್ನು ಆಡುವವರಿಗೆ ದೇಶದ ಜನರೇ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಮಣಿಪುರ ವಿಚಾರವಾಗಿ ಕೇಂದ್ರ ಗೃಹ ಸಚಿವರು ಸದನಕ್ಕೆ ಸಮಗ್ರ ಮಾಹಿತಿ ನೀಡಿದ್ದಾರೆ. ಭಾರತವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಸರ್ಕಾರ ಎಂದೆಂದಿಗೂ ಕಠಿಣವಾಗಿ ವರ್ತಿಸುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

andolanait

Recent Posts

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

5 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

12 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

12 hours ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

12 hours ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

12 hours ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

12 hours ago