BREAKING NEWS

ಮಣಿಪುರ ಪರಿಸ್ಥಿತಿಯ ಚರ್ಚೆಗೆ ವಿಪಕ್ಷಗಳ ಪಟ್ಟು: ಕಲಾಪ ಸೋಮವಾರಕ್ಕೆ ಮುಂದೂಡಿಕೆ

ನವದೆಹಲಿ: ಮಣಿಪುರ ಪರಿಸ್ಥಿತಿ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಇಂದು ಸಹ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆ, ಗದ್ದಲ ಮುಂದುವರೆಸಿದ್ದರಿಂದ ಉಭಯ ಸದನಗಳನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಲೋಕಸಭೆ ಕಲಾಪ ಸಮಾವೇಶಗೊಳ್ಳುತ್ತಿದ್ದಂತೆಯೇ, ಸ್ಪೀಕರ್ ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು ಆದರೆ ವಿರೋಧ ಪಕ್ಷದ ಸದಸ್ಯರು ತಮ್ಮ ಬೇಡಿಕೆ ಬೆಂಬಲಿಸಿ ಘೋಷಣೆ ಮೊಳಗಿಸಿದರು. ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ ಅವಿಶ್ವಾಸ ನಿರ್ಣಯದ ಮೇಲೆ ತಕ್ಷಣ ಚರ್ಚೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು.

1978 ರ ಉದಾಹರಣೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ಅಂಗೀಕರಿಸಿದ ದಿನವೇ ಸದನವು ಅದರ ಮೇಲೆ ಚರ್ಚೆಯನ್ನು ಕೈಗೆತ್ತಿಕೊಂಡಿತು ಎಂದು ಹೇಳುವ ಮೂಲಕ ಚರ್ಚೆಗೆ ಆಗ್ರಹಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ  ಮಾತನಾಡಿ, ಸಭಾಧ್ಯಕ್ಷರು ನಿರ್ಧರಿಸಿದ ದಿನ ಮತ್ತು ಸಮಯದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದ್ದು, ನಿಯಮಾವಳಿ ಪ್ರಕಾರ 10 ದಿನಗಳ ಗಡುವನ್ನು ನೀಡಲಾಗುತ್ತದೆ ಎಂದು ಹೇಳಿದರು. ಗದ್ದಲದ ನಡುವೆಯೇ ಸ್ಪೀಕರ್ ಸದನವನ್ನು ಮಧ್ಯಾಹ್ನ 12 ಗಂಟೆಗೆ ತದನಂತರ ದಿನದ ಮಟ್ಟಿಗೆ ಮುಂದೂಡಿದರು. ಬಿರ್ಲಾ ಅವರು ಬುಧವಾರ ವಿರೋಧ ಪಕ್ಷದ ಸದಸ್ಯರ ಬೆಂಬಲದೊಂದಿಗೆ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ಅಂಗೀಕರಿಸಿದ್ದರು.

ಮಣಿಪುರಕ್ಕೆ ಸಂಬಂಧಿಸಿದ ತಮ್ಮ ಬೇಡಿಕೆಗಳನ್ನು ಪ್ರತಿಪಕ್ಷಗಳ ಸದಸ್ಯರು ಪ್ರಸ್ತಾಪಿಸಿದ ನಂತರ ರಾಜ್ಯಸಭೆಯನ್ನು ದಿನಕ್ಕೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ, ಟಿಎಂಸಿ ನಾಯಕ ಡೆರಿಕ್ ಒಬ್ರಿಯನ್ ಅವರೊಂದಿಗಿನ ವಾಗ್ವಾದದ ನಂತರ ಸಭಾಪತಿ ಜಗದೀಪ್ ಧಂಖರ್ ಶುಕ್ರವಾರ ಸದನದ ಕಲಾಪವನ್ನು ದಿಢೀರ್‌ಗೆ ಮುಂದೂಡಿದರು. ಮಣಿಪುರ ಪರಿಸ್ಥಿತಿಯನ್ನು ಚರ್ಚಿಸಲು ನಿಯಮ 267 ರ ಅಡಿಯಲ್ಲಿ ವಿರೋಧ ಪಕ್ಷದ ಸದಸ್ಯರು ನೀಡಿದ ನೋಟಿಸ್‌ಗಳನ್ನು ಸ್ವೀಕರಿಸದ ವಿಷಯದ ಬಗ್ಗೆ ಟಿಎಂಸಿ ನಾಯಕ ಅಡ್ಡಿಪಡಿಸಿದ ನಂತರ ಧಂಖರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಮಣಿಪುರದ ಪರಿಸ್ಥಿತಿಯ ಬಗ್ಗೆ ವಿಸ್ತೃತ ಚರ್ಚೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಾಗಿ ವಿರೋಧ ಪಕ್ಷಗಳು ಸಂಸತ್ತಿನ ಉಭಯ ಸದನಗಳ್ಲಲಿ ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಎಂಟು ದಿನಗಳಿಂದಲೂ ಸುಗಮ ಕಲಾಪ ನಡೆಯದೇ ವ್ಯರ್ಥವಾಗುತ್ತಿದೆ.

andolanait

Recent Posts

ಸೋನ್ ಹಿಲ್ ಬಳಿಯ ಕಸದ ರಾಶಿ ತೆರವು ಕಾರ್ಯ ಶುರು

ನವೀನ್ ಡಿಸೋಜ ಗುಡ್ಡದ ಮೇಲೆ ಅವೈಜ್ಞಾನಿಕವಾಗಿ ಸುರಿದಿದ್ದ ಕಸ ವಿಂಗಡಣೆ ಕೆಲಸ ಚುರುಕು ಮಡಿಕೇರಿ: ವಾಯು ಗುಣಮಟ್ಟದಲ್ಲಿ ದೇಶದಲ್ಲೇ ಹೆಸರಾಗಿರುವ…

1 min ago

ಗ್ಯಾಂಗ್ರಿನ್‌ಗೆ ಬೇಡ ಭಯ; ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಭಯ

ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಾಗ ಗ್ಯಾಂಗ್ರಿನ್ ರೂಪ ಪಡೆದುಕೊಳ್ಳುತ್ತದೆ.…

6 mins ago

ನಂಜನಗೂಡಿಗೆ ಬಸ್ ಹತ್ತಿದರೆ ತಿ.ನರಸೀಪುರದ ಟಿಕೆಟ್!

ಎಸ್.ಎಸ್.ಭಟ್ ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ…

12 mins ago

ಕೋರ್ಟ್ ಮೆಟ್ಟಿಲೇರಿದ್ದ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ತೆರೆ

ಮಂಜು ಕೋಟೆ ಕೋಟೆ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಮೊಳಿಯೂರು ಆನಂದ್ ಮುಂದುವರಿಕೆಗೆ ನ್ಯಾಯಾಲಯದ ತೀರ್ಪು ಎಚ್.ಡಿ.ಕೋಟೆ: ತಾಲ್ಲೂಕು ಕುರುಬ…

15 mins ago

ಸಿಎಂ ತವರಲ್ಲಿ ಮಾರ್ಚ್‌ನಲ್ಲಿ ಅಕ್ಕ ಕೆಫೆ ಶುರು

ಕೆ.ಬಿ.ರಮೇಶನಾಯಕ ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶ ಮೈಸೂರು: ಬಡವರ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಿಂಡಿ, ಊಟವನ್ನು…

20 mins ago