BREAKING NEWS

ಅರಬಿ ಸಮುದ್ರದಲ್ಲಿ ನೌಕಾಪಡೆಯ ಸಮರಾಭ್ಯಾಸ

ಹೊಸದಿಲ್ಲಿ: ಭಾರತೀಯ ನೌಕಾಪಡೆಯು ಶನಿವಾರ ಅರಬಿ ಸಮುದ್ರದಲ್ಲಿ ಬೃಹತ್‌ ಸಮರಾಭ್ಯಾಸ ಕೈಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ನಡೆದ ಬೃಹತ್‌ ಶಕ್ತಿ ಪ್ರದರ್ಶನದಲ್ಲಿ ಇದೂ ಒಂದು. ಎರಡು ವಿಮಾನ ವಾಹಕ ನೌಕೆಗಳು, ಅನೇಕ ಯುದ್ಧ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು 35ಕ್ಕೂ ಹೆಚ್ಚು ಮುಂಚೂಣಿ ಯುದ್ಧ ವಿಮಾನಗಳು ಈ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.

ಹಿಂದೂ ಮಹಾ ಸಮುದ್ರದಲ್ಲಿ ಚೀನ ತನ್ನ ಹಿಡಿತ ಹೆಚ್ಚಿಸುತ್ತಿರುವ ನಡುವೆ ಭಾರತದ ಈ ಶಕ್ತಿ ಪ್ರದರ್ಶನ ಪ್ರಾಮುಖ್ಯ ಪಡೆದಿದೆ. ಐಎನ್‌ಎಸ್‌ ವಿಕ್ರಮಾದಿತ್ಯ ಮತ್ತು ಹೊಸದಾಗಿ ಸೇರ್ಪಡೆಯಾದ ಐಎನ್‌ಎಸ್‌ ವಿಕ್ರಾಂತ್‌-ಈ ಸಮರಾಭ್ಯಾಸದ ಪ್ರಮುಖ ಆಕರ್ಷಣೆಯಾಗಿದ್ದವು. ಜತೆಗೆ ಮಿಗ್‌ 29ಕೆ ಸಹಿತ ಅನೇಕ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳಾದ ಎಂಎಚ್‌60ಆರ್‌, ಕಾಮೊವ್‌ ಮತ್ತು ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಸಮರಾಭ್ಯಾಸದ ಭಾಗವಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಈ ಸಮರಾಭ್ಯಾಸವು ಹಿಂದೂ ಮಹಾಸಾಗರದಲ್ಲಿ ಮತ್ತು ಅದರಾಚೆಗೂ ಕಡಲ ಭದ್ರತೆ ಮತ್ತು ಶಕ್ತಿ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯ ನೂತನ ಮೈಲುಗಲ್ಲಾಗಿದೆ’ ಎಂದು ನೌಕಾಪಡೆಯ ವಕ್ತಾರ ಕಮಾಂಡರ್‌ ವಿವೇಕ್‌ ಮಧ್ವಲ್‌ ಹೇಳಿದ್ದಾರೆ.

andolanait

Recent Posts

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಸಂಸದ ಡಿ.ಕೆ.ಸುರೇಶ್‌ ಕಿಡಿ

ಬೆಂಗಳೂರು: ಪ್ರಧಾನಿ ಮೋದಿ ಮುಂದೆ ಸಂಸದ ತೇಜಸ್ವಿ ಸೂರ್ಯ ತಮ್ಮ ಎದೆಗಾರಿಕೆ ತೋರಿಸಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಕಿಡಿಕಾರಿದ್ದಾರೆ.…

35 mins ago

ನಾಳೆ ಎರಡೂವರೆ ಗಂಟೆ ಪ್ರವಾಸಿಗರಿಗಿಲ್ಲ ತಾಜ್‌ ಮಹಲ್‌ ಪ್ರವೇಶ: ಕಾರಣ ಏನ್‌ ಗೊತ್ತಾ.?

ಉತ್ತರ ಪ್ರದೇಶ: ಫೆಬ್ರವರಿ.10ರಂದು ಎರಡೂವರೆ ಗಂಟೆಗಳ ಕಾಲ ಪ್ರವಾಸಿಗರಿಗೆ ತಾಜ್‌ಮಹಲ್‌ ಪ್ರವೇಶ ನಿಷೇಧಿಸಲಾಗಿದೆ. ಭಾರತೀಯ ಪುರಾತತ್ವ ಸಮೀಕ್ಷೆ ಪ್ರಕಾರ ಸೀಶೆಲ್ಸ್‌…

54 mins ago

ಖಾಲಿ ಟ್ರಂಕ್‌ ಹಿಡಿದು ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಶೇಕಡಾ.5ರಷ್ಟು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ತೇಜಸ್ವಿ…

1 hour ago

ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ: ಸಿಬಿಐ ತನಿಖೆಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂದೇ ಹೇಳಲಾಗುವ ತಿರುಪಯಯಿ ತಿರುಮಲ ಶ್ರೀ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ…

2 hours ago

ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಕುಸಿದು ಬಿದ್ದು ಮಹಿಳೆ ಸಾವು

ಬೆಂಗಳೂರು: ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ…

3 hours ago

ಮೈಸೂರು: ಹಳೆಯ ವಸ್ತು ಸಂಗ್ರಹಿಸಿದ್ದ ಗೋದಾಮಿನಲ್ಲಿ ಬೆಂಕಿ

ಮೈಸೂರು: ಹಳೆಯ ವಸ್ತುಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮೈಸೂರಿನ ಎನ್.ಆರ್.‌ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು-ಬೆಂಗಳೂರು ರಸ್ತೆಯ…

3 hours ago