BREAKING NEWS

ಮನುಸ್ಮೃತಿಯ ಎನ್‌ಇಪಿ ಶಿಕ್ಷಣ ರದ್ದುಗೊಳಿಸಿ ಸಂವಿಧಾನಬದ್ಧ ಶಿಕ್ಷಣ ನೀಡಲಾಗುವುದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿಯವರು ಮನುವಾದ ಮನುಸ್ಮೃತಿಯನ್ನು ಆಧರಿಸಿದ ಶಿಕ್ಷಣ ನೀಡಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದರು. ಆದರೆ ಮುಂದಿನ ವರ್ಷದಿಂದ ನಾವು ಅದನ್ನು ಬದಲಾವಣೆ ಮಾಡಿ ಸಂವಿಧಾನಬದ್ಧ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್‍ನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಯಾವ ರಾಜ್ಯಗಳಲ್ಲೂ ನೂತನ ಶಿಕ್ಷಣ ನೀತಿ ಜಾರಿಯಾಗಿರಲಿಲ್ಲ. ಆದರೆ ರಾಜ್ಯದಲ್ಲಿ ಅದನ್ನು ಅನುಷ್ಠಾನಗೊಳಿಸಿದ್ದಾರೆ. ಈ ವರ್ಷ ತಡವಾಗಿದೆ. ಮುಂದಿನ ವರ್ಷ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಿ ಸಂವಿಧಾನಬದ್ಧ ಶಿಕ್ಷಣ ನೀಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿಯವರು ಸಂವಿಧಾನವನ್ನು ಮನುವಾದ ಮತ್ತು ಮನುಸ್ಮೃತಿಯ ಆಧಾರವಾಗಿಯೇ ರಚಿಸುವ ಪ್ರಯತ್ನ ಮಾಡಿದ್ದರು. ಡಾ.ಅಂಬೇಡ್ಕರ್ ಅವರು ವಿದೇಶದಲ್ಲಿ ಓದಿ ಕಾನೂನು ಪಂಡಿತರಾಗದೇ ಇದ್ದಿದ್ದರೆ ಇಷ್ಟು ಉತ್ತಮವಾದ ಸಂವಿಧಾನ ರಚನೆಯಾಗುತ್ತಿರಲಿಲ್ಲ. ಹಿಂದೆ ರಾಜರ ಆಡಳಿತದಲ್ಲಿ ಮನುವಾದವೇ ಜಾರಿಯಲ್ಲಿತ್ತು. ಅದರ ಪ್ರಕಾರ, ಮೇಲ್ವರ್ಗದವರು ಅತ್ಯಾಚಾರದಂತಹ ಅಪರಾಧ ಮಾಡಿದರೂ ಶಿಕ್ಷೆ ಇರುತ್ತಿರಲಿಲ್ಲ. ಕೆಳವರ್ಗದವರು ಅದೇ ಅಪರಾಧ ಮಾಡಿದ್ದರೆ ಕಠಿಣ ಶಿಕ್ಷೆ ಎದುರಿಸಬೇಕಿತ್ತು. ಸಂವಿಧಾನ ಇದನ್ನು ತೊಡೆದು ಹಾಕಿದೆ. ಸಂವಿಧಾನ ಉಳಿದರೆ ಅದು ಜನರನ್ನು ರಕ್ಷಿಸುತ್ತದೆ. ಹೀಗಾಗಿ ಸಂವಿಧಾನವನ್ನು ಕಾಪಾಡಿಕೊಳ್ಳುವುದು ಕಾಂಗ್ರೆಸಿಗರ ಕರ್ತವ್ಯ ಎಂದರು.

ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೋಮುವಾದವನ್ನ ಪ್ರಯೋಗಶೀಲವನ್ನಾಗಿ ಮಾಡಿತ್ತು. ಭ್ರಷ್ಟಾಚಾರ, ಅನಾಚಾರ, ಅನ್ಯಾಯ ಮಾಡಿತ್ತು. ಜಾತ್ಯಾತೀತ ತಳಹದಿಯನ್ನು ಅಲುಗಾಡಿಸಿತ್ತು. ಪ್ರಧಾನಿಯವರನ್ನು ಕರೆಸಿ ಭಾಷಣ ಮಾಡಿಸಿದರೆ ತಮ್ಮೆಲ್ಲಾ ತಪ್ಪುಗಳೂ ಮುಚ್ಚಿ ಹೋಗುತ್ತವೆ ಎಂದು ಬಿಜೆಪಿಯವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ ಎಂದು ವಾಗ್ದಳಿ ನಡೆಸಿದರು.

ಪ್ರಧಾನಿ ಚುನಾವಣಾ ಸಂದರ್ಭದಲ್ಲಿ 28 ಬಾರಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ದರು. ಅವರು ರೋಡ್ ಶೋ ಮಾಡಿದ ಕಡೆ, ಪ್ರವಾಸ ಮಾಡಿದ ಕಡೆ ಬಹುತೇಕ ಬಿಜೆಪಿ ಸೋತಿದೆ.ದೇಶದಲ್ಲಿ ಬೆಲೆ ಏರಿಕೆ ಹೆಚ್ಚಾಗಿದೆ. ನಿರುದ್ಯೋಗ ಮಿತಿ ಮೀರಿದೆ. ನೋಟು ಅಮಾನೀಕರಣದಿಂದ ಆರ್ಥಿಕ ವ್ಯವಸ್ಥೆಯನ್ನೇ ಹಾಳುಗೆಡವಲಾಗಿದೆ. ಅವೈಜ್ಞಾನಿಕ ಜಿಎಸ್‍ಟಿ ಪದ್ಧತಿಯಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ದೂರಿದರು.

ಕರ್ನಾಟಕದಿಂದ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ತೆರಿಗೆ ರೂಪದಲ್ಲಿ ಹಣ ರವಾನೆಯಾಗುತ್ತಿದೆ. ಆದರೆ ಅವರು ರಾಜ್ಯಕ್ಕೆ ಮರಳಿ ನೀಡಿರುವುದು ಕೇವಲ 50 ಸಾವಿರ ಕೋಟಿ ರೂ ಮಾತ್ರ. ಬಿಜೆಪಿ ಸರ್ಕಾರ ಶ್ರೀಮಂತರ ತೆರಿಗೆ ಹೊರೆಯನ್ನು ಕಡಿಮೆ ಮಾಡಿದೆ. ಬಡವರ ಮೇಲೆ ಹೊರೆ ಹೆಚ್ಚಿಸಿದೆ. ಕಾಂಗ್ರೆಸ್‍ನ ಪಂಚಖಾತ್ರಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಆದರೆ ಇದರಿಂದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ಬೆಲೆ ಏರಿಕೆ, ತೆರಿಗೆ ಹೊರೆಯಿಂದ ಸಂಕಷ್ಟಕ್ಕೀಡಾದವರಿಗೆ ಪಂಚಖಾತ್ರಿಗಳು ವರದಾನವಾಗಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರದ ಅವಯಲ್ಲಿನ ಹಗರಣಗಳನ್ನು ತನಿಖೆಗೊಳಪಡಿಸುತ್ತಿದ್ದಂತೆ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ಅದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವರ್ಗಾವಣೆ ದಂಧೆ ಸೇರಿದಂತೆ ವಿವಿಧ ಟೀಕೆಗಳನ್ನು ಮಾಡುತ್ತಿದ್ದಾರೆ. ತನಿಖೆಯ ವರದಿ ಬರಲಿ, ಆಗ ಬಿಜೆಪಿಯವರ ಬೇಳೆಕಾಳು ಗೊತ್ತಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಅಧಿಕಾರಕ್ಕೆ ಬಂದ ಎರಡೂವರೆ ತಿಂಗಳಲ್ಲೇ 36 ಸಾವಿರ ಕೋಟಿ ರೂ. ವೆಚ್ಚದ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮಿ ದೇಶದಲ್ಲೇ ಅತಿ ದೊಡ್ಡ ಯೋಜನೆ. ಅಕ್ಕಿ ನೀಡುವ ಅನ್ನಭಾಗ್ಯ ಬಿಜೆಪಿ ಕಾರ್ಯಕ್ರಮ ಎಂದು ಹೇಳುತ್ತಾರೆ. ಹಾಗಿದ್ದರೆ ಬಿಜೆಪಿ ಅಕಾರದಲ್ಲಿರುವ ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಏಕೆ ಜಾರಿಯಲ್ಲಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಯವರು ರಾಜ್ಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಳುಗೆಡವಿದ್ದಾರೆ. ಮಣಿಪುರದಲ್ಲಿನ ಹಿಂಸಾಚಾರಗಳ ಬಗ್ಗೆ ಪ್ರಧಾನಿ ಸಮರ್ಪಕ ಉತ್ತರ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಅವಿಶ್ವಾಸ ನಿರ್ಣಯದ ವೇಳೆ ಉತ್ತರ ನೀಡದ ಮೋದಿ ರಾಜಕೀಯ ಭಾಷಣ ಮಾಡಿದರು. ಪುಣ್ಯಾತ್ಮ ಮೋದಿ ಸಂಸತ್‍ಗೆ ಹೋಗುವುದಿಲ್ಲ. ಪತ್ರಿಕಾಗೋಷ್ಠಿಯನ್ನೇ ನಡೆಸುವುದಿಲ್ಲ. ಆದರೂ ಮಾಧ್ಯಮದವರಿಗೆ ಮೋದಿ ಕಂಡರೆ ಪ್ರೀತಿ. ಬಿಜೆಪಿ ಪಾತಾಳಕ್ಕೆ ಹೋಗುತ್ತಿದೆ. ಕೆಲವು ಮಾಧ್ಯಮದವರು ಬಿಜೆಪಿಯನ್ನು ಹಿಡಿದು ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಈ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಹೇಳಿದರು.

ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ವಿಶ್ರಾಂತಿ ಪಡೆಯುವಂತಾಗಬಾರದು. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಗುರಿ ನಮ್ಮ ಮುಂದಿದೆ. ಆವರೆಗೂ ವಿಶ್ರಮಿಸದಂತೆ ಸಲಹೆ ನೀಡಿದರು.

ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಸೋಲಿನ ಭಯದಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ. ಕಾಂಗ್ರೆಸ್ ಗೆದ್ದು ಸ್ಪಷ್ಟವಾಗಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸೋಲುವುದು ಶತಸಿದ್ಧ ಎಂದು ಸಿದ್ದರಾಮಯ್ಯ ಗುಡುಗಿದರು.

andolanait

Recent Posts

ಜಾನಕಿ ಅಮ್ಮನ ಸ್ಮಾರಕ ನಿರ್ಮಾಣವಾಗಬೇಕು : ಖ್ಯಾತ ನಿರ್ದೇಶಕ ಹಂಸಲೇಖ

ಮೈಸೂರು : ಕರುನಾಡಿನ ಮಣ್ಣಲ್ಲಿ ಜಾನಕಿ ಅಮ್ಮ ಕಣ್ಮುಚ್ಚಿದ್ದಾರೆ. ಅವರಿಗಾಗಿ ಕರುನಾಡ ಜನ ಕಣ್ಣು ತೆರೆಯಬೇಕು. ಅವರ ಸ್ಮಾರಕ ನಿರ್ಮಾಣವಾಗಬೇಕು…

51 mins ago

ಹಾಡುಪಾಡು | ಎಸ್‌ಐಆರ್‌

ಫಾತಿಮಾ ರಲಿಯಾ ಯು ಟ್ಯೂಬ್‌ನಲ್ಲಿ ಒಬ್ಬೊಬ್ಬ ತಜ್ಞರೂ ಒಂದೊಂದು ಮಾಹಿತಿ ಕೊಡುತ್ತಿದ್ದರು. ಇದೆಲ್ಲಾ ಗೊಂದಲ ಬೇಡ ಎಂದು ಚಾಟ್‌ಜಿಪಿಟಿಯ ಬಳಿ…

59 mins ago

ಹಾಡುಪಾಡು | ಯರಕನಗದ್ದೆ ಪೋಡಿನಲ್ಲಿ ವೋಟು ಕಾರ್ಡಿನ ಪರದಾಟ

ಜಯಶಂಕರ್ ನಾನು ಶಾಲೆಯ ಅಂಗಳದಲ್ಲಿ ಕುಳಿತುಕೊಂಡು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವಂತಹ ಸಂದರ್ಭದಲ್ಲಿ ನಾಲ್ಕಾರು ಸೋಲಿಗರು ಗುಂಪಿನಲ್ಲಿ ಏನೇನೋ ಗೊಣಗಾಡಿಕೊಂಡು ಹೋಗುತ್ತಿದ್ದರು.…

1 hour ago

ಹಾಡುಪಾಡು | ಜೈಫುಲ್ ಮೇಷ್ಟ್ರ ಕಷ್ಟಕ್ಕೆ ಮಿಡಿಯುತ್ತಿರುವ ಶಿಷ್ಯ ಹೃದಯಗಳು

ಗುರುವಿಗೆ ಕೃತಜ್ಞತೆ ಸಲ್ಲಿಸುವ ಶಿಷ್ಯರ ಈ ಕಾರ್ಯ ಯುವ ಪೀಳಿಗೆಗೆ ಮಾದರಿಯಾಗಿದೆ. ಚಂದ್ರಶೇಖರ್ ಮೂರ್ತಿ ಕೆ.ಎಸ್. ಹಾರ್ಮೋನಿಯಂ ವಾದಕ, ಗೀತ…

3 hours ago

ಖ್ಯಾತ ಗಾಯಕಿ ಎಸ್.ಜಾನಕಿ ನಿಧನ

ಮೈಸೂರು: ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಖ್ಯಾತ ಗಾಯಕಿ ಎಸ್.ಜಾನಕಿ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.…

14 hours ago

ಗುಂಡ್ಲುಪೇಟೆ: ಮನೆಯೊಳಗೆ ನುಗ್ಗಿದ್ದ ನಾಗರಹಾವಿನ ರಕ್ಷಣೆ

ಗುಂಡ್ಲುಪೇಟೆ: ತಾಲ್ಲೂಕಿನ ಕಗ್ಗಳದಹುಂಡಿ ಗ್ರಾಮದ ಮನೆಯೊಳಗೆ ನುಗ್ಗಿದ್ದ ನಾಗರಹಾವನ್ನು ಉರಗಪ್ರೇಮಿ ಸ್ವಾಮಿ ಅವರು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.…

17 hours ago