BREAKING NEWS

ಅಸಹಜ ವಿದ್ಯುತ್‌ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ಕಂಟಕ ‘ಗ್ಯಾರಂಟಿ’ : ಹೇಳಿದ್ದು 30%, ಏರಿಸಿದ್ದು 50%!

ಬೆಂಗಳೂರು : ರಾಜ್ಯ ಸರಕಾರವು ವಾಣಿಜ್ಯ ಬಳಕೆಯ ವಿದ್ಯುತ್‌ ದರ ಹೆಚ್ಚಿಸಿ ಉತ್ಪಾದನಾ ವಲಯದ ಮೇಲೆ ಗದಾ ಪ್ರಹಾರ ನಡೆಸಿದ್ದು, ದರ ಹೆಚ್ಚಳದ ಕ್ರಮವು ಉದ್ದಿಮೆದಾರರ ಕಣ್ಣು ಕೆಂಪಾಗಿಸಿದೆ.

ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾಲದ ಆರ್ಥಿಕ ಸಂಕಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಉತ್ಪಾದನಾ ವಲಯಕ್ಕೆ ಸರಕಾರ ವಿದ್ಯುತ್‌ ದರ ಹೆಚ್ಚಳದ ಮೂಲಕ ದೊಡ್ಡ ಶಾಕ್‌ ಕೊಟ್ಟಿದ್ದು, ಕೈಗಾರಿಕೆಗಳು ನಷ್ಟದ ಹಾದಿ ಹಿಡಿಯುವ ಆತಂಕ ಎದುರಾಗಿದೆ.

ವಿದ್ಯುತ್‌ ದರ ಹೆಚ್ಚಳದ ಕ್ರಮವು ಮುಖ್ಯವಾಗಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಕಂಟಕಪ್ರಾಯ ಎಂದೇ ಹೇಳಲಾಗುತ್ತಿದೆ. ರಾಜ್ಯದಲ್ಲಿರುವ ಸುಮಾರು 8.50 ಲಕ್ಷ ಕೈಗಾರಿಕೆಗಳು 45 ಲಕ್ಷ ಉದ್ಯೋಗಾವಕಾಶ ಸೃಷ್ಟಿಸಿವೆ. ಸರಕಾರದ ಬೊಕ್ಕಸ ತುಂಬಿಸುವಲ್ಲಿನಿ ರ್ಣಾಯಕವಾಗಿರುವ ಕೈಗಾರಿಕೆಗಳ ಕಾರ್ಯ ಚಟುವಟಿಕೆಗಳು ಸಂಪೂರ್ಣವಾಗಿ ವಿದ್ಯುತ್‌ ಮೇಲೆಯೇ ಅವಲಂಬಿತವಾಗಿವೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ. 3.5ರಷ್ಟು ವಿದ್ಯುತ್‌ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದೆ.

ವಾಣಿಜ್ಯ ಬಳಕೆಯ ಉದ್ದೇಶದ ವಿದ್ಯುತ್‌ನ ಬಿಲ್‌ ಶೇ. 30ರಷ್ಟು ಹೆಚ್ಚಳವಾಗಿದೆ. ಈ ಮೊದಲು ಪ್ರತಿ ಯೂನಿಟ್‌ಗೆ 6.75 ರೂ. ಇತ್ತು. ಇದೀಗ ಪ್ರತಿ ಯೂನಿಟ್‌ ಬೆಲೆ 8.50 ರೂ.ಗೆ ಹೆಚ್ಚಳ ಮಾಡಲಾಗಿದೆ. ಜತೆಗೆ, ನಿಗದಿತ ಶುಲ್ಕವನ್ನು ಶೇ. 40ರಿಂದ 60ರಷ್ಟು ಹೆಚ್ಚಿಸಲಾಗಿದೆ. ಪ್ರಸಕ್ತ ಜೂನ್‌ ತಿಂಗಳಲ್ಲಿ ವಿದ್ಯುತ್‌ ದರವು ಪ್ರತಿ ಯೂನಿಟ್‌ಗೆ 2.89 ರೂ.ಗಳಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಏಪ್ರಿಲ್‌ ತಿಂಗಳಿಗೆ ಸಂಬಂಧಿಸಿದ ಅನುಮೋದಿತ 70 ಪೈಸೆ ಹೆಚ್ಚಳದ ಬಾಕಿ, ಜನವರಿ ತಿಂಗಳ ಇಂಧನ ಮತ್ತು ಖರೀದಿ ವೆಚ್ಚ ಹೊಂದಾಣಿಕೆ (ಎಫ್‌ಪಿಪಿಸಿಎ) ಶುಲ್ಕದ ಕಾರಣದಿಂದ ಅಸಹಜ ಹೆಚ್ಚಳವಾಗಿದೆ ಎಂದು ಉದ್ಯಮ ಆಕ್ರೋಶಗೊಂಡಿದೆ.

ವಿದ್ಯುತ್‌ ದರ ಹೆಚ್ಚಳದಿಂದ ಕೆರಳಿರುವ ಉತ್ಪಾದನಾ ವಲಯವು ಈಗಾಗಲೇ ಹೋರಾಟದ ಹಾದಿ ಹಿಡಿದಿದೆ. ಮತ್ತೊಂದೆಡೆ ಅಕ್ಕಪಕ್ಕದ ರಾಜ್ಯಗಳಿಗೆ ವಲಸೆ ಹೋಗುವುದಾಗಿ ಎಚ್ಚರಿಕೆ ನೀಡಲಾಗಿದೆ. ದರ ಹೆಚ್ಚಳದ ಆದೇಶವನ್ನು 7 ದಿನದೊಳಗೆ ಹಿಂಪಡೆಯದಿದ್ದರೆ ರಾಜ್ಯದೆಲ್ಲೆಡೆ ಕೈಗಾರಿಕೆಗಳನ್ನು ಬಂದ್‌ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.

ಸರಕಾರ ವಿದ್ಯುತ್‌ ದರ ಹೆಚ್ಚಿಸಿ ಎಂಎಸ್‌ಎಂಇ ಕೈಗಾರಿಕೆಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಉದ್ಯಮದ ಮೇಲಿನ ಹೊರೆ ತಗ್ಗಿಸಬೇಕಾದ ಸರಕಾರಕ್ಕೆ ನಮ್ಮ ಧ್ವನಿ ಕೇಳಿಸುತ್ತಿಲ್ಲ. ಉದ್ಯಮದ ಆರ್ಥಿಕತೆ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಅಥವಾ ಕನಿಷ್ಠ 2 ವರ್ಷಗಳವರೆಗೆ ಉದ್ಯಮವನ್ನು ಘಾಸಿಗೊಳಿಸುವ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಎನ್‌. ನರಸಿಂಹಮೂರ್ತಿ ಹೇಳಿದ್ದಾರೆ.

lokesh

Recent Posts

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

21 mins ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

2 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

2 hours ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

2 hours ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

3 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

3 hours ago