Andolana originals

ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದ ಪಾಲಿಕೆ!!

ದಿನೇಶ್‌ಕುಮಾರ್ ಹೆಚ್.ಎಸ್.

ಉದ್ಯಾನ ನಿರ್ಮಾಣಕ್ಕೂ ಮುನ್ನ ವ್ಯಾಯಾಮ ಪರಿಕರ ಅಳವಡಿಸಿದ ನಗರಪಾಲಿಕೆಯ ಅಧಿಕಾರಿಗಳು

ಮೈಸೂರು: ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದರು ಎಂಬ ಗಾದೆ ನಗರಪಾಲಿಕೆಯ ಅಧಿಕಾರಿಗಳಿಗೆ ಅಕ್ಷರಶಃ ಅನ್ವಯಿಸುತ್ತದೆ. ಏಕೆಂದರೆ, ಉದ್ಯಾನವನ ನಿರ್ಮಾಣಕ್ಕೂ ಮುಂಚಿತವಾಗಿ ವ್ಯಾಯಾಮ ಪರಿಕರಗಳನ್ನು ಅಳವಡಿಸಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ.

ಇದು ನಗರಪಾಲಿಕೆಯ ವಲಯ ಕಚೇರಿ ಇಂಜಿನಿಯರುಗಳ ಬುದ್ಧಿವತಿಂತಿಕೆಯ ಪ್ರದರ್ಶನ ಎಂದೇ ಹೇಳಬಹುದು. ಉದ್ಯಾನವನ ನಿರ್ಮಾಣವಾಗಿ ವರ್ಷಾನುಗಟ್ಟಲೆ ಕಾದರೂ ವ್ಯಾಯಾಮ ಪರಿಕರಗಳನ್ನು ಅಳವಡಿಸಲು ಜನರನ್ನು ಕಾಯಿಸುವ ಅಧಿಕಾರಿಗಳು ಇಲ್ಲಿ ಮಾತ್ರ ಹಾಳುಬಿದ್ದ ಜಾಗದಲ್ಲಿ ಪರಿಕರಗಳನ್ನು ಅಳವಡಿಸಿ ಅವುಗಳನ್ನು ತುಕ್ಕು ಹಿಡಿಸುತ್ತಿದ್ದಾರೆ.

ನಾವೀಗ ಹೇಳ ಹೊರಟಿರುವುದು ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿ ಇರುವ ಅಕ್ಕನ ಬಳಗ ಶಾಲೆ ಎದುರಿಗಿರುವ ಉದ್ಯಾನವನದ ಕಥೆ. ಆ ಜಾಗದಲ್ಲಿ ಈ ಹಿಂದೆ ವಲಯ ಕಚೇರಿ-೧ ಕಾರ್ಯ ನಿರ್ವಹಿಸುತ್ತಿತ್ತು.

ನಂತರ ಅಂದಿನ ನಗರಪಾಲಿಕೆ ಸದಸ್ಯರಾಗಿದ್ದ ಬಿ.ವಿ.ಮಂಜುನಾಥ್ ಅವರ ಆಸಕ್ತಿಯಿಂದಾಗಿ ಖಾಲಿ ಇದ್ದ ನಗರಪಾಲಿಕೆ ನಿವೇಶನದಲ್ಲಿ ಹೊಸದಾಗಿ ವಲಯ ಕಚೇರಿ ನಿರ್ಮಾಣವಾಯಿತು. ನಂತರ ಮೂರು ವರ್ಷಗಳ ಹಿಂದೆ ಅಲ್ಲಿದ್ದ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಈ ಮೊದಲು ಉದ್ಯಾನವನಕ್ಕೆಂದು ಮೀಸಲಾಗಿದ್ದ ಜಾಗದಲ್ಲಿ ಕಚೇರಿ ಕಟ್ಟಡ ಕಟ್ಟಿದ್ದರಿಂದ ಅಧಿಕಾರಿಗಳು ಅಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮುಂದಾದರು. ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣಕ್ಕೆ ತೀರ್ಮಾನಿಸಿ ಟೆಂಡರ್ ನೀಡಲಾಯಿತು. ಮೊದಮೊದಲು ಉದ್ಯಾನವನ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯಿತಾದರೂ, ನಂತರ ಅಲ್ಲಿನ ಕಾಮಗಾರಿ ನಿಂತೇ ಹೋಯಿತು. ಇದೀಗ ಅದು ಪಾಳುಬಿದ್ದ ಜಾಗವಾಗಿದೆ. ಜನರು ಅಲ್ಲಿ ಬೇಡದ ವಸ್ತುಗಳು ಹಾಗೂ ಕಸವನ್ನು ತಂದು ಸುರಿಯುತ್ತಿದ್ದಾರೆ.

ಇಷ್ಟಲ್ಲಾ ಆದರೂ ಅಧಿಕಾರಿಗಳು ಮಾತ್ರ ಅತ್ತ ತಿರುಗಿಯೂ ನೋಡಿಲ್ಲ. ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಹಾಳು ಬಿದ್ದ ಜಾಗದ ಸುತ್ತಲೂ ಇರುವ ಮನೆಯವರು ದಿನಬೆಳಗಾದರೆ, ಕಸ ಸುರಿಯುವವರನ್ನು ಎಚ್ಚರಿಸುವುದನ್ನೇ ಕಾಯಕ ಮಾಡಿಕೊಂಡು ಸುಸ್ತಾಗಿದ್ದಾರೆ. ಇದು ಒಂದೆಡೆಯಾದಲ್ಲಿ ಉದ್ಯಾನವನ ನಿರ್ಮಾಣ ಮಾಡದೆ ಅಲ್ಲಿ ವ್ಯಾಯಾಮ ಪರಿಕರಗಳನ್ನು ತಂದು ಅಳವಡಿಸಿದ್ದಾರೆ. ಇದು ನಿಜಕ್ಕೂ ನಗೆಪಾಟಲಿನ ವಿಚಾರ. ಓಡಾಡಲೂ ಆಗದ ಸ್ಥಳದಲ್ಲಿ ವ್ಯಾಯಾಮ ಪರಿಕರ ಗಳನ್ನು ಅಳವಡಿಸಿದಲ್ಲಿ ಜನರು ಅಲ್ಲಿಗೆ ಹೋಗಿ ವ್ಯಾಯಾಮ ಮಾಡುವುದುಂಟೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಈಗಲಾದರೂ ನಗರಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಜನರ ತೆರಿಗೆ ಹಣವನ್ನು ಹೇಗೆಂದರೆ ಹಾಗೆ ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಮನೋಭಾವವನ್ನು ಬಿಡಬೇಕಿದೆ. ಆದಷ್ಟು ಶೀಘ್ರವಾಗಿ ಉದ್ಯಾನವನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

” ಕೆಲ ತಾಂತ್ರಿಕ ಕಾರಣಗಳಿಂದಾಗಿ ಉದ್ಯಾನವನ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಆದಷ್ಟು ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು. ಅಲ್ಲಿಯವರೆಗೆ ವ್ಯಾಯಾಮ ಪರಿಕರಗಳು ಹಾಳಾಗದಂತೆ ಕ್ರಮ ವಹಿಸಲಾಗುವುದು.”

-ಎಸ್.ಎನ್.ಚೇತನ, ಅಭಿವೃದ್ಧಿ ಅಧಿಕಾರಿ ವಲಯ ಕಚೇರಿ ೧

 

 

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

7 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

8 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

8 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

8 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

8 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

13 hours ago