ಬೆಂಗಳೂರು : ಹಿಂದಿನ ಸರ್ಕಾರದಲ್ಲಿ ಗುತ್ತಿಗೆ ವ್ಯವಹಾರಗಳಲ್ಲಿ ಏನೆಲ್ಲಾ ಅವ್ಯವಹಾರಗಳಾಗಿವೆ, ಯಾವ ರೀತಿ ತಪ್ಪು ದಾರಿಗೆಳೆಯಲಾಗಿದೆ ಎಂಬ ಮಾಹಿತಿ ಮತ್ತು ದಾಖಲೆಗಳನ್ನು ಸ್ವತಂತ್ರ್ಯ ದಿನಾಚರಣೆಯ ಬಳಿಕ ಬಿಡುಗಡೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ವಿಷಯದಲ್ಲಿ ನನಗೆ ವಿಷಾದವಿದೆ. ಅವರನ್ನು ಯಾವ ರೀತಿ ತಪ್ಪು ದಾರಿಗೆಳೆಯಲಾಗಿದೆ, ದುರುಪಯೋಗ ಪಡಿಸಿಕೊಳ್ಳಲಾಗಿದೆ, ಯಾವ ರೀತಿ ಅವರಿಂದ ಹಣ ಸಂಗ್ರಹಿಸಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದರು.
ಕಳೆದ ಎರಡು ದಿನಗಳ ಹಿಂದೆಯೇ ತಾವು ಈ ವಿಚಾರ ಕುರಿತು ಮಾತನಾಡಬೇಕಿತ್ತು. ಬಿಬಿಎಂಪಿಯಲ್ಲಿ ಬೆಂಕಿ ಅನಾಹುತವಾದ್ದರಿಂದ ಆ ಸಂದರ್ಭ ಬೇಡ ಎಂದು ಸುಮ್ಮನಾಗಿದ್ದೆ. ಇಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಭೆ ಇದೆ. ಹೀಗಾಗಿ ಈ ದಿನವೂ ಮಾತನಾಡುವುದಿಲ್ಲ. ಸ್ವತಂತ್ರ್ಯ ದಿನಾಚರಣೆ ಬಳಿಕ ಮಾತನಾಡುತ್ತೇನೆ. ಆ ವೇಳೆ ಆಘಾತಕಾರಿ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.
ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಅಶ್ವತ್ಥ ನಾರಾಯಣ ಸಾಹೇಬ್ರು ನವರಂಗಿ ನಾರಾಯಣ, ಕಳ್ಳರನ್ನು ರಕ್ಷಣೆ ಮಾಡುವ ವಿಚಾರದಲ್ಲಿ ಅವರಿಗೆ ಡಾಕ್ಟರೇಟ್ ನೀಡಬೇಕು, ರಾಮನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದು ಕಸ ಗುಡಿಸುತ್ತೇನೆ ಎಂದಿದ್ದರು. ಆದರೆ ಕೊನೆಗೆ ಅವರ ಪಕ್ಷವನ್ನೇ ಕ್ಲೀನ್ ಮಾಡಿ ಹೋದರು. ಪಾಪ ಆ ಮೆಂಟಲ್ ಟೆನ್ಶನ್‍ನಲ್ಲಿ ಅವರಿದ್ದಾರೆ ಎಂದು ಲೇವಡಿ ಮಾಡಿದರು.
ಬೆಂಗಳೂರು ನಗರದಲ್ಲಿ ಅಶ್ವತ್ಥ ನಾರಾಯಣ ಈ ಹಿಂದೆ ಸಚಿವರಾಗಿ ನಿಭಾಯಿಸುತ್ತಿದ್ದ ಎರಡು ಇಲಾಖೆಗಳಲ್ಲಿ ಏನೇನು ಮಾಡಿದ್ದಾರೆ ಎಂಬುದನ್ನು ನಾವಿನ್ನೂ ಬಿಚ್ಚಿಲ್ಲ. ಸಮಯ ಬರುತ್ತದೆ. ಯಾರನ್ನು ಎತ್ತಿ ಕಟ್ಟುತ್ತಿದ್ದಾರೆ, ಏನೆಲ್ಲಾ ಸಂಚು ಮಾಡುತ್ತಿದ್ದಾರೆ, ಗುತ್ತಿಗೆದಾರರನ್ನು ಹೇಗೆಲ್ಲಾ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದರು.
ನೈಜವಾಗಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ನ್ಯಾಯ ಸಿಗಲಿದೆ. ಗುತ್ತಿಗೆ ಕಾಮಗಾರಿಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ನಾವು ಈ ಮೊದಲು ಹೇಳಿದ್ದೆವು. ಅದರಂತೆ ನಮ್ಮ ಸರ್ಕಾರ ತನಿಖೆ ಮಾಡಿಸುತ್ತದೆ. ಇದಕ್ಕಾಗಿ ಏನೇನು ಆಟವಾಡುತ್ತಿದ್ದಾರೆ, ಎಲ್ಲೆಲ್ಲಿ ಹೋಗುತ್ತಿದ್ದಾರೆ, ಯಾವೆಲ್ಲಾ ಅಭಿಯಾನ ಮಾಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ ಎಂದು ಹೇಳಿದರು.
ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ತನ್ನ ವಿರುದ್ಧ ಆರೋಪ ಮಾಡಿಸಲಾಗಿದೆ. ನಾನು ಈವರೆಗೂ ಯಾವುದೇ ಕಾಮಗಾರಿಗಳನ್ನು ಗುತ್ತಿಗೆ ನೀಡಿಲ್ಲ. ಈ ಹಿಂದೆ ನಡೆದಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಗುತ್ತಿಗೆದಾರರು ತಮ್ಮನ್ನು ಭೇಟಿ ಮಾಡಿದ್ದರು. ಅವರು ಕೆಲಸ ಮಾಡಿದ್ದರೆ ಬಿಲ್ ಪಾವತಿ ಮಾಡಲೇಬೇಕಾದ ಬದ್ಧತೆ ಮತ್ತು ಜವಾಬ್ದಾರಿ ಸರ್ಕಾರಕ್ಕಿದೆ.
ಆದರೆ ಅದಕ್ಕೂ ಮೊದಲು ನೈಜತೆಯ ತನಿಖೆ ಆಗಬೇಕು. ಈ ಹಂತದಲ್ಲಿ ತೊಂದರೆಯಾಗುತ್ತಿರುವುದಕ್ಕೆ ಗುತ್ತಿಗೆದಾರರಿಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಕಮಿಷನ್ ಪಡೆದಿಲ್ಲ ಎಂದಾದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲು ಭಯವೇಕೆ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ಪಾಪ ಅವರೂ ಕೂಡ ಮೆಂಟಲ್ ಟೆನ್ಶನ್‍ನಲ್ಲಿದ್ದಾರೆ. ಅವರಿಗೂ ಚಿಕಿತ್ಸೆಯ ಅಗತ್ಯವಿದೆ, ಕೊಡೋಣ ಎಂದರು.
ಮೈಸೂರು: ನಗರದ ಪ್ರತಿಷ್ಠಿತ ಮೈಸೂರು ರೇಸ್ ಕ್ಲಬ್ ಸದಸ್ಯರಾಗಿ ಗೀತಿಕಾ ಬಸಪ್ಪ (152 ಮತ), ಡಾ.ಕೆ.ರವಿ (147), ಕಲೆಂಗಡ ಮಂದಣ್ಣ…
ಬೆಂಗಳೂರು : ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಯಾಣವು ಡಿಜಿಟಲ್ ರೂಪಾಂತರದ ಹೊಸ್ತಿಲಲ್ಲಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು…
ಟೆಹ್ರಾನ್ : ಅಮೆರಿಕದೊಂದಿಗೆ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ವಿದೇಶಾಂಗ…
ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯದಿದ್ದರೆ ಇರಾನ್‌ನ ಎಲ್ಲ ತೈಲ ಬಾವಿಗಳು ಮತ್ತು ಖಾರ್ಗ್ ದ್ವೀಪಗಳನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ…
ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…
ಬೈಲಕುಪ್ಪೆ : ನಿನ್ನೆ ರಾತ್ರಿ ನಡೆದ ಹಿಟ್ ಅಂಡ್ ರನ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ…