BREAKING NEWS

ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಕಲೆಕ್ಷನ್ ಶೇ. 13 ರಷ್ಟು ಹೆಚ್ಚಳ: 1.72 ಲಕ್ಷ ಕೋಟಿ ರೂ. ಸಂಗ್ರಹ

ನವದೆಹಲಿ : ಕಳೆದ ಅಕ್ಟೋಬರ್‌ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 13 ರಷ್ಟು ಏರಿಕೆಯಾಗಿದ್ದು, ಒಟ್ಟು 1.72 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ. ಇದು ಇದುವರೆಗಿನ ಎರಡನೇ ಅತ್ಯಧಿಕ ಕಲೆಕ್ಷನ್ ಆಗಿದೆ.

ಅಕ್ಟೋಬರ್‌ನಲ್ಲಿ ಒಟ್ಟು ಜಿಎಸ್ ಟಿ ಆದಾಯ 1,72,003 ಕೋಟಿ ರೂಪಾಯಿ ಸಂಗ್ರವಾಗಿದ್ದು, ಇದು ಕಳೆದ ವರ್ಷದ ಅಕ್ಟೋಬರ್​ಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 13ರಷ್ಟು ಹೆಚ್ಚಳವಾಗಿದೆ. ದೇಶೀಯ ವಹಿವಾಟುಗಳು ಮತ್ತು ಸೇವೆಗಳ ಆಮದು ಏರಿಕೆಯು ಜೆಎಸ್ ಟಿ ಆದಾಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಅಕ್ಟೋಬರ್​ನಲ್ಲಿ ಸಂಗ್ರಹವಾಗಿರುವ 1.72 ಲಕ್ಷ ಕೋಟಿ ರೂ. ಜಿಎಸ್​ಟಿಯಲ್ಲಿ, ಸೆಂಟ್ರಲ್ ಜಿಎಸ್​ಟಿ 30,062 ಕೋಟಿ ರೂ, ಸ್ಟೇಟ್ ಜಿಎಸ್​ಟಿ 38,171 ಕೋಟಿ ರೂ, ಐಜಿಎಸ್​ಟಿ 91,315 ಕೋಟಿ ರೂ, ಹಾಗೂ 12,456 ಕೋಟಿ ರೂ. ಸೆಸ್ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಐಜಿಎಸ್​ಟಿಯನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಲಾಗಿದೆ. ಕೇಂದ್ರಕ್ಕೆ 42,873 ಕೋಟಿ ರೂ ಸಿಕ್ಕಿದೆ. ರಾಜ್ಯಕ್ಕೆ 36,614 ಕೋಟಿ ರೂ ಪಾಲು ಬಂದಿದೆ. ಇದರೊಂದಿಗೆ ಅಕ್ಟೋಬರ್ ತಿಂಗಳ ಜಿಎಸ್​ಟಿ ಸಂಗ್ರಹದಲ್ಲಿ ಕೇಂದ್ರಕ್ಕೆ 72,934 ಕೋಟಿ ರೂ, ರಾಜ್ಯ ಸರ್ಕಾರಗಳಿಗೆ 74,785 ಕೋಟಿ ರೂ ಸಿಕ್ಕಂತಾಗಿದೆ.

andolanait

Recent Posts

ಅಯ್ಯಪ್ಪ ಭಕ್ತರಿಗೆ ಅನುಕೂಲ: ವಿಮಾನದ ಕ್ಯಾಬಿನ್‌ನಲ್ಲಿ ಇರುಮುಡಿ ಸಾಗಿಸಲು ಅನುಮತಿ!

ನವದೆಹಲಿ: ಪವಿತ್ರ ಇರುಮುಡಿ ಕೆಟ್ಟನ್ನು ವಿಮಾನದ ಕ್ಯಾಬಿನ್‌ನಲ್ಲಿ ಕೈಚೀಲವಾಗಿ ಕೊಂಡೊಯ್ಯುವ ಅನುಮತಿಯನ್ನು ಸತತ ಮೂರನೇ ವರ್ಷವೂ ಮುಂದುವರಿಸಲಾಗಿದೆ ಎಂದು ನಾಗರಿಕ ವಿಮಾನಯಾನ…

10 hours ago

ನನ್ನ ಸಲಹೆ ಪಾಲಿಸಿ ಹಣ ಉಳಿಸಿದ್ದೇವೆ ಎನ್ನುತ್ತಿದ್ದಾರೆ ಜನ: ಚಿನ್ನದ ಬೆಲೆ ಬಗ್ಗೆ ಪ್ರಧಾನಿ ಮೋದಿ ಮಾತು

ನವದೆಹಲಿ: ಚಿನ್ನದ ಬೆಲೆ ಕುಸಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಅಗತ್ಯವಿಲ್ಲದಿದ್ದರೆ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು…

10 hours ago

ಮಹಾತ್ಮರಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಬೇಕು: ಪ್ರತಾಪ್‌ ಸಿಂಹ

ಮೈಸೂರು: ರವಿ ಹಂಜ್‌ ಅವರ ‘ಬಸವ ಮಂಟಪ’ ಪುಸ್ತಕದ ವಿವಾದಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ…

10 hours ago

ಗುಜರಾತ್‌ನಲ್ಲಿ ಕಾರು–ಲಾರಿ ಡಿಕ್ಕಿ; ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಾವು!

ಗುಜರಾತ್‌: ಇಲ್ಲಿನ ಕಚ್‌ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ…

10 hours ago

ಹನೂರು ೭ನೇ ವಾರ್ಡ್‌ನಲ್ಲಿ ಮೂಲಸೌಲಭ್ಯ ಮರೀಚಿಕೆ

ಮಹಾದೇಶ್ ಎಂ. ಗೌಡ ಸಮರ್ಪಕ ರಸ್ತೆಯಿಲ್ಲ, ಚರಂಡಿಯಿಲ್ಲ, ಬೀದಿ ದೀಪಗಳಿಲ್ಲದೆ ನಿವಾಸಿಗಳ ಪರದಾಟ ಹನೂರು: ಮನೆಗಳಿಂದ ಬರುವ ಕೊಳಚೆ ನೀರು…

13 hours ago

ಸರ್ಕಾರಿ ದಸರಾ ‘ನಮ್ಮ ದಸರಾ’ ಆಗಲಿ

ಶುಭಾ ಸಂಜಯ್ ಅರಸ್ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕಿ, ಮೈಸೂರು ಸಾಹಿತ್ಯ ಸಂಭ್ರಮ, ಮೈಸೂರು ಬುಕ್ ಕ್ಲಬ್ಸ್ ಚಾರಿಟೇಬಲ್ ಟ್ರಸ್ಟ್ ನವರಾತ್ರಿಯ…

14 hours ago