BREAKING NEWS

ವಿದ್ಯುತ್ ತಂತಿ ತುಳಿದು‌ ಅಪ್ಪ, ಮಗ ಸೇರಿ ಮೂವರ ಸಾವು

ತಿ. ನರಸೀಪುರದಲ್ಲಿ ದಾರುಣ ಘಟನೆಯಿಂದ ಅನಾಥವಾಯಿತು ಕುಟುಂಬ

ತಿ. ನರಸೀಪುರ: ತಾಲೂಕಿನ ನಿಲ್ಲಸೋಗೆ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಂದೆ ಮಗ ಸೇರಿ ಮೂವರು ರೈತರು ಮೃತಪಟ್ಟ ದಾರುಣ ಘಟನೆ ಭಾನುವಾರ ನಡೆದಿದೆ.

ರಾಜೇಗೌಡ ಅಲಿಯಾಸ್ ರಾಚಯ್ಯ (60), ಮಗ ಹರೀಶ (30), ಮಹದೇವಸ್ವಾಮಿ( 40) ಮೃತಪಟ್ಟವರು. ರಾಜೇಗೌಡರ ಜಮೀನಿನಲ್ಲಿ ಕ್ರಿಮಿನಾಶಕ ಹೊಡೆಯಲು ಹೋದಾಗ ಈ ಘಟನೆ ನಡೆದಿದೆ. ಬೆಳಗ್ಗೆ 7.30ಕ್ಕೆ ಮೂವರು ಹೊಲಕ್ಕೆ ಔಷಧ ಹೊಡೆಯಲು ಹೋಗಿದ್ದರು. ಕೆಳಭಾಗದಿಂದ ಔಷಧ ಹೊಡೆದುಕೊಂಡು ಗದ್ದೆಯ ಮೇಲ್ಭಾಗಕ್ಕೆ ಹೋದಾಗ ರಾಚಯ್ಯ ಅವರು ಪಾತಿ ಮೇಲೆ ತುಂಡಾಗಿ ಬಿದ್ದ ತಂತಿಯನ್ನು ತುಳಿದಿದ್ದರು. ಅವರು ಕಿರುಚಿಕೊಂಡಾಗ ಸಹಾಯಕ್ಕೆ ಧಾವಿಸಿದ ಮಗ ಹರೀಶ ಅವರೂ ವಿದ್ಯುತ್ ತಗುಲಿ ಮೃತಪಟ್ಟರು. ಇದನ್ನು ಗಮನಿಸದೇ  ಸಹಾಯಕ್ಕೆ ಹೋದ ಮಹದೇವಸ್ವಾಮಿ ಅವರೂ ಸ್ಥಳದಲ್ಲೇ ಮೃತಪಟ್ಟರು. ಹರೀಶ ಅವರು ರಾಚಯ್ಯ (60) ಅವರ ಒಬ್ಬನೇ ಮಗನಾಗಿದ್ದು ಆಧಾರ ಸ್ತಂಭಗಳನ್ನು ಕಳೆದುಕೊಂಡು ಕುಟುಂಬ ಅನಾಥವಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಶಾಸಕ ಅಶ್ವಿನ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಚೆಸ್ಕಾಂ ಅಧಿಕಾರಿಗಳು ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಉಸ್ತುವಾರಿ ಸಚಿವರ ಜತೆ ಮಾತನಾಡಿ ಹೆಚ್ಚಿನ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

andolana

Recent Posts

ಹನೂರು| ಗೋಪಿನಾಥಂ ಸಫಾರಿಯಲ್ಲಿ ಪ್ರವಾಸಿಗರಿಗೆ ದರ್ಶನ ಕೊಟ್ಟ ಹುಲಿರಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹಲವು ದಿನಗಳ ನಂತರ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸಫಾರಿಯಲ್ಲಿ…

52 mins ago

ಇರಾನ್ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಇಸ್ರೇಲ್

ಟೆಹರಾನ್‌: ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗೆ ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಛಿದ್ರಗೊಂಡ ಆಕಾಶದೆತ್ತರದ ಕಟ್ಟಡಗಳು..! ಟೆಹರಾನ್‌ನಲ್ಲಿನ ಬೃಹತ್ ಕಟ್ಟಡಗಳು…

2 hours ago

ಅಮೆರಿಕಾದ ತದ್ವಿರುದ್ಧ ನಿಲುವಿಗೆ ಸಿಎಂ ಸಿದ್ದರಾಮಯ್ಯ ಖಂಡನೆ

ಶಿವಮೊಗ್ಗ: ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ತೊಂದರೆಯಾಗದಂತೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ…

2 hours ago

ಖಮೇನಿ ಹತ್ಯೆ ಖಂಡಿಸಿ ಭಾರತದಲ್ಲೂ ಪ್ರತಿಭಟನೆ

ಜಮ್ಮು-ಕಾಶ್ಮೀರ: ಇಸ್ರೇಲ್‌ ಮತ್ತು ಅಮೇರಿಕಾ ಇರಾನ್‌ ಮೇಲೆ ನಡೆಸಿದ ದಾಳಿಯಲ್ಲಿ ರಾಷ್ಟ್ರದ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ.…

2 hours ago

ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆ: ಏನದು ಗೊತ್ತಾ.?

ನವದೆಹಲಿ: ಇರಾನ್-ಇಸ್ರೇಲ್-ಅಮೆರಿಕ ಯುದ್ಧ ನಡುವೆಯೇ ಭಾರತದಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಕಂಡುಬಂದಿದೆ. ತೈಲ ಕಂಪನಿಗಳು ವಾಣಿಜ್ಯ…

2 hours ago

ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸ್ಫೋಟ: ಮಹಿಳೆಯರು ಸೇರಿ 15 ಕಾರ್ಮಿಕರು ದುರ್ಮರಣ

ನಾಗ್ಪುರ: ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ ಮಹಿಳೆಯರು ಸೇರಿದಂತೆ 15 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪರ ಜಿಲ್ಲೆಯಲ್ಲಿ…

3 hours ago