ನಂಜನಗೂಡು: ಸಂಪ್ರದಾಯದಂತೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದಂತಹ ಅಂಧಕಾಸುರನ ಸಂಹಾರದಲ್ಲಿ ದಸಂಸ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿತ್ತು. ಆಚರಣೆ ಅಡ್ಡಿಪಡಿಸಿದವರನ್ನು ಬಂಧಿಸಿ ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೂರಾರು ಶ್ರೀಕಂಠೇಶ್ವರ ಭಕ್ತ ಮಂಡಳಿ ಆಹೋರಾತ್ರಿ ಧರಣಿ ನಡೆಸಿದರು.
ನಗರದ ರಾಕ್ಷಸ ಮಂಟಪ ವೃತ್ತವೆಂದೇ ಹೆಸರುವಾಸಿಯಾಗಿರುವ ಸ್ಥಳದಲ್ಲಿ ನೂರಾರು ವರದಷಗಳಿಂದ ನಡೆದುಕೊಂಡು ಬಂದಿದ್ದಂತ ಅಂಧಾಕಾಸುರನ ಸಂಹಾರ ಸಾಂಪ್ರಧಾಯಿಕ ಆಚರಣೆಯನ್ನು ನಿಲ್ಲಿಸುವಂತೆ ದಸಂಸ ಕಾರ್ಯಕರ್ತರು ಅಡ್ಡಿಪಡಿಸಿದ್ದಲದೇ, ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ನೀರು ಎರಚುವ ಕೆಲಸ ಮಾಡಿದ್ದರು.
ಈ ವೇಳೆ ಸ್ಥಳದಲ್ಲಿದ್ದ ನೂರಾರು ಭಕ್ತುರು ಹಾಗೂ ದಸಂಸ ಕಾರ್ಯಕರ್ತರ ನಡುವೆ ಮಾತನಿ ಜಕಮಕಿ ಉಂಟಾಯಿತು. ಬಳಿಕ ಭಕ್ತರು ಹಾಗೂ ಪೊಲೀಸರ ಭದ್ರತೆಯ ನಡುವೆ ಸಂಪ್ರದಾಯಿಕ ಆಚರಣೆ ನೆರವೇರಿತು. ಈ ಬಳಿಕ ಮಾತಿನ ಚಕಮಕಿ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಸ್ಥಳದಲ್ಲಿದ್ದ ಪೊಲೀಸರು ಲಘು ಲಾಟಿಪ್ರಹಾರ ನಡೆಸಿದರು.
ಇದನ್ನು ಖಂಡಿಸಿದ ಭಕ್ತಮಂಡಳಿ, ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ನಡೆದ ಅಪಚಾರ ಹಾಗೂ ಭಕ್ತರ ಮೇಲೆ ನಡೆದ ಲಾಟಿಪ್ರಹಾರವನ್ನು ಖಂಡಿಸಿ ನಗರದ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಳಿ ಸ್ಥಳದಲ್ಲೇ ಧರಣಿ ಕೂತು, ಈ ಕೂಡಲೇ ದಸಂಸ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿದರು.
ಧರಣಿ ನಿರತರಾಗಿದ್ದ ಭಕ್ತ ಮಂಡಳಿ, ಸ್ಥಳಿಯ ಶಾಸಕರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ಮಧ್ಯರಾತ್ರಿ ಸುಮಾರು 2ಗಂಟೆ ವರೆಗೂ ನಡೆದ ಪ್ರತಿಭಟನೆಯ ಬಳಿಕ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಗದೀಶ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಭಕ್ತಮಂಡಳಿಯವರು ದೂರು ಸಲ್ಲಿಸಿದರು.
ಇಂದು ಸಂಜೆ 6ಗಂಟೆ ಒಳಗಾಗಿ ಆರೋಪಿಗಳನ್ನು ಬಂಧಿಸಿದಿದ್ದಲ್ಲಿ ಮತ್ತೆ ಇಂದು ಸಂಜೆ ಧರಣಿ ಮುಂದುವರೆಸುವಂತೆ ಶ್ರೀಕಂಠೇಶ್ವರ ಸ್ವಾಮಿ ಭಕ್ತಮಂಡಳಿ ಪೊಲೀಸರಿಗೆ ಎಚ್ಚರಿಕೆ ನೀಡಿದರು.
ನಮ್ಮ ಪೂರ್ವಿಕರಿಗೆ ಅವಮಾನವಾಗಲು ಬಿಡುವುದಿಲ್ಲ – ದಸಂಸ: ಶತಶತಮಾನಗಳಿಂದ ದಲಿತರ ಮೇಲೆ ನಡೆದುಕೊಂಡು ಬಂದಿರುವ ಶೋಷಣೆಗಳನ್ನು ಮುಂದುವರೆಸಲು ನಾವು ಬಿಡುವುದಿಲ್ಲ ಎಂದು ದಸಂಸ ಕಾರ್ಯಕರ್ತರು ವಾಗ್ದಾಳಿ ನಡೆಸಿದರು. ಅಂಧಕಾಸುರನಾಗಲಿ, ಮಹಿಷಾಸುರನಾಗಲಿ ಇವರೆಲ್ಲಾ ನಮ್ಮ ಪೂರ್ವಿಕರು. ಅವರು ರಾಕ್ಷಸರಲ್ಲ. ಈ ರೀತಿಯ ಆಚರಣೆಗಳ ಮೂಲಕ ನಮ್ಮ ಪೂರ್ವಿಕರಿಗೆ ಅಪಮಾನ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.
ಹನೂರು: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಎರಡನೇ ದಿನವಾದ ಇಂದು ಹನೂರು…
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಸಂಪೂರ್ಣ…
ಮಂಜು ಕೋಟೆ ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಕೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಾಡಂಚಿನಲ್ಲಿ ಕಾಡು ಪ್ರಾಣಿಗಳು…
ಮುಂದಿನ ಭಾನುವಾರದಿಂದ ನವರಾತ್ರಿ ಆರಂಭ. ಐತಿಹಾಸಿಕ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ…
ವಸಂತಕುಮಾರ್ ಮೈಸೂರು ಮಠ ಮೈಸೂರಿನ ಸ್ವಚ್ಛತೆ ಜವಾಬ್ದಾರಿ ಪೌರಕಾರ್ಮಿಕರ ಹೆಗಲ ಮೇಲಿದೆ ಇದು ನಮ್ಮ ಕಸ, ಇದರ ನಿರ್ವಹಣೆ ನಮ್ಮ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಪ್ರಯೋಗಕೆ ಸಜ್ಜಾಗುತ್ತಿರುವ ರಾಜಕೀಯ ಪಕ್ಷಗಳು ಕರ್ನಾಟಕದ ರಾಜಕಾರಣ ಎಷ್ಟು ಆತಂಕದ ಮಟ್ಟಕ್ಕೆ…