BREAKING NEWS

ಚೆಕ್‌ಬೌನ್ಸ್‌ ಪ್ರಕರಣ: ಮಧು ಬಂಗಾರಪ್ಪಗೆ 6.96 ಕೋಟಿ ದಂಡ

ಬೆಂಗಳೂರು: ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಅವರಿಗೆ 6,96,70,000 ಕೋಟಿ ರೂ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ.

ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆ ನೀಡಿದ್ದ ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಸಚಿವರಿಗೆ 6.96 ಕೋಟಿ ರೂಗಳ ಡಂದವನ್ನು ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ಆಗದೇ ಹೋದರೆ 6 ತಿಂಗಳ ಸೆರೆವಾಸ ಅನುಭವಿಸುವಂತೆ ಕೋರ್ಟ್‌ ಆದೇಶ ನೀಡಿದೆ.

ಆಕಾಶ್‌ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಇವರು, 2011ರಲ್ಲಿ ಚೆಕ್‌ ನೀಡಿದ್ದರು. 50 ಲಕ್ಷ ರೂ ಪಾವತಿಸಿ ಉಳಿದ ಮೊತ್ತ ಪಾವತಿಸಿರಲಿಲ್ಲ. ಖಾತೆಯಲ್ಲಿ ಹಣ ಇಲ್ಲದ ಕಾರಣ ಚೆಕ್‌ಬೌನ್ಸ್‌ ಆಗಿತ್ತು. ಈ ಹಿನ್ನಲೆ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆ 6.60 ಕೋಟಿ ರೂಗಳ ಪರಿಹಾರ ಕೋರಿ ಕೋರ್ಟ್‌ ಮೊರೆ ಹೋಗಿತ್ತು.

ನ್ಯಾಯಾಧೀಶರಾದ ಜೆ.ಪ್ರೀತ್‌ ಅವರು ಸಚಿವರಿಗೆ ದಂಡ ವಿಧಿಸಿ ಆದೇಶ ಹೋರಡಿಸಿದ್ದಾರೆ. 1, ಕೋಟಿ ರೂಗಳಲ್ಲಿ 6,96,70,000 ರೂಗಳನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕು ಮತ್ತು ರೂ. 10,000 ಗಳನ್ನು ಸರ್ಕಾರಕ್ಕೆ ದಂಡವಾಗಿ ಕಟ್ಟಬೇಕು ಎಂದು ಆದೇಶ ನೀಡಿದಾರೆ.
ಇದರ ಬದಲಿಗೆ ಮುಧು ಬಂಗಾರಪ್ಪ ಅವರು ಕೋರ್ಟ್‌ ಗೆ ಮುಚ್ಚಳಿಕೆ ನೀಡಿದ್ದು, ಇದನ್ನು ಒಪ್ಪಲು ಕೊರ್ಟ್‌ ನಿರಾಕರಿಸಿದೆ. ಈ ಹಿಂದೆಯೂ ಕೋರ್ಟ್‌ ನೀಡಿದ್ದ ಮುಚ್ಚಳಿಕೆಯನ್ನು ಸಚಿವರು ಪಾಲಿಸಿರಿಲಿಲ್ಲ ಹಾಗಾಗಿ ಕೋರ್ಟ್‌ ಅವರಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

andolanait

Recent Posts

ಅಪ್ಪಟ ಸಮಾಜವಾದಿ, ಗುಡಿಸಲೂ ಇರದಿದ್ದ ಜೋಗಿ ಕಿಶನ್ ಪಟ್ನಾಯಕ್

ಪ್ರೊ.ರವಿವರ್ಮಕುಮಾರ್, ಸಮಾಜವಾದಿ ಚಿಂತಕರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ.…

4 hours ago

ಶೀಘ್ರವೇ ಆಟೋ ಬಾಡಿಗೆ ಪರಿಷ್ಕೃತ ದರ ಪ್ರಕಟ

ನವೀನ್ ಡಿಸೋಜ ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ…

4 hours ago

ಜೇನು ಕೃಷಿಗೆ ಸರ್ಕಾರದ ಬಲ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದೀಗ ರೈತರು…

4 hours ago

ಜು.20ಕ್ಕೆ ವಿಧಾನಪರಿಷತ್ ಐದು ಸ್ಥಾನ ತೆರವು

ಕೆ.ಬಿ.ರಮೇಶನಾಯಕ ಮೈಸೂರು: ರಾಜ್ಯದಲ್ಲಿ ಜುಲೈ ೨೦ಕ್ಕೆ ತೆರವಾಗಲಿರುವ ವಿಧಾನಪರಿಷತ್‌ನ ಐದು ನಾಮನಿರ್ದೇಶಿತ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡುವುದಕ್ಕೆ ದಿನಗಣನೆ ಶುರುವಾಗಿದೆ.…

4 hours ago

ಮೈಸೂರಿನ 2 ಹೋಟೆಲ್‌, ಚಾ.ನಗರ ಕೋರ್ಟ್‌ಗೆ ಬಾಂಬ್‌ ಬೆದರಿಕೆ ; ಒಬ್ಬ ವ್ಯಕ್ತಿಯಿಂದಲೇ ಇ-ಮೇಲ್

ಮೈಸೂರು‌ : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…

13 hours ago