BREAKING NEWS

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿದ ಖಾಸಗಿ ಬಸ್​ಗಳು!

ಬೆಂಗಳೂರು: ನಗರದ ವೀರಭದ್ರ ನಗರದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು, ಹಲವು ಖಾಸಗಿ ಬಸ್ ಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ವರದಿಯಾಗಿದೆ. ವೀರಭದ್ರನಗರದ ಬಸ್ ಗಳ ಬಾಡಿ ಬಿಲ್ಡಿಂಗ್ ಮತ್ತು ವೆಲ್ಡಿಂಗ್ ಮಾಡುವ ವರ್ಕ್ ಶಾಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ಬೆಂಕಿ ವರ್ಕ್​​ಶಾಪ್​ ನಲ್ಲಿರೋ ಇತರೆ ವಾಹನಗಳಿಗೆ ಬೆಂಕಿ ವ್ಯಾಪಿಸುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಪ್ರಾಣ ಹಾನಿ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಖಾಸಗಿ ಬಸ್​ಗಳನ್ನು ನಿಲ್ಲಿಸಿದ್ದ ಜಾಗ ಇದಾಗಿತ್ತು. ನೋಡ ನೋಡುತ್ತಲೇ ಒಂದರ ನಂತರ ಮತ್ತೊಂದು ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ. ಒಳಗೆ 10 ಬಸ್ ಗಳನ್ನು ನಿಲ್ಲಿಸಲಾಗಿದೆ. ಇವು ಬೇರೆ ಬೇರೆ ಸಂಸ್ಥೆಗಳಿಗೆ ಸೇರಿರುವ ಬಸ್ ಗಳಾಗಿವೆ.

ಈ ಪೈಕಿ ಸದ್ಯ ಆರು ಬಸ್ ಗಳಿಗೆ ಬೆಂಕಿ ತಗುಲಿದೆ. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವರ್ಕ್​ಶಾಪ್​ ನಿಂದ ಜನರನ್ನು ದೂರ ಕಳುಹಿಸಲಾಗುತ್ತಿದೆ.
andolanait

Recent Posts

ಸೋನ್ ಹಿಲ್ ಬಳಿಯ ಕಸದ ರಾಶಿ ತೆರವು ಕಾರ್ಯ ಶುರು

ನವೀನ್ ಡಿಸೋಜ ಗುಡ್ಡದ ಮೇಲೆ ಅವೈಜ್ಞಾನಿಕವಾಗಿ ಸುರಿದಿದ್ದ ಕಸ ವಿಂಗಡಣೆ ಕೆಲಸ ಚುರುಕು ಮಡಿಕೇರಿ: ವಾಯು ಗುಣಮಟ್ಟದಲ್ಲಿ ದೇಶದಲ್ಲೇ ಹೆಸರಾಗಿರುವ…

1 hour ago

ಗ್ಯಾಂಗ್ರಿನ್‌ಗೆ ಬೇಡ ಭಯ; ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಭಯ

ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಾಗ ಗ್ಯಾಂಗ್ರಿನ್ ರೂಪ ಪಡೆದುಕೊಳ್ಳುತ್ತದೆ.…

1 hour ago

ನಂಜನಗೂಡಿಗೆ ಬಸ್ ಹತ್ತಿದರೆ ತಿ.ನರಸೀಪುರದ ಟಿಕೆಟ್!

ಎಸ್.ಎಸ್.ಭಟ್ ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ…

1 hour ago

ಕೋರ್ಟ್ ಮೆಟ್ಟಿಲೇರಿದ್ದ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ತೆರೆ

ಮಂಜು ಕೋಟೆ ಕೋಟೆ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಮೊಳಿಯೂರು ಆನಂದ್ ಮುಂದುವರಿಕೆಗೆ ನ್ಯಾಯಾಲಯದ ತೀರ್ಪು ಎಚ್.ಡಿ.ಕೋಟೆ: ತಾಲ್ಲೂಕು ಕುರುಬ…

1 hour ago

ಸಿಎಂ ತವರಲ್ಲಿ ಮಾರ್ಚ್‌ನಲ್ಲಿ ಅಕ್ಕ ಕೆಫೆ ಶುರು

ಕೆ.ಬಿ.ರಮೇಶನಾಯಕ ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶ ಮೈಸೂರು: ಬಡವರ ಕೈಗೆಟುಕುವ ದರದಲ್ಲಿ ಗುಣಮಟ್ಟದ ತಿಂಡಿ, ಊಟವನ್ನು…

1 hour ago