ಬೆಂಗಳೂರು: ಚುನಾವಣೆಯ ಕಾವು ಏರಿರುವ ಕರ್ನಾಟಕಕ್ಕೆ ಗುರುವಾರ ರಾತ್ರಿಯೇ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಶುಕ್ರವಾರ ಬೆಳಗ್ಗೆ ಕುಮಾರಕೃಪಾ ರಸ್ತೆಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಕುತೂಹಲಕಾರಿ ವಿದ್ಯಮಾನವೊಂದು ನಡೆಯಿತು. ಅಮಿತ್ ಶಾ ಅವರನ್ನು ಸ್ವಾಗತಿಸಲು ಯಡಿಯೂರಪ್ಪನವರು ತಮ್ಮ ನಿವಾಸದ ಅಂಗಳದಲ್ಲಿ ಹೂಗುಚ್ಛಗಳನ್ನು ಹಿಡಿದು ಕಾಯುತ್ತಾ ನಿಂತಿದ್ದರು. ಅವರ ಜೊತೆಗೆ, ಅವರ ಪುತ್ರ ವಿಜಯೇಂದ್ರ ಹಾಗೂ ಮಕ್ಕಳು ಇದ್ದರು.
ಕಾರಿನಿಂದ ಇಳಿದ ಕೂಡಲೇ ಅಮಿತ್ ಶಾ, ಯಡಿಯೂರಪ್ಪನವರ ಕಡೆಗೆ ನಗುಮೊಗ ಬೀರಿದರಾದರೂ ಕಾರು ಇಳಿಯುತ್ತಲೇ, ಯಡಿಯೂರಪ್ಪನವರಿಗೆ ನಿಮ್ಮ ಕೈಯ್ಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದರು. ಇದನ್ನು ನಿರೀಕ್ಷಸದ ಯಡಿಯೂರಪ್ಪನವರಿಗೆ ಮೊದಲಿಗೆ ಅರ್ಥವಾಗಲೇ ಇಲ್ಲ. ಅದನ್ನು ಗಮನಿಸಿದ ಶಾ, ಮತ್ತೆ ಹೂಗುಚ್ಛವನ್ನು ಅವರಿಗೆ ಕೊಡಿ, ಅವರಿಗೆ ಕೊಡಿ ಅಂತ ಕೈ ತೋರಿಸಿ ಹೇಳಿದರು. ಆಗ ಫಕ್ಕನೆ ಅರ್ಥವಾದಂತಾಗಿ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು.
ಆಗ, ವಿಜಯೇಂದ್ರ ಅವರಿಂದ ಹೂಗುಚ್ಛವನ್ನು ಸ್ವೀಕಸಿರಿದ ಶಾ, ವಿಜಯೇಂದ್ರ ಅವರ ಬೆನ್ನು ತಟ್ಟಿದರು. ಅಷ್ಟರಲ್ಲಿ ಯಡಿಯೂರಪ್ಪನವರಿಗೆ ಅವರ ಪುತ್ರಿಯರು ತಮ್ಮಲ್ಲಿದ್ದ ಹೂಗುಚ್ಛವನ್ನು ಹಸ್ತಾಂತರಿಸಿದರು. ಆನಂತರ, ಅದನ್ನು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಹಸ್ತಾಂತರಿಸಿದರು.
ರಾಜ್ಯ ರಾಜಕಾರಣದಿಂದ ಯಡಿಯೂರಪ್ಪನವರು ದೂರ ಸರಿದಿದ್ದಾರೆ. ಒಂದು ಕಡೆ, ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು, ಅತ್ತ ವಿಜಯೇಂದ್ರ ಅವರನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನದಿಂದಾಗಿಯೇ ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ. ಹೈಕಮಾಂಡ್ ಗೂ ಯಡಿಯೂರಪ್ಪನವರ ಆಶಯ ಅರ್ಥವಾಗಿದೆ. ಅದರ ಪರಿಣಾಮವಾಗಿಯೇ, ಅಮಿತ್ ಶಾ ಅವರು ಯಡಿಯೂರಪ್ಪನವರ ಕೈಲಿದ್ದ ವಿಜಯೇಂದ್ರ ಕಡೆಯಿಂದ ಹೂಗುಚ್ಛವನ್ನು ಪಡೆದರು ಎಂದು ವಿಶ್ಲೇಷಿಸಲಾಗುತ್ತಿದೆ.
ಯಡಿಯೂರಪ್ಪನವರಿಗೆ ನಿರಾಸೆಯಾದರೂ ಸಮಾಧಾನ!
ಯಡಿಯೂರಪ್ಪನವರಿಗೆ ತಮ್ಮ ಕಡೆಯಿಂದ ಅಮಿತ್ ಶಾ ಅವರು ಹೂಗುಚ್ಛ ಸ್ವೀಕರಿಸದೇ ಇದ್ದರೂ, ತಮ್ಮ ಮಗನ ಕೈಯ್ಯಿಂದ ಹೂಗುಚ್ಛವನ್ನು ಸ್ವೀಕರಿಸಿದ್ದ ನಿರಾಸೆ ಹಾಗೂ ಸಮಾಧಾನ – ಇವರೆಡನ್ನೂ ಒಟ್ಟೊಟ್ಟಿಗೇ ತಂದಿರಬಹುದು. ಮುಂದೆ ತಮ್ಮ ಮಗನ ಭವಿಷ್ಯ ಗಟ್ಟಿಯಾಗುತ್ತದೆ ಎಂಬುದೂ ಇದರಿಂದ ಅವರಿಗೆ ಖಾತ್ರಿಯಾಗಿರಬಹುದು ಎಂದು ಹೇಳಬಹುದಾಗಿದೆ. ಬಿಜೆಪಿಯಲ್ಲೇ ಇರುವ ಯಡಿಯೂರಪ್ಪನವರ ವಿರೋಧಿಗಳು ವಿಜಯೇಂದ್ರ ಅವರನ್ನು ಯಡಿಯೂರಪ್ಪನವರು ಬೆಳೆಸುತ್ತಿರುವುದನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಇದು ಹೈಕಮಾಂಡ್ ವರೆಗೆ ಹೋದರೆ ಹೇಗೆ ಎಂಬ ಆತಂಕ ಯಡಿಯೂರಪ್ಪನವರಿಗೂ ಇದ್ದಿರಬಹುದು. ಆದರೆ, ಅಮಿತ್ ಅವರು ವಿಜಯೇಂದ್ರ ಅವರಿಂದ ಹೂಗುಚ್ಛ ಪಡೆದಿರುವುದು ಹಾಗೂ ಅವರ ಬೆನ್ನು ತಟ್ಟಿರುವುದು ಒಂದು ರೀತಿಯಲ್ಲಿ ಹೈಕಮಾಂಡ್ ‘ಅಭಯ’ ಸಿಕ್ಕಂತಾಗಿದೆ ಎಂಬ ಸಮಾಧಾನ ಯಡಿಯೂರಪ್ಪನವರಿಗೆ ಬಂದಿದೆ ಎಂದು ವಿಶ್ಲೇಷಿಸಲಾಗಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…