ಮನೆ ಗುಡಿಸಿ ಒರೆಸಲು ರೋಬೊ ವಾಕ್ಯೂಮ್ ಕ್ಲೀನರ್‌ಗಳಿಂದಲೇ ಮನೆಮಾತಾಗಿರುವ ಯುರೇಕಾ ಫೋರ್ಬ್ಸ್ ಕಂಪೆನಿಯು ಇತ್ತೀಚೆಗೆ ‘ಸ್ಮಾರ್ಟ್ ಕ್ಲೀನ್ ವಿತ್ ಆಟೋ ಬಿನ್’ ಎಂಬ ನೂತನ ವಾಕ್ಯೂಮ್ ಕ್ಲೀನರನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್‌ನಲ್ಲಿ ಎರಡು ಸಾಧನಗಳಿವೆ. ಒಂದು ಕಸದಬುಟ್ಟಿಯಂತಿರುವ ದೊಡ್ಡ ಸಾಧನ. ಇದರಲ್ಲಿ ೪ ಲೀ. ಸಾಮರ್ಥ್ಯದ ಚೀಲವಿದ್ದು, ಇದರಲ್ಲಿ ಕಸ, ದೂಳು ಸಂಗ್ರಹಿಸಬಹುದಾಗಿದೆ. ಪ್ರಬಲವಾದ ಹೀರಿಕೊಳ್ಳುವ ವ್ಯವಸ್ಥೆ ಇದರಲ್ಲಿದ್ದು, ಮನೆಯ ತುಂಬಾ ಸುತ್ತಾಡಿ ಗುಡಿಸಿ ಒರೆಸುವ ಚಕ್ರಾಕಾರದ ರೋಬೊ ಎರಡನೇ ಸಾಧನ. ಅತ್ಯಾಧುನಿಕವಾದ ಲಿಡಾರ್ ೩.೦ ನೇವಿಗೇಶನ್ ತಂತ್ರಜ್ಞಾನ ಅಡಕವಾಗಿರುವ ಈ ಚಕ್ರಾಕಾರದ ರೋಬೊ ನೆಲವನ್ನು ಸ್ವಚ್ಛಗೊಳಿಸುವುದಕ್ಕಾಗಿ ಆರಂಭದಲ್ಲಿ ತಾನೇ ಮನೆಯೊಳಗೆ ಸುತ್ತಾಡಿ ನಕ್ಷೆ ರಚಿಸಿಕೊಳ್ಳುತ್ತದೆ. ಅಲ್ಲದೆ ಮರ್, ಟೈಲ್ಸ್, ಮಾರ್ಬಲ್ ಮತ್ತು ಕಾರ್ಪೆಟ್‌ಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.
ಇನ್ನು ಇದನ್ನು ಸ್ಮಾರ್ಟ್ ಲೈಫ್ ಆಪ್ ಮೂಲಕ ನಿಯಂತ್ರಿಸಬಹುದಾಗಿದೆ. ಅಮೆಜಾನ್‌ನ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ಧ್ವನಿಯಿಂದಲೇ ಇದನ್ನು ನಿಯಂತ್ರಿಸಬಹುದು.
ಈ ಯಂತ್ರವು ಮೂರು ಕೆಲಸಗಳನ್ನು ಮಾಡಲಿದ್ದು, ಗುಡಿಸುವುದು, ಗುಡಿಸಿ ಸಂಗ್ರಹಿಸಿದ ಕಸವನ್ನು ಸ್ವಯಂಚಾಲಿತವಾಗಿ ಕಸದ ಬುಟ್ಟಿಗೆ ಸೇರಿಸುವುದು ಮತ್ತು ಒದ್ದೆ ಬಟ್ಟೆಯಲ್ಲಿ ನೆಲವನ್ನು ಒರೆಸುವ ಕೆಲಸ ಮಾಡುತ್ತದೆ. ಈ ಯಂತ್ರವನ್ನು ಚಾಲನೆ ಮಾಡಿದ ತಕ್ಷಣ ಅದು ಎಲ್ಲ ಕೊಠಡಿಗಳಿಗೂ ಚಲಿಸಿ ತಾನಾಗಿಯೇ ಮ್ಯಾಪಿಂಗ್ ಮಾಡಿಕೊಳ್ಳುತ್ತದೆ.
ಮರುದಿನವೂಅದೇ ಪಥದಲ್ಲಿ ತಿರಗಾಡುತ್ತಾ ಸ್ವಚ್ಛತಾ ಕೆಲಸವನ್ನು ಮಾಡುತ್ತದೆ. ಇದರಲ್ಲಿ ೫,೦೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ನಿರಂತರವಾಗಿ ಬಳಸಿದರೆ ಸುಮಾರು ೫ ಗಂಟೆಗಳ ಕಾಲ ಕೆಲಸ ಮಾಡಬಹು ದಾಗಿದೆ. ನಂತರ ರೀಚಾರ್ಚ್ ಮಾಡಿಕೊಳ್ಳಲು ಚಕ್ರಾಕಾರದ ರೋಬೊ ತಾನಾಗಿಯೇ ಬಂದು ಚಾರ್ಜರ್‌ಗೆ ಸೇರಿಕೊಳ್ಳುತ್ತದೆ. ಚಾರ್ಜಿಂಗ್ ಆಗುತ್ತದೆ. ಇದರ ಸದ್ಯದ ಮಾರುಕಟ್ಟೆಯ ಬೆಲೆ ೩೪,೯೯೯ ರೂ. ಆಗಿದೆ.
ಇದರ ಮತ್ತೊಂದು ವಿಶೇಷವೆಂದರೆ ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್ ಬೆಕ್ಕು, ನಾಯಿ ಸಾಕುವವರಿಗೆ ಹೆಚ್ಚಿನ ಅನುಕೂಲವಾಗಿದ್ದು, ನೆಲ ಅಥವಾ ಸೋಫಾ ಮೇಲೆ ಉದುರುವ ಅವುಗಳ ರೋಮಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ.
ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.…
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…
ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…
ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…
ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…
ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…