ಡಾ. ನೀ. ಗೂ. ರಮೇಶ್
ಜೀವನದಲ್ಲಿ ಕಳೆದು ಹೋದ ಒಂದು ಕ್ಷಣವೂ ಮತ್ತೆ ನಮಗೆ ಹಿಂತಿರುಗಿ ಬರುವುದಿಲ್ಲ. ಅದರಲ್ಲೂ ಬಾಲ್ಯ, ಯೌವನದ ಪ್ರತಿಕ್ಷಣಗಳಿಗೂ ಬೆಲೆ ಕಟ್ಟಲಾಗದು. ಗೆಳೆಯರು, ಮನರಂಜನೆ, ಆಟೋಟ, ಮೋಜು ಮಸ್ತಿಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ನಾಳಿನ ಬದುಕಿಗೆ ಅಡಿಪಾಯ ವಾಗುವ ಶಿಕ್ಷಣವನ್ನೂ ನಿರ್ಲಕ್ಷಿಸುವಂತಿಲ್ಲ. ಯೌವನದ ಆಟ ಪಾಠಗಳು ಸಹಜ ಪ್ರವೃತ್ತಿಯಾದರೆ, ಕಲಿಕೆಗಾಗಿ ರೂಢಿಸಿ ಕೊಳ್ಳಬೇಕಾದ ಶಿಸ್ತು ಸಾಧನೆಯಿಂದ ಬರಬೇಕಾದುದು.
ಶಿಕ್ಷಣಕ್ಕೆ ಒಂದು ಕ್ರಮಬದ್ಧತೆಯಿದೆ. ತರಗತಿ ವಾರು ಇಂತಿಷ್ಟು ಕಲಿಯಬೇಕೆಂಬ ಗುರಿಯಿದೆ. ಕಲಿತದ್ದನ್ನು ಪರಿಕ್ಷೆಯೆಂಬ ಸ್ಪರ್ಧೆಯಲ್ಲಿ ನಿರೂ ಪಿಸಿ, ಕಲಿಕೆಯನ್ನು ಖಚಿತಪಡಿಸಿ, ಗೆಲುವನ್ನು ದಾಖಲಿಸಿ ಮುಂದಿನ ತರಗತಿಗಳಿಗೆ ಹೋಗ ಬೇಕೆಂಬ ನಿಯಮವಿದೆ. ಹಾಗಾಗಿ ಪ್ರತಿ ವರ್ಷದ ಪರೀಕ್ಷೆಯೂ ಒಂದೊಂದು ಮಹತ್ವದ ‘ಪಂದ್ಯ’ ವಿದ್ದಂತೆ. ಇದಕ್ಕೆ ಆಸಕ್ತಿಯ ಸಿದ್ಧತೆ ಬೇಕಾಗುತ್ತದೆ. ಹಾಗಾಗಿ ಪ್ರತಿ ಪರೀಕ್ಷೆಯ ಒಳಗಿನ ಹೂರಣ ಮಾತ್ರ ಹೊಸದಾಗಿರುತ್ತದೆ.
ಆದರೆ, ಇಂದು ಪರೀಕ್ಷೆಗಳ ಮಹತ್ವ ಮತ್ತು ಸ್ಪರ್ಧೆ ಹೆಚ್ಚಾಗಿದೆ. ಏನಾದರೂ ಆಗಲಿ ಎಂದು ಉದಾಸೀನತೆಯಿಂದ ಪರೀಕ್ಷೆ ಬರೆಯುವುದರಿಂದ ಪ್ರಯೋಜನವಿಲ್ಲ. ಇಂದು ಕೇವಲ ಪರೀಕ್ಷೆಗಳ ಅಂಕಗಳನ್ನು ಮಾತ್ರ ಪ್ರಧಾನವೆಂದು ಪರಿಗಣಿ ಸದೆ. ಆ ವಿಷಯವನ್ನು ನಾವು ಅರ್ಥೈಸಿಕೊಂಡಿ ರುವ ಆಳ ಮತ್ತು ಕೌಶಲಗಳ ಅರಿವು ಅಷ್ಟೇ ಮುಖ್ಯ ಎಂಬ ಪದ್ಧತಿ ಎಲ್ಲ ಉದ್ಯೋಗ ಕ್ಷೇತ್ರ ಗಳಲ್ಲೂ ಚಾಲ್ತಿಯಲ್ಲಿದೆ. ಆದ್ದರಿಂದ ಈಗಿ ನಿಂದಲೇ ಅರ್ಥೈಸಿಕೊಂಡು ಓದುವುದು ಮುಖ್ಯ ವಾಗುತ್ತದೆ. ಆದರೆ ಇಂದಿನ ಬಹುತೇಕ ಪರೀಕ್ಷೆ ಗಳು ನೆನಪಿನ ಶಕ್ತಿಗೆ ಒಡ್ಡಿದ ಸವಾಲುಗಳಂತಿವೆ ಎಂಬುದೂ ಅಷ್ಟೇ ಸತ್ಯ. ಆದ್ದರಿಂದ ಕಲಿಕೆಯು ಕೇವಲ ನೆನಪಿನ ಶಕ್ತಿಯ (ಜ್ಞಾನ) ಹಂತಕ್ಕೆ ಸೀಮಿತವಾಗದೆ, ಕಲಿತಿರುವ ವಿಷಯವನ್ನು ಕೌಶಲಪೂರ್ಣವಾಗಿ ಪರೀಕ್ಷೆಯಲ್ಲಿ ಮಾತ್ರ ವಲ್ಲದೆ ಜೀವನದ ಬೇರೆ ಬೇರೆ ಸಂದರ್ಭಗಳಿಗೂ ಅನ್ವಯಿಸಿ ಕೊಂಡು ಉಪಯೋಗಿಸಿಕೊಳ್ಳುವ ನೈಪುಣ್ಯ ತೆಯೂ ಓದಿನ ಜೊತೆಗೇ ಬೆಳೆದು ಬರಲಿ, ಇದು ಮುಂದೆ ಬಹಳಷ್ಟು ರೀತಿಯಲ್ಲಿ ನೆರವಾಗುತ್ತದೆ.
ಹೆಚ್ಚು ಅಂಕಗಳನ್ನು ಅಥವಾ ರ‍್ಯಾಂಕ್ ಪಡೆ ದವರೆಲ್ಲ ಪ್ರತಿಭಾವಂತರಲ್ಲ ಅಥವಾ ಪ್ರಪಂಚ ದಲ್ಲಿ ಅವರು ಮಾತ್ರ ಸುಖವಾಗಿಲ್ಲ! ಕಲಿಯುವ ವಿಷಯವು ಪರೀಕ್ಷೆಗೆ ಮಾತ್ರವಲ್ಲದೆ ಬದುಕಿನ ಬೇರೆ ಬೇರೆ ಸಂದರ್ಭಗಳಿಗೂ ಉಪಯುಕ್ತ ವಾಗ ಬೇಕೆಂದರೆ ಸಾವಧಾನ ಮತ್ತು ಏಕಾಗ್ರತೆ ಯಿಂದ ಕಲಿಯುವುದು ಬಹಳ ಮುಖ್ಯ. ಹಾಗಾಗಿ ಕೇವಲ ಪರೀಕ್ಷೆಯ ಉದ್ದೇಶದಿಂದ ಕಲಿತ ವಿದ್ಯೆಯು ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಯ ಬದುಕನ್ನು ರೂಪಿಸುತ್ತಿರುವ ಉದಾಹರಣೆಗಳು ತುಂಬಾ ಕಡಿಮೆ. ಪ್ರತಿಯೊಂದು ವಿಷಯವನ್ನು ಕಲಿ ಯುವಾಗಲೂ ಪರೀಕ್ಷೆ ಮೊದಲ ಗುರಿ ಯಾದರೆ ಅಂತಿಮ ಗುರಿ ಜೀವನ ಎಂಬುದು ಗಮನದಲ್ಲಿರಲಿ. ಹಾಗಾಗಿ ಪರೀಕ್ಷೆಗಳು ಬದು ಕನ್ನು ರೂಪಿಸಿಕೊಳ್ಳಲು ಇರುವ ಮೆಟ್ಟಿಲುಗಳೇ ಹೊರತು, ಪರಿಕ್ಷೆಯೇ ಬದುಕಲ್ಲ. ಪರೀಕ್ಷೆಗಳಾಚೆಗೂ ಒಂದು ಸುಂದರವಾದ ಬದುಕು ಕಾಯುತ್ತಿರುತ್ತದೆ. ಅಲ್ಲಿಗೆ ಸುಲಭವಾಗಿ ಹೋಗಿ ತಲುಪಲು ಪರೀಕ್ಷೆಗಳಲ್ಲಿನ ಯಶಸ್ಸು ನೆರ ವಾಗುತ್ತದೆ.
ವರ್ಷವಿಡೀ ಓದುವುದು ಒಂದು ಭಾಗವಾ ದರೆ, ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಾಡಿ ಕೊಳ್ಳುವ ಸಿದ್ಧತೆ ಅದಕ್ಕಿಂತಲೂ ಮುಖ್ಯ ವಾದುದು. ಅದಕ್ಕಾಗಿ ಈ ಕೆಲವು ಅಂಶಗಳು ನೆನಪಿರಲಿ.
ಪರೀಕ್ಷೆಯೆಂಬ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಲು ಯಾವುದೇ ಹಂತದಲ್ಲಿ ದೊರೆ ಯುವ ಇಂತಹ ಸಲಹೆಗಳು ಒಂದಲ್ಲ ಒಂದು ರೀತಿಯಲ್ಲಿ ನೆರವಾಗಬಹುದು. ಹಾಗಾಗಿ ಯಾರ ಮಾತುಗಳನ್ನೂ ನಿರ್ಲಕ್ಷಿಸಬೇಕಾಗಿಲ್ಲ. ಎಂತಹ ಪರಿಸ್ಥಿತಿಯಲ್ಲಿಯೂ ಪರೀಕ್ಷೆಯ ಬಗ್ಗೆ ಧೃತಿಗೆಡದೆ ಆತ್ಮವಿಶ್ವಾಸದಿಂದ ಎದುರಿಸಬೇಕು.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…