ಯುವ ಡಾಟ್ ಕಾಂ

ಸಾಗರದಾಚೆಯೂ ಕರಾಟೆ ಕಣದಲ್ಲಿ ಸುಭಾಷ್ ಸಾಧನೆ

ಚಿಗುರು ಮೀಸೆ ಯುವಕ… ಕಂಗಳಲ್ಲಿ ಸಾಧನೆಯ ಸಮುದ್ರ ವನ್ನು ಈಜಿ ಗೆಲ್ಲುವ ಹಂಬಲ… ಅಪ್ಪ ಕಲಿಸಿದ ಕರಾಟೆಯಲ್ಲಿ ಸಾಗರ ದಾಚೆಯ ಊರಿನಲ್ಲಿ ಸಾಧನೆ ಮಾಡುವ ಮೂಲಕ ಯಶಸ್ಸಿನ ಹಾದಿಯಲ್ಲಿ ದೃಢ ಹೆಜ್ಜೆ ಇಟ್ಟಿದ್ದಾರೆ.

ಈ ಯುವ ಸಾಧಕ, ಸಾಂಸ್ಕೃತಿಕ ನಗರಿ ಮೈಸೂರಿನ ಕರಾಟೆಪಟು. ಹೆಸರು ಎಸ್.ಸುಭಾಷ್. ವಯಸ್ಸು ಇನ್ನೂ ೨೩! ಅವರು, ಏಷಿಯನ್ ಕರಾಟೆ ಫೆಡರೇಶನ್ (ಎಕೆಎಫ್) ಇತ್ತೀಚೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆಸಿದ ತೀರ್ಪುಗಾರರ ಆಯ್ಕೆ ಪರೀಕ್ಷೆಯಲ್ಲಿ ಇವರು ಮೊದಲನೇ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ.

ಆ ಮೂಲಕ ಭಾರತದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಏಷಿಯನ್ ಕರಾಟೆ ಫೆಡರೇಶನ್ ತೀರ್ಪುಗಾರರಾಗಿ ಆಯ್ಕೆ ಯಾಗಿದ್ದಾರೆ. ಈ ಮೂಲಕ ಮೊದಲು ೨೪ನೇ ವಯಸ್ಸಿನವರೊ ಬ್ಬರ ಹೆಸರಿಲ್ಲಿ ಇದ್ದ ದಾಖಲೆ ಯನ್ನು ಸುಭಾಷ್ ಸರಿಗಟ್ಟಿದ್ದಾರೆ.

ಸುಭಾಷ್ ಅವರ ತಂದೆ ಎನ್.ಶಂಕರ್ ಅವರು ಅಂತಾರಾಷ್ಟ್ರೀಯ ಕರಾಟೆಪಟು ಮತ್ತು ತೀರ್ಪುಗಾರರಾಗಿ ಸಾಧನೆ ಮಾಡಿದ್ದಾರೆ. ಮೈಸೂರಿನಲ್ಲಿ ನ್ಯಾಷನಲ್ ಕರಾಟೆ ಅಕಾಡೆಮಿ ಸ್ಥಾಪಿಸಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ಕರಾಟೆ ಅಸೋ ಸಿಯೇಷನ್, ಕರ್ನಾಟಕ ಸ್ಟೇಟ್ ಕರಾಟೆ ಅಸೋಸಿ ಯೇಷನ್ ಸೇರಿದಂತೆ ಅನೇಕ ಪ್ರತಿಷ್ಠಿತ ಕರಾಟೆ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ ಅನುಭವಿ.

ಮೂಲತಃ ನಂಜನಗೂಡು ತಾಲ್ಲೂಕು ಮುಳ್ಳೂರು ಗ್ರಾಮದ ಶಂಕರ್ ಅವರಿಗೆ ಹೇಗೋ ಏನೋ ಬಾಲ್ಯದಲ್ಲಿಯೇ ಕರಾಟೆಯ ನಂಟು ಹತ್ತಿತು. ಶಂಕರ್ ಅದನ್ನು ಕೇವಲ ಕ್ರೀಡೆಯಾಗಿ ನೋಡಲಿಲ್ಲ. ಏಕಾಗ್ರತೆ ಮತ್ತು ಪರಿಶ್ರಮದಿಂದ ಕಲಿಯುವ ಜತೆಗೆ ಕರಾಟೆಯನ್ನು ಆರಾಧಿಸಿದ್ದರಿಂದ ಬಹುಶಃ ಈಗಅವರು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಪಂದ್ಯಾವಳಿಗಳ ತೀರ್ಪುಗಾರರಾಗುವಷ್ಟು ಎತ್ತರಕ್ಕೆ ಏರಿದ್ದಾರೆ.

ಸುಭಾಷ್‌ಗೆ ತಂದೆಯೇ ಗುರು ಮತ್ತು ಮನೆಯಲ್ಲಿಯೇ ಕರಾಟೆ ಅಭ್ಯಾಸಕ್ಕೆ ಸಕಲ ಸೌಕರ್ಯವೂ ದೊರೆಯಿತು. ಅದನ್ನು ಬಹಳ ಕಕ್ಕುಲತೆಯಿಂದ ಬಳಸಿಕೊಂಡ ಸುಭಾಷ್ ಕರಾಟೆಯಲ್ಲಿ ತಂದೆಯಜೊತೆಯಲ್ಲೇ ಹೆಜ್ಜೆ ಹಾಕಿದರು. ಸ್ವತಃ ಇತರರಿಗೆ ಕರಾಟೆ ತರಬೇತಿ ನೀಡುವಷ್ಟು ಎತ್ತರಕ್ಕೆ ಬೆಳೆದರು. ಸುಭಾಷ್ ಅವರು ಶಾಲೆ ಅಥವಾ ಕಾಲೇಜಿಗೆ ಒಂದೊಂದು ದಿನ ತಪ್ಪಿಸಿಕೊಂಡರೂ ಕರಾಟೆ ತರಗತಿಗೆ ಮಾತ್ರ ತಪ್ಪದೇ ಹಾಜರಾಗುತ್ತಿದ್ದರು ಎಂಬುದು ಗಮನಾರ್ಹ.

ಸುಭಾಷ್ ಅವರು ಪ್ರಸಕ್ತ ವರ್ಷವಷ್ಟೇ ಬಿ.ಕಾಂ. ಪದವಿ ಮುಗಿಸಿದ್ದಾರೆ. ಇದರ ಜತೆಗೆ, ಕರಾಟೆ ಬ್ಲಾಕ್ ಬೆಲ್ಟ್ ೩ನೇ ಡಾನ್ ಆಗಿದ್ದಾರೆ. ಸದ್ಯಕ್ಕೆ ಉದ್ಯಮಿಯೂ ಆಗಿರುವ ತಂದೆಯ ವ್ಯವಹಾರದಲ್ಲಿ ಹೆಗಲು ಕೊಟ್ಟಿರುವ ಸುಭಾಷ್‌ಗೆ, ಶ್ರೀಲಂಕಾ ದಲ್ಲಿ ನಡೆದ ಎಕೆಎಫ್ ಪರೀಕ್ಷೆಯ ಫಲಿತಾಂಶ  ಬದುಕಿನ ಗುರಿಯನ್ನು ಖಚಿತಪಡಿಸಿರಬಹುದು.

ಕೊಲಂಬೊದಲ್ಲಿ ನಡೆದ ಪರೀಕ್ಷೆ:  ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಇದೇ ಜುಲೈ ೩ರಂದು ನಡೆದ ಏಷಿಯನ್ ಕರಾಟೆ ಫೆಡರೇಷನ್ (ಎಕೆಎಫ್)ನ ತೀರ್ಪುಗಾರರ ಆಯ್ಕೆ ಪರೀಕ್ಷೆಗೆ ಏಷ್ಯಾ ಖಂಡದ ಸುಮಾರು ೪೫ ದೇಶಗಳ ೧೩೦ಕ್ಕೂ ಹೆಚ್ಚು ಕರಾಟೆ ತರಬೇತುದಾರರು ಹಾಜರಾಗಿದ್ದರು. ಇವರ ಪೈಕಿ ಭಾರತದ ೪೦ಕ್ಕೂ ಹೆಚ್ಚು ಸ್ಪರ್ಧಿಸಿದ್ದರು. ಈ ಪೈಕಿ ೧೮ ಜನರು ಮಾತ್ರ ಲಿಖಿತ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಎಕೆಎಫ್ ತೀರ್ಪುಗಾರರಾಗಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಒಬ್ಬರಾಗಿರುವ ಎಸ್.ಸುಭಾಷ್, ಎಕೆಎಫ್ ಇತಿಹಾಸದಲ್ಲಿಯೇ ಭಾರತದಿಂದ ತೀರ್ಪುಗಾರರಾಗಿ ಅರ್ಹತೆ ಪಡೆದ ಅತ್ಯಂತ ಕಿರಿಯ ವಯಸ್ಸಿನವರು ಎಂಬುದು ವಿಶೇಷ.

” ಎಕೆಎಫ್ ಪರೀಕ್ಷೆಯಲ್ಲಿ ನನ್ನ ಮಗ ಸುಭಾಷ್ ತೀರ್ಪುಗಾರನಾಗುವ ಅರ್ಹತೆ ಪಡೆದ ಕ್ಷಣ ಅವಿಸ್ಮರಣೀಯ. ಈ ಸಾಧನೆ ಮಾಡಲು ಪ್ರಮುಖವಾಗಿ ಕರ್ನಾಟಕ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಅರುಣ್ ಮಾಚಯ್ಯ, ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಮತ್ತು ರಾಜ್ಯ ರೆಫರಿ ಕಮಿಷನ್ ಚೇರ್ಮನ್ ಎನ್.ಜಿ.ಶಿವದಾಸ್ ಅವರ ಸಹಾಯ, ಸಹಕಾರ ಮತ್ತು ಬೆಂಬಲ ಕಾರಣ. ಅದಕ್ಕಾಗಿ ಈ ಮೂವರಿಗೆ ಧನ್ಯವಾದ ಸಲ್ಲಿಸುತ್ತೇನೆ.”

-ಎನ್.ಶಂಕರ್, ಸುಭಾಷ್ ಅವರ ತಂದೆ

” ನಾನು ಈ ಸಾಧನೆ ಮಾಡಿದ್ದೇನೆ ಎಂದರೆ, ಅದರ ಸಂಪೂರ್ಣ ಗೌರವ ಕರಾಟೆಯ ಗುರುವೂ ಆಗಿರುವ ನನ್ನ ತಂದೆ ಅವರಿಗೆ ಸಲ್ಲಬೇಕು. ಅಲ್ಲದೆ, ನನ್ನ ತಾಯಿ, ಸೋದರಿ ಸೇರಿದಂತೆ ಕುಟುಂಬದವರು, ಕರಾಟೆ ಸಹಪಾಠಿಗಳು ಇವರೆಲ್ಲರ ಸಹಕಾರ ಕೂಡ ಇದಕ್ಕೆ ಅಕಾರಣ.”

– ಎಸ್.ಸುಭಾಷ್

ಅಭಿನಂದನೆ-ಪ್ರಮಾಣಪತ್ರ ವಿತರಣೆ: ಕರಾಟೆ ಇಂಡಿಯಾ ಅಸೋಸಿಯೇಶನ್ ಮತ್ತು ಸೌತ್ ಏಷಿಯನ್ ಕರಾಟೆ ಅಸೋಸಿಯೇಶನ್ (ಎಸ್‌ಎಕೆಎಫ್) ಅಧ್ಯಕ್ಷ ಭರತ್ ಶರ್ಮ, ಚೀನಾದ ವಿಚಾಯೆಲ್, ಎಕೆಎಫ್ ರೆಫರಿ ಕಮಿಷನ್ ಸದಸ್ಯ ತೈಪಾಯ್, ಎಸ್‌ಎಕೆಎಫ್ ರೆಫರಿ ಕಮಿಷನ್ ಚೇರ್ಮನ್ ಮತ್ತು ಎಕೆಎಫ್ ರೆಫರಿ  ಕಮಿಷನ್ ಸದಸ್ಯ ಶಾಯಿನ್ ಅಖ್ತರ್ ಅವರು, ಎಕೆಎಫ್ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಸ್. ಸುಭಾಷ್ ಅವರನ್ನು ಅಭಿನಂದಿಸಿ, ಪ್ರಮಾಣಪತ್ರ ವಿತರಿಸಿದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

17 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

17 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

17 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

17 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

17 hours ago