ಫಾಸ್ಟ್ ಫುಡ್, ಪಾರಿವಾಳಗಳು ಮತ್ತು ಡ್ಯಾನ್ಸ್
ವಾಸು ವಿ. ಹೊಂಗನೂರು
ಇತ್ತೀಚೆಗೆ ಯುವಸಮೂಹ ಹಾದಿ ತಪ್ಪುತ್ತಿದೆ. ಮೊಬೈಲ್ ಗೀಳು, ಮೋಜು-ಮಸ್ತಿ ಎಂದು ಯುವಜನತೆ ಜೀವನವನ್ನು ಹಗುರ ವಾಗಿ ತೆಗೆದುಕೊಂಡು ಹಾಳು ಮಾಡಿಕೊಳ್ಳು ತಿರುವ ಈ ಕಾಲಘಟ್ಟದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಯುವಕನೊಬ್ಬ ಸಂಕಷ್ಟದ ಜೀವನ ಸಾಗಿಸಿ ಯಾವುದಕ್ಕೂ ಎದೆಗುಂದದೆ ತನ್ನ ಬದುಕನ್ನು ಕಟ್ಟಿಕೊಂಡ
ಬಗೆಯೇ ರೋಚಕ.
ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದು, ಶಿಕ್ಷಣ ಪಡೆಯುತ್ತಿದ್ದಾಗಲೇ ತಾಯಿಯನ್ನೂ ಕಳೆದುಕೊಂಡು ಒಂಟಿಯಾದವರು ಮೈಸೂರಿನ ಅಶೋಕಪುರಂ ನಿವಾಸಿ ಶಶಾಂಕ್.
ಸುಶೀಲ್ ಮತ್ತು ಸುಮ ದಂಪತಿಯ ಏಕೈಕ ಪುತ್ರರಾದ ಶಶಾಂಕ್ ಹುಟ್ಟಿದ ಒಂದೂವರೆ ವರ್ಷಕ್ಕೆ ತಮ್ಮ ತಂದೆಯನ್ನು ಕಳೆದುಕೊಂಡರು. ಬಳಿಕ ತಾಯಿಯ ಆರೈಕೆಯಲ್ಲಿ ಸಂಕಷ್ಟದ ಜೀವನ ಸಾಗಿಸಿದರು. ವಿದ್ಯಾಭ್ಯಾಸ ಮಾಡುವ ವೇಳೆ ತಾಯಿಯನ್ನೂ ಕಳೆದುಕೊಂಡು ಬಾಲ್ಯದುದ್ದಕ್ಕೂ ನೋವನ್ನೇ ಉಂಡರೂ ಛಲ ಬಿಡದೆ ದುಡಿದು ಈಗ ತಮ್ಮದೇ ಆದ ಎರಡು ಫಾಸ್ಟ್ ಫುಡ್ ಸೆಂಟರ್ ಗಳ ಮಾಲೀಕರಾಗುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.
ಆರಂಭದಲ್ಲಿ ಜೀವನ ಸಾಗಿಸಲು ಅಶೋಕ ಪುರಂನ ಅಂಬೇಡ್ಕರ್ ಪಾರ್ಕ್ ಮುಂಭಾಗ ತಳ್ಳುವ ಗಾಡಿಯಲ್ಲಿ ಸಣ್ಣದೊಂದು ಫಾಸ್ಟ್ ಫುಡ್ ಸೆಂಟರ್ ತೆರೆದು ನಡೆಸಿಕೊಂಡು ಬರುತ್ತಿದ್ದ ಕುಟುಂಬ ಇವರದ್ದು. ತಂದೆ-ತಾಯಿಯನ್ನು ಕಳೆದುಕೊಂಡ ಬಳಿಕ ಶಶಾಂಕ್ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಅದೇ ಉದ್ಯೋಗವನ್ನು
ಮುಂದುವರಿಸಿಕೊಂಡು ಬಂದಿದ್ದು, ಸದ್ಯ ಎರಡು ಕಡೆ ಫಾಸ್ಟ್‌ಫುಡ್ ಸೆಂಟರ್ ಗಳನ್ನು ತೆರೆದಿದ್ದಾರೆ.
ಮೈಸೂರಿನ ಎನ್‌ಐಇ ಕಾಲೇಜು ಬಳಿ ಮೊದಲ ಬಾರಿಗೆ ‘ಅಂಬಾರಿ ದೊನ್ನೆ ಬಿರಿಯಾನಿ’ ಸೆಂಟರ್ ಆರಂಭಿಸಿದರು. ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ರುಚಿಕರ ಆಹಾರ ನೀಡುತ್ತಿರುವ ಇವರ ಫಾಸ್ಟ್ ಫುಡ್ ಸೆಂಟರ್ ಎಂದರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು.
ಇದಾದ ಬಳಿಕ ಬಲ್ಲಾಳ್ ಸರ್ಕಲ್ ಬಳಿಯೂ ಮತ್ತೊಂದು ಅಂಬಾರಿ ಫಾಸ್ಟ್ ಫುಡ್ ಸೆಂಟರ್ ಅನ್ನು ತೆರೆದಿದ್ದಾರೆ. ಆ ಮೂಲಕ ನಾಲ್ಕಾರು ಜನರಿಗೆ ಉದ್ಯೋಗವನ್ನೂ ನೀಡಿದ್ದಾರೆ.
ಶಶಾಂಕ್‌ನ ಪಾರಿವಾಳ ಪ್ರೀತಿ: ಶಶಾಂಕ್‌ಗೆ ಬಾಲ್ಯದಿಂದಲೂ ಪಾರಿವಾಳಗಳನ್ನು ಸಾಕು ವುದೆಂದರೆ ಪ್ರೀತಿ, ದ್ವಿತೀಯ ಪಿಯುಸಿ ಯಲ್ಲಿದ್ದಾಗ ಮೊದಲ ಬಾರಿಗೆ ಪಾರಿವಾಳ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದರು. ಆ ಸ್ಪರ್ಧೆಯಲ್ಲಿ ಸತತ 9 ಗಂಟೆ 55 ನಿಮಿಷಗಳ ಕಾಲ ಹಾರಾಟ ಮಾಡಿದ ಇವರು ಸಾಕಿದ ಪಾರಿವಾಳ ಎಲ್ಲರ ಗಮನ ಸೆಳೆದಿತ್ತು. ಬಳಿಕ 2018ರಲ್ಲಿ ಹಾಸನ ಟೂರ್ನಮೆಂಟ್, ನ್ಯಾಷನಲ್ ಪಿಜನ್ ಟೂರ್ನಮೆಂಟ್‌ನಲ್ಲಿ 6 ಗಂಟೆ 46 ನಿಮಿಷಗಳ ಕಾಲ ಇವರ ಪಾರಿವಾಳ ಗಳು ಹಾರಾಟ ನಡೆಸಿ ಮೊದಲ ಸ್ಥಾನ ಪಡೆದವು. 2022ರಲ್ಲಿ ರಾಯಲ್ ಪಿಜನ್ ಟೂರ್ನ ಮೆಂಟ್‌ನಲ್ಲಿ ಗುಂಪು ವಿಭಾಗದಲ್ಲಿ ಸ್ಪರ್ಧಿಸಿದ್ದ ಶಶಾಂಕ್‌ರವರ ಪರಿವಾಳಗಳು 18 ಗಂಟೆ 36 ನಿಮಿಷಗಳ ಕಾಲ ಹಾರಾಟ ನಡೆಸಿ ದಾಖಲೆ ಬರೆದಿದ್ದವು. ಇನ್ನು ಇದೇ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ9 ಗಂಟೆ 37 ನಿಮಿಷಗಳ ಕಾಲ ಹಾರುವ ಮೂಲಕ 3ನೇ ಸ್ಥಾನ ಗಳಿಸಿದ್ದವು.
ಇಂದಿನ ಯುವ ಪೀಳಿಗೆ ಮೋಜು ಮಸ್ತಿಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬದುಕನ್ನು ಚಂದವಾಗಿ ರೂಪಿಸಿಕೊಳ್ಳುವ ಅವಕಾಶ ನಮ್ಮ ಕೈಗಳಲ್ಲಿದೆ. ನಮ್ಮ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದ್ದರೆ ಯಾರ ಸಹಾಯವಿಲ್ಲದೆಯೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಕಾಲಹರಣ ಮಾಡದೆ ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಕುಟುಂಬಗಳಿಗೆ ಆಸರೆಯಾಗಬೇಕು.
–ಎಸ್.ಶಶಾಂಕ್, ಅಂಬಾರಿ ಫಾಸ್ಟ್ ಫುಡ್ ಸೆಂಟರ್ ಮಾಲೀಕ
ನಮಗೆ ಇಲ್ಲಿ ಉತ್ತಮ ಗುಣ ಮಟ್ಟದ ಸ್ವಚ್ಚ ಆಹಾರ ಸಿಗುತ್ತದೆ. ಊಟದ ವಿಚಾರದಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ. ಜೀವನದಲ್ಲಿ ಸೋಲು ಅನುಭವಿಸಿದ ಅನೇಕ ಯುವಕರಿಗೆ ಶಶಾಂಕ್ ಸ್ಫೂರ್ತಿಯಾಗಿದ್ದಾರೆ.
–ಮನೋಜ್ ಕುಮಾರ್, ಸ್ಥಳೀಯರು.
ಕಾಲೇಜು ಐಡಿ ತೋರಿಸಿ ನಾವು ಊಟ ಮಾಡುತ್ತೇವೆ. ಬೇರೆ ಕಡೆಗಳಿಗಿಂತ ಇಲ್ಲಿ ಕಡಿಮೆ ದರದಲ್ಲಿ ಹೆಚ್ಚು ಊಟ ಸಿಗುತ್ತದೆ. ನಾವು ಗಂಗೋತ್ರಿ ಯಿಂದ ಇಲ್ಲಿಗೆ ಊಟಕ್ಕಾಗಿ ಬರುತ್ತೇವೆ. 120 ರೂ.ಗೆ ಒಂದು ಬಿರಿಯಾನಿ ಹಾಗೂ ಕಬಾಬ್ ನೀಡುತ್ತಾರೆ. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
-ಎನ್.ಮಂಜು, ಪರಿಸರ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ.
ಡ್ಯಾನ್ಸ್‌ನಲ್ಲೂ ಕಮಾಲ್: ಅಸಮಾನ್ಯ ಪ್ರತಿಭೆಯಾಗಿರುವ ಶಶಾಂಕ್ ಪಾರಿವಾಳ ಸ್ಪರ್ಧೆ ಮಾತ್ರವಲ್ಲ, ಡ್ಯಾನ್ಸ್‌ನಲ್ಲೂ ಪ್ರವೀಣ. ಸಹಾಯಕ ನೃತ್ಯಗಾರನಾಗಿ ಬಣ್ಣ ಹಚ್ಚಿರುವ ಈ ಯುವ ಕಲಾವಿದ ಝೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಲರ್ಸ್ ಕನ್ನಡ, ಝೀ ತಮಿಳು ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳಲ್ಲಿ ತಮ್ಮ ಕಮಾಲ್ ತೋರಿಸಿದ್ದಾರೆ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…