ಯುವ ಡಾಟ್ ಕಾಂ

ಹಲವು ಹೊಸತುಗಳ ಸೋನಿ ಹೆಡ್‌ಫೋನ್‌

ಸೋನಿ ಕಂಪೆನಿಯು ಗೇಮಿಂಗ್ ಹಾಗೂ ಸಂಗೀತ ಪ್ರಿಯ ಯುವಜನರಿಗಾಗಿಯೇ ರೂಪಿಸಲಾದ ಅಲ್ಡ್ ವೇರ್ (Sony ULT Wear) ಎಂಬ ಸರಣಿಯ ಹೆಡ್‌ಫೋನ್‌ ಅನ್ನು ಹೆಚ್ಚು ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ.

ಹಗುರವಾದ ಮತ್ತು ಕಿವಿಯ ಮೇಲ್ಬಾಗದಲ್ಲಿ ಸರಿಯಾಗಿ ಕೂರುವಂತೆ ಹೊಂದಿಸಿಕೊಳ್ಳಲು ವ್ಯವಸ್ಥೆಯಿರುವ ಈ ಹೆಡ್‌ಫೋನ್‌ ತಲೆಯ ಮೇಲೆ ಧರಿಸಲು ಅನುಕೂಲಕರವಾಗಿದ್ದು, ಅಳತೆ ಹೊಂದಿಸಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. ಇದರ ಇಯರ್ ಕಪ್‌ಗಳನ್ನು ಹೇಗೆ ಕೂರಿಸಲಾಗಿದೆ ಎಂದರೆ ಅವುಗಳನ್ನು ಬೇಕಾದ ಕೋನಕ್ಕೆ ತಿರುಗಿಸಿ ಮಡಚ ಬಹುದಾಗಿದ್ದು, ಕಾಂಪ್ಯಾಕ್ ಕೇಸ್ ಒಳಗೆ ಈ ಹೆಡ್‌ಫೋನ್‌ ಕೂರುತ್ತದೆ. ಪ್ರಯಾಣ ಮಾಡುವಾಗ ಬ್ಯಾಗ್ ನೊಳಗೆ ಒಯ್ಯಲು ತೀರಾ ಅನುಕೂಲಕರವಾದ ಕೇಸ್ ಹೊಂದಿದೆ.

ಅಲ್ಪ ವೇರ್ ಹೆಡ್‌ಫೋನ್‌ನಲ್ಲಿ ಆಲಿಸುವ ಧ್ವನಿಯ ಗುಣಮಟ್ಟವು ಅದ್ಭುತವಾಗಿದ್ದು, ಕಿವಿಯ ಮೇಲಿರುವ ಕುಶನ್ ಭರಿತ ಇಯರ್ ಕಪ್‌ಗಳು ಹೊರಗಿನ ಗದ್ದಲ ಒಳಗೆ ಬಾರದಂತೆ ಮತ್ತು ಸಾಧನದ ಮೂಲಕ ಕೇಳಿಸುವ ಧ್ವನಿ ಹೊರಗೆ ಹೋಗದಂತೆ ತಡೆಯುವುದರಿಂದ ಹಾಡುಗಳನ್ನು ಆನಂದದಿಂದ ಆಲಿಸಬಹುದಾಗಿದೆ. ಅಲ್ಲದೆ ಇದರಲ್ಲಿನ ಹೊರಗಿನ ಸದ್ದನ್ನು ಸಂಪೂರ್ಣ ತಡೆಯುವ ನಾಯ್ಸ್ ಕ್ಯಾನ್ಸಲೇಶನ್ ಬಟನ್ ಒತ್ತಿದರೆ ಹೊರಗಿನ ಸದ್ದನ್ನು ತಡೆಯುವ ಮತ್ತು ಆಲಿಸುವ ಸೌಲಭ್ಯ ಪಡೆಯಬಹುದು. ಜತೆಗೆ ಪಕ್ಕದಲ್ಲೇ ಇರುವ ಹೊಳೆಯುವ ULT ಬಟನ್ ಆನ್ ಮಾಡಿದರೆ ಬೇಸ್ ಧ್ವನಿ ಗರಿಷ್ಟಮಟ್ಟದಲ್ಲಿ ಕೇಳಿಸುತ್ತದೆ.

ಈ ಸುಂದರ ಹೆಡ್ ಫೋನ್‌ ಅನ್ನು ಬ್ಲೂಟೂತ್ ಮೂಲಕ ಸ್ಟಾರ್ಟ್‌ಫೋನ್, ಟಿವಿ, ಕಂಪ್ಯೂಟರ್ ಹಾಗೂ ಬೇರಾವುದೇ ಪ್ಲೇಯರ್‌ಗಳನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ 3.5 ಜ್ಯಾಕ್ ಇದೆ ಮತ್ತು ಕೇಬಲ್ ಸಂಪರ್ಕ ಕೂಡ ನೀಡಲಾಗಿದೆ. ಬ್ಲೂಟೂತ್ ಸಂಪರ್ಕ ಸುಲಭವಾಗಿ ಕನೆಕ್ಟ್ ಆಗಲಿದ್ದು, ಇದಕ್ಕಾಗಿ ಪ್ರತ್ಯೇಕ ಆ್ಯಪ್ ಬೇಕಿಲ್ಲ.

ಇನ್ನು ಈ ಹೆಡ್‌ಫೋನ್‌ ಅನ್ನು ಕೇಬಲ್ ಮೂಲಕ ಸಂಪರ್ಕಿಸಿದರೆ ಬ್ಯಾಟರಿಯೇನೂ ಬಳಕೆಯಾಗುವುದಿಲ್ಲ. ಬ್ಲೂಟೂತ್ ಮೂಲಕ ಸಂಪರ್ಕಿಸಿದರೆ ಬ್ಯಾಟರಿ ಬಳಕೆಯಾಗುತ್ತದೆ. ನಾಲ್ಡ್ ಕ್ಯಾನ್ಸಲಿಂಗ್ ಆನ್ ಮಾಡಿಕೊಂಡರೆ ಹೆಚ್ಚುವರಿ ಬ್ಯಾಟರಿ ಖರ್ಚಾಗುತ್ತದೆ. ನಾಯ್ ಕ್ಯಾನ್ಸಲಿಂಗ್ ಆನ್ ಮಾಡಿಕೊಂಡು 30 ಗಂಟೆಗಳ ಕಾಲ ಸತತವಾಗಿ ಹಾಡುಗಳನ್ನು ಕೇಳಬಹುದು. ಇನ್ನು ಇದರ ಬ್ಯಾಟರಿ ಶೂನ್ಯದಿಂದ ಪೂರ್ಣವಾಗಿ ಚಾರ್ಜ್ ಆಗಲು ಸುಮಾರು ಮೂರುವರೆ ಗಂಟೆ ಬೇಕಾಗುತ್ತದೆ.

ಇಂತಹ ಅದ್ಭುತವಾದ ಸೋನಿ ಕಂಪೆನಿಯ ಹೆಡ್‌ಫೋನ್‌ 16,990 ರೂ.ಗಳಿಗೆ ಲಭ್ಯವಿದೆ.

ಆಂದೋಲನ ಡೆಸ್ಕ್

Recent Posts

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

14 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

14 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

15 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

15 hours ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

18 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

24 hours ago