ಆಂದೋಲನ ಪುರವಣಿ

ಯುವ ಡಾಟ್‌ ಕಾಂ : ಬತ್ತಿ ಹೋದ ಜೀವ ಸೆಲೆಗೆ ಮರುಜೀವ

– ಸೌಮ್ಯ ಹೆಗ್ಗಡಹಳ್ಳಿ

ವಾರಾಂತ್ಯದ ರಜಾದಿನಗಳನ್ನು ಸಿನಿಮಾ ವೀಕ್ಷಣೆ, ಮೋಜು, ಮಸ್ತಿ ಎಂದು ವಿನಿಯೋಗಿಸಿ, ಕಾಲ ಕಳೆಯುವ ಇಂದಿನ ದಿನಮಾನಗಳಲ್ಲಿ ತಮ್ಮೂರಿನ ಪರಿಸರ ಬಗೆಗೆ ಕಾಳಜಿಯನ್ನು ಹೊತ್ತು, ಬತ್ತಿ ಹೋಗುತ್ತಿರುವ ನದಿಗೆ ಮರುಜೀವ ಕೊಡುವ ಪ್ರಯತ್ನದ ಮೂಲಕ ಹಲವಾರು ಪರಿಸರ ಕಾಳಜಿ ಕುರಿತ ಕಾರ್ಯಕ್ರಮಗಳ ಜತೆ ಸಾಗಿರುವ ಯುವಪಡೆಯ ಕಾರ್ಯವೈಖರಿಯು ಎಲ್ಲರ ಗಮನಸೆಳೆದಿದೆ.

ಇದು ‘ಗುಂಡ್ಲು ಪರಿಸರ ಬಳಗ’ದ ವಿಶೇಷ!. ಇದೊಂದು ಸಮಾನ ಮನಸ್ಕ ಗೆಳೆಯರ ಬಳಗ, ಈ ಬಳಗವು ನಶಿಸಿಹೋಗಿರುವ ಗುಂಡ್ಲು ನದಿಯನ್ನು ಪುನರುಜ್ಜೀವನಗೊಳಿಸಲು ಹುಟ್ಟಿಕೊಂಡ ಒಂದು ಗುಂಪಾಗಿದ್ದು, ಪ್ರತಿ ಭಾನುವಾರ ಶ್ರಮದಾನದ ಮೂಲಕ ಕೆರೆಗಳ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಪ್ರಾಥಮಿಕವಾಗಿ ಹಮ್ಮಿಕೊಂಡಿದೆ.
ಇದರ ಜೊತೆಗೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಜೀವಸೆಲೆಯಾಗಿದ್ದ ‘ಗುಂಡ್ಲು ನದಿ’ ನಶಿಸಿ ಹೋಗಲು ಕಾರಣಗಳನ್ನು ಪಟ್ಟಿ ಮಾಡಿ ಆ ನದಿಯನ್ನು ಪುನರುಜ್ಜೀವನಗೊಳಿಸುವ ಜತೆಗೆ, ಹಸಿರು ಪ್ರದೇಶದ ವಿಸ್ತರಣೆ, ಕೆರೆಗಳ ಸಂರಕ್ಷಣೆ ಕಾರ್ಯಗಳ ಒಂದುಯೋಜನೆಯನ್ನು ರೂಪಿಸಿಕೊಂಡು ಸಮಾನ ಮನಸ್ಕ ಗೆಳೆಯರ ಬಳಗ ಕಾರ್ಯನಿರತವಾಗಿದೆ.
2022ರ ನಂವೆಂಬರ್ 6ನೇ ತಾರೀಖಿನಿಂದ ಪ್ರತಿ ಭಾನುವಾರ ನಿರಂತರವಾಗಿ ಶ್ರಮದಾನ ಮಾಡುತ್ತಾ ಬಂದಿದೆ. ಪ್ರಾಥಮಿಕವಾಗಿ 10 ಸದಸ್ಯರಿಂದ ಆರಂಭವಾದ ‘ಗುಂಡ್ಲು ಪರಿಸರ ಬಳಗ’ದಲ್ಲಿ ಈಗ 200ಕ್ಕೂ ಹೆಚ್ಚು ಸದಸ್ಯರಿದ್ದು ಭಾನುವಾರದ ದಿನಗಳಂದು ಎಲ್ಲರೂ ಶ್ರಮದಾನದಲ್ಲಿ ಭಾಗಿಯಾಗುತ್ತಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಕಸ ಮತ್ತು ಕಟ್ಟಡದ ಅವಶೇಷಗಳನ್ನು ಹಾಕಿ ಮುಚ್ಚಿ ಹಾಕಲಾಗಿದ್ದ ಚಿಕ್ಕ ಕೆರೆಗೆ ಮರುಜೀವ ಕೊಡುವ ಕಾರ್ಯವನ್ನು ಈ  ಪರಿಸರ ಬಳಗ ಕೈಗೆತ್ತಿಕೊಂಡಿದೆ. ಅಲ್ಲಿ ಸುರಿಯಲಾಗಿದ್ದ ಸಹಸ್ರಾರು ಟ್ರ್ಯಾಕ್ಟರ್ ಲೋಡ್‌ಗಳಷ್ಟು ಕಟ್ಟಡದ ಅವಶೇಷಗಳನ್ನು ಹೊರಸಾಗಿಸಿ, ಕೆರೆಯ ತುಂಬೆಲ್ಲ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ, ಊಳಿನಿಂದ ಮುಚ್ಚಿ ಹೋಗಿದ್ದ ಜಲಮಾರ್ಗಗಳನ್ನು ಸ್ವಚ್ಛಗೊಳಿಸಿ, ಕೆರೆಗೆ ನೀರು ಸರಾಗವಾಗಿ ಹರಿದು ಬರುವಂತೆ ಮಾಡಿ ಈ ಕೆರೆಯನ್ನು ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಗುರಿಯೊಂದಿಗೆ ಕಾರ್ಯ ಬರದಿಂದ ಸಾಗಿದೆ.

ಈ ತಂಡವು ಪ್ರತಿ ಭಾನುವಾರ ಬೆಳಿಗ್ಗೆ 7.30 ರಿಂದ ಶ್ರಮದಾನ ಕಾರ್ಯ ಹಮ್ಮಿಕೊಳ್ಳುತ್ತಾ ಬಂದಿದ್ದು ಯಾರು ಬೇಕಾದರೂ ಭಾಗವಹಿಸಬಹುದಾಗಿದೆ.
ಗುಂಡ್ಲುಹೊಳೆ ಪುನರುಜ್ಜೀವನಗೊಳಿಸುವ ಜತೆಗೆ, ವಿದ್ಯಾರ್ಥಿಗಳಿಗೆ ‘ಪಕ್ಷಿ ವೀಕ್ಷಣೆ’ ಕಾರ್ಯವನ್ನು ಗುಂಡ್ಲುಹೊಳೆ ಪರಿಸರ ವ್ಯಾಪ್ತಿಯಲ್ಲಿ ತಿಂಗಳಲ್ಲಿ 2 ವಾರ ಹಮ್ಮಿಕೊಳ್ಳುತ್ತಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಪಕ್ಷಿ ಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲು ಪರಿಸರ ತಜ್ಞರೂ ಇದ್ದಾರೆ. ಮುಂದಿನ ದಿನಗಳಲ್ಲಿ ಪೃಕೃತಿ ಅರಿವು ಕಾರ್ಯಕ್ರಮಗಳು, ಪ್ಲಾಸ್ಟಿಕ್ ಪಾಯ, ಗಿಡ ನೆಡುವ ಕಾರ್ಯಕ್ರಮ ಆಯೋಜಿಸುವ ಉದ್ದೇಶವನು ಹೊಂದಿದೆ ಈ ತಂಡ.



ಗುಂಡ್ಲು ಹೊಳೆ/ನದಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ವಿಜಯಪುರ ಎಂಬ ಪಟ್ಟಣ ಗುಂಡ್ಲುಪೇಟೆ ಎಂದು ಮರು ನಾಮಕರಣಗೊಂಡಿತು. ಚಿಕ್ಕಕೆರೆಯ ಕೋಡಿ ನೀರು ಗುಂಡ್ಲುನದಿಯ ಒಡಲು ಸೇರುತ್ತದೆ. ಕೆರೆಯ ತೂಬಿನ ತೊಟ್ಟಿಯಲ್ಲಿರುವ ಚಪ್ಪಡಿ ಕಲ್ಲುಗಳಲ್ಲಿನ ಕೆತ್ತನೆ, ಕೆರೆುಂ ಪೂರ್ವ ಭಾಗದಲ್ಲಿರುವ ಮೆಟ್ಟಿಲುಗಳು, ಕೆರೆಯಿಂದ ಪಟ್ಟಣಕ್ಕೆ ಕುಡಿಯಲು ನೀರು ಹರಿಸುತ್ತಿದ್ದ ಮೇಲ್ಸೇತುವೆಗಳು ಜನೋಪಯೋಗಿ ಕೆರೆಯ ಅಸ್ತಿತ್ವವನ್ನು ಸಾರುತ್ತಿವೆ.

ಶ್ರೀಕಂಠ (ಕಂಠಿ)
ಸಂಪನ್ಮೂಲ ವ್ಯಕ್ತಿ.
ಗುಂಡ್ಲು ಪರಿಸರ ಬಳಗ



ಸಾರ್ವಜನಿಕರ ಸಹಕಾರ ದೊರೆತರೆ ಗುಂಡ್ಲು ನದಿಯ ಗತ ವೈಭವ ಮರುಕಳಿಸಲಿದೆ. ಮೊದಲ ಹೆಜ್ಜೆಯಾಗಿ ಪಟ್ಟಣದ ಚಿಕ್ಕಕೆರೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ ಮೂಡಿಸಲು ಪರಿಸರ ಶಿಕ್ಷಣ ಪ್ರಾರಂಭಿಸಿದ್ದೇವೆ.

ನಾಗಾರ್ಜುನ್ ಕುಮಾರ್ ಎಸ್. ಎಂ.
ಗುಂಡ್ಲು ಪರಿಸರ ಬಳಗದ ಪದಾಧಿಕಾರಿ.


ಕೆರೆಯ ಪರಿಸರದಲ್ಲಿ ಹಸಿರು ನೊಣಹಿಡುಕ, ಟಿಟ್ಟಿಬ, ಲಾಂಗ್ ಟೇಲ್ಡ್ ಶ್ರೈಕ್, ಹಾರ್ನ್ ಬಿಲ್, ಇತರೇ ಪಕ್ಷಿಗಳನ್ನು ನೋಡಿ ಖುಷಿಯಾಯಿತು. ಪಕ್ಷಿ ಸಂಕುಲದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆನಿಸಿದೆ.

ವಸಂತ
ನಾಲ್ಕನೆ ತರಗತಿ



ಗುಂಡ್ಲು ಪರಿಸರ ಬಳಗ ಹಮ್ಮಿಕೊಳ್ಳುವ ಗಿಡಗಳನ್ನು ತೆರವುಗೊಳಿಸುವುದು, ಕಾವಲಿಯಲ್ಲಿ ಹೂಳೆತ್ತುವುದು ಸೇರಿದಂತೆ ಹಲವಾರು ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ಸಾಮಾಜಿಕ ಕಾರ್ಯಗಳು ನಮಗೆ ಇಷ್ಟವಾಗುತ್ತವೆ.
-ಸಚಿನ್, ಕಾಲೇಜು ವಿದ್ಯಾರ್ಥಿ

andolanait

Recent Posts

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

7 mins ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

1 hour ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

1 hour ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

1 hour ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

1 hour ago

ದ್ವೇಷ ಭಾಷಣಕ್ಕೆ ಕಡಿವಾಣ | ಗರಿಷ್ಟ 10 ವರ್ಷ ಶಿಕ್ಷೆ, ವಿಧಾನಸಭೆಯಲ್ಲಿ ಮಸೂದೆ ಮಂಡನೆ, BJP ವಿರೋಧ

ಬೆಳಗಾವಿ : ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ…

1 hour ago