ಆಂದೋಲನ ಪುರವಣಿ

ಯುವ ಡಾಟ್‌ ಕಾಂ :ಚಾಟ್ ಜಿ ಪಿ ಟಿ – ತಂತ್ರಜ್ಞಾನ ಕ್ಷೇತ್ರದ ಹೊಸ ಮಾಂತ್ರಿಕ

ಈ ಹೊಸ ‘ಚಾಟ್ ಜಿ ಪಿ ಟಿ’ ನಿಮಗೆ ವಿಶ್ವದ ಯಾವುದೇ ಮಾಹಿತಿ ಕೇಳಿದರೂ ನೀಡುತ್ತದೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ಗಣಿತದ ಸಮಸ್ಯೆಗಳನ್ನು ಬಗೆಹರಿಸುತ್ತದೆ. ನೀವು ಇಚ್ಛಿಸುವ ವಿಷಯದ ಬಗ್ಗೆ ಪ್ರಬಂಧ ಬರೆಯುತ್ತದೆ. ನಾಟಕಕಾರನಾಗುತ್ತದೆ, ಕಥೆ ಬರೆಯುತ್ತದೆ, ಕ್ಲಿಷ್ಟ ವಿಷಯಗಳ ಬಗ್ಗೆ ವಿದ್ವಾಂಸರಂತೆ ಸಂಶೋಧನಾ ಪ್ರಬಂಧ ಮಂಡಿಸುತ್ತದೆ, ಪರೀಕ್ಷೆಯನ್ನೂ ಬರೆಯುತ್ತದೆ.

– ಪ್ರಕಾಶ್ ರಾವಂದೂರ್

ಸಂಜೆ ಮನೆಗೆ ಬಂದವನೇ, 6ನೇ ತರಗತಿ ಓದುತ್ತಿರುವ ನನ್ನ ಮಗನಿಗೆ ಆಗತಾನೇ ನಾನು ಓದಿದ್ದ ಕೃತಕ ಬುದ್ಧಿಮತ್ತೆಯ ಒಂದು ತಂತ್ರಜ್ಞಾನದ ಬಗ್ಗೆ ತಿಳಿಸಿದೆ.
ಆತನ ಕಿವಿ ನೆಟ್ಟಗಾದವು. ಪರೀಕ್ಷಿಸುತ್ತೇನೆಂದು ಐಪ್ಯಾಡ್ ತಂದವನು ನಾ ತಿಳಿಸಿದ ವೆಬ್ ಸೈಟ್ ಗೆ ಹೋಗಿ ಸೈನ್ ಇನ್ ಮಾಡಿದ. ನಂತರ ಕೃತಕ ಬುದ್ಧಿಮತ್ತೆಯ ಚಾಟ್ ಬಾಟ್ ಗೆ ಐಸ್ ಕ್ರೀಮ್ ಮೇಲೆ ಒಂದು ಪದ್ಯ ಬರೆಯಲು ಹೇಳಿದ (ಪ್ರಾಂಪ್ಟ್), ತಕ್ಷಣವೇ ಅದು ಆಶು ಕವಿಯಂತೆ 12 ಸಾಲಿನ ಒಂದು ಸುಂದರ ಪದ್ಯ ಬರೆದು ತೋರಿತು. ನಂತರ ಅಂದು ಅದು ಸೋಷಿಯಲ್ ಸೈನ್ಸ್ ಟೀಚರ್ ಹೇಳಿದ್ದ ಭಾರತದ ಮೇಲಿನ ಒಂದು ಪ್ರಬಂಧ ಬರೆಯಲು ಹೇಳಿದ, ತಕ್ಷಣವೇ ಅದು ಹಲವಾರು ಸಾಲುಗಳ ಒಂದು ಉತ್ತಮ ಪ್ರಬಂಧವನ್ನೇ ಬರೆದು ಆತನ ಮುಂದಿಟ್ಟಿತು. ನೋಡೋಣವೆಂದು ಹವಾಮಾನ ವೈಪರೀತ್ಯದ ಮೇಲೆ ಒಂದು ನಾಟಕವನ್ನು ಬರೆಉಲು ಹೇಳಿದ, ಅದು ಒಬ್ಬ ನಾಟಕಕಾರನಂತೆ ಎರಡು ಅಂಕಗಳನ್ನೊಳಗೊಂಡ ಒಂದು ಪುಟ್ಟ ನಾಟಕವನ್ನು ಅವನೆದುರೇ ಕ್ಷಣ ವಾತ್ರದಲ್ಲಿ ಬರೆದು ತೋರಿಸಿತು. ಗಣಿತದ ಪ್ರಶ್ನೆಯೊಂದನ್ನು ಅದರ ಮುಂದಿಟ್ಟ ತಕ್ಷಣವೇ ಉತ್ತರ ನೀಡಿತು…!

ಈ ಎಲ್ಲಾ ಕೆಲಸಗಳನ್ನು ಮಾಡಿದ್ದು ನವೆಂಬರ್ ತಿಂಗಳ 30 ರಂದು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ ನಗರದ ‘ಓಪನ್‌ಎಐ’ ಎಂಬ ಕಂಪೆನಿ ಹೊರತಂದಿರುವ ಕೃತಕ ಬುದ್ಧಿಮತ್ತೆಯ ‘ಚಾಟ್ ಜಿ ಪಿ ಟಿ’ ಎಂಬ ಒಂದು ಚಾಟ್ ಬಾಟ್.

‘ಚಾಟ್ ಬಾಟ್’ ಎಂದರೆ ಅಂತರ್ಜಾಲದಲ್ಲಿ ಮನುಷ್ಯರೊಂದಿಗೆ ಸಂವಾದಿಸುವ ಒಂದು ಕಂಪ್ಯೂಟರ್ ಪ್ರೋಗ್ರಾಮ್. ಇದನ್ನು ನಡೆಸಲು ಅದು ಕೃತಕ ಬುದ್ಧಿಮತ್ತೆ ಹಾಗೂ ಸಹಜ ಭಾಷಾ ಸಂಸ್ಕರಣೆಯ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತದೆ. ಉದಾಹರಣೆಗೆ ನೀವು ಎಲ್ ಐ ಸಿ ಕಂಪೆನಿಯ ವೆಬ್ ಸೈಟ್ ಪ್ರವೇಶಿಸುತ್ತಿದ್ದಂತೆ ಮೂಲೆಯಿಂದ ಹೊರಹೊಮ್ಮುವ ಚಾಟ್ ಬಾಟ್ ನನ್ನಿಂದ ನಿಮಗೆ ಏನಾದರೂ ಸಹಾಯ ಬೇಕೇ ಎಂದು ನಿಮ್ಮನ್ನು ಕೇಳುತ್ತದೆ. ನೀವು ಎಲ್ ಐ ಸಿ ಪಾಲಿಸಿಗಳ ಬಗೆಗೆ ಮಾಹಿತಿ ಬೇಕೆಂದು ಟೈಪ್ ಮಾಡಿದರೆ ವಿವರಗಳನ್ನು ತೆರೆದಿಡುತ್ತದೆ.

ಇದುವರೆವಿಗೂ ನಿಮಗೆ ಯಾವುದಾದರೂ ವಿಷಯಗಳ ಬಗ್ಗೆ ಮಾಹಿತಿ ಬೇಕೆಂದರೆ ಗೂಗಲ್ ಬಳಸುತ್ತಿದ್ದೀರಿ. ಆದರೆ ಈಗ ಈ ಚಾಟ್ ಜಿ ಪಿ ಟಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ನಿಮ್ಮ ಉದ್ದೇಶಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತದೆ.

ಹಲವಾರು ವರ್ಷಗಳಿಂದ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಮೇಲೆ ಅವಲಂಬಿತವಾಗಿ ಉತ್ತರಗಳನ್ನು ಹೊರ ಹಾಕುವುದರಿಂದ ಕೆಲವೊಮ್ಮೆ ಇದು ನೀಡುವ ಉತ್ತರವೆಲ್ಲವೂ ಪೂರ್ಣ ಸತ್ಯವೆಂದೇನಿಲ್ಲ. ಈ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರದ ‘ಓಪನ್ ಎಐ’ ಎಂಬ ಒಂದು ಸಂಶೋಧನಾ ಸಂಸ್ಥೆ. ಇದನ್ನು 2015ರಲ್ಲಿ ಸುಪ್ರಸಿದ್ಧ ಹಾಗೂ ಇಂದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಹಾಗೂ ಈಗ ಈ ಸಂಸ್ಥೆಯ ಸಿಇಓ ಆಗಿರುವ ಸ್ಯಾಮ್ ಆಲ್ಟ್  ಮ್ಯಾನ್. ಈ ಸಂಸ್ಥೆಗೆ ಮೈಕ್ರೋಸಾಫ್ಟ್, ಭಾರತೀಯ ಮೂಲದ ವಿನೋದ್ ಕೋಸ್ಲಾರ, ಕೋಸ್ಲಾ ವೆಂಚರ್ಸ್ ಸೇರಿದಂತೆ ಸುಮಾರು 10 ಕಂಪೆನಿಗಳು ಬಿಲಿಯನ್ ಡಾಲರ್ ಗಟ್ಟಲೆ ಬಂಡವಾಳ ಹೂಡಿವೆ.

ಭವಿಷ್ಯದಲ್ಲಿ ಈ ಕೃತಕ ಬುದ್ಧಿಮತ್ತೆಯ ಬಳಕೆಯು ಮಾನವನ ಒಳಿತಿಗೆ ಮಾತ್ರ ಬಳಕೆಯಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಹಲವು ಕ್ಷೇತ್ರಗಳಲ್ಲಿ ಇದರ ಅನುಕೂಲತೆಗಳ ಬಗ್ಗೆ ಅಪಾರ ಮೆಚ್ಚುಗೆ ಇದ್ದರೆ, ಶಿಕ್ಷಣ, ಉದ್ಯೋಗ ಹಾಗೂ ಇನ್ನಿತರ ಕ್ಷೇತ್ರಗಳ ಮೇಲೆ ಆಗಬಹುದಾದ ಅನಾಹುತಗಳ ಲೆಕ್ಕಾಚಾರ ನಡೆಯುತ್ತಿದೆ.

ಶೇ.20 ರಷ್ಟು ಉದ್ಯೋಗಗಳನ್ನು ಇದು ತಗ್ಗಿಸಬಹುದು.!, ಸಂಶೋಧನೆ ಮೊಟಕುಗೊಳಿಸಬಹುದು, ಭಾಷಾ ಕಲಿಕೆ ಕುಂಠಿತ ಗೊಳಿಸಬಹುದು, ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು, ಸಂಶೋಧನಾ ಪ್ರಬಂಧಗಳನ್ನು ಮಂಡಿಸುವಾಗ ಮೋಸಮಾಡುವುದು, ಸ್ವಂತವಾಗಿ ಹೋಮ್‌ವರ್ಕ್ ಮಾಡುವುದು ಬಿಟ್ಟು ಇದರ ಮೇಲೆ ಅವಲಂಬಿತವಾಗಬಹುದು ಎಂಬ ಹಲವು ಕಳವಳಗಳು ಸೃಷ್ಟಿಯಾಗಿವೆ. ಅಮೇರಿಕದ ಕೆಲವು ಶಾಲೆಗಳಲ್ಲಿ ಇದರ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಇದರ ಬಳಕೆಯಿಂದ ಮೋಸ ಮಾಡುವುದನ್ನು ಕಂಡುಹಿಡಿಯುವ ಆ್ಯಪ್‌ಗಳೂ ಬಂದಿವೆ.

– ಪ್ರಕಾಶ್ ರಾವಂದೂರ್

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

30 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago