ಪ್ರಾಚೀನ ಭಾಷೆ ಸಂಸ್ಕೃತದಲ್ಲಿ ಇರುವ ಹಲವಾರು ಶ್ಲೋಕಗಳು ದೇಹದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಏನೇನು ಮಾಡಬೇಕು, ಏನೇನು ಮಾಡಬಾರದು ಎನ್ನುವುದನ್ನು ಸಂಕ್ಷಿಪ್ತವಾಗಿ ತಿಳಿಸುತ್ತವೆ. ಆಯುರ್ವೇದದಲ್ಲಿ ಇವುಗಳ ಉಲ್ಲೇಖ ಇದೆ. ಪುಟ್ಟದಾಗಿ ಇರುವ ಶ್ಲೋಕಗಳು ದೊಡ್ಡ ದೊಡ್ಡ ಅರ್ಥಗಳನ್ನು ಒಳಗೊಂಡಿವೆ. ಅಂತಹ ೨೦ ಶ್ಲೋಕಗಳು ಇಲ್ಲಿದ್ದು, ಇವುಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ, ನಿತ್ಯವೂ ಇವುಗಳ ಪಾಲನೆ ಮಾಡಿದರೆ ಉತ್ತಮ ಆರೋಗ್ಯ ಹೊಂದಬಹುದು.
೧. ಅಜೀರಣೀ ಭೋಜನಂ ವಿಷಮ್
ಮೊದಲು ತಿಂದ ಆಹಾರ ಜೀರ್ಣವಾಗದೆ ಇರುವಾಗ, ಮುಂದಿನ ಆಹಾರ ತಿಂದಲ್ಲಿ, ಅದು ವಿಷದಂತೆ ಪರಿಣಾಮ ಬೀರುತ್ತದೆ.
೨. ಅರ್ಧೋಗಹರಿ ನಿದ್ರಾ
ಸರಿಯಾದ ನಿದ್ರೆ ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ.
೩. ಮುದ್ಗಧಾಲಿ ಗಾಧವ್ಯಾಲಿ
ಎಲ್ಲ ದ್ವಿದಳ ಧಾನ್ಯಗಳಲ್ಲಿ, ಹೆಸರು ಬೇಳೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
೪. ಬಗ್ನಾಸ್ತಿ ಸಂಧಾನಕರೋ ರಸೋನಹ
ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಸೇರಿಸುತ್ತದೆ.
೫. ಅತಿ ಸರ್ವತ್ರ ವರ್ಜೆoತ್
ಅತಿಯಾಗಿ ಸೇವಿಸುವ ಯಾ ವುದಾದರೂ, ಅದು ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ.
೬. ನಾಸ್ತಿಮೂಲಂ ಅನೌಷಧಂ
ಯಾವುದೇ ಔಷಧೀಯ ಪ್ರಯೋಜನವಿಲ್ಲದೆ ಯಾವುದೇ ತರಕಾರಿ ಇಲ್ಲ.
೭. ನಾ ವೈದ್ಯಃ ಪ್ರಭುರಾಯುಷ
ಯಾವ ವೈದ್ಯರೂ ನಮ್ಮ ದೀರ್ಘಾಯುಷ್ಯದ ಅಧಿಪತಿ ಅಲ್ಲ. ವೈದ್ಯರಿಗೂ ಮಿತಿಗಳಿವೆ.
೮. ಚಿಂತಾ ವ್ಯಾಧಿ ಪ್ರಕಾಶುಂ
ಚಿಂತೆ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ.
೯. ವ್ಯಾಯುವಾಶ್ಚ ಸನೈಹಿ ಸನೈಹಿ
ಯಾವುದೇ ವ್ಯಾಯಾಮವನ್ನು ನಿಧಾನವಾಗಿ ವಾಡಿ. ವೇಗದ ವ್ಯಾಯಾಮ ಒಳ್ಳೆಯದಲ್ಲ.
೧೦. ಅಜಾವತ್ ಚರ್ವಣಂ ಕೊಮ್ಯಾರ್ಯ
ನಿಮ್ಮ ಆಹಾರವನ್ನು ಮೇಕೆುಯoತೆ ಅಗಿಯಿರಿ, ಆತುರದಿಂದ ಆಹಾರವನ್ನು ನುಂಗಬೇಡಿ.
೧೧. ಸ್ನಾನ ನಾಮ ಮನಃಪ್ರಸಾದನಕಾರಂ ದುಃಸ್ವಪ್ನ ವಿಧವಾಸನಮ್
ಸ್ನಾನವು ಖಿನ್ನತೆಯನ್ನು ತೆಗೆದುಹಾಕುತ್ತದೆ. ಇದು ಕೆಟ್ಟ ಕನಸುಗಳನ್ನು ದೂರ ವಾಡುತ್ತದೆ.
೧೨. ನ ಸ್ನಾನಮ್ ಆಚರೇತ್ ಭುಕ್ತಾ
ಆಹಾರದ ನಂತರ ಎಂದಿಗೂ ಸ್ನಾನ ವಾಡಬೇಡಿ.
೧೩. ನಾಸ್ತಿ ಮೇಘಸಮಂ ತೋಯಮ್
ಮಳೆನೀರಿಗೆ ಶುದ್ಧತೆುಂಲ್ಲಿ ಯಾವುದೂ ಸಮವಿಲ್ಲ.
೧೪. ಅಜೀರ್ಣೆ ಭೇಷಜಂ ವಾರಿ
ಅಜೀರ್ಣವನ್ನು ಸರಳ ನೀರು ಕುಡಿುಯುವ ಮೂಲಕ ಪರಿಹರಿಸಬಹುದು.
೧೫. ಸರ್ವತ್ರ ನೂತನಂ ಷಷ್ಠಂ ಸೇವಕನ್ನೇ ಪುರಥನಮ್
ಎಲ್ಲವೂ ತಾಜಾ ಇರುವಂತೆ ಯಾವಾಗಲೂ ಬುಂಸುತ್ತವೆ.
ಹಳೆ ಅನ್ನ ಮತ್ತು ಹಳೆಯ ಸೇವಕರನ್ನು ಹೊಸದಾಗಿಸಬೇಕು.
೧೬. ನಿತ್ಯಂ ಸರ್ವಾ ರಸಾಭ್ಯಾಸಃ
ಎಲ್ಲ ರುಚಿಯನ್ನು ಹೊಂದಿರುವ ಸಂಪೂರ್ಣ ಆಹಾರವನ್ನು ತೆಗೆದುಕೊಳ್ಳಿ (ಉಪ್ಪು, ಸಿಹಿ, ಕಹಿ, ಹುಳಿ, ಖಾರ ಮತ್ತು ಒಗರು)…
೧೭. ಜಾತಾರಂ ಪೂರೆುಧಾರ್ಧಂ ಅಣ್ಣಾಹಿ
ನಿಮ್ಮ ಹೊಟ್ಟೆಯ ಅರ್ಧಭಾಗವನ್ನು ಘನ ಆಹಾರದಿಂದ ತುಂಬಿಸಿ, ಕಾಲು ಭಾಗದಷ್ಟು ನೀರನ್ನು ತುಂಬಿಸಿ ಮತ್ತು ಉಳಿದದ್ದನ್ನು ಖಾಲಿ ಬಿಡಿ.
೧೮ ಭುಕ್ತ್ರೋಪ ವಿಶಾಥಸ್ಥಾಂದ್ರಾ
ಆಹಾರ ತೆಗೆದುಕೊಂಡ ನಂತರ ಎಂದಿಗೂ ಸುಮ್ಮನೆ ಕುಳಿತುಕೊಳ್ಳಬೇಡಿ. ಅರ್ಧ ಗಂಟೆಯ ನಂತರ ಕನಿಷ್ಟ ಹದಿನೈದು ನಿಮಿಷ ನಡೆಯಿರಿ.
೧೯. ಚಿಂತಾ ಜರಾಣಾಂ ಮನುಷ್ಯನಮ್
ಚಿಂತೆ ವೃದ್ಧಾಪ್ಯವನ್ನು ಬೇಗ ತರುತ್ತದೆ.
೨೦. ಸತಂ ವಿಹಾಯ ನು ಕೆಭೋಕ್ತವ್ಯಮ್
ಆಹಾರಕ್ಕೆ ಸಮುಂ ಬಂದಾಗ, ನೂರು ಉದ್ಯೋಗಗಳಿದ್ದರೂ ಬದಿಗಿಡಿ.
ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್…
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…
ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…
ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…
ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…
ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…