ಆಂದೋಲನ ಪುರವಣಿ

ಯೋಗ ಕ್ಷೇಮ : ಮಾನಸಿಕ ಆರೋಗ್ಯಕ್ಕೆ ಜೀವನ ಕೌಶಲವೇ ಮೂಲ

ವರ್ತಮಾನದಲ್ಲಿ ಬದುಕಲು ಕಲಿಯಿರಿ; ಸಾಧನೆಯ ಹಾದಿ ಹಿಡಿಯಿರಿ

ಕರುಣಾಲಕ್ಷ್ಮೀ.ಕೆ.ಎಸ್., ಸಹಾಯಕ ಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಬೆಟ್ಟಂಪಾಡಿ.

ಮಾನಸಿಕ ಆರೋಗ್ಯ ಶಾರೀರಿಕ ಆರೋಗ್ಯದಷ್ಟೇ ಮಹತ್ವವುಳ್ಳದ್ದು. ಮನಸ್ಸು ಶರೀರದ ಸಾರಥಿಯಿದ್ದಂತೆ. ಹಾಗಾಗಿಯೇ ಜನಪದರು ‘ಮನಸ್ಸಿದ್ದರೆ ಮಾದೇವ’ ಎಂದಿರುವುದು. ಇಂದಿನ ಧಾವಂತದ ದಿನಗಳಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯ ಒತ್ತಡಗಳಿಗೆ, ಮಾನಸಿಕ ಕ್ಷೋಭೆಗಳಿಗೆ ಒಳಗಾಗುತ್ತಿರುತ್ತಾರೆ. ಇದೇ ಸಾಧನೆಗೆ ತೊಡಕಾಗುವುದು ಸಹಜ. ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಬದುಕಿನಲ್ಲಿ ಸಮಸ್ಥಿತಿಯನ್ನು ರೂಢಿಸಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ.

ರೋಗ-ರುಜಿನಗಳು, ಅವಘಡಗಳು, ಆರ್ಥಿಕ ಸಮಸ್ಯೆಗಳು, ಸಂಬಂಧಗಳ ಬಿರುಕುಗಳು ಸೇರಿ ಹಲವಾರು ಕಾರಣಗಳಿಂದ ಮನಸ್ಸು ಮುದುಡುತ್ತದೆ. ಇದು ಎಲ್ಲರ ಬಾಳಲ್ಲೂ ಸಹಜ. ಆದರೆ ಮನಸ್ಸನ್ನು ಮರಳಿ ಅರಳಿಸಿಕೊಳ್ಳಬೇಕು. ಇಲ್ಲದೇ ಹೋದರೆ ಖಿನ್ನತೆ ಆವರಿಸಿಕೊಂಡು ಮಾನಸಿಕ ಆರೋಗ್ಯ ಕೆಡಬಹುದು.

ವರ್ತಮಾನದಲ್ಲಿ ಜೀವಿಸಿ

‘ಬಾರದು ಬಪ್ಪುದು, ಬಪ್ಪುದು ತಪ್ಪದು’ ಎಂಬುದು ಡಿ.ವಿ.ಗುಂಡಪ್ಪನವರ ವಾಣಿ. ಇದನ್ನು ಮನನ ಮಾಡಿಕೊಂಡು ಆಸೆಗಳಿಗೆ ಕಡಿವಾಣ ಹಾಕುವುದು, ಸಮಚಿತ್ತವನ್ನು ಕಾಯ್ದುಕೊಂಡರೆ ಮಾನಸಿಕ ಆರೋಗ್ಯ ಉತ್ತಮವಾಗಿ ಇರುತ್ತದೆ. ವ್ಯಕ್ತಿ ವರ್ತಮಾನದಲ್ಲಿ ಜೀವಿಸುವುದು ಬಹಳ ಮುಖ್ಯ. ಸಾಮಾನ್ಯವಾಗಿ ಬಹುತೇಕರು ವರ್ತಮಾನದ ಸ್ಥಿತಿಯನ್ನು ಅನುಭವಿಸದೆ ಹಿಂದಿನ ಘಟನೆಗಳನ್ನು ಮೆಲುಕು ಹಾಕುತ್ತಾ ಸುಖಿಸುತ್ತಲೋ, ದುಃಖಿಸುತ್ತಲೋ ಕೊರಗುತ್ತಲೋ ಇರುತ್ತಾರೆ. ಹಾಗೆೆಯೇ ಮುಂದಿನದನ್ನು ಕಲ್ಪಿಸಿಕೊಳ್ಳುತ್ತಾ ಕಳವಳಪಡುತ್ತಲೋ ಅಥವಾ ಮನಸ್ಸಿನಲ್ಲಿೆಯೇ ಕಲ್ಪನೆಯ ಮಹಲನ್ನು ಕಟ್ಟುತ್ತಲೋ ಸಂಭ್ರಮಿಸುತ್ತಿರುತ್ತಾರೆ. ಭೂತಕಾಲದ ಕಾಡುವಿಕೆ, ಭವಿಷ್ಯದ ಕನವರಿಕೆ ಎರಡೂ ಸಾಧನೆಯ ಮಾರ್ಗದಲ್ಲಿ ಅಡೆತಡೆಗಳನ್ನುಉಂಟುಮಾಡುತ್ತವೆ. ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತವೆ.

ಊರ್ಮಿಳೆಯ ಪ್ರಸಂಗ

ಲಕ್ಷ್ಮಣ ತನ್ನ ಅಗ್ರಜನಾದ ರಾಮರೊಡನೆ ಕಾಡಿಗೆ ಹೊರಟು ನಿಂತಾಗ ಪತ್ನಿ ಊರ್ಮಿಳೆಗಾದ ಮಾನಸಿಕ ಕ್ಷೋಭೆ ಅಷ್ಟಿಷ್ಟಲ್ಲ. ಆ ಮಾನಸಿಕ ಆಘಾತದಿಂದ ಆಕೆ ಕುಸಿದುಹೋಗುತ್ತಾಳೆ. ಹದಿನಾಲ್ಕು ವರ್ಷಗಳ ದೀರ್ಘಕಾಲ ಅಳುತ್ತಾ, ಕೊರಗುತ್ತಿದ್ದರೂ ಕಾಲ ಕಳೆಯುತ್ತದೆ, ಅಥವಾ ಯಾವುದಾದರೂ ರಚನಾತ್ಮಕ ಕಾರ್ಯಕ್ರಮಗಳನ್ನು ಮAಡುತ್ತಿದ್ದರೂ ಕಾಲ ಕಳೆಯುತ್ತದೆ ಎಂಬ ಅರಿವು ಬಂದೊಡನೆ ಆಕೆ ಆ ಹದಿನಾಲ್ಕು ವರ್ಷಗಳನ್ನು ರಚನಾತ್ಮಕವಾಗಿ ಕಳೆಯುತ್ತಾಳೆ. ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಾಳೆ. ಇದೇ ರೀತಿ ಸೀತೆಯೂ ಗಂಡನೊಡನೆ ಕಾಡಿಗೆ ಹೋಗಿ ಕುಟೀರವನ್ನೇ ರಾಜಭವನವೆಂದು ಸಂಭ್ರಮಿಸುತ್ತ ಕಷ್ಟದ ದಿನಗಳನ್ನು ದಾಟುತ್ತಾಳೆ. ಇಂತಹ ವೇಳೆಯಲ್ಲಿ ಮಾನಸಿಕವಾಗಿ ಗಟ್ಟಿಯಾಗಿ ಇರದೇ ಇದ್ದರೆ ಆರೋಗ್ಯ ಕೆಡುವುದು ಸಹಜ ಎಂಬುದನ್ನು ಹಿಂದೆಯು ಪ್ರಮುಖ ಕವಿಗಳಾದ ಮೈಥಿಲೀಶರಣ ಗುಪ್ತರು ತಮ್ಮ ಕಾವ್ಯವಾದ ‘ಸಾಕೇತ’ದಲ್ಲಿ ಬಣ್ಣಿಸಿದ್ದಾರೆ.

ಯುವಕರೇ ತಿಳಿಯಿರಿ

ಇಂದಿನ ಯುವಜನರಲ್ಲಿ ಅದರಲ್ಲೂ ವಿದ್ಯಾರ್ಥಿಗಳಿಗೆ ವರ್ತಮಾನದ ಅರಿವು ಬಹಳ ಮುಖ್ಯ. ಸುಂದರ ಭವಿಷ್ಯದ ಕನಸನ್ನು ಸಾಕಾರಗೊಳಿಸಿಕೊಳ್ಳಲು, ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ವರ್ತಮಾನದಲ್ಲಿ ಬದುಕುವುದು ಮುಖ್ಯ. ಸಾಧಕರ ಜೀವನ ಕ್ರಮಗಳನ್ನು ತಿಳಿದು ಅವರಿಂದ ಪ್ರೇರಣೆ ಪಡೆಯುತ್ತಾ ಧನಾತ್ಮಕ ಮನಃಸ್ಥಿತಿಯನ್ನು ರೂಢಿಸಿಕೊಂಡು ವರ್ತಮಾನದಲ್ಲಿ ಜೀವಿಸಿದರೆ ಉತ್ತಮ ಬದುಕನ್ನು, ಉತ್ತಮ ಮಾನಸಿಕ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

11 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago