ಇನ್ನೇನು ಚಳಿಗಾಲವನ್ನು ಆಹ್ವಾನ ಮಾಡಲಿದ್ದೇವೆ. ಈಗಿರುವಾಗ ಚರ್ಮದ ಕಾಳಜಿ ಅತಿ ಅಗತ್ಯ. ಅದರಲ್ಲಿಯೂ ನಮ್ಮ ತುಟಿಗಳನ್ನು ಚೆನ್ನಾಗಿ ಪೋಷಣೆ ಮಾಡುವುದು ಅತ್ಯವಶ್ಯಕ. ಇಲ್ಲದೇ ಇದ್ದರೆ ತುಟಿಗಳು ಒಡೆದುಕೊಂಡು ಸಮಸ್ಯೆಗಳನ್ನು ತಂದೊಡ್ಡುತ್ತವೆ.
ಚಳಿಗಾಲದಲ್ಲಿ ವಾತಾವಣರದಲ್ಲಿ ಆರ್ದತೆ ಕಡಿಮೆ ಇರುವುದರಿಂದ ಇದು ನೇರವಾಗಿ ಚರ್ಮ ಮತ್ತು ತುಟಿಗಳ ಮೇಲೆ ಪರಿಣಾಮ ಬೀರುತ್ತದೆ. ತುಟಿಗಳು ಒಡೆದುಕೊಳ್ಳುವುದು, ಕೆಲವು ವೇಳೆಯಲ್ಲಿ ಬಿರುಕು ಬಿಡುವುದೂ ಸಾಮಾನ್ಯ. ಈ ವೇಳೆಯಲ್ಲಿ ಸಿಂಪಲ್ ಮನೆಮದ್ದು ಟ್ರೈ ಮಾಡಿದರೆ ಸಮಸ್ಯೆಗೆ ಪರಿಹಾರವಾದೀತು.
ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆ ಹಲವು ಬಗೆಯಲ್ಲಿ ಆರೋಗ್ಯಕ್ಕೆ ಪೂರಕ. ಚರ್ಮದ ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯ ಔಷಧ. ರಾತ್ರಿ ಮಲಗುವ ವೇಳೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಮೈಗೆ, ಕೈ ಕಾಲುಗಳಿಗೆ ತೆಳುವಾಗಿ ಹಚ್ಚುವುದರಿಂದ ಚರ್ಮದ ಆರೋಗ್ಯ ಚೆನ್ನಾಗಿ ಇರುತ್ತದೆ. ಇದರೊಂದಿಗೆ ತುಟಿಗಳಿಗೂ ಹಚ್ಚುವುದರಿಂದ ತುಟಿಗಳು ಬೇಗನೇ ಒಣಗುವುದಿಲ್ಲ. ಇದರಿಂದ ಒಡೆದುಕೊಳ್ಳುವುದೂ ಇಲ್ಲ.
ಆಲೋವೆರಾ
ಇಂದು ಮಾರುಕಟ್ಟೆಯಲ್ಲಿ ಆಲೋವೆರಾ ಜೆಲ್‌ಗಳು ಸಾಕಷ್ಟು ಸಿಗುತ್ತವೆ. ಇದರ ಜೊತೆಗೆ ನೈಸರ್ಗಿಕವಾಗಿಯೂ ಆಲೋವೆರಾ ಸಿಗುತ್ತದೆ. ಇವುಗಳ ಲೋಳೆಯನ್ನು ಸಂಗ್ರಹ ಮಾಡಿ ತುಟಿಗಳಿಗೆ, ಚರ್ಮಗಳಿಗೆ ಹಚ್ಚುವುದು ಸೂಕ್ತ. ಇದು ಚರ್ಮ ಮತ್ತು ತುಟಿಗಳ ಮೇಲೆ ತಾವಾಂಶ ಹೆಚ್ಚಿನ ಸಮಯ ಇರುವಂತೆ ನೋಡಿಕೊಳ್ಳುತ್ತದೆ. ಇದರಿಂದ ತುಟಿಗಳು ಸುರಕ್ಷಿತವಾಗಿರುತ್ತವೆ.
ಹಾಲಿನ ಕೆನೆ, ತುಪ್ಪ
ರಾತ್ರಿ ಮಲಗುವ ವೇಳೆಯಲ್ಲಿ ತುಟಿಗಳ ಮೇಲೆ ಹಾಲಿನ ಕೆನೆ ಅಥವಾ ತುಪ್ಪವನ್ನು ತೆಳುವಾಗಿ ಹಚ್ಚುವುದು ಒಳ್ಳೆಯದ್ದು. ಇದರಲ್ಲಿ ಇರುವ ಜಿಡ್ಡಿನ ಅಂಶವು ತುಟಿಗಳನ್ನು ಮೃದು ಮಾಡುತ್ತದೆ. ಅಲ್ಲದೇ ಶುಷ್ಕತೆಯನ್ನು ನಿವಾರಿಸಿ ತೇವಾಂಶ ಉಳಿದುಕೊಳ್ಳುವಂತೆ ಮಾಡುತ್ತದೆ.
ಸಕ್ಕರೆ ಲೇಪನ
ಒಂದು ವೇಳೆ ತುಟಿಗಳು ಈಗಾಗಲೇ ಒಡೆದುಕೊಂಡಿದ್ದರೆ ತುಟಿಗಳಿಗೆ ತೆಳುವಾಗಿ ಸಕ್ಕರೆಯನ್ನು ಅಂಟಿಸಿಕೊಳ್ಳುವುದು ಒಳ್ಳೆಯದ್ದು. ಇದು ಈಗಾಗಲೇ ಒಡೆದಿರುವ ತುಟಿಯ ಮೇಲಿನ ಚರ್ಮವು ಬೀಳಲು ಸಹಕರಿಸುತ್ತದೆ. ಅಲ್ಲದೇ ಸಣ್ಣ ಪ್ರಮಾಣದ ಉರಿ ಇದ್ದರೆ ಅದು ಕಡಿಮೆಯಾಗುತ್ತದೆ.
ವ್ಯಾಸಲೀನ್ ಬಳಕೆ
ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ವ್ಯಾಸಲೀನ್‌ಗಳು ಲಭ್ಯ. ಕೆಲವನ್ನು ಚರ್ಮಕ್ಕೆ ಮಾತ್ರ ಲೇಪಿಸಬಹುದು. ತುಟಿಗಳಿಗಾಗಿಯೇ ಕೆಲವಾರು ಉತ್ಪನ್ನಗಳು ಲಭ್ಯವಿದ್ದು, ಅವುಗಳ ಬಳಕೆ ಮಾಡಬಹುದು. ಅಲ್ಲದೇ ಹೆಚ್ಚಿನ ಪ್ರಮಾಣದ ನೀರಿನ ಸೇವನೆಯಿಂದಲೂ ತುಟಿಗಳ ರಕ್ಷಣೆ ಸಾಧ್ಯ. ಹೆಚ್ಚು ನೀರು ಸೇವಿಸುವುದರಿಂದ ದೇಹದಲ್ಲಿ ತೇವಾಂಶ ಉಳಿಯುತ್ತದೆ. ಇದು ಚರ್ಮದ ರಕ್ಷಣೆಗೆ ಪೂರಕ.
ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು ಎಂಬ…
ಬೆಂಗಳೂರು: ವಿಕಲಚೇತನರಿಗಾಗಿಯೇ ಮುಂದಿನ ಮೂರು ತಿಂಗಳಲ್ಲಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್…
ಕೊಡಗು: ಜಿಲ್ಲೆಯಲ್ಲಿ ಆನೆ–ಮಾನವ ಸಂಘರ್ಷ ಮತ್ತೆ ಜೀವ ಬಲಿ ಪಡೆದಿದೆ. ಸಿದ್ದಾಪುರ ಸಮೀಪದ ಗೌರಿ ಬೆಟ್ಟ ಬಳಿ ಕಾಡಾನೆ ದಾಳಿಗೆ…
ಮಡಿಕೇರಿ: ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಕತೆ ಕಟ್ಟುತ್ತಿದ್ದಾರೆ ಎಂದು…
ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ಶಾಲಾ ಬಸ್ಸನ್ನು ಒಂಟಿ ಸಲಗ ಅಟ್ಟಿಸಿಕೊಂಡು ಬಂದ ಘಟನೆ…
ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು…