ಜಿಲ್ಲೆಗಳು

ಕಪಿಲೆಯ ಕಿನಾರೆಯಲ್ಲಿ ‘ಆಂದೋಲನ’ ಸಮ್ಮಿಲನ

‘ರಾಜಿಯಾಗದ ಕೋಟಿ; ನಂಜನಗೂಡಿನಲ್ಲಿ ‘ಆಂದೋಲನ’ ೫೦ರ ಸಾರ್ಥಕ ಪಯಣ  ಕಾರ್ಯಕ್ರಮದಲ್ಲಿ ಗಣ್ಯರ  ಅಭಿಮತ

ನಂಜನಗೂಡು: ಜನರಿಂದ ತುಂಬಿತುಳುಕಿದ ಸಭಾಂಗಣದಲ್ಲಿ ನೆನಪುಗಳ ಭೋರ್ಗರೆತ… ಅರ್ಧ ಶತಮಾನದಿಂದಲೂ ಓದುಗರ ಎದೆಯಲ್ಲಿ ಬೇರುಬಿಟ್ಟು, ತನ್ನದೇ ಛಾಪು ಮೂಡಿಸಿರುವ ‘ಆಂದೋಲನ’ ದಿನಪತ್ರಿಕೆಯ ಜತೆಗಿನ ಬಾಂಧವ್ಯದ ನೆನಪುಗಳ ಮಧುರ ಝೇಂಕಾರಕ್ಕೆ ಸಭಿಕರು ಮಾರುಹೋಗಿದ್ದರು; ಗಣ್ಯರ ,ಮಾತುಗಳಿಗೆ ಕಿವಿಯಾಗಿದ್ದರು.

ನಗರದ ಪಿ.ವಿಜಯಲಕ್ಷ್ಮೀ ನಾರಾಯಣ ರೆಡ್ಡಿ ಯಾತ್ರಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಆಂದೋಲನ ೫೦ ಸಾರ್ಥಕ ಪಯಣ’- ನಂಜನಗೂಡು ತಾಲ್ಲೂಕು ೫೦ ವರ್ಷಗಳ ಮುನ್ನೋಟ ಕಾರ್ಈಯಕ್ರಮದಲ್ಲಿ ದೃಶ್ಯ ಕಂಡುಬಂತು.
‘ಪತ್ರಿಕೆ’ ಮತ್ತು ಅದರ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಸೈದ್ಧಾಂತಿಕ ಹಾದಿಯ ಸ್ಮರಣೆಯೊಂದಿಗೆ ಪತ್ರಿಕೆಗಳ ಜವಾಬ್ದಾರಿ ಮತ್ತು ಪೀತ ಪತ್ರಿಕೋದ್ಯಮ ಅಪಾಯದ ಬಗ್ಗೆ ಚಿಂತನೆಗಳನ್ನು ಕೆಲ ಅತಿಥಿಗಳು ಹಂಚಿಕೊಂಡರು. ಆಗಾಗ ಅವರ ಮಾತು ರಾಜಕೀಯ ಸೆಳೆತಕ್ಕೆ ಒಳಗಾದರೂ ತಕ್ಷಣವೇ ಎಚ್ಚೆತ್ತು, ಅದಕ್ಕೆ ಇದು ವೇದಿಕೆಯಲ್ಲ ಎಂದು ಮತ್ತೆ ‘ಆಂದೋಲನ’ದ ಹೆಜ್ಜೆ ಗುರುತುಗಳ ಬಗ್ಗೆ ಮಾತು ಮುಂದುವರಿಸಿದರು. ಅಲ್ಲದೆ, ಹಲವರು ‘ಆಂದೋಲನ’ ಶತಮಾನ ಪೂರ್ಣಗೊಳಿಸಿ ಮುಂದೆ ಸಾಗಲಿ ಎಂದು ಹರಸಿದರು.

ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು, ರಾಜಶೇಖರ ಕೋಟಿ ಅವರು ಸಮಾಜವಾದಿಯಾಗಿದ್ದು, ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಮೈಸೂರು ಭಾಗದಲ್ಲಿ ‘ಪತ್ರಿಕೆಯನ್ನು ಹಲವಾರು ಸಂಕಷ್ಟಗಳ ನಡುವೆಯೋ ಬೆಳೆಸಿದರು. ಅದಕ್ಕೆ ಕಷ್ಟಗಳಿಗೆ ಎದೆಗುಂದದ ಅವರ ವ್ಯಕ್ತಿತ್ವವೇ ಕಾರಣ. ೫೦ ವರ್ಷಗಳು ಒಂದು ಪತ್ರಿಕೆಯನ್ನು ನಿರಂತರವಾಗಿ ಹೊರತರುವುದು ಸುಲಭದ ಮಾತಲ್ಲ. ಪ್ರತಿದಿನ ಬೆಳಿಗ್ಗೆ ಹೊತ್ತು ‘ಆಂದೋಲನ’ ಓದುತ್ತಿದ್ದಂತೆೆಯೇ ಕೋಟಿ ಅವರ ನೆನಪು ಕಾಡುತ್ತದೆ ಎಂದು ಭಾವುಕರಾಗಿ ನುಡಿದರು.
ಸಮಾಜದ ಬಗ್ಗೆ ಕೋಟಿ ಅವರಿಗೆ ಅಪಾರ ಕಾಳಜಿ ಇತ್ತು. ಅವರು ಯಾವತ್ತೂ ಅಧಿಕಾರಸ್ಥರ ಪರವಾಗಿ ಇರಲಿಲ್ಲ. ಸಮಾಜವಾದಿ ಹೋರಾಟಗಾರ ರಾಮ ಮನೋಹರ ಲೋಹಿಯಾ ಅವರು, ‘ಏನಾದರೂ ಆಗು, ಆದರೆ ಅಧಿಕಾರಕ್ಕಾಗಿ ಸಿದ್ಧಾಂತದ ಜೊತೆಗೆ ರಾಜಿ ಆಗಬೇಡ’ ಎನ್ನುತ್ತಿದ್ದರು. ಆ ಮಾತನ್ನು ಕೋಟಿ ಅವರು ಅಕ್ಷರಶಃ ಪಾಲಿಸಿದರು. ಅವರು ಉಸಿರು ಇರುವವರೆಗೂ ಸಿದ್ಧಾಂತದ ಜೊತೆಗೆ ರಾಜಿಯಾಗಲಿಲ್ಲ. ನಮ್ಮಿಬ್ಬರದೂ ಮಾನವೀಯತೆಯ ಸಂಬಂಧವಾಗಿತ್ತು ಎಂದು ಪ್ರಸಾದ್ ಸ್ಮರಿಸಿದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ಎರಡು ಬಾರಿ ಅಮೆರಿಕದ ಅಧ್ಯಕ್ಷರಾಗಿದ್ದ ಥಾಮಸ್ ಜಾಫರ್‌ಸನ್ ಅವರು ಪತ್ರಿಕೋದ್ಯಮಯೂ ಆಗಿದ್ದರು. ಅವರು, ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದಿದ್ದರು. ರಾಜಶೇಖರ ಕೋಟಿ ಅವರು ಆರಂಭಿಸಿದ ‘ಆಂದೋಲನ’ ಪತ್ರಿಕೆ ಅದೇ ಮಾದರಿಯಲ್ಲಿ ಇಂದಿಗೂ ಕೆಲಸ ಮಾಡುತ್ತಿದೆ. ಕೋಟಿ ಅವರ ಸಾಮಾಜಿಕ ಕಾಳಜಿ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಹಲವು ಬಾರಿ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಮೈಸೂರಿನ ಶಕ್ತಿಧಾಮ ಮತ್ತು ಒಡನಾಡಿ ಸೇವಾ ಸಂಸ್ಥೆಗಳ ಸ್ಥಾಪನೆಯಲ್ಲಿ ಕೂಡ ಕೋಟಿ ಅವರ ಪಾತ್ರ ಇದೆ ಎಂದು ತಿಳಿಸಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮ್ಮಯ್ಯ ಅವರು ನಂಜನಗೂಡು ತಾಲ್ಲೂಕಿನ ಅಭಿವೃದ್ಧಿಯ ೫೦ ವರ್ಷಗಳ ಮುನ್ನೋಟ- ದಿಕ್ಸೂಚಿ, ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಿದರು. ಅನಾಥ ಶವಗಳಿಗೆ ಅಂತ್ಯಕ್ರಿಯೆ ನಡೆಸುವ ಕಾಯಕ ಮಾಡುತ್ತಿರುವ ಪಾಷ, ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸಿ.ಜೆ.ಆಶಾ, ಪತ್ರಿಕಾ ವಿತರಕ ಬಾಲಸುಬ್ರಹ್ಮಣ್ಯ ಮತ್ತು ನಂಜನಗೂಡಿನಲ್ಲಿ ‘ಆಂದೋಲನ’ ದಿನಪತ್ರಿಕೆಯ ವರದಿಗಾರರಾಗಿದ್ದ ವಕೀಲ ದಿ.ಬಿ.ಜಯದೇವಪ್ಪ ಅವರ ಪತ್ನಿ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.

andolanait

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

6 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

6 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

6 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

6 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

6 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

6 hours ago