ಆಂದೋಲನ ಪುರವಣಿ

ಯೋಗ ಕ್ಷೇಮ : ಸೂರ್ಯ ನಮಸ್ಕಾರ

ಆರೋಗ್ಯವರ್ಧನೆಯ ಸರಳ,ಸುಲಭ ಸೂತ್ರ

-ಭಾರತಿ ನಾಗರಮಠ

ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಈ ಪಂಚ ಮಹಾಭೂತಗಳಿಂದಲೇ ಸೃಷ್ಟಿಯು. ಸಕಲ ಜೀವಿಗಳಿಗೆ ಇವುಗಳೇ ಆಧಾರ.
ಸೂರ್ಯ ನಮಸ್ಕಾರವು ವ್ಯಾಯಾಮ ಮತ್ತು ಯೋಗಾಸನದ ಮಧ್ಯ ಸೇತುವೆ ಇದ್ದ ಹಾಗೆ. ಸೂರ್ಯ ನಮಸ್ಕಾರವನ್ನು ವೇಗವಾಗಿ ಮಾಡಿದರೆ ಅದು ಶೀಥಿಲೀಕರಣ ವ್ಯಾಯಾಮ. ನಿಧಾನವಾಗಿ ಮಾಡಿದರೆ  ಯೋಗಾಸನ. ಉಸಿರಾಟದ ಜೊತೆಗೆ ಮಾಡಿದರೆ ಅದು ಪ್ರಾಣಾಯಾಮ. ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ದೇಹದ ಅಂಗಾಂಗಗಳು ಸಡಿಲಗೊಂಡು ಮುಂದೆ ಆಸನಗಳನ್ನು ಪ್ರಾಣಾಯಾಮಗಳನ್ನು ಮಾಡಲು ಹದಗೊಳ್ಳುತ್ತದೆ. ಸೂರ್ಯ ನಮಸ್ಕಾರದಲ್ಲಿ ಸಂಪೂರ್ಣ ದೇಹ ಚಲನೆಗೊಳ್ಳುವುದರಿಂದ ಯೋಗಾಸನ ಮಾಡಲು ಸಮಯದ ಅಭಾವವಿದ್ದರೆ ಹನ್ನೆರಡು ಸೂರ್ಯ ನಮಸ್ಕಾರ ಮಾಡಿದರೆ ಸಾಕು ಅಂದಿನ ಯೋಗಾಭ್ಯಾಸದ ಕ್ರಿಯೆ ಮುಗಿದಂತೆ. ಇದನ್ನು ಸಮಯದ ಅಭಾವ ಇದ್ದಾಗ ಮಾತ್ರ ವಾಡಬೇಕು.


ಸೂರ್ಯ ನಮಸ್ಕಾರದ ನಿಯಮಗಳು:

* ಆರನೆಯ ವಯಸ್ಸಿನಿಂದ ಸೂರ್ಯ ನಮಸ್ಕಾರವನ್ನು ಪ್ರಾರಂಭಿಸಬಹುದು.
* ಸ್ತ್ರೀ, ಪುರುಷರು, ವೃದ್ಧರೂ ಸೂರ್ಯ  ನಮಸ್ಕಾರ ಮಾಡಬಹುದು.
*ಸೂರ್ಯ ನಮಸ್ಕಾರವನ್ನು ಬೆಳಿಗ್ಗೆ 8 ರವರೆಗೆ, ಸಂಜೆ 5 ರ ನಂತರ ಮಾಡಬಹುದು.
*ಗಾಳಿ, ಬೆಳಕು ಇರುವ ಸ್ವಚ್ಛ ಜಾಗದಲ್ಲಿ ಸೂರ್ಯ ನಮಸ್ಕಾರ ಮಾಡಬೇಕು.
*ಸೂರ್ಯಾಭಿಮುಖವಾಗಿ ಸೂರ್ಯ ನಮಸ್ಕಾರ ಉತ್ತಮ.
*ನೆಲದ ಮೇಲೆ ಜಮಖಾನೆ ಹಾಸಿ ಮತ್ತು ಸಡಿಲವಾದ ಬಟ್ಟೆ ಧರಿಸಿ ಮಾಡಬೇಕು.
* ಸೂರ್ಯ ನಮಸ್ಕಾರವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು.

* ಯಾವುದಾದರೂ ಪಾನೀಯ ಸ್ವೀಕರಿಸಿದ ನಂತರ ಅರ್ಧ ಗಂಟೆ ಬಿಟ್ಟು ಮಾಡಬಹುದು.
* ಪ್ರಾರಂಭದಲ್ಲಿ ಹನ್ನೆರಡು ಸೂರ್ಯ ನಮಸ್ಕಾರದಿಂದ ಪ್ರಾರಂಭಿಸಬೇಕು.


ಸೂರ್ಯ ನಮಸ್ಕಾರ ಮಾಡುವ ವಿಧಾನ:

ಜಮಖಾನೆಯನ್ನು ಹಾಸಿ ಪೂರ್ವ ದಿಕ್ಕಿಗೆ ಮುಖ ಮಾಡಿ ಜಮಖಾನೆಯ ಮುಂಭಾಗದಿಂದ ಶೇ. ಇಪ್ಪತೈದು ಪ್ರತಿಶತದಷ್ಟು ಬಿಟ್ಟು ನೇರವಾಗಿ ನಿಲ್ಲಬೇಕು. ಎರಡೂ ಪಾದದ ಮಧ್ಯ ಒಂದು ಪಾದದ ಅಳತೆ ಬಿಡಬೇಕು. ಹಾಗೆ ಕೈ ನಮಸ್ಕಾರದ ಸ್ಥಿತಿ ಇರಬೇಕು. ಬೆನ್ನು ಕತ್ತು ನೇರವಾಗಿರಬೇಕು. ನಮ್ಮ ಎರಡೂ ಪಾದದ ಮೇಲೆ ದೇಹದ ಸಮಭಾರವಿರಲಿ.
ಸೂರ್ಯ ನಮಸ್ಕಾರದಲ್ಲಿ ಒಟ್ಟಯ 12 ಬಗೆಯುಂಟು:ಊರ್ಧ್ವ ನಮಸ್ಕಾರ,ಪಾದ ಹಸ್ತಾಸನ,ಏಕಪಾದ ಪ್ರಸರಣಾಸನ,ದ್ವೀಪಾದ ಪ್ರಸರಣಾಸನ,ಶಶಾಂಕಾಸನ, ಭೂನಮನಾಸನ,ಭುಜಂಗಾಸನ,ಪರ್ವತಾಸನ,ಶಶಾಂಕಾಸನ,ಏಕ ಪಾದ ಪ್ರಸರಣಾಸನ,ಪಾದ ಹಸ್ತಾಸನ,
ಊರ್ಧ್ವ ನಮನಾಸನ, ಈ ಹನ್ನೆರಡು ಆಸನಗಳು ಪ್ರಮುಖ ಮತ್ತು ಸರಳವಾದವು. ಕನಿಷ್ಠ ದಿನಾಲು ಹನ್ನೆರಡು ಸೂರ್ಯ ನಮಸ್ಕಾರ ಮಾಡಿದರೆ ಶರೀರ ಬಲಿಷ್ಠ ಮತ್ತು ಆರೋಗ್ಯವಾಗಿರುತ್ತದೆ.


ಸೂರ್ಯ ನಮಸ್ಕಾರದ ಉಪಯೋಗಗಳು:
ದೇಹದ ಎಲ್ಲಾ ಅವಯವಗಳು ಸಡಿಲಗೊಂಡು ನರನಾಡಿಗಳು ಚೈತನ್ಯಗೊಳ್ಳುತ್ತವೆ, ಮೆದುಳಿನ ಕಾರ್ಯ ಚುರುಕಾಗಿ ಓಜಸ್ಸು, ತೇಜಸ್ಸು ಹೆಚ್ಚುತ್ತದೆ, ಪಚನಕ್ರಿಯೆಗೆ ಸಹಕಾರಿ, ಮಲಬದ್ಧತೆ ನಿವಾರಣೆಯಾಗುತ್ತದೆ, ಉದರ ದೋಷವನ್ನು ಹೋಗಲಾಡಿಸುತ್ತದೆ, ಮನಸ್ಸು ಸದಾ ಲವಲವಿಕೆಯಿಂದ ಕೂಡಿರುತ್ತದೆ,ಸ್ತ್ರೀಯರ ಎಲ್ಲಾ ತರದ ಅನಾರೋಗ್ಯವನ್ನು ಹೋಗಲಾಡಿಸುವ ಶಕ್ತಿ ಸೂರ್ಯ ನಮಸ್ಕಾರಕ್ಕಿದೆ, ಉಸಿರಾಟದ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ಚರ್ಮ ಖಾಯಿಲೆ ನಿವಾರಿಸುತ್ತದೆ, ಕತ್ತು, ಬೆನ್ನುಹುರಿ, ತೊಡೆ, ಮೀನಖಂಡ ಭಾಗಗಳನ್ನು ಬಲಿಷ್ಠಗೊಳಿಸುತ್ಯದೆ, ರಕ್ತ ಸಂಚಾರ ಇಡೀ ದೇಹಕ್ಕೆ ಸರಾಗವಾಗಿ ಸರಬರಾಜಾಗುತ್ತದೆ, ಕೂದಲುದುರುವ, ಹೊಟ್ಟು, ಬಾಲನೆರೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

 

 

andolanait

Recent Posts

ದೂರ ಗ್ರಾಮಕ್ಕೆ ನಟ ಪ್ರಭುದೇವ ಭೇಟಿ

ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೂರ ಗ್ರಾಮಕ್ಕೆ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಶನಿವಾರ ಆಗಮಿಸಿದ್ದರು. ಅವರು ಮೊದಲು…

9 hours ago

ಸೌದಿ ಅರಾಮ್ಕೊ ತೈಲ ಕಂಪನಿಯ ಹೆಲಿಕಾಪ್ಟರ್‌ ಪತನ: 14 ಮಂದಿ ದುರ್ಮರಣ

ರಿಯಾಧ್:‌ ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಸೌದಿ ಅರೇಬಿಯಾದ ರಾಸ್‌…

10 hours ago

ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ: ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಟಿ.ನರಸೀಪುರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ…

11 hours ago

ಮೈಸೂರಿನ ಎರಡು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ ಕರೆ: ಕೆಲಕಾಲ ಆತಂಕ ಸೃಷ್ಟಿ

ಮೈಸೂರು: ನಗರದ ಪ್ರಮುಖ ಎರಡು ಹೋಟೆಲ್‌ಗಳನ್ನು ಬಾಂಬ್ ಮೂಲಕ ಸ್ಛೋಟಿಸುವುದಾಗಿ ಇ-ಮೇಲ್ ಮೂಲಕ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದು, ಕೆಲಕಾಲ ಆತಂಕ…

11 hours ago

ಜಮೀನಿನಲ್ಲಿ ಯುವತಿಗೆ ಹಾವು ಕಡಿತ

ಹನೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವತಿಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅಜ್ಜೀಪುರ ಗ್ರಾಮದಲ್ಲಿ ನಡೆದಿದೆ.…

12 hours ago

ಸರಗೂರು: ಹುಲಿ ದಾಳಿಗೆ ಕರು ಬಲಿ

ಸರಗೂರು: ಮೈಸೂರು ಜಿಲ್ಲೆಯಲ್ಲಿ ಮತ್ತೆ ಹುಲಿ ಉಪಟಳ ಹೆಚ್ಚಾಗಿದ್ದು, ಹುಲಿ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ಸರಗೂರು ತಾಲ್ಲೂಕಿನ ಹೆಗ್ಗನೂರು…

12 hours ago