ಆಧುನಿಕ ಜೀವನ ಶೈಲಿಯ ನೆಂಟ ಥೈರಾಯ್ಡ್ ಬಾಧೆ ಹಲವರನ್ನು ಕಾಡುತ್ತಿದ್ದು, ಮಾತ್ರೆಯನ್ನೇ ಅವಲಂಬಿಸುವಂತೆ ಮಾಡಿದೆ.
ಇದನ್ನು ನಿಯಂತ್ರಣದಲ್ಲಿಡಲು ನುಗ್ಗೆಸೊಪ್ಪು ಸಹಕಾರಿಯಾಗಿದ್ದು, ಸಾಕಷ್ಟು ರೋಗಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ. ಇದು ತಿನ್ನಲು ರುಚಿಕರ ಅಲ್ಲವೆಂದು ಕೆಲವರು ಮೂಗು ಮುರಿಯುವುದುಂಟು.
ಆದರೆ ಇದರ ಪ್ರಯೋಜನಗಳು ಹಲವು. ಒಂದು ಬಟ್ಟಲು ನುಗ್ಗೆ ಸೊಪ್ಪಿಗೆ ಒಂದೂವರೆ ಬಟ್ಟಲು ನೀರು ಹಾಕಿ ಚೆನ್ನಾಗಿ ಕುದಿಸಿ ಬಣ್ಣ ಬದಲಾದಾಗ ಸೋಸಿಕೊಳ್ಳಿ. ಅದಕ್ಕೆ ಸೈಂಧವ ಲವಣ ಸೇರಿಸಿ ನಂತರ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಕಷಾಯವನ್ನು ಕುಡಿಯುವುದರಿಂದ ಹಲವು ರೋಗಗಳಿಂದ ದೂರವಿರಬಹುದು.
ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂಗಿಂತ ನುಗ್ಗೆಸೊಪ್ಪಿನ ಕಷಾಯದಲ್ಲಿ 10 ಪಟ್ಟು ಹೆಚ್ಚು ಕ್ಯಾಲ್ಸಿಯಂ ಸಿಗುತ್ತದೆ. ಮೊಸರಿನಿಂದ ಸಿಗುವ ಪ್ರೊಟೀನ್‌ಗಿಂತ 8 ಪಟ್ಟು ಹೆಚ್ಚು ಪ್ರೋಟಿನ್ಸ್ ನುಗ್ಗೆಸೊಪ್ಪಿನ ರಸ ಕುಡಿಯುವುದರಿಂದ ಸಿಗುತ್ತದೆ.
ಬಾಳೆ ಹಣ್ಣು ತಿಂದಾಗ ಸಿಗುವ ಪೊಟ್ಯಾಷಿಯಂ ಗಿಂತ 15 ಪಟ್ಟು ಹೆಚ್ಚು ಪೊಟ್ಯಾಷಿಯಂ ಇದನ್ನು ಸೇವಿಸುವುದರಿಂದ ಪಡೆಯಬಹುದು.
ಅಧ್ಯಯನದ ಪ್ರಕಾರ ಈ ನುಗ್ಗೆಸೊಪ್ಪಿನ ರಸವನ್ನು ನಿರಂತರವಾಗಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಶ್ವಾಸಕೋಶ ಮತ್ತು ಯಕೃತ್‌ಗೂ ಇದು ತುಂಬಾ ಒಳ್ಳೆಯದು.ಥೈರಾಯ್ಡ್ ನಿಯಂತ್ರಣದಲ್ಲಿ ಇಡುವ ಗುಣ ಈ ನುಗ್ಗೆಸೊಪ್ಪಿನ ರಸಕ್ಕಿದೆಯಂತೆ.
ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್…
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…
ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…
ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…
ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…
ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…