ಭಾರತಿ ನಾಗರಮಠ,
ಯೋಗ ಮಾರ್ಗದರ್ಶಕಿ,
ಬೆಂಗಳೂರು.
ಮೊಬೈಲ್ ಸಂಖ್ಯೆ: 9880887408
‘ಊಟ ಬಲ್ಲವನಿಗೆ ರೋಗವಿಲ್ಲ‘ ಎಂಬಂತೆ ನಾವು ಸೇವಿಸುವ ಆಹಾರ
ನಮ್ಮ ಆರೋಗ್ಯವನ್ನು ಅಳೆಯುವ ಸಾಧನ. ಸಕಲಜೀವಿಗಳಿಗೂ ಆಹಾರದಿಂದಲೇ ಬಲ, ವರ್ಣ, ತೇಜಸ್ಸು, ಓಜಸ್ಸನ್ನು ಹೊಂದಿ ಸುಖದಿಂದ ಜೀವಿಸಲು ಸಾಧ್ಯ. let food be thy medicine ಆಹಾರವೇ ನಿನ್ನ ಔಷಧವಾಗಲಿ’ ಎಂದು ಆಧುನಿಕ ವೈದ್ಯ ವಿಜ್ಞಾನದ ಪಿತಾಮಹ ಹಿಪೋಕ್ರಟೀಸ್ ಹೇಳಿದ್ದಾರೆ. ಆದರೆ ಈಗ ‘ medicine has become our food’ ಅಂದರೆ ಔಷಧವೇ ನಮ್ಮ ಇಂದಿನ ಆಹಾರ ಎನ್ನುವಂತಾಗಿದೆ.
ನಾವು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಅಹಿತವಾದ ಆಹಾರದ ಸೇವನೆ. ಹಸುವಿನ ಆಹಾರ ಹುಲ್ಲು, ಹಕ್ಕಿಯ ಆಹಾರ ಕಾಳು, ಕೋತಿಯ ಆಹಾರ ಹಣ್ಣು, ಹಂಪಲು, ಹುಲಿಯ ಆಹಾರ ಮಾಂಸ, ಆದರೆ ಸೃಷ್ಟಿಯಲ್ಲಿನ ಎಲ್ಲ ಆಹಾರವೂ ಮನುಷ್ಯನದ್ದೆ. ಮಾನವನ ಉತ್ಪತ್ತಿ, ಸ್ಥಿತಿ, ಲಯಗಳು ಆಹಾರವನ್ನೇ ಅವಲಂಬಿಸಿವೆ ಎಂದು ಆಯುರ್ವೇದ ಹೇಳುತ್ತದೆ.
ಒಂದು ಆಹಾರವು ಪಿತ್ತ ಪ್ರವೃತ್ತಿಯವರಿಗೆ ಹಿತವಾದರೆ, ವಾತ ಪ್ರವೃತ್ತಿಯವರಿಗೆ ಅದು ಅಹಿತವುಂಟು ಮಾಡುತ್ತದೆ. ವಾತ ಪ್ರವೃತ್ತಿಯವರಿಗೆ ಹಿತವಾದ ಆಹಾರ, ಶ್ಲೇಷ್ಮ ಪ್ರವೃತ್ತಿಯವರಿಗೆ ಅಹಿತವಾಗುತ್ತದೆ. ಬಾಯಿ ಚಪಲಕ್ಕೆ, ಬಣ್ಣಕ್ಕೆ ಮರುಳಾಗಿ ಬೇಕಾಬಿಟ್ಟಿ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಕುಂದು ತಂದುಕೊಂಡಂತೆ. ಋತುಮಾನಕ್ಕನುಸಾರವಾಗಿ ಸೇವಿಸಲ್ಪಡುವ ಹಿತ-ಮಿತ ಆಹಾರ ಶರೀರದಲ್ಲಿನ ಸಪ್ತ ಧಾತುಗಳಲ್ಲಿ ಬಲವನ್ನುಂಟು ಮಾಡಿ ಕಾಂತಿ, ಇಂದ್ರೀಯ ಮತ್ತು ಶಕ್ತಿಯನ್ನು ಸ್ಥಿರಗೊಳಿಸುತ್ತದೆ.
ಆಹಾರ ಸೇವಿಸುವ ಕ್ರಮಗಳು :
* ‘ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ, ಬಿಸಿಬೇಡ, ತಂಗಳು ಬೇಡ, ವೈದ್ಯರ ಬೆಸನ ಬೇಡ ಸರ್ವಜ್ಞ ’ ಎಂಬಂತೆ ಹಸಿವಾಗದೇ ಉಣ್ಣಬಾರದು, ಹಸಿವಾದರೂ ಉಣ್ಣದೇ ಹಾಗೆ ಇರಬಾರದು, ಬಹಳ ಬಿಸಿಯಾದ ಆಹಾರ ಸೇವಿಸಬಾರದು, ತಂಗಳು ಆಹಾರವನ್ನೂ ತಿನ್ನಬಾರದು.
* ನಿಮಿತ ಸಮಯದಲ್ಲೇ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಆಹಾರ ಅಪಚನವಾಗುತ್ತದೆ. ನಿಯಮಿತ ಸಮಯದ ಮೊದಲೇ ರುಚಿಗೆ ಉಣ್ಣಲು ಹೋದರೆ ಶರೀರ ಭಾರವಾಗುತ್ತದೆ. ಅಜೀರ್ಣವಾಗಿ ಅನೇಕ ಕಾಯಿಲೆಗಳಿಗೆ ಹಾದಿ ಮಾಡಿಕೊಡುತ್ತದೆ.
*ಉದರ ಕೋಶದ ಅಳತೆಉಲ್ಲಿ ಅರ್ಧದಷ್ಟು ಘನಾಹಾರ, ನಾಲ್ಕನೇಯ ಒಂದು ಭಾಗದಷ್ಟು ನೀರು, ಉಳಿದ ಭಾಗವನ್ನು ವಾಯು ಸಂಚಾರಕ್ಕೆ ಖಾಲಿ ಬಿಡಬೇಕು.
* ಆಹಾರವನ್ನು ಹೆಚ್ಚಾಗಿ ಅಥವಾ ಕಡಿಮೆಯೂ ಸೇವಿಸಬಾರದು. ಕಡಿಮೆ ತಿಂದರೆ ಜಠರಾಗ್ನಿ ಸಮೀಪದ ರಸವನ್ನು ಶೋಷಣೆಗೊಳಿಸುತ್ತದೆ. ಹೆಚ್ಚಾದರೆ ಜಠರಾಗ್ನಿ ಅರಗಿಸಲು ಅಸಮರ್ಥವಾಗುತ್ತದೆ.
* ಆಹಾರವನ್ನು ಹಲ್ಲುಗಳಿಂದ ಸರಿಯಾಗಿ ಜಗಿದು ಲಾಲಾರಸದ ಸಹಾಯದಿಂದ ಮೆತ್ತಗೆ ಮಾಡಿ ನುಂಗಿದರೆ ಸುಲಭವಾಗಿ ಜೀರ್ಣವಾಗುತ್ತದೆ.
* ಹಸಿವಾದಾಗ ಉಣ್ಣದೇ ನೀರು ಕುಡಿದರೆ ಜಲೋದರ ರೋಗ ಬರುತ್ತದೆ. ನೀರಡಿಕೆಯಾದಾಗ ನೀರು ಕುಡಿಯದೆ ಉಂಡರೆ ಗುಲ್ಮ ರೋಗ ಬರುತ್ತದೆ.
* ಶಾಂತಚಿತ್ತದಿಂದ ಊಟ ಮಾಡಬೇಕು. ಭಯ, ಚಿಂತೆ, ಭ್ರಮೆ, ಮಾತನಾಡುವುದು ಮಾಡಬಾರದು. ಇದರಿಂದ ಜೀರ್ಣಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
*ಊಟದಲ್ಲಿ ಯಾವಾಗಲೂ ಷಡ್ರಸಗಳನ್ನು ಹಿತ-ಮಿತವಾಗಿ ಸೇವಿಸಬೇಕು.
*ಮಂದಾಗ್ನಿ ಇರುವವರು 2 ಚಿಕ್ಕ ತುಂಡು ಹಸಿ ಶುಂಠಿ ಮತ್ತು ಸೈಂಧವ ಲವಣವನ್ನು ಆಗಾಗ ತಿನ್ನುತ್ತಿದ್ದರೆ ಕಂಠ ಶುದ್ಧವಾಗಿ ಜೀರ್ಣಕ್ರಿಯೆ ಸಹಜವಾಗುತ್ತದೆ.
* ಆರೋಗ್ಯವಂತರು ದಿನಕ್ಕೆ 2 ಹೊತ್ತು ಊಟ ಮಾಡಬೇಕು. ರಾತ್ರಿ 8 ಗಂಟೆಯ ಒಳಗಾಗಿ ಆಹಾರ ಸೇವಿಸಬೇಕು. ರಾತ್ರಿ ಊಟವು ಅಲ್ಪವೂ, ಹಗುರವೂ ಆಗಿರಬೇಕು. ರಾತ್ರಿ ಊಟವಾದ 2 ತಾಸಿನ ನಂತರ ಎಡಮಗ್ಗುಲಾಗಿ ಮಲಗಬೇಕು, ಕಾರಣ ನಾಭಿಯ ಮೇಲ್ಭಾಗದ ಎಡಗಡೆ ಜಠರಾಗ್ನಿ ಇರುತ್ತದೆ.
* ಊಟದ ಬಳಿಕ ಪಚನಕ್ರಿಯೆ ಚುರುಕುಗೊಳ್ಳು ನಡಿಗೆ ಅವಶ್ಯಕ. ಮಧ್ಯಾಹ್ನ ಊಟವಾದ ಮೇಲೆ ಮಲಗಬಾರದು.
* ವಿರುದ್ಧಾಹಾರ, ಜಂಕ್ ಫುಡ್, ಸಂಸ್ಕರಿತ ಆಹಾರ ಸೇವಿಸಬಾರದು.
* ಪದೆ ಪದೇ ಬೇಯಿಸಿದ ಪದಾರ್ಥ ತಿನ್ನಬಾರದು.
* ಊಟದ ಕೊನೆಗೆ ಹುಳಿ ಇಲ್ಲದ ಮಜ್ಜಿಗೆಯಲ್ಲಿ ಸೈಂಧವ ಲವಣ, ಜೀರಿಗೆ ಪುಡಿ ಬೆರಸಿ ಕುಡಿದರೆ ಒಳ್ಳೆಯದು.
ಷಡ್ರಸಗಳ ಅತಿಯಾದ ಸೇವನೆಯ ದುಷ್ಪರಿಣಾಮಗಳು : –
*ಅತಿಯಾದ ಸಕ್ಕರೆ ಸೇವನೆಯಿಂದ ಜ್ವರ, ದಮ್ಮು, ಕೆಮ್ಮು, ಸ್ಥೂಲತೆ, ಮಧುಮೇಹ, ಜಂತುಗಳು ಆಗುವವು.
*ಹುಳಿಉನ್ನು ಹೆಚ್ಚು ಸೇವಿಸುವುದರಿಂದ ಕಾಮಾಲೆ, ಬಾವು, ಕುಷ್ಟ ರೋಗ ಬರಬಹುದು
*ಅತೀ ಉಪ್ಪು ಸೇವಿಸುವುದರಿಂದ ಕಣ್ಣು ನೋವು, ರಕ್ತಪಿತ್ತ, ಅಕಾಲದಲ್ಲಿ ಕೂದಲು ಬೆಳ್ಳಗಾಗುವುದು, ಕೂದಲುದುರುವುದು ಮುಂತಾದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
*ಖಾರವನ್ನು ಹೆಚ್ಚು ಸೇವಿಸುವುದರಿಂದ ಬಾಯಿ, ಗಂಟಲು, ತುಟಿ ಒಣಗುತ್ತದೆ. ಬಲ ಮತ್ತು ಕಾಂತಿ ಕ್ಷೀಣಿಸುತ್ತದೆ.
*ಕಹಿ ಮತ್ತು ಒಗರು ರಸಗಳನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
ಇಂದು ನೈಸರ್ಗಿಕ ಆಹಾರವನ್ನು ತೊರೆದು ಸಂಸ್ಕರಿಸಿದ ಆಹಾರ, ಜಂಕ್ ಫುಡ್‌ಗೆ ಮಾರು ಹೋಗಿ ಶರೀರವನ್ನು ರೋಗದ ಗೂಡಾಗಿ ಮಾಡಿಕೊಳ್ಳುತ್ತಿದ್ದೇವೆ. ಹಿತಮಿತವಾದ ಸಾತ್ವಿಕ, ಪೌಷ್ಟಿಕ ಆಹಾರ ಸೇವನೆ ನಿಸರ್ಗದತ್ತವಾದ ಬದುಕಿಗೆ ನಾಂದಿ.
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…
ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…