– ಭಾರತಿ ಹೆಗಡೆ
ಅವಳು ಸೋಮಾಲಿಯಾ ದೇಶದ ಒಂದು ಕುಗ್ರಾಮದವಳು. ಶಾಲೆಗೂ ಹೋಗದವಳು. ಅವಳಪ್ಪ ದುಡ್ಡಿನಾಸೆಗಾಗಿ ಚಿಕ್ಕವಯಸ್ಸಿನ ಮಗಳನ್ನು ಅಪ್ಪನಷ್ಟು ದೊಡ್ಡವನಿಗೆ ಕೊಟ್ಟು ಮದುವೆ ಮಾಡಲು ಹೊರಡುತ್ತಾನೆ. ಅದನ್ನು ಧಿಕ್ಕರಿಸಲು ಅವಳಿಗಿದ್ದ ಒಂದೇ ಮಾರ್ಗವೆಂದರೆ ಮನೆಬಿಟ್ಟು ಓಡಿಹೋಗುವುದು. ಆ ರಾತ್ರಿ ಅವಳು ೋಂಚಿಸುತ್ತಿದ್ದಾಳೆ. ಮಾರನೇ ದಿನ ಬೆಳಗಾದರೆ ಆ ಮುದುಕನೊಂದಿಗೆ ತನ್ನ ಮದುವೆ… ಅದನ್ನು ನೆನಸಿಕೊಂಡರೇ ಅವಳಿಗೆ ವಾಕರಿಕೆ ಬರುತ್ತಿತ್ತು. ರಾತ್ರಿ ಹೊತ್ತು, ಮನೆಯವರೆಲ್ಲರೂ ಮಲಗಿದ ಮೇಲೆ ಇವಳು ಮನೆಬಿಟ್ಟು ಹೊರಡುತ್ತಾಳೆ. ಆ ಬೆಳದಿಂಗಳ ರಾತ್ರಿ, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಮರಳುಗಾಡು. ಆ ಮರಳುಗಾಡಿನಲ್ಲಿ ರಾತ್ರಿ, ಹಗಲೆನ್ನದೆ ಒಂದೇ ಸಮನೆ ಓಡುತ್ತಾಳೆ. ನೂರಾರು ಮೈಲಿಗಳಷ್ಟು ದೂರ ಓಡಿಹೋಗಿ ಕಡೆಗೂ ಅವಳೊಂದು ಲಾರಿಯನ್ನು ಹತ್ತುತ್ತಾಳೆ. ನಂತರದ್ದು ಇತಿಹಾಸ, ಅವಳು ದೊಡ್ಡ ರೂಪದರ್ಶಿಯಾಗಿ, ವಿಶ್ವಸಂಸ್ಥೆಯ ಬ್ರಾಂಡ್ ಅಂಬಾಸೆಡರ್ ಆಗುತ್ತಾಳೆ. ಇದು ಖ್ಯಾತ ರೂಪದರ್ಶಿ ಕಪ್ಪು ಸುಂದರಿ ವಾರಿಸ್ ಡೇರಿಯ ಕಥೆ.
ಇವಳ ಆತ್ಮಕಥೆ ಓದಿದ ನನ್ನ ಅಮ್ಮ ಅವತ್ತು ಹೇಳಿದ್ದು, ನಮಗಿದೆಲ್ಲ ಹೊಳೀಲೇ ಇಲ್ಲ, ನಾವೂ ಆಗ ಹೀಗೇ ಓಡಿಹೋಗಿ ವಿದ್ಯೆ ಕಲ್ತಿದ್ದಿದ್ದರೆ ಇವತ್ತು ನಾವೂ ಏನಾದ್ರು ಆಗ್ತಿದ್ವಿ, ಹಾಗೆ ಓಡಿಹೋಗಬೇಕು, ಶಿಕ್ಷಣ ಪಡೆಯಬೇಕು ಅಂತೆಲ್ಲ ಅನಿಸಿರಲೇ ಇಲ್ಲ,
ಹೀಗೆ ಹೇಳುವಾಗ ಅವಳ ವಯಸ್ಸು ೭೦ ಆಗಿತ್ತು. ಅಂದರೆ ಈ ವಯಸ್ಸಿನಲ್ಲೂ ಅವಳಿಗಿದ್ದ ಆ ಶಿಕ್ಷಣದ ಹಸಿವು ನೋಡಿ ಆಶ್ಚರ್ಯವಾಗಿತ್ತು ನನಗೆ. ಅಂದ್ರೆ ಅಂಥದ್ದೇ ಒಂದು ಕುಗ್ರಾಮದಲ್ಲಿ ಒಂದು ನಿರ್ಬಂಧವಿದ್ದ ವಾತಾವರಣದಲ್ಲಿ ಬೆಳೆದ ಅಮ್ಮನಿಗೆ ಶಾಲೆಗೆ ಹೋಗುವ ಯಾವ ಅವಕಾಶವೂ ಇರಲಿಲ್ಲ. ಚಿಕ್ಕಪ್ಪನ ಸಹಾಯದಿಂದ ಓದೋದನ್ನು, ಸಹಿ ಮಾಡೋದನ್ನು ಕಲಿತಳು. ಆಗ ಅವಳಿಗಿದ್ದ ದೊಡ್ಡ ಎಕ್ಸ್‌ಪೋಷರ್ ಎಂದರೆ ಓದುವುದು, ಕೈಗೆ ಸಿಕ್ಕ ಕಾದಂಬರಿಗಳನ್ನೆಲ್ಲ ಓದಿದಳು. ನಂತರ ಅದನ್ನು ವಿಮರ್ಶೆ ಮಾಡುತ್ತ ಬಂದಳು. ಅದೂ ಎಂತೆಂಥವರ ಪುಸ್ತಕಗಳು… ಶಿವರಾಮ ಕಾರಂತರು, ಮಾಸ್ತಿ, ಬೈರಪ್ಪ, ತ್ರಿವೇಣಿಯಿಂದ ಹಿಡಿದು ಈಗಿನ ಪುನರ್ವಸು, ತಲೆಗಳಿಯವರೆಗೂ ಓದಿ ಇದುಚೆನ್ನಾಗಿದೆ ಎಂದು ಮುತುವರ್ಜಿಯಿಂದ ತಂದುಕೊಟ್ಟು ನನಗೂ ಓದಿಸಿದ್ದಳು.
ನಾವೆಲ್ಲ ದೊಡ್ಡವರಾಗುವ ಹೊತ್ತಿಗೆ ಅವಳಿಗಿದ್ದ ಏಕೈಕ ನಂಬಿಕೆೆುಂಂದರೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾಗಿತ್ತು. ಹಾಗಾಗಿೆುೀಂ ನನ್ನ ಮದುವೆ ಮಾಡಬೇಕೆಂಬ ನೆಂಟರಿಷ್ಟರಿಂದ ಒತ್ತಡ ಬಂದಾಗ್ಯೂ ಅದನ್ನು ಬದಿಗೊತ್ತಿ ಮೊದಲು ನೀನು ಓದು ಎಂದು ನನ್ನ ಹುರಿದುಂಬಿಸಿದ್ದಳು. ಅವತ್ತು ಅವಳು ನನ್ನ ಓದಿಗೆ ಬೆಂಬಲ ಕೊಟ್ಟಿದ್ದು ಇವತ್ತಿಗೂ ಅದು ಉಪೋಂಗಕ್ಕೆ ಬರುತ್ತಿದೆ. ಅಂದರೆ ಹೆಣ್ಣುಮಕ್ಕಳಿಗೆ ಮದುವೆಗಿಂತಲೂ ಶಿಕ್ಷಣ ಮಾತ್ರ ಅವರನ್ನು ಗೆಲ್ಲಿಸಲು ಸಾಧ್ಯ; ಬದುಕಿಸಲು ಸಾಧ್ಯ ಎಂಬ ಬಲವಾದ ನಂಬಿಕೆ ಅವಳಿಗಿತ್ತು. ಎಷ್ಟೋ ಜನ ಮಗಳಿಗೆ ೧೮ ತುಂಬಿತೆಂದರೆ ಮೊದಲು ಮದುವೆ ಬಗ್ಗೆ ೋಂಚಿಸುತ್ತಾರೆ. ಆದರೆ ಅಮ್ಮ ಯಾವಾಗಲೂ ಹೇಳುತ್ತಿದ್ದದ್ದು ಹೆಣ್ಣುಮಕ್ಕಳಿಗೆ ಶಿಕ್ಷಣ ತುಂಬಾ ಮುಖ್ಯ, ನಾನು ಆಗ ಶಾಲೆಗೆ ಹೋಗಿ ಕಲಿತಿದ್ದಿದ್ದರೆ ಇವತ್ತು ನಾನೂ ಏನಾದರೂ ಒಂದು ನೌಕರಿ ಮಾಡಿ ನಿಮ್ಮನ್ನೆಲ್ಲ ಸಾಕುತ್ತಿದ್ದೆ. ಆದರೆ ನನಗಂತೂ ಆ ಭಾಗ್ಯ ಸಿಗಲಿಲ್ಲ, ಕಡೇಪಕ್ಷ ನೀನಾದರೂ ಓದು, ಜೀವನದಲ್ಲಿ ನಿನಗೆಂತಹದ್ದೇ ಪರಿಸ್ಥಿತಿ ಒದಗಿಬಂದರೂ ನಿನಗಿರುವ ವಿದ್ಯೆ ನಿನ್ನನ್ನು ಕೈ ಹಿಡಿಯುತ್ತದೆ. ನಿನ್ನ ವಿದ್ಯೆಯಿಂದಲೇ ನೀನು ಬದುಕುವಂತಾಗಬೇಕು. ಎಂದು ಹೇಳಿದ್ದು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ತನ್ನ ೩೫ನೇ ವಯಸ್ಸಿಗೇ ಗಂಡನನ್ನು ಕಳೆದುಕೊಂಡು ನಂತರ ಬದುಕೇ ದೊಡ್ಡ ಸವಾಲಾಗಿ ಪರಿಣಮಿಸಿದಾಗಲೆಲ್ಲ ಅವಳು ತಾನೂ ಶಿಕ್ಷಣ ಪಡೆದಿದ್ದರೆ ತನ್ನ ಬದುಕು ಇಷ್ಟು ಕಷ್ಟದಾಯಕವಾಗುತ್ತಿರಲಿಲ್ಲ ಎಂಬ ಹಳಹಳಿಕೆ ಅವಳನ್ನು ಯಾವಾಗಲೂ ಕಾಡಿದ್ದನ್ನು ನಾನು ಗಮನಿಸಿದ್ದೇನೆ.
ಪುನರ್ವಸು ಕಾದಂಬರಿ ಓದು, ಮುಳುಗಡೆ ಹೊಂದಿದವರ ಕಷ್ಟಗಳು ಏನೆಲ್ಲ ಇದೆ ಎಂಬುದು ತಿಳಿಯುತ್ತದೆ ಎಂದು ಹೇಳುವಾಗ ಅವಳ ನೆನಪಿನಲ್ಲಿದ್ದದ್ದು ಲಿಂಗನಮಕ್ಕಿ ಡ್ಯಾಮ್ ಕಟ್ಟುವಾಗ ಮುಳುಗಡೆಯಾದ ತನ್ನ ತವರುಮನೆ, ಆ ಹೊತ್ತಿಗೆ ಇಡೀ ಊರೇ ಮುಳುಗಡೆಯಾಗುವ ಹಂತದಲ್ಲಿತ್ತು. ಆಗ ತಮ್ಮ ತೋಟ ಗದ್ದೆಗಳೆಲ್ಲ ಹೇಗೆ ಮುಳುಗಿಹೋಯಿತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಳು.
ಅದು ಜೋರು ಮಳೆಗಾಲ. ಆಕಾಶಕ್ಕೂ ಭೂಮಿಗೂ ಹೊಲಿಗೆ ಹಾಕಿದ್ದಾರೇನೋ ಎಂಬಂಥ ಮಳೆಯದು. ಆ ಮಳೆಯಲ್ಲಿ ನಮ್ಮ ಮನೆ ಜರಿದು ಬಿತ್ತು. ನಾವೆಲ್ಲ ಅಲ್ಲಿಂದ ಬಿಡಾರ ಕಿತ್ತು ದೇವಸ್ಥಾನವೊಂದರಲ್ಲಿ ಒಂದಿಡೀ ರಾತ್ರಿ ಕಳೆದಿದ್ವಿ. ಆಮೇಲೆ ಬೇರೆಲ್ಲಿಗೋ ಹೋದ್ವಿ… ಹೀಗೆ ಅವಳು ಆಗಿನ ಕಥೆ ಹೇಳುವಾಗ ಬಹುಶಃ ಅವಳ ವಯಸ್ಸು ಏಳೋ ಎಂಟೋ ಇದ್ದಿರಬಹುದು. ಆದರೆ ಅವೆಲ್ಲವನ್ನೂ ನೆನಪಿಟ್ಟುಕೊಂಡು ಈಗ ಹೇಳಿದ್ದಳು. ಅದೇ ಅವಳ ಆತ್ಮಕಥನವಾಗಿ ಹರಿವ ನದಿಯಾಗಿ ಬಂದಿತು.
ಆಗೆಲ್ಲ ಅಂದುಕೊಂಡಿದ್ದಿದೆ. ಒಂದೊಮ್ಮೆ ನನ್ನಮ್ಮನಿಗೆ ಬರೆಯಲು ಬಂದಿದ್ದರೆ ಏನೆಲ್ಲಾ ಆಗಿಬಿಡುತ್ತಿತ್ತು ಅಂತ. ಅವಳಾಡುವ ಮಾತುಗಳು, ಓದುವ ಪುಸ್ತಕಗಳು, ಅವುಗಳ ಕುರಿತು ವಿಮರ್ಶೆ, ಅವಳ ಪ್ರೋಂಗಶೀಲತೆ ಇವನ್ನೆಲ್ಲ ನೋಡಿದಾಗ. ಬಹುಶಃ ಕನ್ನಡ ಸಾರಸ್ವತ ಲೋಕದಲ್ಲಿ ಅದೆಷ್ಟು ಗಟ್ಟಿಯಾದ ಕಾದಂಬರಿಗಳು, ಕತೆಗಳು ಹೊರಬೀಳುತ್ತಿದ್ದವು. ಅವಳಿಗಿದ್ದ ಅಲೆಮಾರಿ ಬದುಕಿನ ಆ ಜೀವನಾನುಭವ ಅದೆಷ್ಟು ವ್ಯಕ್ತವಾಗುತ್ತಿತ್ತು ಎಂದು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…