ಕಳೆದ ವಾರ ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಮಿಸೆಸ್ ಸೌತ್ ಇಂಡಿಯಾ ಸಡಗರ. ದಕ್ಷಿಣ ಭಾರತದಿಂದ ಸುಮಾರು ೭೦ಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ರ್ಯಾಪ್ ಮೇಲೆ ಹೆಜ್ಜೆ ಹಾಕಿದರು. ಇವರಲ್ಲಿ ಗೆದ್ದವರು, ಮಿಸೆಸ್ ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರವರು ೭ ಮಂದಿ ಮಾತ್ರ. ಅದರಲ್ಲಿ ನಮ್ಮ ಕೊಡಗಿನ, ಸದ್ಯ ಮೈಸೂರಿನಲ್ಲಿ ಇರುವ ವರ್ಷ ವಿಜಯ್ ಬಲ್ಯಂಡ ಕೂಡ ಒಬ್ಬರು.
ಕೊಡಗಿನ ಅಮ್ಮತ್ತಿ ಎನ್ನುವ ಗ್ರಾಮದಲ್ಲಿ ಹುಟ್ಟಿದ ವರ್ಷ ಪಿಯುಸಿ ಮುಗಿದ ನಂತರ ಮದುವೆಯಾದವರು. ಗಂಡ ಸರ್ಕಾರಿ ಉದ್ಯೋಗಿ. ಇಬ್ಬರು ಮಕ್ಕಳ ಕುಟುಂಬ. ಹೀಗಿರುವಾಗ ತಮ್ಮ ಇಷ್ಟದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗುವುದು ವರ್ಷ ಅವರ ಕನಸು. ಇದಕ್ಕೆ ಪತಿಯ ಸಹಕಾರ ಸಿಕ್ಕಿ ೨೦೨೨ರ ಮಿಸೆಸ್ ಸೌತ್ ಇಂಡಿಯಾ ಆಗಿದ್ದಾರೆ. ಕಳೆದ ಬಾರಿಯೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವರ್ಷ ‘ಕೂರ್ಗ್ ಸ್ಕಾಟ್‌ಲ್ಯಾಂಡ್ ಕ್ವೀನ್’, ‘ಇನ್ನರ್ ಬ್ಯೂಟಿ’ ಎನ್ನುವ ಟೈಟಲ್ ಪಡೆದುಕೊಂಡಿದ್ದರು. ಈ ಬಾರಿ ಕಿರೀಟ ಧಾರಣೆಯ ಜೊತೆಗೆ ‘ಬೆಸ್ಟ್ ಪರ್ಸನಾಲಿಟಿ’, ‘ಬೆಸ್ಟ್ ಫರ್ಮಾಮರ್’, ‘ಹೆಲ್ದಿ ಸ್ಕಿನ್’ ಎನ್ನುವ ಟೈಟಲ್‌ಗಳನ್ನು ಬಾಚಿಕೊಂಡಿದ್ದಾರೆ.
ನಟಿಯೂ ಆಗಿರುವ ವರ್ಷ ಕನ್ನಡ ಮತ್ತು ಕೊಡವ ಭಾಷೆಯ ಕೆಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಮುಂದೆ ಅವಕಾಶ ಸಿಕ್ಕರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗಿಯಾಗುವ, ಆ ಮೂಲಕ ಮದುವೆಯಾಗಿರುವ ಹೆಂಗಸರಲ್ಲಿ ಆತ್ಮವಿಶ್ವಾಸ ತುಂಬುವ ಅಭಿಲಾಷೆ ಇವರದ್ದು
ಮದುವೆಯಾದವರು ಭಾಗವಹಿಸುವ ಸೌಂದರ್ಯ ಸ್ಪರ್ಧೆಯಲ್ಲಿ ನನಗೆ ಈ ಬಾರಿ ಮಿಸೆಸ್ ಸೌತ್ ಇಂಡಿಯಾ ಅವಾರ್ಡ್ ಸಿಕ್ಕಿದೆ. ಇದು ನನ್ನನ್ನು ಮುಂದಿನ ಹಂತಗಳಿಗೆ ಹೋಗಲು ಸಹಕಾರಿ. ನಮ್ಮ ಮನೆಯವರಿಗೆ ನನ್ನ ಇಷ್ಟವೇ ಮುಖ್ಯ ಆಗಿರುವುದರಿಂದ ಅವರು ಸ್ಪರ್ಧೆಗೆ ನನ್ನನ್ನು ಕಳಿಸಲು ಒಪ್ಪಿದರು. ಮದುವೆಯಾದರೂ ಹೆಂಗಸರಲ್ಲಿ ಆತ್ಮವಿಶ್ವಾಸ ಇರಬೇಕು, ಅವರಲ್ಲಿ ಸೌಂದರ್ಯ ಪ್ರಜ್ಞೆ ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ.
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್ನಾಥ್ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…