ಸಧ್ಯ ಮೈಸೂರು ಅರಮನೆಯ ಹಿಂದಿನ ಆನೆ ಬಿಡಾರವೊಂದರ ವಾಸಿಯಾಗಿರುವ ದೋಬಿ ಎಂಬ ಈ ಜೇನುಕುರುಬರ ಹಿರಿಯ ಮೂಲತಃ ಕೊಡಗು ಜಿಲ್ಲೆ ಕುಶಾಲನಗರದ ಬಳಿಯ ದುಬಾರೆ ಆನೆಕ್ಯಾಂಪಿನ ಕಾವೇರಿ ಎಂಬ ಆನೆಯ ಮಾವುತರಾಗಿರುವವರು. ಕಾಡಾನೆಗಳ ಕುರಿತೂ, ಜೇನು ನೊಣಗಳ ಕುರಿತೂ, ನಾಶವಾಗುತ್ತಿರುವ ಆದಿವಾಸಿಗಳ ಬದುಕಿನ ಕುರಿತು ಹಾಡೂ ಹಾಡಬಲ್ಲ, ಕಥೆಯೂ ಹೇಳಬಲ್ಲ, ಭಾಷಣವನ್ನೂ ಮಾಡಬಲ್ಲ ದೋಬಿ ಹಠದ ಮನುಷ್ಯ. ತಮ್ಮ ಆನೆ ಕಾವೇರಿ ಎಂಬ ಕುಮ್ಕಿ ಆನೆ ಮತ್ತು ಹೆಂಡತಿ, ಮಕ್ಕಳು ಮೊಮ್ಮಕ್ಕಳ ಜೊತೆಗೆ ಕಳೆದ ಹಲವು ವರ್ಷಗಳಿಂದ ಮೈಸೂರು ಅರಮನೆಗೆ ದಸರಾದ ಹೊತ್ತಿಗೆ ಬಂದು ವಿಜಯದಶಮಿ ಮುಗಿಸಿ ದುಬಾರೆಗೆ ಹಿಂತಿರುಗುವ ದೋಬಿ ಬಾಯಿ ಬಿಟ್ಟರೆ ಜೇನುಕುರುಬ ಜನಾಂಗದ ತಲೆತಲಾಂತರಗಳ ಕಥೆಯನ್ನು ಹೇಳಬಲ್ಲವರು. ಜೊತೆಗೆ ಜೇನುಕುರುಬ ಮಕ್ಕಳ ಈಗಿನ ಅತಂತ್ರ ಸ್ಥಿತಿಯನ್ನು ಕಲ್ಲೂ ನೀರೂ ಕರಗುವ ಹಾಗೆ ವಿವರಿಸಬಲ್ಲವರು.

ಯಾವಾಗಲೂ ಜೊತೆಯಲ್ಲಿ ಮಡದಿಯನ್ನೂ, ಮೊಮ್ಮಕ್ಕಳನ್ನೂ ಕರೆದುಕೊಂಡು ಮೈಸೂರು ಅರಮನೆಗೆ ಬರುವ ದೋಬಿಯವರು ಈ ಸಲದ ದಸರೆಗೆ ಏಕಾಂಗಿಯಾಗಿ ಬಂದಿರುವರು. ಕಾರಣ ಇವರ ಮೊಮ್ಮಗಳು ಅವಳಿ ಮಕ್ಕಳನ್ನು ಹೆತ್ತಿರುವಳು. ಅವಧಿ ಪೂರ್ಣವಾಗುವ ಮೊದಲೇ ಅಕಾಲಿಕವಾಗಿ ಜನಿಸಿದ ಆ ಅವಳಿ ಹಸುಗೂಸುಗಳು ಮಡಿಕೇರಿಯ ಸರಕಾರೀ ಆಸ್ಪತ್ರೆಯ ಇನ್‌ಕ್ಯುಬೇಟರಿನಲ್ಲಿ ಹಲವು ದಿನಗಳಿಂದ ಮಲಗಿರುವವು. ಆ ಚಿಂತೆಯಲ್ಲಿ ದುಬಾರೆಯಲ್ಲೇ ಉಳಿದಿರುವ ಮಡದಿ ಮಕ್ಕಳನ್ನು ನೆನೆದುಕೊಂಡು ದೋಬಿಯವರು ಮೈಸೂರಿನಲ್ಲಿ ಕಾವೇರಿ ಆನೆಯ ಜೊತೆ ತಮ್ಮ ಕಷ್ಟಸುಖಗಳನ್ನು ಮಾತಾಡಿಕೊಂಡು ದಿನ ದೂಡುತ್ತಿರುವರು.

ಇದು ದೋಬಿ ಎಂಬ ಒಬ್ಬ ಮಾವುತನ ಕಥೆ. ಮೈಸೂರು ಸುತ್ತಲಿನ ಹಲವು ಆನೆ ಕ್ಯಾಂಪುಗಳಿಂದ ಆನೆಯ ಸಮೇತ ಮೈಸೂರಿಗೆ ಬಂದಿರುವ ಎಲ್ಲ ಮಾವುತ ಕಾವಾಡಿಯರದ್ದೂ ಹೀಗೆ ಒಂದೊಂದು ಚಿಂತೆಯ ಕಥೆಗಳು. ಮೈಸೂರಿನ ಅರಮನೆಯ ಹಿಂದಿನ ಆನೆ ಬಿಡಾರಗಳಲ್ಲಿ ಇರುವಷ್ಟು ದಿನ ಅಷ್ಟಿಷ್ಟು ಸಂತೋಷದಲ್ಲಿ ಇರುವ ಇವರೆಲ್ಲ ವಾಪಾಸು ಹೋದ ಮೇಲೆ ಅವರದ್ದೂ ಇದೇ ಬದುಕು, ಇದೇ ಕಥೆ ಮತ್ತು ನಮಗೆ ಯಾರಿಗೂ ಅರಿವೇ ಆಗದ ನೂರಾರು ಖಾಸಗೀ ವ್ಯಥೆಗಳು!

andolana

Recent Posts

ಎಚ್‌.ಡಿ.ಕೋಟೆ: ಗುಜರಿ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ ಬೆಲೆಬಾಳುವ ಸಾಮಗ್ರಿ ನಾಶ

ಎಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್‌ಪೋಸ್ಟ್ ಜಕ್ಕಳ್ಳಿ ಸಮೀಪವಿರುವ ಜಫ್ರುಲ್ಲಾ ಎಂಬುವರಿಗೆ ಸೇರಿದ ಗುಜರಿ ಗೋಡೌನ್‌ಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ವೆಚ್ಚದ…

5 hours ago

ವಂದೇ ಭಾರತ್‌ ರೈಲಿನಲ್ಲಿ ಕೊಟ್ಟ ಮೊಸರಿನಲ್ಲಿ ಹುಳು ಪತ್ತೆ: IRCTCಗೆ 10 ಲಕ್ಷ ರೂ ದಂಡ

ಪಾಟ್ನಾ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್‌ಸಿಟಿಸಿಗೆ 10…

5 hours ago

ಹನೂರು: ಬಿಆರ್‌ಟಿ ವನ್ಯಜೀವಿ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: 80 ಎಕರೆಗೂ ಹೆಚ್ಚು ಅರಣ್ಯ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಬೈಲೂರು ವಲಯ ವ್ಯಾಪ್ತಿಯ…

5 hours ago

ಪಾಲಿಕೆ ಬಜೆಟ್‌ ಸತ್ವ ಇಲ್ಲದ ಬಜೆಟ್‌: ಮಾಜಿ ಮೇಯರ್‌ ಶಿವಕುಮಾರ್‌ ಆಕ್ರೋಶ

ಮೈಸೂರು: ಜನಸ್ನೇಹಿ ಪಾದಾಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ ಮೀಸಲಿಟ್ಟಿರುವ ಪಾಲಿಕೆಯು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ…

6 hours ago

ಗುಂಡ್ಲುಪೇಟೆ| ಮದ್ದೂರು ವಲಯದಲ್ಲಿ ಮತ್ತೆರಡು ಹುಲಿ ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲ್ಲೂಕಿನ ಮದ್ದೂರು ವಲಯದಲ್ಲಿ ಮತ್ತೆರಡು ಹುಲಿಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಹುಲಿಗಳ ಚಲನವಲನದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ…

6 hours ago

ಬಜೆಟ್‌ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿದ ಸರ್ಕಾರ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಬಜೆಟ್‌ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿರುವುದನ್ನು ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳನ್ನು…

6 hours ago