ವನಿತೆ-ಮಮತೆ

ಕಾಡಿನ ಮಂದಿಯ ನೆರವಿಗೆ ನಿಂತ ಇನ್ನರ್ ವ್ಹೀಲ್

ಮೈಸೂರು ಜಿಲ್ಲೆಯ ಆದಿವಾಸಿ, ಬುಡಕಟ್ಟು ಸಮುದಾಯಕ್ಕೆ ಸಹಾಯ ; ಇನ್ನರ್ ವ್ಹೀಲ್‌ ಕಾರ್ಯಕ್ಕೆ ಮೆಚ್ಚುಗೆ

ಸಮಾಜದ ಎಲ್ಲ ವರ್ಗಗಳ ಬಗೆಗೂ ಗಮನಹರಿಸಿ, ಅವರ ಕಷ್ಟಕ್ಕೆ ಸ್ಪಂದಿಸುವುದು, ಅವರ ಜೀವನಕ್ಕೆ ದಾರಿ ಮಾಡಿಕೊಡುವುದು ಇನ್ನರ್ ವ್ಹೀಲ್  ಕ್ಲಬ್‌ನ ವಿಶೇಷತೆ. ಸದಾ ಸಕ್ರಿಯವಾಗಿರುವ ಸಂಸ್ಥೆ, ಸಂಸ್ಥೆಯ ಮಹಿಳೆಯರು ಮೈಸೂರು ಜಿಲ್ಲೆಯಲ್ಲಿ ಇರುವ ಆದಿವಾಸಿ ಬುಡಕಟ್ಟು ಸಮುದಾಯದ ನೆರವಿಗೆ ಸದಾ ನಿಲ್ಲುತ್ತಾ ಬಂದಿದೆ. ಅವರಿಗೆ ವಿವಿಧ ಯೋಜನೆಗಳಡಿಯಲ್ಲಿ ಸಹಾಯ ಹಸ್ತ ಚಾಚಿದೆ.

ಸೌಮ್ಯ ಹೆಗ್ಗಡಹಳ್ಳಿ

ಇನ್ನರ್ ವ್ಹೀಲ್ ಕ್ಲಬ್ ಸಾಕಷ್ಟು ವರ್ಷಗಳಿಂದ ಮೈಸೂರು ಸುತ್ತಮುತ್ತಲಿನ ಆದಿವಾಸಿ, ಬುಡಕಟ್ಟು ಜನಾಂಗದ ಕಾಲೋನಿಗಳಲ್ಲಿ ವಾಸಿಸುವ ಜನರಿಗೆ ತನ್ನದೇ ಆದ ಸೇವೆ ನೀಡುತ್ತಾ ಬಂದಿದೆ. ಪ್ರಮುಖವಾಗಿ ಕಟ್ಟೆ ಮಳಲವಾಡಿ, ಸೋನಹಳ್ಳಿ  ಬಳ್ಳೆ ಹಾಡಿ, ಸೋಲಿಗರ ಕಾಲೋನಿ, ಡೊಂಗ್ರಿ ಗರಾಸಿಯ  ಕಾಲೋನಿ, ವೀರನಹೊಸಹಳ್ಳಿ, ಧರ್ಮಪುರ ಸೇರಿ ಮೈಸೂರು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇವರ ಸೇವಾ ಕಾರ್ಯ ನಿರಂತರವಾಗಿ ಸಾಗುತ್ತಿದೆ.

ಇಲ್ಲಿನ ಹಾಡಿಗಳಲ್ಲಿ ವಾಸಿಸುವ ಮಾವುತರಿಗೆ ಅವರ ಮಕ್ಕಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು  ಒದಗಿಸುತ್ತಾ ಬಂದಿದೆ. ಪ್ರಮುಖವಾಗಿ ಸೌರ ದೀಪಗಳು, ಬಟ್ಟೆ, ಪಾತ್ರೆ, ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ, ಪೀಠೋಪಕರಣಗಳು, ಪುಸ್ತಕಗಳು ಸೇರಿದಂತೆ ಶೈಕ್ಷಣಿಕವಾಗಿ ಅಗತ್ಯವಿರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ.‌

 

 

ಸ್ವಂತ ದುಡಿಮೆಗೂ ಅವಕಾಶ

ಇನ್ನರ್  ವ್ಹೀಲ್ ಕ್ಲಬ್ ಸಹಾಯ ಮಾಡಿ ಸುಮ್ಮನಾಗುವುದಿಲ್ಲ. ಅದಕ್ಕೆ ಬದಲಾಗಿ ಇಲ್ಲಿನ ನಿವಾಸಿಗಳಿಗೆ ಹೊಲಿಗೆ ತರಬೇತಿ, ವಿವಿಧ ಶಿಬಿರಗಳ ಆಯೋಜನೆ ಮಾಡಿ ಅವರ ಆದಾಯದ ಮೂಲ, ಅರಿವಿನ ಮಟ್ಟ ಹೆಚ್ಚಳವಾಗುವಂತೆ ನೋಡಿಕೊಳ್ಳುತ್ತಿದೆ. ನಿರಂತರವಾಗಿ ಜನರಿಗೆ ಜಾಗೃತಿ ಶಿಬಿರಗಳು, ದಂತ ಮತ್ತು ಇತರ ವೈದ್ಯಕೀಯ ಶಿಬಿರಗಳು, ಮಹಿಳೆಯರಿಗೆ ಹೊಲಿಗೆ ತರಬೇತಿ,  ಹೊಲಿಗೆಯ ಯಂತ್ರಗಳನ್ನು ನೀಡುತ್ತಾ ಬಂದಿದೆ.

ಇಲ್ಲಿನ ಸರ್ಕಾರಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗಿದ್ದು, ಮಕ್ಕಳ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ಪರಿಕರಣಗಳನ್ನು ಪೂರೈಕೆ ಮಾಡಲಾಗಿದೆ.

ಎಚ್.ಡಿ. ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯಲ್ಲಿ ಆನೆಗಳ ದಾಳಿಯಿಂದಾಗಿ ಮನೆಗಳ ಚಾವಣಿಗೆ ಹಾನಿಯಾಗಿತ್ತು. ಈ ವೇಳೆ ಅವರ ನೆರವಿಗೆ ಮುಂದಾದ ಇನ್ನರ್ ವ್ಹೀಲ್ ಸಂಸ್ಥೆ ತಕ್ಷಣವೇ ಹಾನಿಗೀಡಾದ ಎಲ್ಲ ಮನೆಗಳ ಚಾವಣಿ ದುರಸ್ತಿಪಡಿಸಿತ್ತು. ಇದು ಇವರ ಸೇವಾ ಬದ್ಧತೆ ಎಂದರೆ ತಪ್ಪಾಗದು.

ವೇಗವಾಗಿ ಬೆಳೆಯುತ್ತಿರುವ ಇಂದಿನ ಸಮಾಜದಲ್ಲಿ ಮುಖ್ಯ ವಾಹಿನಿಯಿಂದ ದೂರ ಉಳಿದಿರುವ ಒಂದು ಸಮುದಾಯ ಇದೆ ಎನ್ನುವುದೇ ಅಚ್ಚರಿ ತರುತ್ತದೆ. ಇನ್ನರ್ ವ್ಹೀಲ್  ಕ್ಲಬ್ ಆಫ್ ಮೈಸೂರ್ ಸೆಂಟ್ರಲ್ ಸಂಸ್ಥೆಯ ಹಲವಾರು ವರ್ಷಗಳಿಂದ ಈ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕಾಡಿನ ಅಂಚುಗಳಲ್ಲಿ ಅನೇಕ ಸವಲತ್ತುಗಳಿಂದ ವಂಚಿತರಾಗಿರುವ ಈ ಜನರ ಬದುಕು ಹಸನಾಗಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ನಮ್ಮ ಸಂಸ್ಥೆಯ  ಟೊಂಕ ಕಟ್ಟಿ ನಿಂತಿದೆ.

 

– ನಿವೇದಿತಾ ಬಾಲಾಜಿ, ಸದಸ್ಯರು   ಕ್ಲಬ್

ನಾನು ಪರಿಸರ ಪ್ರೇಮಿ. ನಾನು ಮತ್ತು ನನ್ನ ಕುಟುಂಬದವರು ಹಲವಾರು ಬಾರಿ ಕಾಡಿಗೆ ಹೋಗಿದ್ದೇವೆ. ಅಲ್ಲಿನ ಆದಿವಾಸಿ ಹಾಗೂ ಬುಡಕಟ್ಟು ಜನರನ್ನು ಮಾತನಾಡಿಸಿದ್ದೇವೆ. ಅವರ ಮುಗ್ಧತೆ, ಸರಳತೆ ಇಷ್ಟವಾಗುತ್ತದೆ. ಇಂತಹ ಜನರಿಗಾಗಿ ಏನಾದರೂ ಮಾಡಬೇಕು ಎಂದುಕೊಂಡು ಟುಗೆದರ್ ಇಸ್ ಬೆಟರ್ ದೆನ್ ಡೂಯಿಂಗ್ ಅಲೋನ್ ಎನ್ನುವಂತೆ ನಮ್ಮ ಕ್ಲಬ್ ಸದಸ್ಯರ ಸಹಕಾರದಿಂದ ಸೇವಾಕಾರ್ಯ ಮಾಡುತ್ತಿದ್ದೇವೆ. ಇದರಿಂದ ನಮಗೆಲ್ಲ ಒಂದು ರೀತಿಯ ತೃಪ್ತಿ ಹಾಗೂ ಖುಷಿ ಇದೆ.

 

– ಆಶಾ ದಿವ್ಯೇಶ್, ಮಾಜಿ ಅಧ್ಯಕ್ಷರು, ಇನ್ನರ್‌ ವ್ಹೀಲ್ಸ್ 

ನಮ್ಮ ಸಂಸ್ಥೆಯು ಯಾವಾಗಲೂ  ಸಮಾಜದ ಹಿಂದುಳಿದ ಮತ್ತು ನಿರ್ಲ್ಯಕ್ಷ್ಯಕ್ಕೆ ಒಳಗಾದ   ಸಮುದಾಯಕ್ಕೆ ಸಹಾಯ ಮಾಡುತ್ತಾ ಬಂದಿದೆ. ಆದಿವಾಸಿಗಳು ಪ್ರಕೃತಿ ಪ್ರಿಯರು. ಇದರ ಜೊತೆಗೆ ಅವರಿಗೆ ಕಾಡಿನ ಕುರಿತು ಕಾಡಿನ ಉತ್ಪನ್ನಗಳ ಬಗ್ಗೆ ಬಹಳಷ್ಟು ಮಾಹಿತಿಗಳು ಇರುತ್ತವೆ. ದುರ್ಬಲ ಸ್ಥಿತಿಯಲ್ಲಿ ಇರುವ ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಹಾಯ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನರ್ ವ್ಹೀಲ್ಸ್  ಸಂಸ್ಥೆಯ ಅವರ ಅಗತ್ಯತೆಗಳನ್ನು ಗುರುತಿಸಿ ಹಲವು ವರ್ಷಗಳಿಂದ ಆದಿವಾಸಿಗಳ ಉನ್ನತಿಗಾಗಿ ಶ್ರಮಿಸುತ್ತಾ ಬಂದಿದೆ.

– ಸುಮಿತಾ ಜೈನ್, ಸದಸ್ಯೆ, ಇನ್ನರ್ ವ್ಹೀಲ್ಸ್

andolana

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

6 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

6 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

7 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

10 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

13 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

13 hours ago